For Quick Alerts
ALLOW NOTIFICATIONS  
For Daily Alerts

ನಮ್ಮೆಲ್ಲರ ವಿಚಿತ್ರ ನಡವಳಿಕೆ, ಅಚ್ಚರಿಯಾದರೂ ಇದು ಸತ್ಯ!

By Super
|

ನಮ್ಮ ಸಾಕುಪ್ರಾಣಿಗಳನ್ನು ಕೊಂಚ ಗಮನಿಸಿದಾಗ ಅವುಗಳ ಕೆಲವು ನಡವಳಿಕೆಗಳು ವಿಚಿತ್ರವೆನಿಸುತ್ತದೆ. ಉದಾಹರಣೆಗೆ ಟಾರ್ಚಿನ ಬೆಳಕನ್ನು ಬೆಕ್ಕಿನ ಅಕ್ಕಪಕ್ಕ ಬಿಟ್ಟರೆ ಬೆಕ್ಕು ಅದನ್ನು ಹಿಡಿಯಲು ಹೋಗುವುದು ನಗು ಬರಿಸುತ್ತದೆ. ಅಂತೆಯೇ ಮಾನವರನ್ನು ಗಮನಿಸಿದಾಗಲೂ ಕೆಲವು ನಡವಳಿಕೆಗಳು ವಿಚಿತ್ರವೆನಿಸುತ್ತದೆ. ಉದಾಹರಣೆಗೆ ನೆಟಿಗೆ ತೆಗೆಯುವುದು, ಈರುಳ್ಳಿ ಹೆಚ್ಚುವಾಗ ಕಣ್ಣೀರು ಸುರಿಸುವುದು, ದಾರಿಯಲ್ಲಿ ಡಬ್ಬ ಅಥವಾ ಇನ್ನಾವುದಾದರೊಂದು ವಸ್ತು ಬಿದ್ದಿದ್ದರೆ ಅದನ್ನು ಅಗತ್ಯವಿಲ್ಲದಿದ್ದರೂ ಒದೆಯುವುದು ಇತ್ಯಾದಿ. ಅದರಲ್ಲೂ ಕೈಯಲ್ಲಿ ಆಯುಧವಿದ್ದರೆ ಮಾನವರ ಮೆದುಳು ಯೋಚಿಸುವ ರೀತಿಯೇ ಬೇರೆಯದ್ದಾಗುತ್ತದೆ.

ಉದಾಹರಣೆಗೆ ಮಲೆನಾಡಿನಲ್ಲಿ ತೋಟ ಕಾಡುಗಳಲ್ಲಿ ತಿರುಗುವವರ ಕೈಯಲ್ಲಿರುವ ಕತ್ತಿ ಹರಿತಗೊಳಿಸಿದ ಬಳಿಕ ಇದನ್ನು ಪರೀಕ್ಷಿಸಲು ಅವರು ಸಾಗಿದೆಡೆಯಲ್ಲೆಲ್ಲಾ ಕೈ ಮಟ್ಟದ ಎತ್ತರದಲ್ಲಿರುವ ಮರದ ಗೆಲ್ಲು, ಹರೆ, ಕಾಂಡಗಳನ್ನು ಕಡಿಯುತ್ತಾ ಹೋಗುವುದನ್ನು ಕಾಣಬಹುದು.

ಈ ನಡವಳಿಕೆಯನ್ನು ಅಭ್ಯಸಿಸಲು human science ಅಥವಾ human physiology ಎಂಬ ವಿಭಾಗವನ್ನೇ ತೆರೆದಿದೆ. ಮನೋವಿಜ್ಞಾನದ ಒಂದು ಉಪವಿಭಾಗವಾದ ಈ ವಿಷಯ ಹಲವು ವರ್ಷಗಳಿಂದ ಹಲವು ರಹಸ್ಯಗಳನ್ನು ಬಹಿರಂಗಗೊಳಿಸಿದ್ದು ಹಲವು ಪ್ರಮುಖ ನಿರ್ಣಯಗಳಿಗೆ ನಾಂದಿ ಹಾಡಿದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಶೃಂಗಸಭೆಗಳು. ಜಗತ್ತಿಗೆ ಮಾರಕವಾಗಬಹುದಾದ ಆಯುಧ ಅಥವಾ ಶಕ್ತಿಯನ್ನು ಬಳಸದಂತೆ ತಡೆಯುವ ಪ್ರಯತ್ನಗಳು.

ಆದರೆ ನೆಟಿಕೆ ಮುರಿಯುವ ಮೊದಲಾದ ಕ್ಷುಲ್ಲುಕವೆನಿಸುವ ಅಭ್ಯಾಸಗಳು ಕುತೂಹಲಕರವಾಗಿದ್ದರೆ ಇನ್ನೂ ಹಲವಾರು ಅಭ್ಯಾಸಗಳಿಗೆ ಇದುವರೆಗೆ ಮನೋವಿಜ್ಞಾನಿಗಳ ಬಳಿ ಉತ್ತರವಿಲ್ಲ! ಇಂತಹ ಕೆಲವು ಸಾಮಾನ್ಯ ಅಭ್ಯಾಸಗಳಿಗೆ ತಕ್ಕಮಟ್ಟಿನ ಉತ್ತರವನ್ನು ನೀಡಲು ಕೆಳಗಿನ ಸ್ಲೈಡ್ ಶೋನಲ್ಲಿ ನೀಡಿರುವ ಮಾಹಿತಿಗಳ ಮೂಲಕ ಪ್ರಯತ್ನಿಸಲಾಗಿದೆ. ಓದಿ, ಚಕಿತಗೊಳ್ಳಲು ಸಿದ್ಧರಾಗಿ...

ಈರುಳ್ಳಿ ಕತ್ತರಿಸಿದರೆ ಕಣ್ಣೀರೇಕೆ ಬರುತ್ತದೆ?

ಈರುಳ್ಳಿ ಕತ್ತರಿಸಿದರೆ ಕಣ್ಣೀರೇಕೆ ಬರುತ್ತದೆ?

ಅಜ್ಜಿ ಕಥೆಗಳು ಹೇಗೇ ಇರಲಿ, ವಿಜ್ಞಾನ ಇದಕ್ಕೆ ಸೂಕ್ತ ಉತ್ತರ ನೀಡುತ್ತದೆ. ಕಣ್ಣೀರು ಬರಿಸಲು ಈರುಳ್ಳಿ ಕತ್ತರಿಸಿದಾಗ ಒಸರುವ ದ್ರವದಿಂದ ಬಿಡುಗಡೆಯಾಗುವ propanethial sulfoxide ಎಂಬ ರಾಸಾಯನಿಕವೇ ಕಾರಣ. ಇದು ನಮ್ಮ ಕಣ್ಣಿನಲ್ಲಿರುವ ಕಣ್ಣೀರ ಗ್ರಂಥಿಗಳಿಗೆ ತಗುಲಿದೊಡನೆ ಅಲ್ಲಿ ಸಲ್ಫ್ಯೂರಿಕ್ ಆಮ್ಲವಾಗಿ ಪರಿವರ್ತಿತವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಈರುಳ್ಳಿ ಕತ್ತರಿಸಿದರೆ ಕಣ್ಣೀರೇಕೆ ಬರುತ್ತದೆ?

ಈರುಳ್ಳಿ ಕತ್ತರಿಸಿದರೆ ಕಣ್ಣೀರೇಕೆ ಬರುತ್ತದೆ?

ಈ ಆಮ್ಲ ಕಣ್ಣಿನ ಮೇಲೆ ಹರಡಿರುವ ಪದರವನ್ನು ಬದಿಗೆ ಸರಿಸುವ ಮೂಲಕ ಉರಿ ತರಿಸುತ್ತದೆ ಹಾಗೂ ಹೆಚ್ಚಿನ ಕಣ್ಣೀರು ಹರಿಯುವಂತೆ ಮಾಡುತ್ತದೆ.

ಇದನ್ನು ತಡೆಯುವುದು ಹೇಗೆ?

ಇದನ್ನು ತಡೆಯುವುದು ಹೇಗೆ?

ಅನುಭವಸ್ಥರ ಪ್ರಕಾರ ಈರುಳ್ಳಿಯನ್ನು ಹೆಚ್ಚುವ ಮೊದಲು ಸಿಪ್ಪೆ ಸುಲಿದು ಎರಡಾಗಿ ಕತ್ತರಿಸಿ ನೀರಿನಲ್ಲಿ ಮುಳುಗಿಸಬೇಕು. ಕೊಂಚ ಹೊತ್ತಿನ ಬಳಿಕ ಹೆಚ್ಚಿದರೆ ಕಣ್ಣೀರು ಬರದು. ಇದು ಕೊಂಚ ಮಟ್ಟಿಗೆ ನಿಜವಾಗಿದ್ದರೂ ಒಂದೆರಡು ಈರುಳ್ಳಿಗೆ ಮಾತ್ರ ಸೀಮಿತವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಕತ್ತರಿಸಿದರೆ ಕಣ್ಣೀರು ಅನಿವಾರ್ಯವಾಗಿದೆ.

ಇದನ್ನು ತಡೆಯುವುದು ಹೇಗೆ?

ಇದನ್ನು ತಡೆಯುವುದು ಹೇಗೆ?

ಬದಲಿಗೆ ಹೆಚ್ಚುವ ಮೊದಲು ಸಿಪ್ಪೆ ಸುಲಿದು ನೇರವಾಗಿ ಫ್ರಿಜ್ಜಿನ ಫ್ರೀಜರಿನಲ್ಲಿರಿಸಿ ಕೊಂಚ ಹೊತ್ತಿನ ಬಳಿಕ ಹೆಚ್ಚಿದರೆ ಈ ಅನಿಲ ಬಿಡುಗಡೆಯಾಗದೇ ಕಣ್ಣೀರು ಬರುವುದಿಲ್ಲ. ಇನ್ನೊಂದು ಸಲಹೆ ಎಂದರೆ ಹೆಚ್ಚುವಾಗ ತುದಿಯಿಂದ ಬುಡಕ್ಕೆ ಬರುವಂತೆ ಹೆಚ್ಚಬೇಕು. ಏಕೆಂದರೆ ಬುಡದಲ್ಲಿಯೇ ಈ ರಸ ಹೆಚ್ಚಾಗಿರುತ್ತದೆ. ಮತ್ತು ಕಾಂಡದ ಭಾಗ (ವೃತ್ತಾಕಾರದ ಬುಡ) ವನ್ನು ಬಳಸಬಾರದು.

ನೆಟಿಕೆ ಮುರಿಯುವಾದ ಸದ್ದು ಬರುವುದೇಕೆ?

ನೆಟಿಕೆ ಮುರಿಯುವಾದ ಸದ್ದು ಬರುವುದೇಕೆ?

ಸಾಮಾನ್ಯವಾಗಿ ಎಲ್ಲರಿಗೂ ನೆಟಿಕೆ ಮುರಿಯುವ ಅಭ್ಯಾಸವಿರುತ್ತದೆ. ಕೆಲವರಿಗೆ ದಿನಕ್ಕೆ ಹತ್ತಾರು ಬಾರಿ ಮುರಿಯುವ ಅಭ್ಯಾಸವಿದ್ದರೆ ಕೆಲವರಿಗೆ ವಾರಕ್ಕೊಮ್ಮೆ. ಕೈ ಬೆರಳು, ಕುತ್ತಿಗೆ, ಸೊಂಟ, ಕಾಲುಬೆರಳು ಮೊದಲಾದ ಮೂಳೆಸಂದುಗಳು ಸೆಳೆತಕ್ಕೆ ಒಳಗಾದಾಗ ಟಿಕ್ ಎಂಬ ಶಬ್ದ ಬರುತ್ತದೆ. ಶಬ್ಧ ಬರುವ ಈ ಮೂಳೆಸಂದುಗಳಿಗೆ diarthrodial joints ಎಂದು ಕರೆಯುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನೆಟಿಕೆ ಮುರಿಯುವಾದ ಸದ್ದು ಬರುವುದೇಕೆ?

ನೆಟಿಕೆ ಮುರಿಯುವಾದ ಸದ್ದು ಬರುವುದೇಕೆ?

ಮೂಳೆಸಂದುಗಳ ನಡುವೆ ಜಾರುವ ಒಂದು ದ್ರವ ಇರುತ್ತದೆ. ಈ ದ್ರವದಲ್ಲಿ ಸಾರಜನಕ (ನೈಟ್ರೋಜನ್) ಅನಿಲ ಕರಗಿಸುತ್ತದೆ. ಈ ಭಾಗವನ್ನು ಕೊಂಚ ಸೆಳೆತಕ್ಕೆ ಒಳಗಾಗಿಸಿದಾಗ ಈ ದ್ರವ ಹೊರಸೂಸುತ್ತದೆ ಹಾಗೂ ಇದರಲ್ಲಿ ಕರಗಿದ್ದ ಸಾರಜನಕ ಬಿಡುಗಡೆಯಾಗುತ್ತದೆ. ಚಿಕ್ಕದಾದ ಒಂದು ಅನಿಲದ ಗುಳ್ಳೆ ಒಡೆದಂತೆ ಟಿಕ್ ಎಂದು ಆಗ ಶಬ್ಧವಾಗುತ್ತದೆ.

ನೆಟಿಕೆ ಮುರಿಯುವಾದ ಸದ್ದು ಬರುವುದೇಕೆ?

ನೆಟಿಕೆ ಮುರಿಯುವಾದ ಸದ್ದು ಬರುವುದೇಕೆ?

ಶಬ್ಧ ಬಂದ ಬಳಿಕ ಮತ್ತೊಮ್ಮೆ ಬರಿಸಲು ಸಾಧ್ಯವಿಲ್ಲ. ಏಕೆಂದರೆ ಬಿಡುಗಡೆಯಾದ ಸಾರಜನಿಕ ಮತ್ತೆ ಆ ದ್ರವದಲ್ಲಿ ಕೂಡಲು ಸುಮಾರು ನಾಲ್ಕರಿಂದ ಆರು ಗಂಟೆಗಳಾದರೂ ಬೇಕು. ಆ ಬಳಿಕ ಮುರಿದ ನೆಟಿಕೆಯಲ್ಲಿ ಶಬ್ಧ ಬರುತ್ತದೆ. ಆಗಾಗ ತೆಗೆಯುತ್ತಿರುವ ನೆಟಿಕೆಯಿಂದ ಮೂಳೆಸಂದುಗಳು ಹೆಚ್ಚು ನಮ್ಯ (flexible) ವಾಗುತ್ತವೆ. ಆದರೆ ತಜ್ಞರ ಪ್ರಕಾರ ಇದು ನೋವಾಗುವ ಮಿತಿಯೊಳಗಿರಬೇಕು. ಒತ್ತಿದಾಗ ಕೊಂಚ ನೋವಾದರೂ ಅದಕ್ಕಿಂತ ಮುಂದೆ ಹೋಗಬಾರದು.

ಕಣ್ಣುಗಳು ಅದುರುವುದೇಕೆ..?

ಕಣ್ಣುಗಳು ಅದುರುವುದೇಕೆ..?

ಬಲಗಣ್ಣು ಅದುರಿದರೆ ಶುಭ ಮತ್ತು ಎಡಗಣ್ಣು ಅದುರಿದರೆ ಅಶುಭ ಎಂದು ಹಲವರು ನಂಬುತ್ತಾರೆ. ಕೆಲವೆಡೆ ಇದಕ್ಕೆ ವಿರುದ್ಧವಾದ ನಂಬಿಕೆಗಳೂ ಇವೆ. (ಬಲಗಣ್ಣು ಅಶುಭ ಮತ್ತು ಎಡಗಣ್ಣು ಶುಭ). ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಣ್ಣುಗಳು ಅದುರುವುದೇಕೆ..?

ಕಣ್ಣುಗಳು ಅದುರುವುದೇಕೆ..?

ಅಷ್ಟಕ್ಕೂ ಕಣ್ಣು ಅದುರುವುದೇಕೆ? ವಿಜ್ಞಾನದ ಪ್ರಕಾರ ಅದುರುವಿಕೆಗೆ ವಿವಿಧ ಕಾರಣಗಳಿವೆ. ಆಹಾರದಲ್ಲಿ ಪೌಷ್ಟಿಕಾಂಶಗಳ ಕೊರತೆ, ಒತ್ತಡ, ಸುಸ್ತು, ಮದ್ಯಪಾನ ಮತ್ತು ಅತಿ ಹೆಚ್ಚಿನ ಕಾಫಿ ಸೇವನೆ ಇದಕ್ಕೆ ಕಾರಣವಾಗಿವೆ.

ಇದರಿಂದ ಪಾರಾಗುವುದು ಹೇಗೆ?

ಇದರಿಂದ ಪಾರಾಗುವುದು ಹೇಗೆ?

ಉತ್ತಮ ಆಹಾರ ಸೇವಿಸಿ, ಸಾಕಷ್ಟು ನಿದ್ದೆ, ವ್ಯಾಯಾಮ ಮಾಡಿ. ಕಾಫಿ ಮತ್ತು ಮದ್ಯಪಾನವನ್ನು ಮಿತಗೊಳಿಸಿ.

ಸತತ ಬೆಳೆಯುವ ಕಿವಿ

ಸತತ ಬೆಳೆಯುವ ಕಿವಿ

ನಮ್ಮ ದೇಹ ಒಂದು ಹಂತದಲ್ಲಿ ಬೆಳವಣಿಗೆಯ ಗರಿಷ್ಟ ಹಂತಕ್ಕೆ ಬಂದು ನಿಂತುಬಿಡುತ್ತದೆ. ಆದರೆ ಸತತವಾಗಿ ಬೆಳೆಯುತ್ತಲೇ ಇರುವ ಎರಡು ಅಂಗಳೆಂದರೆ ಕಿವಿ ಮತ್ತು ಮೂಗು ಮಾತ್ರ. ಆದ್ದರಿಂದ ವೃದ್ದರ ಕಿವಿ ಮತ್ತು ಮೂಗು ಇತರರಿಗಿಂದ ಹೆಚ್ಚು ವಿಶಾಲವಾಗಿರುತ್ತದೆ. ವಿಚಿತ್ರವೆಂದರೆ ಹುಟ್ಟಿದಾಗ ಇತರ ಅಂಗಗಳ ಗಾತ್ರಕ್ಕೆ ಹೋಲಿಸಿದರೆ ಕಿವಿಗಳು ಹೆಚ್ಚಿನ ಅನುಪಾತದಲ್ಲಿರುತ್ತವೆ.

ಸತತ ಬೆಳೆಯುವ ಕಿವಿ

ಸತತ ಬೆಳೆಯುವ ಕಿವಿ

ಇಪ್ಪತ್ತನೆಯ ವರ್ಷದವರೆಗೂ ದೇಹದ ಇತರ ಅಂಗಗಳ ಜೊತೆಗೇ ಸಮಾನವಾದ ಅನುಪಾತದಲ್ಲಿ ಬೆಳೆದರೂ ಇಪ್ಪತ್ತರ ಬಳಿಕ ಇತರ ಅಂಗಗಳ ಬೆಳವಣಿಗೆ ನಿಂತು ಹೋಗುತ್ತದೆ. ಆದರೆ ಕಿವಿಗಳು ಮಾತ್ರ ವರ್ಷಕ್ಕೆ 0.22 ಮಿ.ಮೀ ಯಷ್ಟು ಗಾತ್ರದಲ್ಲಿ ಬೆಳೆಯುತ್ತಲೇ ಇರುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸತತ ಬೆಳೆಯುವ ಕಿವಿ

ಸತತ ಬೆಳೆಯುವ ಕಿವಿ

ಕೆಲವು ವರ್ಷಗಳಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಾಗಿರುವುದು ಕಂಡುಬಂದಿದೆ. ವಿಚಿತ್ರವೆಂದರೆ ಪುರುಷರ ಕಿವಿಗಳೇ ಅತಿ ಹೆಚ್ಚು ಬೆಳೆಯುತ್ತವೆ. ಮಹಿಳೆಯರ ಕಿವಿಗಳು ಬೆಳೆದರೂ ಪುರುಷರಷ್ಟು ವಿಶಾಲವಾಗಿ ಬೆಳೆಯುವುದಿಲ್ಲ.

English summary

interesting Human Characteristics And Why They Occur

There are some interesting and unusual things that happen to our body. Do you know why you crack knuckles, cry while cutting an onion or have an eyelid twitching at times? Some human behaviours and characteristics are beyond our control and may have some mystery behind them. However, science has well explained the reason behind these unusual human psychologies.
X
Desktop Bottom Promotion