ಕ್ರಿಸ್ಮಸ್ ಕುರಿತ ಕುತೂಹಲ ಸಂಗತಿ, ಎಲ್ಲಾ ನಿಮಗಾಗಿ...

By CM.Prasad
Subscribe to Boldsky

ವಿಶ್ವದ ಬಹು ಸ್ವೀಕೃತ ಧರ್ಮಗಳಲ್ಲಿ ಕ್ರೈಸ್ತ ಧರ್ಮವು ಮುಂಚೂಣಿಯಲ್ಲಿದೆ. ಅದಕ್ಕೆ ಕಾರಣ ದೇವಮಾನವ ಯೇಸು ಕ್ರಿಸ್ತ. ಈ ಮಹಾಪುರುಷನ ಜನ್ಮ ದಿನದ ಆಚರಣೆಯನ್ನು ಕ್ರಿಸ್ಮಸ್ ಆಗಿ ಡಿಸೆಂಬರ್ 25 ರಂದು ವಿಶ್ವದೆಲ್ಲೆಡೆ ಅತ್ಯಂತ ಹರ್ಷದಿಂದ ಆಚರಿಸಲಾಗುತ್ತದೆ. ಈ ದಿನವನ್ನು ಮೊದಲಿಗೆ ರೋಮನ್ನರು ಸೂರ್ಯ ಉದಯಿಸಿದ ದಿನವನ್ನಾಗಿ ಆಚರಿಸಲು ಪ್ರಾರಂಭಿಸಿದರೆ.

ಕ್ರಮೇಣ ಕ್ರಿಸ್ತನ ಜಯಂತಿಯಾಗಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಡಿಸೆಂಬರ್ ಬಂತೆಂದರೆ ಎಲ್ಲಾ ಕ್ರೈಸ್ತ ಬಾಂಧವರು ಕ್ರಿಸ್ಮಸ್ ಹಬ್ಬದ ನಿರೀಕ್ಷೆಯಲ್ಲಿರುತ್ತಾರೆ. ಅದರಲ್ಲೂ ತಿಂಗಳ ಕೊನೆಯಲ್ಲಂತೂ ವಿಶ್ವದೆಲ್ಲೆಡೆ ರಜೆಯ ಹವಾ ಜೋರಾಗಿರುತ್ತದೆ. ಕ್ರಿಸ್ಮಸ್ ಆಚರಣೆಯಲ್ಲಿ ಸಂಬಂಧಿಕರು ಹಾಗೂ ಸ್ನೇಹಿತರೆಲ್ಲರೂ ಕೂಡಿ ಆನಂದದಿಂದ ಯೇಸುವನ್ನು ಸ್ಮರಿಸುತ್ತಾ ಬಗೆಬಗೆಯ ತಿಂಡಿ ತಿನಿಸು ಸಿಹಿಯನ್ನು ಸವಿಯುತ್ತಾರೆ. ಈ ರಜದ ಮಜಾ ಕೊನೆಗೊಳ್ಳುವಾಗ ಕ್ರಿಸ್ಮಸ್ ಬಗೆಗಿನ ವಿವಿಧ ಸಂಗತಿಗಳನ್ನು ತಿಳಿದು ಅಚ್ಚರಿಪಡುತ್ತಾರೆ. ನಮ್ಮ ತಾಣದ ಎಲ್ಲ ಓದುಗರಿಗೂ ಕ್ರಿಸ್ಮಸ್ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಯೇಸು ಕ್ರಿಸ್ತನು ನಿಮ್ಮ ಎಲ್ಲ ಕೋರಿಕೆಗಳನ್ನು ಈಡೇರಿಸಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇವೆ.  

ಈ ವರ್ಷದ ಕ್ರಿಸ್ಮಸ್-2015, ಕಲ್ಲುಸಕ್ಕರೆಯ ಜಲ್ಲೆ ಅಥವಾ ಕ್ಯಾಂಡಿ ಕೇನ್ ತಿನಿಸಿನ ಮೂಲವನ್ನು ಅಮೇರಿಕಾದ ಸಂಯುಕ್ತ ಸಂಸ್ಥಾನವು ಇತ್ತೀಚೆಗೆ ಪತ್ತೆ ಹಚ್ಚಿ ತನ್ನ ಅಭಿಪ್ರಾಯವನ್ನು ತಿಳಿಸಿದೆ. ಇತ್ತೀಚಿನ ವರದಿಯ ಪ್ರಕಾರ, ಕ್ರಿಸ್ಮಸ್ ಕ್ಯಾಂಡಿ ಕೇನ್ ಅನ್ನು ಗದ್ದಲ ಮಾಡುವ ಮಕ್ಕಳ ಗುಂಪಿಗೆ ನೀಡಲು ಮೊದಲಿಗೆ ತಯಾರಿಸಲಾಯಿತು ಎಂದು ತಿಳಿಯಲಾಗಿದೆ. ಗಾಬರಿ ಪಡಬೇಡಿ, ಈ ವರದಿಯನ್ನು ಓದುತ್ತಾ ಹೋದರೆ ನಿಮಗೆ ತಿಳಿಯದ ಕ್ರಿಸ್ಮಸ್ ಬಗೆಗಿನ ಹಲವಾರು ಸಂಗತಿಗಳನ್ನು ತಿಳಿಯಬಹುದಾಗಿದೆ. ಹಾಗಿದ್ದರೆ ಇನ್ನೇಕೆ ತಡ, ಬನ್ನಿ ನಿಮಗಾಗಿ ಈ ಲೇಖನವನ್ನು ಪ್ರಸ್ತುತ ಕ್ರಿಸ್ಮಸ್ ಸಂಭ್ರಮದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಎಲ್ಲರೊಂದಿಗೆ ಕ್ರಿಸ್ಮಸ್ ಹಬ್ಬವನ್ನು ಆನಂದದಿಂದ ಆಚರಿಸಿ.

ಕ್ರಿಸ್ಮಸ್ ಕ್ಯಾಂಡೀಸ್

ಕ್ರಿಸ್ಮಸ್ ಕ್ಯಾಂಡೀಸ್

ಆಶ್ಚರ್ಯವೆಂಬಂತೆ ಕ್ರಿಸ್ಮಸ್ ಕ್ಯಾಂಡೀಸ್ ಅನ್ನು ಚಿಕ್ಕ ಮಕ್ಕಳಿಗಾಗಿ ಗದ್ದಲವನ್ನು ಕಡಿಮೆ ಮಾಡಲು ಕ್ರಮವಾಗಿ ಸಿದ್ಧಪಡಿಸಲಾಯಿತು. ಇದನ್ನು 1670ರಲ್ಲಿ ಮೊದಲಿಗೆ ತಯಾರಿಸಲಾಯಿತು. ಕೊಲೋನ್ ಕೆಥಡ್ರಲ್ ನಲ್ಲಿನ ಗಾಯನವೃಂದದ ಮುಖ್ಯಸ್ಥರೊಬ್ಬರು ಕುರುಬನ ಕೊಕ್ಕೆಯಾಕಾರದ ಕ್ಯಾಂಡೀಸ್ ಅನ್ನು ಮಕ್ಕಳ ಗದ್ದಲ ನಿಲ್ಲಿಸಲು ಅವರನ್ನು ಹೆದರಿಸಲು ತಯಾರಿಸಿದ್ದರು. ಅವುಗಳನ್ನು ಮಕ್ಕಳಿಗೆ ಕೊಟ್ಟು ಶಬ್ಧ ನಿಲ್ಲಿಸುವಂತೆ ಮಾಡುತ್ತಿದ್ದರು.

ಕ್ರಿಸ್ಮಸ್ ಪ್ಲಮ್ ಕೇಕ್

ಕ್ರಿಸ್ಮಸ್ ಪ್ಲಮ್ ಕೇಕ್

ಈ ಋತುವಿನಲ್ಲಿ ಎಲ್ಲರ ಪ್ರಿಯವಾದ ಆಹಾರವೆಂದರೆ ಅದು ಪ್ಲಮ್ ಕೇಕ್. ಇದರ ಮೂಲವನ್ನು ಹುಡುಕಬೇಕಾದರೆ ಕ್ರೈಸ್ತ ಧರ್ಮದ ಪ್ರಾರಂಭಿಕ ಹಂತಕ್ಕೆ ನಾವು ಹೋಗಬೇಕಾಗುತ್ತದೆ. ಅದು ಸುಮಾರು 14ನೇ ಶತಮಾನದ ಕಾಲ. ಆಗ ಎಲ್ಲರ ಮನೆಯಲ್ಲೂ ಓವನ್ ಅಥವಾ ಯಾಂತ್ರಿಕ ಒಲೆ ಹೊಂದಲು ಶಕ್ತರಿರಲಿಲ್ಲ. ಕೇವಲ ಶ್ರೀಮಂತ ಮನೆಗಳಲ್ಲಿ ಚಂದನೆಯ ಕೇಕ್ ಅನ್ನು ತಾಜಾ ಗೋದಿ ಹಿಟ್ಟಿನೊಂದಿಗೆ ತಯಾರಿಸಲಾಗುತ್ತಿತ್ತು. ಹಾಗೇ ಕಾಲಾಂತರದಲ್ಲಿ ಈ ಕೇಕಿಗೆ ಮಸಾಲೆಗಳನ್ನು, ಒಣ ಹಣ್ಣುಗಳನ್ನು, ಜೇನನ್ನು ಮತ್ತು ಇತರೆ ವಸ್ತುಗಳನ್ನು ಬೆರೆಸಲು ಪ್ರಾರಂಭಿಸಿ ಕ್ರಿಸ್ಮಸ್ ಸಮಯದಲ್ಲಿ ಈ ರೀತಿಯ ರುಚಿಯಾದ ಕೇಕುಗಳು ವಿತರಿಸಲು ಆರಂಭಿಸಿದರು. ಆದ್ದರಿಂದ ಈ ಕೇಕ್ ಕ್ರಿಸ್ಮಸ್ ಪ್ಲಮ್ ಕೇಕ್ ಎಂದೇ ಪ್ರಖ್ಯಾತವಾಗಿದೆ.

ಕ್ರಿಸ್ಮಸ್ ಫ್ರೂಟ್ ಕೇಕ್ ಅಥವಾ ಹಣ್ಣು ಮಿಶ್ರಿತ ಕೇಕ್

ಕ್ರಿಸ್ಮಸ್ ಫ್ರೂಟ್ ಕೇಕ್ ಅಥವಾ ಹಣ್ಣು ಮಿಶ್ರಿತ ಕೇಕ್

ಕ್ರಿಸ್ಮಸ್ ಸಮಯದಲ್ಲಿ ಕ್ರೈಸ್ತರು ಹೊಂದಿರಲೇಬೇಕಾದ ರುಚಿಯಾದ ಆಹಾರವಸ್ತುವೆಂದರೆ ಅದು ಕ್ರಿಸ್ಮಸ್ ಫ್ರೂಟ್ ಕೇಕ್ ಎಂದರೆ ತಪ್ಪಾಗಲಾರದು. ಇದನ್ನು ವರ್ಷದ ಕೊನೆಯವರೆಗೂ ಎಲ್ಲರೊಂದಿಗೆ ಸವಿಯುತ್ತಾರೆ. ಕ್ರಿಸ್ಮಸ್ ಸಂಗತಿಯ ಪ್ರಕಾರ, ಈ ಫ್ರೂಟ್ ಕೇಕನ್ನು ಕೊಯ್ಲು ಕಾಲದಲ್ಲಿ ಹೆಚ್ಚು ತಯಾರಿಸುತ್ತಾರೆ. ಏಕೆಂದರೆ ಅದನ್ನು ಅದೃಷ್ಟದ ಭಾಗವಾಗಿ ಜನ ನಂಬಿದ್ದಾರೆ.

ಕ್ರಿಸ್ಮಸ್ ಟರ್ಕಿ

ಕ್ರಿಸ್ಮಸ್ ಟರ್ಕಿ

ಕ್ರಿಸ್ಮಸ್ ಟರ್ಕಿ ಕೂಡ ಒಂದು ಅದ್ಭುತವಾದ ಆಹಾರ ಮತ್ತು ಕ್ರಿಸ್ಮಸ್ ಸಮಯದಲ್ಲಿ ಇದನ್ನು ಎಲ್ಲರೂ ಸವಿಯಲೇಬೇಕು. ಇದಕ್ಕೆ ಒಂದು ಅಚ್ಚರಿಯ ಹಿನ್ನೆಲೆಯೂ ಕೂಡ ಇದೆ. ಎಂಟನೇ ಹೆನ್ರಿ ಎಂಬುವ ರಾಜನು 16ನೇ ಶತಮಾನದಲ್ಲಿ ಟರ್ಕಿಯೊಂದನ್ನು ಕ್ರಿಸ್ಮಸ್ ಗಾಗಿ ಇಟ್ಟುಕೊಂಡಿದ್ದನು. ಆದರೆ ಅದು ಕ್ರಮೇಣ ಸತ್ತುಹೋಗಿದ್ದರಿಂದ ಈ ಸಂದರ್ಭಕ್ಕನುಸಾರವಾಗಿ ಕ್ರಿಸ್ಮಸ್ ಟರ್ಕಿ ಎಂದೇ ಕರೆಯಲಾಗುತ್ತಿದೆ.

ಕ್ರಿಸ್ಮಸ್ ಭೋಜನ ವಿಧಾನ

ಕ್ರಿಸ್ಮಸ್ ಭೋಜನ ವಿಧಾನ

ಕ್ರಿಸ್ಮಸ್ ಸಮಯದಲ್ಲಿ ಎಲ್ಲರ ಮೇಜಿನ ಮೇಲೂ ಬಗೆಬಗೆಯ ಆಹಾರ ಪದಾರ್ಥಗಳು ಕಂಡುಬರುತ್ತದೆ. ಆಹಾರ ತಜ್ಞರ ಪ್ರಕಾರ ಕ್ರಿಸ್ಮಸ್ ಭೋಜನಗಳಲ್ಲಿ ಸುಮಾರು 7000 ಕ್ಯಾಲೊರೀಗಿಂತಲೂ ಹೆಚ್ಚು ಸತ್ವಯುತ ಆಹಾರ ವಿಧಗಳಿದ್ದು, ಈ ಋತುವಿನಲ್ಲಿ ಹೆಚ್ಚು ಜನ ಹೆಚ್ಚು ಕ್ಯಾಲೋರಿಯುಕ್ತ ಆಹಾರವನ್ನು ಸೇವಿಸುವವರಾಗಿದ್ದು ಇದರಿಂದ ದೇಹದ ತೂಕವೂ ಸಹ ಸಹಜವಾಗಿ ಹೆಚ್ಚುತ್ತದೆ. ಆದ್ದರಿಂದ ಕ್ರಿಸ್ಮಸ್ ಸಮಯದಲ್ಲಿ ಯೋಜಿತ ಆಹಾರ ಪದ್ಧತಿಯನ್ನು ಅನುಸರಿಸಲು ತಿಳಿಸಲಾಗಿದೆ. ಒಟ್ಟಾರೆಯಾಗಿ ಕ್ರಿಸ್ಮಸ್ ಸಂಭ್ರಮವನ್ನು ಅತ್ಯಂತ ಆನಂದದಿಂದ ಎಲ್ಲರೊಂದಿಗೆ ಆಚರಿಸಿ.

 
For Quick Alerts
ALLOW NOTIFICATIONS
For Daily Alerts

    English summary

    Strange Christmas Facts You Need To Know

    Christmas is that time of the year which we all look forward too. It is not only about the candies, the treats, the turkey and the sweets. Christmas is a time when you get to spend the holidays with family and friends. Every year, during this holiday season, people introduce a handful of strange Christmas facts that we end up in believing.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more