For Quick Alerts
ALLOW NOTIFICATIONS  
For Daily Alerts

ಸ್ಲೋ ಪಾಯಿಸನ್ ಮದ್ಯದ ಬಗ್ಗೆ ನೀವು ತಿಳಿದಿರದ ಸತ್ಯಾಸತ್ಯತೆ

|

ಜಗತ್ತಿನಲ್ಲಿ ಅತ್ಯಂತ ಅತ್ಯಂತ ಅಪಾಯಕಾರಿಯಾದ ಪದಗಳು ಯಾವುದು ಎಂದು ಗೊತ್ತೇ? "ಒಂದು ಸಲ ಪ್ರಯತ್ನಿಸು, ಚೆನ್ನಾಗಿಲ್ಲ ಎನ್ನಿಸಿದರೆ ಬಿಟ್ಟು ಬಿಡು" ಈ ಜಗತ್ತಿನಲ್ಲಿರುವ ಎಲ್ಲಾ ದೇಶಗಳ ಜನತೆಗೆ ಏಕಸಮಾನವಾಗಿ ಈ ವಾಕ್ಯ ಅನ್ವಯವಾಗುತ್ತದೆ. ಏಕೆಂದರೆ ಶೇ. 99.99ರಷ್ಟು ಜನರು ಇದೇ ವಾಕ್ಯದಿಂದ ಪ್ರಭಾವಿತರಾಗಿ ವ್ಯಸನಕ ಕೂಪಕ್ಕೆ ಧುಮುಕಿದ್ದಾರೆ. ಇವರನ್ನು ಕೂಪಕ್ಕೆ ಧುಮುಕಿಸಲು ಹಲವರ ಸ್ವಾರ್ಥವೂ ಇದೆ. ಉದಾಹರಣೆಗೆ ಸುಮಾರು ಸ್ವಾತಂತ್ರಪೂರ್ವದಲ್ಲಿ ಭಾರತದಲ್ಲಿ ಕಾಫಿ ಎಂಬ ಪದ ಕೇವಲ ಬ್ರಿಟಿಷರ ಪೇಯ ಎಂದೇ ಪರಿಗಣಿಸಲ್ಪಡುತ್ತಿತ್ತು.

ಭಾರತೀಯರು ಕಷಾಯ ಮಾಡಿಕೊಂಡು ಕುಡಿಯುತ್ತಿದ್ದರು. ಭಾರತದ ಗುಡ್ಡಬೆಟ್ಟಗಳು ಕಾಫಿ ಬೆಳೆಗೆ ಸೂಕ್ತ ಎಂದರಿತ ಬ್ರಿಟಿಷರು ಇಲ್ಲಿನ ಬೆಟ್ಟಗುಡ್ಡಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ಅಲ್ಲಿನ ಸ್ಥಳೀಯರನ್ನೇ ಕಾರ್ಮಿಕ (ಗುಲಾಮ)ರನ್ನಾಗಿಸಿ ಕಾಫಿ ಬೆಳೆದರು. ಆದರೆ ಇಷ್ಟೊಂದು ಆಗಾಧವಾದ ಪ್ರಮಾಣದ ಕಾಫಿಯನ್ನು ಮಾರದೇ ಲಾಭ ಎಲ್ಲಿಂದ? ಅದಕ್ಕಾಗಿ ಭಾರತೀಯರಿಗೆ ಕಾಫಿ ಕುಡಿಯುವ ಚಟ ಹತ್ತಿಸಬೇಕಿತ್ತು. ಇದಕ್ಕಾಗಿ ಅವರು ಬಳಸಿದ ತಂತ್ರವೂ ಇದೇ ವಾಕ್ಯದ ಪ್ರಯೋಗ. ಹೀಗೆ ಧೂಮಪಾನ, ಮದ್ಯಪಾನದಂತಹ ಚಟಗಳೂ ಸ್ನೇಹಿತರಿಂದ ಅಥವಾ ನಿಕಟವರ್ತಿಗಳಿಂದ ನೀಡಿದ ಇದೇ ವಾಕ್ಯದ ಪ್ರಲೋಭನೆಗಳೇ ಆಗಿವೆ. ಒಮ್ಮೆ ಈ ಚಟಕ್ಕೆ ಬಿದ್ದವರು ಹೊರಬರುವುದು ಕಷ್ಟ.

ಅದರಲ್ಲೂ ಪ್ರಥಮವಾಗಿ ಮದ್ಯ ಕುಡಿದಾಗ ಮೆದುಳಿಗೆ ಹೋದ ಮದ್ಯವನ್ನು ನಿಗ್ರಹಿಸಲು ಮೆದುಳಿನಲ್ಲಿ ಉತ್ಪತ್ತಿಯಾದ THIQ ಎಂಬ ರಾಸಾಯನಿಕವೇ ಮದ್ಯವ್ಯಸನಿಗಳು ಇದರ ಗುಣಗಾನ ಮಾಡಲು ಕಾರಣ ಎಂದು ಸಂಶೋಧನೆಯೊಂದು ತಿಳಿಸುತ್ತದೆ. ಇದರಿಂದಲೇ ವ್ಯಸನಿಗಳು ಮದ್ಯದಿಂದ ಹೊರಬರಲು ನಿರಾಕರಿಸುತ್ತಾರೆ. ಮದ್ಯ ಹೊಟ್ಟೆಗಿಳಿಯಿತೋ ಲೋಕವನ್ನೇ ಮರೆತುಬಿಡುತ್ತಾರೆ. ಇಂದು ಮದ್ಯದ ನಿಜವಾದ ಗುಣಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ....

ಮದ್ಯ ಪ್ರತ್ಯಕ್ಷಕ್ಕಿಂತಲೂ ಪರೋಕ್ಷವಾಗಿ ಕೊಲ್ಲುವುದು ಹೆಚ್ಚು

ಮದ್ಯ ಪ್ರತ್ಯಕ್ಷಕ್ಕಿಂತಲೂ ಪರೋಕ್ಷವಾಗಿ ಕೊಲ್ಲುವುದು ಹೆಚ್ಚು

ಇಡಿಯ ವಿಶ್ವದಲ್ಲಿ ಪ್ರತಿ ಹತ್ತು ಸೆಕೆಂಡಿಗೆ ಓರ್ವ ವ್ಯಕ್ತಿ ಮದ್ಯದ ನೇರಪರಿಣಾಮಗಳಿಂದ ಮೃತಪಡುತ್ತಾನೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ. ಆದರೆ ಮದ್ಯದ ಪರೋಕ್ಷ ಪರಿಣಾಮವಾಗಿ ಮೃತಪಡುವವರ ಸಂಖ್ಯೆ ಇದರ ಸಾವಿರ ಪಟ್ಟು ಇದೆ. ಹೇಗೆಂದರೆ ಮದ್ಯ ಕುಡಿದು ಅಡ್ಡಾದಿಡ್ಡಿ ವಾಹನ ಚಲಾಯಿಸಿ ರಸ್ತೆಬದಿಯ ಅಮಾಯಕರನ್ನೆಲ್ಲಾ ಸಾಯಿಸುವ, ಕಳಪೆ ಮದ್ಯದಿಂದ ವಿಷವೇರಿ ಸಾಯುವ, ಮದ್ಯದ ಅಮಲಿನಲ್ಲಿ ಆತ್ಮಹತ್ಯೆಯ ತಪ್ಪು ನಿರ್ಧಾರ ತೆಗೆದುಕೊಳ್ಳುವ... ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮದ್ಯ ಪ್ರತ್ಯಕ್ಷಕ್ಕಿಂತಲೂ ಪರೋಕ್ಷವಾಗಿ ಕೊಲ್ಲುವುದು ಹೆಚ್ಚು

ಮದ್ಯ ಪ್ರತ್ಯಕ್ಷಕ್ಕಿಂತಲೂ ಪರೋಕ್ಷವಾಗಿ ಕೊಲ್ಲುವುದು ಹೆಚ್ಚು

ವಿರೋಧಾಭಾಸದಿಂದ ಮದ್ಯದ ಅಮಲಿನಲ್ಲಿ ಕೊಲೆಗೈಯುವ, ಕುಡಿತಕ್ಕೆ ಹಣ ಕೊಡಲಿಲ್ಲವೆಂದು ತಮ್ಮವರನ್ನು ಕೊಲ್ಲುವ, ಸೇಡು ತೀರಿಸಿಕೊಳ್ಳುವ ಸಿಟ್ಟನ್ನು ಮದ್ಯ ಕುಡಿದು ತಾರಕಕ್ಕೇರಿಸಿಕೊಂಡು ಆ ಪ್ರಭಾವದಲ್ಲಿ ಕೊಲೆ ಮಾಡುವ, ಮದ್ಯದ ಅಮಲಿನಲ್ಲಿ ನದಿಗೆ, ನೀರುತುಂಬಿದ ಚರಂಡಿ, ಗುಂಡಿಗಳಿಗೆ ಬಿದ್ದು ಮೃತಪಡುವ, ಇಂತಹ ಹತ್ತು ಹಲವಾರು ಸಂಗತಿಗಳನ್ನು ಕಲೆಹಾಕಿದರೆ ಪರೋಕ್ಷ ಕಾರಣಗಳು ಪ್ರತ್ಯಕ್ಷ ಕಾರಣಕ್ಕಿಂತ ಸಾವಿರಾರು ಪಟ್ಟು ಹೆಚ್ಚಿರುವುದು ಕಂಡುಬರುತ್ತದೆ.

ಮದ್ಯ ಜೀರ್ಣವಾಗುವುದಿಲ್ಲ, ನೇರವಾಗಿ ರಕ್ತಕ್ಕೆ ಸೇರುತ್ತದೆ

ಮದ್ಯ ಜೀರ್ಣವಾಗುವುದಿಲ್ಲ, ನೇರವಾಗಿ ರಕ್ತಕ್ಕೆ ಸೇರುತ್ತದೆ

ಮದ್ಯದ ಒಂದು ಗುಣವೆಂದರೆ ಇದು ನಮ್ಮ ಜೀರ್ಣಾಂಗಗಳಲ್ಲಿ ಜೀರ್ಣವಾಗದೇ ನೇರವಾಗಿ ಕರುಳುಗಳಿಂದ ರಕ್ತಕ್ಕೆ ಹೀರಲ್ಪಡುತ್ತದೆ. ಸುಲಭವಾಗಿ ಹೇಳಬೇಕೆಂದರೆ ಒಂದು ಇಂಜೆಕ್ಷನ್ ಮೂಲಕ ನರಕ್ಕೆ ಮದ್ಯವನ್ನು ಸೇರಿಸಿದ ಹಾಗೆ. ಇದು ಮೆದುಳಿಗೆ ತಲುಪಿದ ಬಳಿಕ ಮೆದುಳಿನ ಕಾರ್ಯಕ್ಷಮತೆ ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ ಹಾಗೂ ದೇಹದ ಚಟುವಟಿಕೆಯ ಮೇಲಿನ ಹತೋಟಿಯೂ ಕಡಿಮೆಯಾಗುತ್ತದೆ. ಇದನ್ನೇ ಅಮಲು ಎನ್ನುತ್ತಾರೆ. ವ್ಯಸನಿಗಳು ಈ ಅಮಲಿಗೆ ನೋವನ್ನು ಮರೆಸುವ ಶಕ್ತಿ ಇದೆ ಎಂದು ನಂಬುತ್ತಾರೆ. ಅಮಲಿನಲ್ಲಿದ್ದಾಗ ಮೆದುಳು ಯೋಚಿಸುವ ಕ್ಷಮತೆಯನ್ನು ಕಳೆದುಕೊಂಡಿರುವುದರಿಂದ ನೋವನ್ನು ಮರೆಸುವುದು ಬಿಡಿ, ಜನರು ತಮ್ಮ ವಿವೇಕವನ್ನೇ ಕಳೆದುಕೊಂಡು ಬಿಡುತ್ತಾರೆ.

ಸರ್ವನಾಶಕ್ಕೂ ಮದ್ಯ ಕಾರಣವಾಗಬಲ್ಲುದು

ಸರ್ವನಾಶಕ್ಕೂ ಮದ್ಯ ಕಾರಣವಾಗಬಲ್ಲುದು

ತಮ್ಮ ಬೇಳೆ ಬೇಯಿಸಿಕೊಳ್ಳಲು ಶತಮಾನಗಳಿಂದ ಮೇಲ್ವರ್ಗದವರು ಕೆಳವರ್ಗದವರಿಂದ ಕಷ್ಟಕರವಾದ ಕೆಲಸಗಳನ್ನು ಮಾಡಿಸಿಕೊಳ್ಳಲು ಮಾಡಿಕೊಂಡಿದ್ದ ಉಪಾಯವೇ ಇದು. ಇದನ್ನು ಕುಡಿದರೆ ನಿನ್ನ ನೋವು ಮಾಯವಾಗುತ್ತದೆ ಎಂದೆಲ್ಲಾ ಹೇಳಿ ಮದ್ಯ ಕುಡಿಸಿ ಅಪಾಯಕಾರಿ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಇದನ್ನು ಅರಿಯದ ಅಮಾಯಕರು ವ್ಯಸನಿಗಳಾಗುತ್ತಾ ಬಂದಿದ್ದಾರೆ. ಉಳ್ಳವರು ದುಬಾರಿ ಮದ್ಯವನ್ನು ಕುಡಿದು ಕೆಳವರ್ಗದವರಿಗಿಂತ ತಾವು ಮೇಲೆ ಎಂದು ಸಾಧಿಸಲು ಪ್ರಯತ್ನಿಸುತ್ತಿದ್ದರು. ಇಂದಿನ ಪಿಡುಗಿಗೆ ಇತಿಹಾಸದ ಈ ಪರಿಯ ಪ್ರಭಾವ ಅಪಾರವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸರ್ವನಾಶಕ್ಕೂ ಮದ್ಯ ಕಾರಣವಾಗಬಲ್ಲುದು

ಸರ್ವನಾಶಕ್ಕೂ ಮದ್ಯ ಕಾರಣವಾಗಬಲ್ಲುದು

ಮದ್ಯ ಕುಡಿದ ವೇಳೆ ಪರಿಣಾಮಗಳ ಕುರಿತು ಅವರು ಯೋಚಿಸುವುದಿಲ್ಲವಾದುದರಿಂದ ಕುಡಿಸಿದ ವ್ಯಕ್ತಿ ಕುಡಿದಾತನಿಂದ ಯಾವುದೇ ಕೆಲಸ ಮಾಡಿಸಿಕೊಳ್ಳಬಹುದು. ಪೋಲೀಸರೂ ಕೈದಿಗಳಿಂದ ಉಪಯುಕ್ತ ಮಾಹಿತಿ ಪಡೆಯಲು ಇದೇ ವಿಧಾನವನ್ನು ಅನುಸರಿಸುತ್ತಾರೆ. ಒಮ್ಮೆ ಶೃಂಗೇರಿ ಬಳಿ ಟಿಂಬರ್ ಲಾರಿಯ ಆಕ್ಸೆಲ್ ತುಂಡಾಗಿ ದೊಡ್ಡ ದೊಡ್ಡ ಮರದ ದಿಮ್ಮಿಗಳು ಲಾರಿಯಿಂದ ಕೆಳಗೆ ಬಿದ್ದಿದ್ದವು. ಇವನ್ನು ಮತ್ತೆ ಲಾರಿಯ ಮೇಲೆ ಹತ್ತಿಸಲು ಶೃಂಗೇರಿಯಿಂದ ಆನೆಯನ್ನು ತರಿಸಬೇಕಿತ್ತು. ಒಟ್ಟು ಖರ್ಚು ಸುಮಾರು ಹತ್ತು ಸಾವಿರವಾದರೂ ಆಗುತ್ತಿತ್ತು. ಆದ ಲಾರಿ ಚಾಲಕ ಐನೂರು ರೂಪಾಯಿಯ ಮದ್ಯವನ್ನು ಸ್ಥಳೀಯ ಜನರಿಗೆ ಕಂಠಮಟ್ಟ ಕುಡಿಸಿ ಮಾತುಮಾತಿನಲ್ಲಿ ಅಷ್ಟೂ ದಿಮ್ಮಿಗಳನ್ನು ಮತ್ತೆ ಲಾರಿ ಮೇಲೆ ಏರಿಸಿದ್ದ. ಇದನ್ನು ಮದ್ಯದ ಪ್ರಭಾವದ ಲಾಭವೆನ್ನಬೇಕೋ, ಜನರ ತಿಳಿಗೇಡಿತನದ ಪರಮಾವಧಿ ಎನ್ನಬೇಕೋ? ಮದ್ಯದ ಪ್ರಭಾವವಿಲ್ಲದಿದ್ದರೆ ಅವರು ಆ ದಿಮ್ಮಿಗಳನ್ನು ಏರಿಸುತ್ತಿದ್ದರೇ? ಒಂದು ವೇಳೆ ಕಾಲು ಜಾರಿ ಮರದ ದಿಮ್ಮಿ ಮೈಮೇಲೆ ಬಿದ್ದು ಪ್ರಾಣ ಕಳೆದುಕೊಂಡಿದ್ದಿದ್ದರೆ?

ನೀಲಿ ಕಣ್ಣಿನವರಿಗೆ ಮದ್ಯವನ್ನು ತಾಳಿಕೊಳ್ಳುವ ಶಕ್ತಿ ಹೆಚ್ಚು

ನೀಲಿ ಕಣ್ಣಿನವರಿಗೆ ಮದ್ಯವನ್ನು ತಾಳಿಕೊಳ್ಳುವ ಶಕ್ತಿ ಹೆಚ್ಚು

ಕೆಲವರು ಕೊಂಚ ಪ್ರಮಾಣದ ಮದ್ಯಕ್ಕೇ ತಮ್ಮ ಹತೋಟಿಯನ್ನು ಕಳೆದುಕೊಂಡರೂ ಕೆಲವರಿಗೆ ಹಂಡೆಯಷ್ಟು ಕುಡಿದರೂ ಅಮಲು ಏರುವುದಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ನೀಲಿ ಕಣ್ಣಿನವರಿಗೆ ಈ ಕ್ಷಮತೆ ಹೆಚ್ಚಿರುವುದು ಕಂಡುಬರುತ್ತದೆ. ನೀಲಿಗಣ್ಣಿಗೂ ಮದ್ಯದ ಅಮಲನ್ನು ತಾಳಿಕೊಳ್ಳುವ ಶಕ್ತಿಗೂ ಯಾವ ರೀತಿಯ ಸಂಬಂಧ ಎಂದು ಇದುವರೆಗೆ ಕಂಡುಹಿಡಿಯಲಾಗಿಲ್ಲ.

2013ರವರೆಗೂ ರಷ್ಯಾದಲ್ಲಿ ತಂಪುಪಾನೀಯವಾಗಿದ್ದ ಬಿಯರ್

2013ರವರೆಗೂ ರಷ್ಯಾದಲ್ಲಿ ತಂಪುಪಾನೀಯವಾಗಿದ್ದ ಬಿಯರ್

ನೊರೆಬರುವ ಬಿಯರ್ ನಲ್ಲಿ ಸಹಾ ಕಡಿಮೆ ಪ್ರಮಾಣದಲ್ಲಿ ಆಲ್ಕೋಹಾಲ್ ಪ್ರಮಾಣ ಇರುತ್ತದೆ. ಪ್ರಮಾಣ ಕಡಿಮೆಯೆಂದು ರಷ್ಯಾದಲ್ಲಿ ಇದಕ್ಕೆ ತಂಪುಪಾನೀಯದ ಸ್ಥಾನ ನೀಡಲಾಗಿತ್ತು. ನೊರೆಭರಿತ ಬಿಯರ್ ಅನ್ನು ಮಕ್ಕಳಿಂದ ವೃದ್ದರವರೆಗೆ ಎಲ್ಲರೂ ಸವಿಯುತ್ತಿದ್ದರು. ಆದರೆ ಕಡಿಮೆ ಪ್ರಮಾಣದಲ್ಲಿದ್ದರೂ ವಿಷ ವಿಷವೇ, ಈ ಸತ್ಯವನ್ನು ಮನಗಂಡ ರಷ್ಯಾ ಸರ್ಕಾರ 2013ರಿಂದ ಇದನ್ನು ಮದ್ಯವೆಂದೇ ಪರಿಗಣಿಸಲಾಗುತ್ತಿದೆ. ಹಾಗಾಗಿ ಈಗ ಅಲ್ಲಿ ಮಕ್ಕಳಿಗೆ ಬಿಯರ್ ಭಾಗ್ಯವಿಲ್ಲ.

English summary

True Facts About Alcohol

Alcohol is one ingredient that nobody can say no to. Consumption of alcohol is bad for heath but this does not mean that those who have fallen in love with it will stop! Alcohol is in one way or the other, man's best friend. However, today things have changed and health experts advice to go off alcohol completely in order to live a longer and healthier lifestyle. So, what are you waiting for, take a look at these strange facts about drinking alcohol.
X
Desktop Bottom Promotion