For Quick Alerts
ALLOW NOTIFICATIONS  
For Daily Alerts

ನಮ್ಮ ಭಾರತದ ಬಗ್ಗೆ ಹೆಮ್ಮೆ ಪಡಲು, ಇಷ್ಟು ಸಾಕು..

By Deepu
|

"ಭಾರತ ವಿಶ್ವ ನಾಗರೀಕತೆಯ ಮಾತೆ, ಅನೇಕತೆಯಲ್ಲಿ ಏಕತೆಯಿರುವ ದೇಶ, ಸರ್ವಭಾಷೆಗಳಿಗೂ ಮೂಲವಾದ ಸಂಸ್ಕೃತವನ್ನು ಜಗತ್ತಿಗೆ ನೀಡಿದ ತಾಯಿ, ಇತಿಹಾಸದ ಅಧಿದೇವತೆ, ದಂತಕತೆಗಳ ಮಹಾ ಮಾತೆ, ಸಂಪ್ರದಾಯ ಮತ್ತು ಸಂಸ್ಕೃತಿಗಳ ಜನನಿ. ಮಾನವನ ಇತಿಹಾಸದ ಎಲ್ಲಾ ಮೂಲಗಳಿಗೂ ಭಾರತವೇ ಆವಾಸ ಸ್ಥಾನ, ಅಷ್ಟೇ ಏಕೆ ಸಂಸ್ಕೃತಿ, ಬಣ್ಣಬಣ್ಣದ ಹಬ್ಬಗಳು, ಮನಸೆಳೆಯುವ ಮೆರವಣಿಗೆ, ಪ್ರತಿ ಕಿಲೋಮೀಟರಿಗೆ ಬದಲಾಗುವ ಭಾಷೆ ಮತ್ತು ವೈವಿಧ್ಯತೆ ಇವೆಲ್ಲವೂ ನಮ್ಮನ್ನು ಬೆಕ್ಕಸಬೆರಗಾಗಿಸುತ್ತವೆ. ಸಾವಿರಾರು ವರ್ಷಗಳಿಂದ ಭಾರತದಾದ್ಯಂತ ಸಾವಿರಾರು ಸಂಸ್ಕೃತಿ, ಲಿಪಿ ಇರುವ ಭಾಷೆ, ಲಿಪಿ ಇಲ್ಲದ ಭಾಷೆ ಜಾತಿ, ಉಪಜಾತಿಗಳ ಸಮನ್ವಯದಲ್ಲಿ ಜನರು ಬಾಳ್ವೆ ನಡೆಸುತ್ತಾ ಬಂದಿದ್ದಾರೆ.

ಇಷ್ಟೊಂದು ವೈವಿಧ್ಯತೆ, ಭಿನ್ನತೆ ಇದ್ದರೂ ವಿಶ್ವದ ಮಟ್ಟದಲ್ಲಿ ಭಾರತ ಹಲವು ವಿಷಯಗಳಲ್ಲಿ ಅಗ್ರಸ್ಥಾನದಲ್ಲಿಯೇ ಇದೆ. ಅದರಲ್ಲಿ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪಟ್ಟ ಯಾರಿಗೂ ಸಮವಲ್ಲ. ಇಂದು ಹಲವು ಕುಂದು ಕೊರತೆಗಳ ನಡುವೆಯೂ ಆರ್ಥಿಕ ಸ್ಥಾನಮಾನದಲ್ಲೂ ಉನ್ನತ ಮಟ್ಟವನ್ನೇ ಕಾಯ್ದುಕೊಂಡಿದೆ. ವಿಶ್ವದ ಅತಿ ದೊಡ್ಡ ರೈಲು ಜಾಲ ಮತ್ತು ವಿಶ್ವದಲ್ಲಿಯೇ ಅತಿ ಹೆಚ್ಚು ಜನರಿಗೆ ಉದ್ಯೋಗ ನೀಡಿದ ಸಂಸ್ಥೆ ಎಂಬ ಹೆಗ್ಗಳಿಗೆ ಭಾರತೀಯ ರೈಲ್ವೇಗಿದೆ.

ಇನ್ನು ಆಹಾರ ಪದ್ಧತಿ, ಉಳಿಸಿಕೊಂಡು ಬಂದಿರುವ ಸಂಪ್ರದಾಯಗಳು, ಹಿರಿಯರಿಗೆ ನೀಡುವ ಆದರ ಗೌರವ, ವಿದೇಶಗಳಲ್ಲಿರುವ ಭಾರತೀಯರು ತಮ್ಮ ಜಾಣ್ಮೆಯಿಂದ ಪಡೆದ ಹುದ್ದೆ ಮತ್ತು ತೋರಿದ ಫಲಗಳು ಮೊದಲಾದವು ವಿದೇಶೀಯರನ್ನು ಅಪಾರವಾಗಿ ಭಾರತದತ್ತ ಆಕರ್ಷಿಸುತ್ತಿದೆ. ಆದರೆ ಈ ಸಂಪ್ರದಾಯ ಆಚಾರ ವಿಚಾರಗಳ ನಡುವೆಯೇ ಕೆಲವು ಅಚ್ಚರಿಯ ಸಂಗತಿಗಳೂ ಭಾರತದಲ್ಲಿ ಅಡಗಿವೆ. ಈ ಬಗ್ಗೆ ಕೆಲವು ಮಾಹಿತಿಗಳನ್ನು ಕೆಳಗೆ ನೀಡಲಾಗಿದೆ ಮುಂದೆ ಓದಿ...

ಕುಂಭ ಮೇಳ ಬಾಹ್ಯಾಕಾಶದಿಂದ ಸಹ ಕಾಣುತ್ತದೆ

ಕುಂಭ ಮೇಳ ಬಾಹ್ಯಾಕಾಶದಿಂದ ಸಹ ಕಾಣುತ್ತದೆ

2011 ರಲ್ಲಿ ಜರುಗಿದ ಕುಂಭ ಮೇಳವು ವಿಶ್ವದ ಅತಿ ದೊಡ್ಡ ಜನದಟ್ಟಣೆಯನ್ನು ಸೃಷ್ಟಿಸಿತ್ತು. ಇದರಲ್ಲಿ 75 ಮಿಲಿಯನ್ ಅಂದರೆ ಏಳೂವರೆ ಕೋಟಿ ಜನರು ಭಾಗವಹಿಸಿದರು. ಈ ಮೇಳದಲ್ಲಿ ಅದೆಷ್ಟು ಜನರು ಸೇರಿದ್ದರೆಂದರೆ, ಆ ಜನ ಸಮೂಹವನ್ನು ಬಾಹ್ಯಾಕಾಶದಿಂದ ಸಹ ನೋಡಬಹುದಾಗಿತ್ತು.

ಚಂದ್ರನಲ್ಲಿ ನೀರನ್ನು ಕಂಡುಹಿಡಿದದ್ದು ಭಾರತ

ಚಂದ್ರನಲ್ಲಿ ನೀರನ್ನು ಕಂಡುಹಿಡಿದದ್ದು ಭಾರತ

2009 ಸೆಪ್ಟೆಂಬರ್‌ನಲ್ಲಿ ಭಾರತವು ಇಸ್ರೋ ಚಂದ್ರಯಾನ-1 ಎಂಬ ಉಪಗ್ರಹದಲ್ಲಿ ಕಳುಹಿಸಲಾದ ಚಂದ್ರ ಗಣಿಗಾರಿಕೆ ಬಳಸಿಕೊಂಡು ಚಂದ್ರನ ಮೇಲೆ ನೀರು ಇರುವುದನ್ನು ಮೊದಲ ಬಾರಿಗೆ ಪತ್ತೆ ಹಚ್ಚಿತು.

ವಿಜ್ಞಾನ ದಿನಾಚರಣೆ

ವಿಜ್ಞಾನ ದಿನಾಚರಣೆ

ಸ್ವಿಜರ್‌ಲ್ಯಾಂಡಿನಲ್ಲಿ ವಿಜ್ಞಾನ ದಿನಾಚರಣೆಯನ್ನು ಭಾರತದ ಮಾಜಿ ರಾಷ್ಟ್ರಪತಿ ಕ್ಷಿಪಣಿ ತಜ್ಞ, ಎಪಿಜೆ ಅಬ್ದುಲ್ ಕಲಾಂರವರ ನೆನಪಿನಲ್ಲಿ ಆಚರಿಸುತ್ತಾರೆ. ಇವರು 2006 ಮೇ 6 ರಂದು ಸ್ವಿಜರ್‌ಲ್ಯಾಂಡಿಗೆ ಭೇಟಿ ನೀಡಿದ್ದರು. ಅವರ ಆಗಮನವನ್ನು ನೆನಪಿಸಿಕೊಳ್ಳುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ಭಾರತದ ಮೊದಲ ರಾಷ್ಟ್ರಪತಿ ತನ್ನ 50% ವೇತನವನ್ನು ಮಾತ್ರ ತೆಗೆದುಕೊಂಡರು

ಭಾರತದ ಮೊದಲ ರಾಷ್ಟ್ರಪತಿ ತನ್ನ 50% ವೇತನವನ್ನು ಮಾತ್ರ ತೆಗೆದುಕೊಂಡರು

ಡಾ. ರಾಜೇಂದ್ರ ಪ್ರಸಾದ್ ಮೊದಲ ರಾಷ್ಟ್ರಪತಿಯಾಗಿ ನೇಮಕಗೊಂಡಾಗ, ಅವರಿಗೆ ನೀಡುತ್ತಿದ್ದ ಸಂಬಳದಲ್ಲಿ ಕೇವಲ 50% ವೇತನವನ್ನು ಮಾತ್ರ ತೆಗೆದುಕೊಂಡರು. ಅದಕ್ಕಿಂತ ಹೆಚ್ಚಿನ ಹಣ ತನಗೆ ಬೇಕಾಗಿಲ್ಲ ಎಂದು ಅವರು ತಿಳಿಸಿದರು. ತನ್ನ 12 ವರ್ಷದ ಸೇವಾ ಅವಧಿಯಲ್ಲಿ ಅವರು 25% ವೇತನವನ್ನು ಮಾತ್ರ ಪಡೆದುಕೊಂಡರು. ತಮಗೆ ಬರುತ್ತಿದ್ದ ವೇತನದಲ್ಲಿ 10000 ರೂಪಾಯಿಯಲ್ಲಿ ಅವರು ಅರ್ಧ ಭಾಗವನ್ನು ಮರಳಿಸುತ್ತಿದ್ದರು.

ಭಾರತದಲ್ಲಿ ಆನೆಗಳಿಗಾಗಿಯೇ ಒಂದು ಸ್ಪಾ ಇದೆ

ಭಾರತದಲ್ಲಿ ಆನೆಗಳಿಗಾಗಿಯೇ ಒಂದು ಸ್ಪಾ ಇದೆ

ಆನೆಗಳಿಗೆ ಸ್ನಾನ, ಮಸಾಜ್ ಮತ್ತು ಆಹಾರ ಎಂದರೆ ತುಂಬಾ ಇಷ್ಟ. ಕೇರಳದ ಪುನ್ನತ್ತೂರ್ ಕೊಟ್ಟ ಆನೆ ಶಿಬಿರದಲ್ಲಿ ಆನೆಗಳಿಗಾಗಿಯೇ ಒಂದು ಸ್ಪಾವನ್ನು ತೆರೆಯಲಾಗಿದೆ. ಆನೆಗಳಿಗು ಸಹ ಮಸಾಜ್, ಮಾಲಿಷ್ ಸೇವೆ ಇಲ್ಲಿ ಲಭ್ಯ. ಇದು ನಮ್ಮ ದೇಶದ ಹೆಗ್ಗಳಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ.

ವಿಶ್ವದ ಎರಡನೆ ಅತಿ ದೊಡ್ಡ ಇಂಗ್ಲೀಷ್ ಮಾತನಾಡುವ ದೇಶ

ವಿಶ್ವದ ಎರಡನೆ ಅತಿ ದೊಡ್ಡ ಇಂಗ್ಲೀಷ್ ಮಾತನಾಡುವ ದೇಶ

ಅಮೆರಿಕಾವನ್ನು ಹೊರತುಪಡಿಸಿದರೆ ಭಾರತವು ಅತಿ ದೊಡ್ಡ ಇಂಗ್ಲೀಷ್ ಮಾತನಾಡುವ ದೇಶವಾಗಿದೆ. ನಮ್ಮ ದೇಶದಲ್ಲಿ ಸುಮಾರು 1.25 ಕೋಟಿ ಜನರು ಇಂಗ್ಲೀಷ್ ಮಾತನಾಡುತ್ತಾರೆ. ಇದು ನಮ್ಮ ದೇಶದ ಶೇ.ಹತ್ತರಷ್ಟು ಜನಸಂಖ್ಯೆ ಮಾತ್ರ. ಆದರೆ ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳು ಇವೆ.

ವಿಶ್ವದ ಅತಿ ಹೆಚ್ಚು ಶಾಖಾಹಾರಿಗಳು ಇರುವ ದೇಶ ಭಾರತ

ವಿಶ್ವದ ಅತಿ ಹೆಚ್ಚು ಶಾಖಾಹಾರಿಗಳು ಇರುವ ದೇಶ ಭಾರತ

ಅದು ಧಾರ್ಮಿಕ ಕಾರಣಗಳಾಗಿರಬಹುದು ಅಥವಾ ವೈಯಕ್ತಿಕ ಕಾರಣಗಳಾಗಿರಬಹುದು. ಭಾರತದ 20-40% ಜನರು ಶಾಖಾಹಾರಿಗಳಾಗಿದ್ದಾರೆ. ಹೀಗಾಗಿ ನಮ್ಮ ದೇಶವು ವಿಶ್ವದ ಅತ್ಯಂತ ದೊಡ್ಡ ಶಾಖಾಹಾರಿ ದೇಶವಾಗಿದೆ.

ವಿಶ್ವದ ಅತ್ಯಂತ ದೊಡ್ಡ ಹಾಲು ಉತ್ಪಾದಕ ರಾಷ್ಟ್ರ

ವಿಶ್ವದ ಅತ್ಯಂತ ದೊಡ್ಡ ಹಾಲು ಉತ್ಪಾದಕ ರಾಷ್ಟ್ರ

ಭಾರತ ಇತ್ತೀಚೆಗೆ ವಿಶ್ವದ ಅತ್ಯಂತ ದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿ ಗುರುತಿಸಿಕೊಂಡಿತು. ಇದು 2014 ರಲ್ಲಿ 132.4ಮಿ. ಟನ್‌ಗಳಷ್ಟು ಹಾಲನ್ನು ಉತ್ಪಾದಿಸುವ ಮೂಲಕ ಯೂರೋಪಿಯನ್ ಯೂನಿಯನ್ ಅನ್ನು ಹಿಂದಿಕ್ಕಿತು.

ತೇಲುವ ಪೋಸ್ಟ್ ಆಫೀಸ್

ತೇಲುವ ಪೋಸ್ಟ್ ಆಫೀಸ್

ಭಾರತದಲ್ಲಿ 1, 55,015 ಅಂಚೆ ಕಚೇರಿಗಳಿರುವ ವಿಶ್ವದ ಅತ್ಯಂತ ದೊಡ್ಡ ಅಂಚೆ ಜಾಲವನ್ನು ಹೊಂದಿದೆ. ಒಂದು ಸಣ್ಣ ಅಂಚೆ ಕಚೇರಿಯು ಸಹ ಅಂದಾಜು 7,175 ಜನರಿಗೆ ಸೇವೆಯನ್ನು ಸಲ್ಲಿಸುತ್ತದೆ. ದಾಲ್ ಸರೋವರವು ಕಾಶ್ಮೀರದಲ್ಲಿರುವ ಅತ್ಯಂತ ದೊಡ್ಡ ಸರೋವರ. ಈ ಸರೋವರದ ಅಂಚಿನಲ್ಲಿ ನೆಲೆಸಿರುವ ಜನರ ಸೇವೆ ಮಾಡಲು ಭಾರತದ ಅಂಚೆ ಇಲಾಖೆಯು 2011 ರಲ್ಲಿ ಒಂದು ತೇಲುವ ಅಂಚೆ ಕಚೇರಿಯನ್ನು ಸ್ಥಾಪಿಸಿತು. ಇದು ಹಡಗಿನಲ್ಲಿಯೇ ಕಾರ್ಯನಿರ್ವಹಿಸುತ್ತದೆ, ಮತ್ತು ಜನರ ಮನೆಗಳ ಬಳಿಗೆ ಸಾಗುತ್ತದೆ.

ವಿಶ್ವದ ಅತ್ಯಂತ ಮಳೆ ಬೀಳುವ ಪ್ರದೇಶದಲ್ಲಿ ಜನವಸತಿ

ವಿಶ್ವದ ಅತ್ಯಂತ ಮಳೆ ಬೀಳುವ ಪ್ರದೇಶದಲ್ಲಿ ಜನವಸತಿ

ಮೌಸಿನ್‌ರಂ ಎಂಬ ಹಳ್ಳಿಯು ಖಾಸಿ ಬೆಟ್ಟಗಳಲ್ಲಿ ನೆಲೆಗೊಂಡಿರುವ ಒಂದು ಹಳ್ಳಿಯಾಗಿದ್ದು ಮೇಘಾಲಯದಲ್ಲಿ ನೆಲೆಗೊಂಡಿದೆ. ಇದು ವಿಶ್ವದಲ್ಲಿಯೇ ಅತ್ಯಂತ ಮಳೆ ಬೀಳುವ ಪ್ರದೇಶವಾಗಿದೆ. ಮೇಘಾಲಯದಲ್ಲಿ ಚಿರಾಪುಂಜಿ ಸಹ ನೆಲೆಗೊಂಡಿದೆ. ಇದು ಸಹ 1861 ರಲ್ಲಿ ವರ್ಷದಲ್ಲಿ ಅತಿ ಹೆಚ್ಚು ಮಳೆಯನ್ನು ಕಂಡ ದಾಖಲೆಯನ್ನು ಹೊಂದಿದೆ.

English summary

Interesting Facts About India, which should surprise you

India, a place on the earth, is the eyes of adore for it. We the Indians always talk about USA, UK, like countries that are rich and diverse and have the best latest technologies to rule the limelight of today’s world. So in this article lets learn the facts about India.
X
Desktop Bottom Promotion