For Quick Alerts
ALLOW NOTIFICATIONS  
For Daily Alerts

  ಸವಾಲಾಗಿರುವ ಈ ಭೂತ, ಪ್ರೇತಗಳ ನಿಗೂಢ ರಹಸ್ಯ

  By Manu
  |

  ಶೇಕ್ಸ್ ಪಿಯರ್‌ನ ಖ್ಯಾತ ಗ್ರಂಥವಾದ ಹ್ಯಾಮ್ಲೆಟ್ ನಲ್ಲಿ ಒಂದೆಡೆ ಹೀಗೆ ಹೇಳಲಾಗಿದೆ:"ಹೊರೇಶಿಯೋ, ನೀನು ಕನಸಿನಲ್ಲಿ ಕಲ್ಪಿಸಿರುವದಕ್ಕಿಂತಲೂ ಹೆಚ್ಚು ಭೂಮಿ ಮತ್ತು ಸ್ವರ್ಗದಲ್ಲಿವೆ" ಈ ವಾಕ್ಯ ನೂರಾರು ವರ್ಷಗಳಿಂದ ತತ್ವಜ್ಞಾನಿಗಳಲ್ಲಿ ದ್ವಂದ್ವ ಹುಟ್ಟಿಸುತ್ತಾ ಬಂದಿದೆ. ಏಕೆಂದರೆ ಭೂಮಿ ಮತ್ತು ಸ್ವರ್ಗದಲ್ಲಿ ಇರದವು ಭೂತಗಳಾಗಿರಬಹುದು ಎಂಬ ಊಹಾಪೋಹಕ್ಕೆ ಇದು ಎಡೆಮಾಡಿದೆ.

  ಇದು ನಿಜವೋ ಸುಳ್ಳೋ ಬೇರೆ ಪ್ರಶ್ನೆ, ಆದರೆ ಹಲವೆಡೆ ಜನರು ಅತೀಂದ್ರಿಯ ಶಕ್ತಿ, ಹಾಗೂ ಭೂತಗಳಿರುವಿಕೆಯನ್ನು ಗಮನಿಸಿದ್ದಾರೆ. ಇದಕ್ಕೆ ಸೂಕ್ತವಾದ ವಿವರಣೆ ಇದುವರೆಗೆ ಲಭ್ಯವಾಗಿಲ್ಲದಿರುವುದು ಇದರ ನಿಗೂಢತೆಗೆ ಇನ್ನಷ್ಟು ಮೆರುಗು ನೀಡಿದೆ. ಅಷ್ಟೇ ಏಕೆ ಮ್ಯಾಕ್ಬೆತ್ ನಂತಹ ಸಾಮಾಜಿಕ ಗ್ರಂಥದಿಂದ ಹಿಡಿದು ಬೈಬಲ್ ನಂತಹ ಧರ್ಮಗ್ರಂಥಗಳವರೆಗೆ ಈ ಭೂತ, ಪ್ರೇತ, ಅತೀಂದ್ರಿಯ ಶಕ್ತಿಗಳ ಬಗ್ಗೆ ವರ್ಣನೆ ಕಂಡುಬರುತ್ತದೆ. ಒಳ್ಳೆಯದು ದೇವರು ಎಂದೂ ಕೆಟ್ಟದ್ದು ಭೂತ ಎಂದೂ ನಾವೆಲ್ಲಾ ಒಪ್ಪಿಕೊಂಡುಬಿಟ್ಟಿದ್ದೇವೆ.

  ಇಂದಿಗೂ ಕೂಡ ಅಷ್ಟೇ ಕರಾವಳಿಯ ಕಡೆಯ ಹಳ್ಳಿಗಳಲ್ಲಿ ಸಂಜೆ ಆರು ಗಂಟೆಯ ನಂತರ ಕೆಲವು ಸ್ಥಳಗಳಿಗೆ ಹೋಗುವ ಇರಾದೆಗೆ ಹಿರಿಯರು 'ಅಲ್ಲಿ ಹೋಗಬೇಡಿ, ಅದು ಒಳ್ಳೆಯ ಸ್ಥಳವಲ್ಲ' ಎಂಬ ಎಚ್ಚರಿಕೆಯನ್ನು ನೀಡುತ್ತಾರೆ. ಒಳ್ಳೆಯ ಸ್ಥಳವಲ್ಲ ಎಂದರೆ ಅಲ್ಲಿ ಭೂತಪ್ರೇತಗಳಿವೆ, ಅದರಿಂದ ತೊಂದರೆಯಾಗಬಹುದು ಎಂದು ಅವರು ಮುನ್ನೆಚ್ಚರಿಕೆ ನೀಡುತ್ತಾರೆ. ಅದು ಏನೇ ಇರಲಿ, ಬನ್ನಿ ಭೂತ ಪ್ರೇತ ಗಳ ಅಟ್ಟಹಾಸಕ್ಕೆ ಸಾಕ್ಷಿಯಾದ ಸಂಗತಿಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ ಮುಂದೆ ಓದಿ...

  ತಾಜ್ ಪ್ಯಾಲೇಸ್ ಹೋಟೆಲ್‌

  ತಾಜ್ ಪ್ಯಾಲೇಸ್ ಹೋಟೆಲ್‌

  ಮುಂಬೈ ನಗರದ ಸುಪ್ರಸಿದ್ಧ ತಾಜ್ ಪ್ಯಾಲೇಸ್ ಹೋಟೆಲ್ ಸಹಾ ಭೂತಗ್ರಸ್ತವಾಗಿದೆ. ಈ ಹೋಟೆಲನ್ನು ವಿನ್ಯಾಸ ಗೊಳಿಸಿದ ವ್ಯಕ್ತಿ ಈ ಹೋಟೆಲಿನೊಳಗೇ ಆತ್ಮಹತ್ಯೆ ಮಾಡಿಕೊಂಡಿದ್ದನಂತೆ. ಏಕೆಂದರೆ ಆತನ ವಿನ್ಯಾಸದ ಪ್ರಕಾರ ಹೋಟೆಲಿನ ಅಂತಿಮ ವಿನ್ಯಾಸವನ್ನು ಮಾಡದಿರುವುದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡನಂತೆ ಎಂದು ಕಥೆ ಹೇಳಲಾಗುತ್ತದೆ. ಇದಕ್ಕೆ ಪೂರಕವಾಗಿ ಹೋಟೆಲಿನಲ್ಲಿ ಉಳಿದುಕೊಂಡಿರುವವರು ಹೋಟೆಲಿನ ಕಾರಿಡಾರ್ ಮತ್ತು ಜಗಲಿಗಳಲ್ಲಿ ಯಾರೋ ಓಡಾಡುತ್ತಿರುವುದನ್ನು ಗಮನಿಸಿದ್ದಾರೆ.

  ಮನೆಗಳಿಗೆ ಛಾವಣಿಗಳೇ ಇಲ್ಲ..!

  ಮನೆಗಳಿಗೆ ಛಾವಣಿಗಳೇ ಇಲ್ಲ..!

  ಭಾನಗಡ ಕೋಟೆಯ ಅಕ್ಕಪಕ್ಕದಲ್ಲಿರುವ ಯಾವುದೇ ಗ್ರಾಮದ ಮನೆಗಳಿಗೆ ಛಾವಣಿಗಳಿಲ್ಲ! ಏಕೆಂದರೆ ಛಾವಣಿ ಕಟ್ಟಿದ ಮರುಕ್ಷಣವೇ ಕುಸಿದು ಬೀಳುವ ಮರ್ಮವನ್ನು ಯಾರಿಗೂ ಅರಿಯಲಾಗಿಲ್ಲ.

  ಸುರಂಗದೊಳಗಿರುವ ಭೂತ...!

  ಸುರಂಗದೊಳಗಿರುವ ಭೂತ...!

  ಶಿಮ್ಲಾ ಮತ್ತು ಕಾಲ್ಕಾ ನಗರಗಳ ನಡುವೆ ಹಾದುಹೋಗುವ ಹೆದ್ದಾರಿ ಯಾವಾಗ ಸುರಂಗ ಸಂಖ್ಯೆ 103 ಪ್ರವೇಶಿಸಿತೋ ಆಗ ಜನರ ಎದೆಯಲ್ಲಿ ಡವಡವ ಪ್ರಾರಂಭವಾಗುತ್ತದೆ. ಏಕೆಂದರೆ ಬ್ರಿಟಿಷರ ಕಾಲದಲ್ಲಿ ಕೊರೆಯಲಾದ ಈ ಸುರಂಗದಲ್ಲಿ ಕೆಲವು ಭೂತಗಳು ಮಾತನಾಡುವುದನ್ನು ಕೇಳಿದವರಿದ್ದಾರೆ. ಇನ್ನಷ್ಟು ಭಯಪಡಿಸುವ ವಿಷಯವೆಂದರೆ ಮಹಿಳೆಯ ಆಕಾರವೊಂದು ಸುರಂಗದೊಳಗಣ ಗೋಡೆಯನ್ನೇ ತೂರಿ ಮಾಯವಾಗಿರುವುದನ್ನು ಹಲವರು ಕಂಡಿದ್ದಾರೆ.

  ಗುಜರಾತಿನ ಸೂರತ್ ನಗರದ ಡುಮಾಸ್ ಬೀಚ್

  ಗುಜರಾತಿನ ಸೂರತ್ ನಗರದ ಡುಮಾಸ್ ಬೀಚ್

  ಹಿಂದೆ ಸಮುದ್ರತೀರದಲ್ಲಿ ಊರುಗಳಲ್ಲಿಲ್ ಸ್ಮಶಾನವೇ ಇರುತ್ತಿರಲಿಲ್ಲ. ಸಮುದ್ರತೀರದ ಮರಳಿನಲ್ಲಿಯೇ ಹೊಂಡ ತೆಗೆದು ಅಂತಿಮಸಂಸ್ಕಾರ ನಡೆಸುತ್ತಿದ್ದರು. ವರ್ಷಾಂತರಗಳಿಂದ ಹೀಗೆ ಹೂತ ಶವಗಳಿಂದಾಗಿ ನೂರಾರು ಸಂಖ್ಯೆಯಲ್ಲಿ ಪ್ರೇತಾತ್ಮಗಳು ಈ ತೀರದಲ್ಲಿ ತಿರುಗಾಡುತ್ತಿರುತ್ತವೆ ಎಂದು ನಂಬಲಾಗಿದೆ. ನಂಬಿಕೆ ಬರದಿದ್ದವರು ಸೂರತ್‌ಗೆ ಮುಂದಿನ ಸಾರಿ ಭೇಟಿ ನೀಡಿದಾಗ ಈ ತೀರಕ್ಕೊಮ್ಮೆ ಭೇಟಿ ನೀಡಿ. ಯಾರೂ ಇಲ್ಲದಿದ್ದರೂ ಯಾರೋ ಪಿಸುಗುಡುವಂತಹ ಸದ್ದು ಬರುವುದನ್ನು ಕೇಳಿಸುವುದು ಮಾತ್ರ ಖಾತ್ರಿ.

  ಹೈವೇ ರಸ್ತೆಗಳಲ್ಲಿ..!

  ಹೈವೇ ರಸ್ತೆಗಳಲ್ಲಿ..!

  ಭಾರತದಲ್ಲಿ ಭೂತಗಳ ಕಥೆಗಳಿಗೂ ಹೈವೇಗಳಿಗೂ ಬಿಡಲಾರದ ನಂಟು. ಏಕೆಂದರೆ ಹೈವೇಗಳಲ್ಲಾಗುವ ಅಪಘಾತಗಳಲ್ಲಿ ಮೃತರಾದವರ ಆತ್ಮಗಳು ಅಪಘಾತದ ಸ್ಥಳದಲ್ಲಿಯೇ ಓಡಾಡಿಕೊಂಡಿಕೊಂಡಿದ್ದು ತಮ್ಮ ಸಾವಿಗೆ ಕಾರಣರಾದವರ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿರುತ್ತವೆ ಎಂಬ ನಂಬಿಕೆಯಿದೆ. ಹಲವರಿಗೆ ಈ ಬಗ್ಗೆ ಅನುಭವಗಳೂ ಆಗಿವೆ. ಇನ್ನೂ ಕೆಲವು ಕಡೆಗಳಲ್ಲಿ ಭೂತಕ್ಕೆ ಹೆದರಿ ಹಿಂದೆಂದೋ ಅಪಘಾತ ನಡೆಸಿ ತಲೆಮರೆಸಿಕೊಂಡಿದ್ದ ಹಳೆಯ ಕುಳಗಳೂ ತಾವೇ ಪೋಲೀಸರಿಗೆ ಶರಣಾಗಿರುವುದು ಈ ಬಗ್ಗೆ ಕುತೂಹಲ ಮೂಡಿಸುತ್ತದೆ. ಎನ್.ಹೆಚ್4 ರಲ್ಲಿ ತಮ್ಮ ವಾಹನದಲ್ಲಿ ಹೋಗುತ್ತಿದ್ದ ವೃದ್ಧರೊಬ್ಬರಿಗೆ ನಡುರಾತ್ರಿಯಲ್ಲಿ ಮಹಿಳೆಯು ಸಹಾಯ ಕೇಳಲು ಕೈ ಅಡ್ಡಹಾಕಿದಂತಾಗಿತ್ತು.

  ಹೈವೇ ರಸ್ತೆಗಳಲ್ಲಿ..!

  ಹೈವೇ ರಸ್ತೆಗಳಲ್ಲಿ..!

  ವೇಗವನ್ನು ತಗ್ಗಿಸಿ ನಿಲ್ಲಿಸಿ ಹಿಂದಿರುಗಿ ನೋಡಿದಾಗ ಅಲ್ಲಿ ಯಾರೂ ಇರಲಿಲ್ಲ. ಇಷ್ಟೇ ಆಗಿದ್ದರೆ ಯಾರದ್ದೋ ಕುಚೇಷ್ಟೆ ಎಂದು ಸುಮ್ಮನಾಗಬಹುದಿತ್ತು. ಆದರೆ ಆಕೆ ಥಟ್ಟನೇ ಇವರ ಹಿಂಭಾಗದಲ್ಲಿ ಪ್ರತ್ಯಕ್ಷಳಾಗಿ ಅಟ್ಟಹಾಸದಿಂದ ನಗಲು ಪ್ರಾರಂಭಿಸಿದ್ದಳು. ಹೆದರಿದ ಈ ವೃದ್ಧರು ಹೆದರಿಕೊಂಡು ಅಲ್ಲಿಂದ ಓಡಿ ಹೋಗಲು ಯತ್ನಿಸಿ ಆ ಪ್ರಯತ್ನದಲ್ಲಿ ಕಾಂಪೌಂಡ್ ಗೋಡೆಗೆ ಢಿಕ್ಕಿಹೊಡೆದು ಗಾಯಗೊಂಡಿದ್ದಾರೆ. ಮುಂದಿನ ಬಾರಿ ಈ ಹೈವೇಯಲ್ಲಿ ಹೋಗುತ್ತಿರುವಾಗ ಕಿಶೋರಿಯೊಬ್ಬಳು ಅಡ್ಡ ಹಾಕಿದರೆ ಏನು ಮಾಡಬೇಕು (ಅಥವಾ ಏನು ಮಾಡಬಾರದು) ಎಂದು ಈಗ ನಿಮಗೆ ಗೊತ್ತಿದೆ.

  English summary

  Most Compelling Pieces Of Evidence That Prove Ghosts Are Real

  Are ghosts real? Well, there's as much scientific evidence to support their existence as there is for the existence black holes. Which is to say there isn't any, really. And we take the existence of black holes as read by now. People claim to have photographed, observed and studied black holes, but they haven't been tested under laboratory conditions.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more