For Quick Alerts
ALLOW NOTIFICATIONS  
For Daily Alerts

ಹೊಸ ವರ್ಷದ ಸ್ಪೆಷಲ್: ರಜಾ ಪ್ರಿಯರಿಗೆ ಕಾದಿದೆ ಸಿಹಿ ಸುದ್ದಿ!

By Hemanth
|

ಈ ವರ್ಷದ ಸಂತೋಷ ಹಾಗೂ ದುಃಖವನ್ನು ಮರೆತು ಹೊಸ ವರ್ಷವನ್ನು ಆಹ್ವಾನಿಸಲು ನಾವು ಸಜ್ಜಾಗುತ್ತಾ ಇದ್ದೇವೆ. ಹೊಸ ವರ್ಷದಲ್ಲಿ ಹಲವಾರು ಕೆಲಸ ಕಾರ್ಯಗಳನ್ನು ಮಾಡಿ ಮುಗಿಸಬೇಕೆಂದು ಪಟ್ಟಿ ತಯಾರಿಸುತ್ತೇವೆ. ಹಲವಾರು ಗುರಿ ಇಟ್ಟುಕೊಳ್ಳುತ್ತೇವೆ. ಇದರಲ್ಲಿ ಯಾವುದು ಪೂರ್ತಿಯಾಗುತ್ತದೆಯೋ ಗೊತ್ತಿಲ್ಲ. ಆದರೆ ಹೊಸ ವರ್ಷ ರಜೆ ಪ್ರಿಯರಿಗೆ ಸಕತ್ ಆಗಿದೆ. ಈ ಬಾರಿಯ ಹೊಸ ವರ್ಷದ ಆಚರಣೆ, ಕೊಂಚ ಡಿಫರೆಂಟ್ ಆಗಿರಲಿ!

ಯಾಕೆಂದರೆ ಹೆಚ್ಚಿನ ರಜಾ ದಿನಗಳು ಶುಕ್ರವಾರ ಇಲ್ಲವೇ ಸೋಮವಾರ ಬರುತ್ತಾ ಇದೆ. ಇದರಿಂದ ಮುಂದಿನ ವರ್ಷದಲ್ಲಿ ದೊಡ್ಡ ವಾರಾಂತ್ಯವನ್ನು ಅನುಭವಿಸಬಹುದಾಗಿದೆ. ಅದರಲ್ಲೂ ಸರಕಾರಿ ರಜೆಗಳು ಶುಕ್ರವಾರ ಹಾಗೂ ಭಾನುವಾರ ಬರುತ್ತದೆ. ಶನಿವಾರ ಹೆಚ್ಚಾಗಿ ರಜೆ ಇರುವ ಕಾರಣದಿಂದ ತಿರುಗಾಡಲು ಹೋಗಲು ಮುಂದಿನ ವರ್ಷ ಅತ್ಯುತ್ತಮವಾಗಿದೆ. ಮುಂದಿನ ವರ್ಷದ ಯಾವ ತಿಂಗಳಲ್ಲಿ ಎಷ್ಟು ರಜೆ ಇದೆ.

ಯಾವ ರಜೆ ವಾರಾಂತ್ಯದಲ್ಲಿ ಬರುತ್ತದೆ ಮತ್ತು ಅದರಲ್ಲಿ ಎಲ್ಲಿಗೆ ತಿರುಗಾಡಲು ಹೋಗಬಹುದು ಎಂದು ನೀವು ಯೋಚಿಸುತ್ತಾ ಇದ್ದರೆ ಈ ಲೇಖನವನ್ನು ಓದಿಕೊಂಡು ಯಾವ ರಜೆ ಶುಕ್ರವಾರ ಹಾಗೂ ಸೋಮವಾರ ಬರುತ್ತದೆ ಎಂದು ತಿಳಿದುಕೊಳ್ಳಿ ಮತ್ತು ನಿಮ್ಮ ಪ್ರವಾಸದ ವೇಳಾಪಟ್ಟಿ ತಯಾರಿಸಿಡಿ.

ಜನವರಿಯಲ್ಲಿ ಮಕರ ಸಂಕ್ರಾಂತಿ

ಜನವರಿಯಲ್ಲಿ ಮಕರ ಸಂಕ್ರಾಂತಿ

ಜನವರಿಯಲ್ಲಿ ಬರುವಂತಹ ಮೊದಲ ರಜೆ ಮಕರ ಸಂಕ್ರಾಂತಿಯದ್ದಾಗಿದೆ. ಜನವರಿ 14 ಶನಿವಾರ ಬರುತ್ತಾ ಇದೆ. ಅದೇ ಜನವರಿ 26ರಂದು ಪ್ರಜಾಪ್ರಭುತ್ವ ದಿನ ಗುರುವಾರ. ಶುಕ್ರವಾರ ಒಂದು ದಿನ ಕಚೇರಿಗೆ ರಜೆ ಹಾಕಿದರೆ ನಾಲ್ಕು ದಿನ ಒಳ್ಳೆಯ ಪಿಕ್ನಿಕ್ ಮಾಡಬಹುದು.

ಸಣ್ಣ ತಿಂಗಳು ಫೆಬ್ರವರಿಯಲ್ಲೂ ದೀರ್ಘ ವಾರಾಂತ್ಯ

ಸಣ್ಣ ತಿಂಗಳು ಫೆಬ್ರವರಿಯಲ್ಲೂ ದೀರ್ಘ ವಾರಾಂತ್ಯ

ಫೆಬ್ರವರಿ 24ರಂದು ಮಹಾಶಿವರಾತ್ರಿಯಿದೆ. ಈ ಸಮಯದಲ್ಲಿ ಯಾವುದೇ ಗಿರಿಧಾಮಗಳಿಗೆ ಭೇಟಿ ನೀಡಲು ಒಳ್ಳೆಯ ಅವಧಿ.

ರಂಗುರಂಗಿನ ಮಾರ್ಚ್

ರಂಗುರಂಗಿನ ಮಾರ್ಚ್

ಈ ಸಲ ಬಣ್ಣ ಎರಚಿ ಸಂಭ್ರಮ ಪಡುವಂತಹ ಹೋಲಿಯು ಸೋಮವಾರ ಬಂದಿದೆ. ಇದರಿಂದ ಹೋಲಿಗೆ ಒಳ್ಳೆಯ ತಯಾರಿ ಮಾಡಬಹುದು. ಮಾರ್ಚ್ 28ರಂದು ಗುಡಿ ಪಡ್ವ ಬರುತ್ತಾ ಇದೆ.

ಖಂಡಿತವಾಗಿಯೂ ಎಪ್ರಿಲ್ ಫೂಲ್ ಅಲ್ಲ

ಖಂಡಿತವಾಗಿಯೂ ಎಪ್ರಿಲ್ ಫೂಲ್ ಅಲ್ಲ

ದೀರ್ಘ ವಾರಾಂತ್ಯಕ್ಕೆ ಎಪ್ರಿಲ್ ನಲ್ಲಿ ಹಲವಾರು ಅವಕಾಶವಿದೆ. ಎಪ್ರಿಲ್ 3ರಂದು ಸೋಮವಾರ ರಜೆ ಮಾಡಿದರೆ ಎಪ್ರಿಲ್ 4ರಂದು ರಾಮನವಮಿ. ಎಪ್ರಿಲ್ 13 ಮತ್ತು 16ರಂದು ಮತ್ತೆ ದೊಡ್ಡ ವಾರಾಂತ್ಯವಿದೆ. ಬೈಸಕಿ ಮತ್ತು ಡಾ, ಅಂಬೇಡ್ಕರ್ ಜಯಂತಿ ಈ ವಾರವಿದೆ. ಮತ್ತೆ ಇದೇ ತಿಂಗಳಲ್ಲಿ ವಾರಾಂತ್ಯದಲ್ಲಿ ಗುಡ್ ಫ್ರೈಡೆ ಬರುತ್ತದೆ.

ಜೂನ್‌ನಲ್ಲಿ ಒಂದೇ ದೀರ್ಘ ವಾರಾಂತ್ಯ

ಜೂನ್‌ನಲ್ಲಿ ಒಂದೇ ದೀರ್ಘ ವಾರಾಂತ್ಯ

ಜೂನ್‌ನಲ್ಲಿ ಮಾತ್ರ ಒಂದೇ ಒಂದು ದೀರ್ಘ ವಾರಾಂತ್ಯವಿದೆ. ಈದ್ ಉಲ್ ಫಿತ್ರ್ ಸೋಮವಾರ ಬರುತ್ತದೆ. ಈ ವೇಳೆ ರಜೆಗೆ ಎಲ್ಲಿಗೆ ಹೋಗಬೇಕೆಂದು ನಿರ್ಧರಿಸಿ.

ಅಗಸ್ಟ್‌ನಲ್ಲಿ ಮತ್ತೆ ರಜೆಗಳ ಸಾಲು

ಅಗಸ್ಟ್‌ನಲ್ಲಿ ಮತ್ತೆ ರಜೆಗಳ ಸಾಲು

ಅಗಸ್ಟ್ 12ರಂದು ರಜೆಯ ಋತು ಆರಂಭವಾಗುತ್ತದೆ. ಅಗಸ್ಟ್ 16 ಮತ್ತು 18ರಂದು ರಜೆ ಮಾಡಿದರೆ ನಿಮ್ಮ ರಜೆ ಅಂತ್ಯವಾಗುವುದು ಅಗಸ್ಟ್ 20ರಂದು. ಇನ್ನು ಹೆಚ್ಚಿಗೆ ಬೇಕಿದ್ದರೆ 25ರಂದು ಬರುವ ಗಣೇಶ ಚತುದರ್ಶಿಯ ತನಕ ಕಾಯಬೇಕು. ಇದು ಶುಕ್ರವಾರದಂದು ಬರುವುದು.

ಅಕ್ಟೋಬರ್ ಹಬ್ಬಗಳ ತಿಂಗಳು

ಅಕ್ಟೋಬರ್ ಹಬ್ಬಗಳ ತಿಂಗಳು

ವಾರಾಂತ್ಯಗಳು ಅಕ್ಟೋಬರ್ 14ರಂದು ಆರಂಭವಾಗುವುದು. ಅಕ್ಟೋಬರ್ 16ರಂದು ಧನ್ ತೇರಸ್ ಇದೆ. 17 ಮತ್ತು 18ರಂದು ದೀಪಾವಳಿಯಿದೆ ಎಂದು ಪ್ರತಿಯೊಬ್ಬರಿಗೂ ಅರ್ಥವಾಗಿರುತ್ತದೆ.

ಡಿಸೆಂಬರ್

ಡಿಸೆಂಬರ್

ಈ ತಿಂಗಳ ಮೊದಲ ವಾರವೇ ರಜೆ ಆರಂಭವಾಗುತ್ತದೆ. ಡಿಸೆಂಬರ್ 1ರಂದು ಶುಕ್ರವಾರ ಈದ್ ಉಲ್ ಫಿತ್ರ್ ಇದೆ. ಮತ್ತೆ ಕ್ರಿಸ್ಮಸ್ ಸೋಮವಾರ ಬರುತ್ತಾ ಇದೆ. ಈ ವರ್ಷದಂತೆ ಮುಂದಿನ ವರ್ಷದ ಡಿಸೆಂಬರ್‌ನ ಕೊನೆಯ ವಾರದಲ್ಲಿ ಪಾರ್ಟಿ ಮಾಡಿ ಹೊಸ ವರ್ಷವನ್ನು ಸ್ವಾಗತಿಸಿ. 2017 ದೀರ್ಘ ವಾರಾಂತ್ಯದ ವರ್ಷವಾಗಿ ಮೂಡಿಬರಲಿದೆ. ಇದನ್ನು ಆಹ್ವಾನಿಸಲು ಸಜ್ಜಾಗಿ.

English summary

How To Plan Your Long Weekends This Coming Year

The year 2017 won't disappoint you, as there are plenty of public holidays falling around weekends and we are here to share some long weekend holiday ideas with you folks! As you go through this article, we bet you would be smiling away to glory, as there are enough number of holidays which fall either on a Monday or a Friday! This is a treat that most of us would definitely wish for! Check out the list of the long holidays that fall in 2017!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more