For Quick Alerts
ALLOW NOTIFICATIONS  
For Daily Alerts

ಭಾರತ ಮಾತ್ರವಲ್ಲ, ವಿದೇಶಗಳಲ್ಲೂ ದೆವ್ವದ ಕಾಟವಿದೆಯಂತೆ!

By manu
|

ಕೆಲವು ಸ್ಥಳಗಳಿಗೆ ಹೋಗುವ ಇರಾದೆಗೆ ಹಿರಿಯರು 'ಅಲ್ಲಿ ಹೋಗಬೇಡಿ, ಅದು ಒಳ್ಳೆಯ ಸ್ಥಳವಲ್ಲ' ಎಂಬ ಎಚ್ಚರಿಕೆಯನ್ನು ನೀಡುತ್ತಾರೆ. ಒಳ್ಳೆಯ ಸ್ಥಳವಲ್ಲ ಎಂದರೆ ಅಲ್ಲಿ ಭೂತಪ್ರೇತಗಳಿವೆ, ಅದರಿಂದ ತೊಂದರೆಯಾಗಬಹುದು ಎಂದು ಅವರು ಮುನ್ನೆಚ್ಚರಿಕೆ ನೀಡುತ್ತಾರೆ. ಆದರೆ ಇದೇ ಎಚ್ಚರಿಕೆಯನ್ನು ಕೆಲವು ಖದೀಮರು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಾರೆ.

ಹಿಂದೆ ಕರಾವಳಿಯ ಕಡೆ ಗಂಧದ ಮರಗಳ ಕಳ್ಳತನವಾಗುವ ವೇಳೆ ಯಾವುದೇ ಅಧಿಕಾರಿ ಬಂದರೂ ಅವರಿಗೆ 'ಕೊಳ್ಳಿದೆವ್ವ' ಕಾಟ ಕೊಡುತ್ತಿತ್ತು. ಎಷ್ಟೋ ವರ್ಷದ ಬಳಿಕ ಧೈರ್ಯವಹಿಸಿದ ಅಧಿಕಾರಿಯೊಬ್ಬರು ಈ ಕೊಳ್ಳಿದೆವ್ವದ ವೇಷಧಾರಿಯನ್ನು ಹಿಡಿದು ಗಂಧದ ಕಳ್ಳಸಾಗಾಣಿಕೆಯನ್ನು ಹಿಡಿದು ಕಳ್ಳರ ತಂಡವನ್ನು ಹಿಡಿದಿರುವುದು ಇತಿಹಾಸ. ಎಂತಹ ಧೈರ್ಯವಂತನ ಎದೆ ನಡುಗಿಸುವ ಭಯಂಕರ ಸ್ಥಳಗಳು!

ಭೂತದ ಈ ಭಯ ಕೇವಲ ನಮ್ಮ ದೇಶದಲ್ಲಲ್ಲ, ಇಡಿಯ ವಿಶ್ವದಲ್ಲಿಯೇ ಇದೆ. ಭೂತಕ್ಕೆ ಹೆದರಿ ಮನೆಗಳನ್ನು ಖಾಲಿ ಮಾಡಿದ ಎಷ್ಟೋ ನಗರಗಳಿವೆ. ಪ್ರತಿ ದೇಶದಲ್ಲಿಯೂ ಭಯ ಹುಟ್ಟಿಸುವ, ಅಲ್ಲಿ ಹೋಗಬೇಡಿ ಎಂದು ಹಿರಿಯರು ಎಚ್ಚರಿಸುವ ಹಲವು ಸ್ಥಳಗಳಿವೆ. ಇಂತಹ ಸ್ಥಳಗಳು ಯಾವುವು ಎಂಬ ಕುತೂಹಲ ಮೂಡಿತೇ? ಬನ್ನಿ ಈ ಬಗ್ಗೆ ಕೆಲವು ಕುತೂಹಲಕಾರಿ ಮಾಹಿತಿಗಳನ್ನು ನೀಡಲಾಗಿದೆ...

ಸಿಂಗಾಪೂರಿನಲ್ಲಿರುವ ಓಲ್ಡ್ ಚಾಂಗಿ ಆಸ್ಪತ್ರೆ

ಸಿಂಗಾಪೂರಿನಲ್ಲಿರುವ ಓಲ್ಡ್ ಚಾಂಗಿ ಆಸ್ಪತ್ರೆ

1935ರಲ್ಲಿ ಈ ಭವ್ಯ ಕಟ್ಟಡ ರಾಯಲ್ ಏರ್‌ಫೋರ್ಸ್ ಆಸ್ಪತ್ರೆ ಎಂಬ ಹೆಸರಿನಲ್ಲಿ ಉದ್ಘಾಟನೆಗೊಂಡಿತ್ತು. ಅರವತ್ತರ ದಶಕದಲ್ಲಿ ಸಿಂಗಾಪೂರ್ ಜಪಾನ್ ವಶವಾದಾದ ಈ ಆಸ್ಪತ್ರೆಯನ್ನು ಜಪಾನ್ ಪೋಲೀಸರ ಗುಪ್ತ ಇಲಾಖೆ ಕೆಂಪಿಟೈ (Kempeitai) ವಹಿಸಿಕೊಂಡಿತು. ಈ ಅವಧಿಯಲ್ಲಿ ಆಸ್ಪತ್ರೆಯನ್ನು ಜಪಾನ್ ಸೈನ್ಯ ಯಾತನೆಯನ್ನು ನೀಡುವ ಘಟಕವನ್ನಾಗಿ ಪರಿವರ್ತಿಸಿಕೊಂಡಿತು. ಎರಡನೇ ಯುದ್ಧದ ಕೈದಿಗಳಿಗೆ ಇಲ್ಲಿ ಚಿತ್ರಹಿಂಸೆ ನೀಡಿ ಸಾಯಿಸಲಾಗುತ್ತಿತ್ತು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

ಸಿಂಗಾಪೂರಿನಲ್ಲಿರುವ ಓಲ್ಡ್ ಚಾಂಗಿ ಆಸ್ಪತ್ರೆ

ಸಿಂಗಾಪೂರಿನಲ್ಲಿರುವ ಓಲ್ಡ್ ಚಾಂಗಿ ಆಸ್ಪತ್ರೆ

1965ರಲ್ಲಿ ಸಿಂಗಾಪೂರ್‌ಗೆ ಸ್ವಾತಂತ್ರ್ಯ ಬರುವವರೆಗೂ ಇದು ಮುಂದುವರೆಯಿತು. ಬಳಿಕ ಹಲವು ಮಿಲಿಟರಿ ಸೇವೆಗಳಿಗೆ ಈ ಆಸ್ಪತ್ರೆಯನ್ನು ಬಳಸಲಾಗಿದ್ದು 1997ರಲ್ಲಿ ಪಕ್ಕದ ಚಾಂಗಿ ರಸ್ತೆಯವರೆಗೆ ಕಟ್ಟಡವನ್ನು ವಿಸ್ತರಿಸಿ ಚಾಂಗಿ ಆಸ್ಪತ್ರೆ ಎಂದು ನಾಮಕರಣ ಮಾಡಲಾಯಿತು.

1997ರಲ್ಲಿ ಇನ್ನೊಂದು ಪಕ್ಕದ ಟೋವಾ ಪಾಯೋ ಆಸ್ಪತ್ರೆಗೆ ಕಟ್ಟಡವನ್ನು ವಿಸ್ತರಿಸಿ ಹಳೆಯ ಕಟ್ಟಡದಿಂದ ಎಲ್ಲಾ ಉಪಕರಣ ಮತ್ತು ಸೇವೆಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಅಂದಿನಿಂದ ಈ ಹಳೆಯ ಕಟ್ಟಡ ಪಾಳುಬಿದ್ದಿದೆ. ಇದಕ್ಕೆ ಕಾರಣ ಚಿತ್ರಹಿಂಸೆಯಲ್ಲಿ ಮರಣಹೊಂದಿದವರ ಆತ್ಮಗಳ ಆಕ್ರಂದನ! ಬಾಗಿಲು ಬಡಿಯುವುದು, ಚೀತ್ಕಾರ ಮೊದಲಾದವು ಇಂದಿಗೂ ಕೇಳಿಬರುತ್ತಿರುವುದರಿಂದ ಈ ಕಟ್ಟಡದ ಹತ್ತಿರಕ್ಕೆ ಹೋಗುವುದನ್ನೇ ನಿಷೇಧಿಸಲಾಗಿದೆ.

ಮೆಕ್ಸಿಕೋದ ಗೊಂಬೆಗಳ ದ್ವೀಪ

ಮೆಕ್ಸಿಕೋದ ಗೊಂಬೆಗಳ ದ್ವೀಪ

ಮೆಕ್ಸಿಕೋ ಬಳಿಯ ಕ್ಸೋಖಿಮಿಲ್ಕೋ (Xochimilco) ಎಂಬ ಕೃತಕ ದ್ವೀಪವೊಂದರಲ್ಲಿ ಆಟವಾಡಲು ಹೋಗಿದ್ದ ಚಿಕ್ಕ ಹುಡುಗಿಯೊಬ್ಬಳು ಮುಳುಗಿ ಮೃತಪಟ್ಟಿದ್ದಳು. 1951ರ ಸುಮಾರಿನಲ್ಲಿ ಈ ಸ್ಥಳಕ್ಕೆ ಭೇಟಿ ನೀಡಿದ ಜ್ಯೂಲಿಯಾನ್ (Don Julian Santana Barrera) ಎಂಬ ವ್ಯಕ್ತಿಗೆ ಆ ಹುಡುಗಿಯ ಗೊಂಬೆ ಸಿಕ್ಕಿತ್ತು. ಅದನ್ನೆತ್ತಿಕೊಂಡು ಹುಡುಗಿಗೆ ಶೃದ್ದಾಂಜಲಿಯ ರೂಪದಲ್ಲಿ ಅಲ್ಲಿನ ಮರವೊಂದಕ್ಕೆ ನೇತು ಹಾಕಿದ. ಆ ಗೊಂಬೆಯ ಕಣ್ಣುಗಳನ್ನು ನೋಡಿದಾಗಲೆಲ್ಲಾ ಆ ಹುಡುಗಿಯೇ ಆತನೊಂದಿಗೆ ಮಾತನಾಡಿದಂತಾಗಿತ್ತು.

ಮೆಕ್ಸಿಕೋದ ಗೊಂಬೆಗಳ ದ್ವೀಪ

ಮೆಕ್ಸಿಕೋದ ಗೊಂಬೆಗಳ ದ್ವೀಪ

ಯಾವುದೋ ಶಕ್ತಿ ಇದೇ ಸ್ಥಳಕ್ಕೆ ಮತ್ತೆ ಮತ್ತೆ ಬರಲು ಪ್ರೇರಣೆ ನೀಡುತ್ತಿತ್ತು. ಅಂತೆಯೇ ಮುಂದಿನ ಐವತ್ತು ವರ್ಷಗಳ ಕಾಲ ಆತ ಈ ಪ್ರದೇಶಕ್ಕೆ ಭೇಟಿ ನೀಡಿ ಪ್ರತಿ ಭೇಟಿಯಲ್ಲಿಯೂ ಒಂದೊಂದು ಗೊಂಬೆಯನ್ನು ನೇತುಹಾಕುತ್ತಾ ಬಂದ. 2001ರಲ್ಲಿ ಈ ಹುಡುಗಿ ಮೃತಪಟ್ಟಲ್ಲೇ ಆತನೂ ವಿಧಿವಶನಾದ. ಆ ಬಳಿಕ ಈ ಸ್ಥಳಕ್ಕೆ Isla de las Munecas ಎಂಬ ಹೆಸರನ್ನಿಡಲಾಗಿದ್ದು ಪ್ರಮುಖ ಪ್ರವಾಸಿ ಕೇಂದ್ರವಾಗಿದೆ. ಇಲ್ಲಿಗೆ ಭೇಟಿ ನೀಡಿದವರೆಲ್ಲಾ ಕೆಲಕಾಲವಾದರೂ ಆ ಗೊಂಬೆಗಳ ಕಣ್ಣುಗಳು ಹಿಂಬಾಲಿಸುತ್ತವೆ ಎಂದು ತಮ್ಮ ಅನುಭವ ತಿಳಿಸಿದ್ದಾರೆ. ಕೆಲವರಿಗಂತೂ ಹುಡುಗಿಯ ಕಿಲಕಿಲ ನಗು ಸಹಾ ಕೇಳಿಸಿದೆಯಂತೆ.

ಸೆಂಟ್ ಆಗಸ್ಟೀನ್ ದೀಪಸ್ತಂಭ - ಯು.ಎಸ್.ಎ

ಸೆಂಟ್ ಆಗಸ್ಟೀನ್ ದೀಪಸ್ತಂಭ - ಯು.ಎಸ್.ಎ

1820ರ ದಶಕದಲ್ಲಿ ಕಟ್ಟಲಾಗಿದ್ದ ಈ ದೀಪಸ್ತಂಭ ಇಂದಿಗೂ ಭಯಹುಟ್ಟಿಸುವ ಸ್ಥಳವಾಗಿದೆ. ಈ ದೀಪಸ್ತಂಭಕ್ಕೆ ಭೇಟಿದವರಿಗೆ ಹಲವು ಭಯಾನಕ ಅನುಭವಗಳಾಗಿವೆ. ಕಲವರು ಅಂದು ಕೆಲಸದವರು ಸೇದುತ್ತಿದ್ದ ಸಿಗಾರ್ ನ ವಾಸನೆಯನ್ನು ಅನುಭವಿಸಿದರೆ ಕೆಲವರು ನೆರಳು ಮತ್ತು ಮಹಿಳೆಯೊಬ್ಬರು ಸಹಾಯಕ್ಕಾಗಿ ಕೂಗುತ್ತಿರುವಂತಹ ಶಬ್ದಗಳನ್ನು ಕೇಳಿದ್ದಾರೆ... ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸೆಂಟ್ ಆಗಸ್ಟೀನ್ ದೀಪಸ್ತಂಭ - ಯು.ಎಸ್.ಎ

ಸೆಂಟ್ ಆಗಸ್ಟೀನ್ ದೀಪಸ್ತಂಭ - ಯು.ಎಸ್.ಎ

ಕೆಲವರಿಗಂತೂ ಇಕ್ಕಟ್ಟಾದ ಮೆಟ್ಟಿಲುಗಳನ್ನು ಇಳಿಯುವಾಗ ಅಥವಾ ಹತ್ತುವಾಗ ಕೆಳಗಿನಿಂದ ಇಬ್ಬರು ಹುಡುಗಿಯರು ಕಾಲೆಳೆದು ಬೀಳಿಸಲು ಪ್ರಯತ್ನಿಸಿದಂತಹ ಅನುಭವಗಳಾಗಿವೆ. ಇದಕ್ಕೆ ಈ ದೀಪಸ್ತಂಭದ ಬಳಿ ಇಬ್ಬರು ಹುಡುಗಿಯರು ಸಾವನ್ನಪ್ಪಿದ್ದ ಕಥೆಯೂ ಇಂಬು ನೀಡುತ್ತದೆ. ಇಂತಹ ಹತ್ತು ಹಲವು ಅನುಭವಗಳಿಂದ ಇಂದಿಗೂ ಜನರು ದೀಪಸ್ತಂಭದ ಬಳಿ ಹೋಗಬೇಡಿ ಎಂದೇ ಸಲಹೆ ನೀಡುತ್ತಾರೆ.

ಇಂಗ್ಲಿಂಡಿನ ಪುರಾತನ ರಾಮ್ ಇನ್ ಹೋಟೆಲ್

ಇಂಗ್ಲಿಂಡಿನ ಪುರಾತನ ರಾಮ್ ಇನ್ ಹೋಟೆಲ್

1145ರಲ್ಲಿ ಕಟ್ಟಲಾದ ಈ ಪುರಾತನ ಕಟ್ಟಡವನ್ನು ಚರ್ಚ್ ಕಟ್ಟಡದ ಕೆಲಸಗಾರರ ವಸತಿಯಾಗಿ ಬಳಸಲಾಗಿತ್ತು. 1930ರಲ್ಲಿ ಇದನ್ನು ಖಾಸಗಿಯವರು ಖರೀದಿಸಿ ಹೋಟೆಲನ್ನಾಗಿ ಪರಿವರ್ತಿಸಿದರು. ಬಳಿಕ ಹಲವು ಮಾಲಿಕತ್ವ ಬದಲಾಯಿತು... ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಇಂಗ್ಲಿಂಡಿನ ಪುರಾತನ ರಾಮ್ ಇನ್ ಹೋಟೆಲ್

ಇಂಗ್ಲಿಂಡಿನ ಪುರಾತನ ರಾಮ್ ಇನ್ ಹೋಟೆಲ್

ಒಮ್ಮೆ ಇದರ ನೀರಿನ ಹರಿವನ್ನು ಬದಲಿಸಿದ ಬಳಿಕ ಈ ಕಟ್ಟಡದಲ್ಲಿ ಅತೀಂದ್ರಿಯ ಶಕ್ತಿ ಪ್ರಕಟವಾಯಿತು ಎಂದು ಇತಿಹಾಸ ತಿಳಿಸುತ್ತದೆ. ಅಂದಿನಿಂದ ರಾತ್ರಿ ಇಲ್ಲಿ ಉಳಿದುಕೊಂಡಿದ್ದವರಿಗೆ ವಿವಿಧ ಭೂತದ ಕಾಟ ಎದುರಾಗಿದೆ. ಮಲಗಿದ್ದವರನ್ನು ಕಾಲೆಳೆದು ಬೀಳಿಸುವುದು, ಕೋಣೆಯಲ್ಲಿ ಕಾಲು ಹಿಡಿದು ಎಳೆದುಕೊಂಡು ಹೋಗುವುದು, ಗೋಡೆಯ ಮೂಲಕ ಕುದುರೆಯ ಮೇಲೆ ಕುಳಿತ ವ್ಯಕ್ತಿ ಅದೃಶ್ಯನಾಗುವುದು ಮೊದಲಾದ ಚೇಷ್ಟೆಗಳನ್ನು ಅನುಭವಿಸಿದವರು ತಿಳಿಸಿದ್ದಾರೆ.

ಫ್ರಾನ್ಸ್‌ನ ಚಾಟೂ ಡಿ ಬ್ರಿಸಾಕ್ ಕೋಟೆ (Chateau De Brissac, France)

ಫ್ರಾನ್ಸ್‌ನ ಚಾಟೂ ಡಿ ಬ್ರಿಸಾಕ್ ಕೋಟೆ (Chateau De Brissac, France)

ಹನ್ನೊಂದನೇ ಶತಮಾನದಲ್ಲಿ ಕಟ್ಟಲಾದ ಈ ಭವ್ಯ ಕೋಟೆಯಲ್ಲಿ ಅಂದು ಭೀಕರವಾದ ಜೋಡಿಹತ್ಯೆ ನಡೆದಿತ್ತು. ಅಂದಿನಿಂದ ಕೋಟೆಯಲ್ಲಿ ಹಸಿರು ದಿರಿಸು ಉಟ್ಟ, ಕೊಳೆತ ಮುಖವನ್ನು ಹೊತ್ತ ಮಹಿಳೆ ಕೋಟೆಯುದ್ದಕ್ಕೂ ಅಡ್ಡಾಡುತ್ತಿದ್ದಾರೆ ಎಂಬ ವಿಷಯ ಪ್ರಚಲಿತವಾಗಿದೆ. ಅಷ್ಟೇ ಅಲ್ಲದೇ ಮಹಿಳೆಯ ಆರ್ತಾನಾದ ಮತ್ತು ಬಿಕ್ಕುವಿಕೆ ಸಹಾ ಕೋಟೆಗೆ ಬೇಟಿ ನೀಡಿದವರನ್ನು ಅಧೀರರನ್ನಾಗಿಸುತ್ತದೆ.

Read more about: ನಗರ ಜೀವನ urban life
English summary

Scariest Places In The World

Do you believe in ghosts and the unexplainable elements around us? I wouldn't wait for the answer as we all know that the answer to that question is unanswerable. The most common thing between all the cultures is the supernatural happenings. Check out some of the most spooky and eery places on earth.
X
Desktop Bottom Promotion