For Quick Alerts
ALLOW NOTIFICATIONS  
For Daily Alerts

ವಿಚ್ಛೇದನ ಪಡೆದ ಪುರುಷರನ್ನು ವರಿಸಿದ ಖ್ಯಾತ ತಾರೆಯರು

By Super
|

ಬೆಳ್ಳಿ ಪರದೆಯ ಮೇಲಿರುವ ವ್ಯಕ್ತಿಗಳು ತಮ್ಮ ಅಭಿನಯ ಮತ್ತು ವ್ಯಕ್ತಿತ್ವದಿಂದ ಜನರಲ್ಲಿ ಮೂಡಿಸಿದ್ದ ಅಭಿಪ್ರಾಯಗಳು ಅವರ ನಿಜಜೀವನವನ್ನು ಹತ್ತಿರದಿಂದ ನೋಡಿದರೆ ಬದಲಾಗಬಹುದು. ಏಕೆಂದರೆ ಖ್ಯಾತ ವ್ಯಕ್ತಿಗಳೂ ನಿಜವಾಗಿ ಸಾಮಾನ್ಯ ಜನರೇ, ಆದರೆ ಹೆಚ್ಚಿನ ಜನರು ಅವರನ್ನು ಮಾಧ್ಯಮಗಳ ಮೂಲಕ ಬಲ್ಲವರಾಗಿರುತ್ತಾರೆ. ಇದೊಂದು ತರಹದ ಒಮ್ಮುಖ ಪರಿಚಯ ಮಾತ್ರ. ಸಾಮಾನ್ಯ ಜನರಲ್ಲಿದ್ದಂತೆಯೇ ಖ್ಯಾತನಾಮರಲ್ಲಿಯೂ ಆಭಾಸಗಳನ್ನು, ಸಂಸಾರ ಕಲಹಗಳು ಇದ್ದರೂ ಅದು ಅವರ ಅಭಿನಯದಂತೆ ಸಾರ್ವಜನಿಕವಾಗಲು ಸಾಧ್ಯವಿಲ್ಲ. ಧರ್ಮವನ್ನೇ ಬದಲಾಯಿಸಿರುವ ಖ್ಯಾತ 17 ಸೆಲೆಬ್ರಿಟಿಗಳು

ಅಂತೆಯೇ ವಿವಾಹ ವಿಚ್ಛೇದನಗಳೂ ಸಾಮಾನ್ಯವಾಗಿವೆ. ಆದರೆ ವಿಚ್ಛೇದನ ಪಡೆದ ಬಳಿಕವೂ ಅವರ ವ್ಯಕ್ತಿತ್ವ ಸೂಜಿಯಂತೆ ಸೆಳೆಯುತ್ತಿದ್ದು ಖ್ಯಾತ ತಾರೆಯರು ಸಹಾ ಇವರ ಆಕರ್ಷಣೆಗೆ ಒಳಗಾಗುತ್ತಾರೆ. ಈ ರೀತಿಯ ಆಕರ್ಷಣೆಗೆ ಒಳಗಾಗಿ ವಿಚ್ಛೇದಿತ ಪುರುಷರನ್ನು ವರಿಸಿದ ಖ್ಯಾತ ತಾರೆಯರ ಬಗ್ಗೆ ಒಂದು ಪಕ್ಷಿನೋಟವನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

ವಿದ್ಯಾ ಬಾಲನ್ ಮತ್ತು ಸಿದ್ದಾರ್ಥ ರಾಯ್ ಕಪೂರ್

ವಿದ್ಯಾ ಬಾಲನ್ ಮತ್ತು ಸಿದ್ದಾರ್ಥ ರಾಯ್ ಕಪೂರ್

ಹಂ ಪಾಂಚ್ ಎಂಬ ಟೀವಿ ಧಾರಾವಾಹಿಯ ಕಿವಿ ದೂರವಾಗಿರುವ ರಾಧಿಕಾಳ ಪಾತ್ರ ವಹಿಸಿದ್ದ ವಿದ್ಯಾ ಬಾಲನ್ ಮುಂದೆ ಖ್ಯಾತ ತಾರೆಯಾಗುವಳೆಂಬ ಭರವಸೆಯನ್ನು ಹುಸಿಯಾಗಿಸಲಿಲ್ಲ. ಆದರೆ ಖ್ಯಾತನಾಮರನ್ನು ವರಿಸುತ್ತಾಳೆ ಎಂದು ನಿರೀಕ್ಷೆಯಿಟ್ಟುಕೊಂಡಿದ್ದವರಿಗೆ ಮಾತ್ರ ನಿರಾಶೆಯಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಿದ್ಯಾ ಬಾಲನ್ ಮತ್ತು ಸಿದ್ದಾರ್ಥ ರಾಯ್ ಕಪೂರ್

ವಿದ್ಯಾ ಬಾಲನ್ ಮತ್ತು ಸಿದ್ದಾರ್ಥ ರಾಯ್ ಕಪೂರ್

ಏಕೆಂದರೆ ಆಕೆ ವರಿಸಿದ್ದು ಈಗಾಗಲೇ ಎರಡು ಬಾರಿ ಮದುವೆಯಾಗಿ ವಿಚ್ಛೇದನ ಪಡೆದಿರುವ ಸಿದ್ಧಾರ್ಥ ರಾಯ್ ಕಪೂರ್ ರನ್ನು. ಮೂರಕ್ಕೆ ಮುಕ್ತಾಯ ಎಂಬಂತೆ ಈಗ ಸಿದ್ಧಾರ್ಥ ಮತ್ತು ವಿದ್ಯಾ ಸುಖದಂಪತಿಗಳಾಗಿ ಜೀವನ ನಡೆಸುತ್ತಿದ್ದಾರೆ.

ಅಮೃತಾ ಅರೋರಾ ಮತ್ತು ಶಕೀಲ್ ಲಢಾಖ್

ಅಮೃತಾ ಅರೋರಾ ಮತ್ತು ಶಕೀಲ್ ಲಢಾಖ್

ತೆಳ್ಳಗಿನ ಮಲ್ಲಿಗೆ ಬಳ್ಳಿಯಂತೆ ಬಳುಕುತ್ತಾ ಎಲ್ಲರ ಗಮನ ಸೆಳೆಯುತ್ತಿದ್ದ ಅಮೃತಾ ಅರೋರಾ ವಿಚ್ಛೇದಿತ ಶಕೀಲ್ ಲಢಾಕ್ ರನ್ನು ವರಿಸಿದ್ದು ಎಲ್ಲಿ ಎಂದು ಗೊತ್ತೇ? ಮಾರ್ಚ್ 4, 2009ರಂದು ಒಂದು ಕ್ಯಾಥೋಲಿಕ್ ಚರ್ಚಿನಲ್ಲಿ. ಅದರ ಎರಡು ದಿನಗಳ ಬಳಿಕ ಅಂದರೆ ಮಾರ್ಚ್ 6, 2009ರಂದು ಮುಸ್ಲಿಂ ಧಾರ್ಮಿಕ ರೀತಿಯಲ್ಲಿ ನಿಖಾ ಸಹಾ ಮಾಡಿಕೊಂಡರು.

ಅಮೃತಾ ಅರೋರಾ ಮತ್ತು ಶಕೀಲ್ ಲಢಾಖ್

ಅಮೃತಾ ಅರೋರಾ ಮತ್ತು ಶಕೀಲ್ ಲಢಾಖ್

ಶಕೀಲ್ ರಿಗೆ ಇದು ಎರಡನೆಯ ವಿವಾಹವಾಗಿದ್ದು ಮೊದಲು ನೇಪಾಳದ ರಾಜಮನೆತನಕ್ಕೆ ಸೇರಿದ ನಿಶಾ ರಾಣಾ ರನ್ನು ವಿವಾಹವಾಗಿದ್ದರು. ಆದರೆ ಈ ಜೋಡಿ ಸರಿಬರದೇ ವಿಚ್ಛೇದನ ಪಡೆದು ಹೊರಬಂದು ತಮ್ಮ ಜ್ಯೂನಿಯರ್ ಕಾಲೇಜಿನ ಸಹಪಾಠಿ ಮತ್ತು ಆತ್ಮೀಯ ಸ್ನೇಹಿತೆಯಾಗಿದ್ದ ಅಮೃತಾರನ್ನು ವರಿಸಿದರು.

ಕಲ್ಕಿ ಕೋಚ್ಲಿನ್ ಮತ್ತು ಅನುರಾಗ್ ಕಶ್ಯಪ್

ಕಲ್ಕಿ ಕೋಚ್ಲಿನ್ ಮತ್ತು ಅನುರಾಗ್ ಕಶ್ಯಪ್

ಗುಲಾಲ್ ಮತ್ತು ದೇವ್ ಮೊದಲಾದ ಹಿಂದಿ ಚಿತ್ರಗಳ ಸಂಕಲನದ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಆರತಿ ಬಜಾಜ್ ರನ್ನು ವರಿಸಿದ್ದ ಅನುರಾಗ್ ಕಶ್ಯಪ್ ಸಹಾ ವಿಚ್ಚೇದನ ಪಡೆದು ಸಂಬಂಧದಿಂದ ಹೊರಬಂದಿದ್ದರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಲ್ಕಿ ಕೋಚ್ಲಿನ್ ಮತ್ತು ಅನುರಾಗ್ ಕಶ್ಯಪ್

ಕಲ್ಕಿ ಕೋಚ್ಲಿನ್ ಮತ್ತು ಅನುರಾಗ್ ಕಶ್ಯಪ್

ಏಕೆಂದರೆ ವಿವಾಹದ ಬಳಿಕ ಅವರಿಗೆ ಕಲ್ಕಿಯವರ ಸಾಂಗತ್ಯವೇ ಹೆಚ್ಚು ಇಷ್ಟವಾಗಿ ಮೊದಲ ವಿವಾಹದಿಂದ ಹೊರಬಂದು ಕಲ್ಕಿಯವರನ್ನು ವಿವಾಹವಾದರು.

ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್

ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್

ಕ್ರಿಕೆಟಿಗ ರವಿಶಾಸ್ತ್ರಿಯವರೊಡನೆ ತಮ್ಮ ತಾರುಣ್ಯದಲ್ಲಿ ನಿಕಟವಾಗಿದ್ದು ಇನ್ನೇನು ವಿವಾಹವಾಗುವಂತಿರುವಾಗ ಅವರನ್ನು ಬಿಟ್ಟು ನಟ ಸೈಫ್ ಅಲಿ ಖಾನ್ ರನ್ನು 1991ರಲ್ಲಿ ವಿವಾಹವಾಗಿದ್ದ ಅಮೃತಾ ಸಿಂಗ್ 2004ರವರೆಗಿನ ಹದಿಮೂರು ವರ್ಷಗಳ ಸುದೀರ್ಘ ದಾಂಪತ್ಯದ ಬಳಿಕ ಪರಸ್ಪರ ದೂರವಾದರು.

ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್

ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್

ಈ ದಂಪತಿಗಳಿಗೆ ಇಬ್ಬರು ಮಕ್ಕಳೂ ಇದ್ದಾರೆ (ಇಬ್ರಾಹಿಂ ಅಲಿ ಖಾನ್, ಸಾರಾ ಅಲಿ ಖಾನ್). ಆದರೆ ವಿಚ್ಛೇದನದ ಬಳಿಕ ಸೈಫ್ ರನ್ನು 2012ರಲ್ಲಿ ಕರೀನಾ ಕಪೂರ್ ರವರು ವರಿಸಿದರು.

ಕಿರಣ್ ರಾವ್ ಮತ್ತು ಆಮಿರ್ ಖಾನ್

ಕಿರಣ್ ರಾವ್ ಮತ್ತು ಆಮಿರ್ ಖಾನ್

ಸಾಮಾನ್ಯವಾಗಿ ಹಿಂದಿ ಚಿತ್ರನಟರು ಮತ್ತು ಚಿತ್ರರಂಗದ ಪ್ರಮುಖರು ತಮ್ಮ ಮಕ್ಕಳನ್ನು ಬಾಲನಟರಾಗಿ ಕಳಿಸುವುದಿಲ್ಲ. ಅವರಿಗೆ ಪೂರ್ಣ ತರಬೇತಿ ನೀಡಿ ನೇರವಾಗಿ ಹಿಂದಿ ಚಿತ್ರದ ನಾಯಕನಾಗಿಯೇ ಒಮ್ಮೆಲೇ ಪರಿಚಯಿಸುತ್ತಾರೆ. ಅಮಿತಾಭ್ ಬಚ್ಚನ್, ವಿನೋದ್ ಖನ್ನಾ ಮೊದಲಾದವರು ಇದಕ್ಕೆ ಉದಾಹರಣೆ. ಆಮೀರ್ ಖಾನ್ ಸಹಾ ಇದೇ ರೀತಿಯಾಗಿ ತಮ್ಮ ಕಯಾಮತ್ ಸೆ ಕಯಾಮತ್ ತಕ್ ಚಿತ್ರದ ಮೂಲಕ ನಾಯಕ ನಟನಾಗಿ ಪರಿಚಯಿಸಲ್ಪಟ್ಟವರು.

ಕಿರಣ್ ರಾವ್ ಮತ್ತು ಆಮಿರ್ ಖಾನ್

ಕಿರಣ್ ರಾವ್ ಮತ್ತು ಆಮಿರ್ ಖಾನ್

ಆದರೆ ಇದಕ್ಕೂ ಮೊದಲೇ ಅವರ ವಿವಾಹವಾಗಿತ್ತು. ಅವರ ಪತ್ನಿ ರೀನಾ ದತ್ತಾ ರವರು ಪಾಪಾ ಕೆಹತೇ ಹೈಂ ಹಾಡಿನಲ್ಲಿ ಸಹಾ ಕಾಣಿಸಿಕೊಂಡಿದ್ದಾರೆ. ಆದರೆ ನಂತರದ ದಿನಗಳಲ್ಲಿ ಲಗಾನ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಅವರ ಸಹಾಯಕಿಯಾಗಿ ನೇಮಕಗೊಂಡಿದ್ದ ಕಿರಣ್ ರಾವ್ ರಿಗೆ ಮನಸೋತರು. ಲಗಾನ್ ಚಿತ್ರದ ಬಳಿಕ ತಮ್ಮ ಮೊದಲ ವಿವಾಹದಿಂದ ಹೊರಬಂದು ಕಿರಣ್ ರನ್ನು ವರಿಸಿದರು.

ಲಾರಾ ದತ್ತಾ ಮತ್ತು ಮಹೇಶ್ ಭೂಪತಿ

ಲಾರಾ ದತ್ತಾ ಮತ್ತು ಮಹೇಶ್ ಭೂಪತಿ

2011ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಟೆನ್ನಿಸ್ ಆಟಗಾರ ಮಹೇಶ್ ಭೂಪತಿಯವರು ರೂಪದರ್ಶಿ ಶ್ವೇತಾ ಜೈಶಂಕರ್ ರವರನ್ನು ವಿವಾಹವಾಗಿ ಸುಮಾರು ಏಳು ವರ್ಷಗಳ ಕಾಲ ವೈವಾಹಿಕ ಜೀವನವನ್ನು ನಡೆಸಿದರು. ಆದರೆ ಈ ವಿವಾಹದಿಂದ ಅವರು ವಿಚ್ಛೇದನ ಪಡೆದು 2011ರಲ್ಲಿ 2010ರ ವಿಶ್ವಸುಂದರಿ (ಮಿಸ್ ಯೂನಿವರ್ಸ್) ಸ್ಪರ್ಧೆಯನ್ನು ಗೆದ್ದಿದ್ದ ಲಾರಾ ದತ್ತರನ್ನು ವಿವಾಹವಾದರು.

ಲಾರಾ ದತ್ತಾ ಮತ್ತು ಮಹೇಶ್ ಭೂಪತಿ

ಲಾರಾ ದತ್ತಾ ಮತ್ತು ಮಹೇಶ್ ಭೂಪತಿ

ಬಳಿಕ ಇವರಿಬ್ಬರು ಸೇರಿ ಒಂದು ಚಿತ್ರನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದರು. ಬಿಡ್ ಡ್ಯಾಡಿ ಪ್ರೊಡಕ್ಷನ್ಸ್ ಎಂಬ ಸಂಸ್ಥೆ ಅತ್ತ ಟೆನಿಸ್ ಕ್ಷೇತ್ರವೂ ಅಲ್ಲದ, ಇತ್ತ ವಿಶ್ವಸುಂದರಿಯರು ಮಾತುಕೊಡುವ ಸಮಾಜಸೇವೆಯ ಸಂಸ್ಥೆಯೂ ಅಲ್ಲದ ಅಪ್ಪಟ ವಾಣಿಜ್ಯ ಸಂಸ್ಥೆಯಾಗಿದೆ.

ಸಾರಿಕಾ ಮತ್ತು ಕಮಲ್ ಹಾಸನ್

ಸಾರಿಕಾ ಮತ್ತು ಕಮಲ್ ಹಾಸನ್

ಕಮಲ್ ಹಾಸನ್ ಅಪ್ಪಟ ಪ್ರತಿಭೆಯ ನಟ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರ ಮೊದಲ ಪತ್ನಿ ವಾಣಿ ಗಣಪತಿಯವರೊಂದಿಗಿನ ವಿವಾಹ ಅಸ್ತಿತ್ವದಲ್ಲಿದ್ದಾಗಲೇ ಅವರಿಂದ ನಟಿ ಸಾರಿಕಾರವರು ಗರ್ಭವತಿಯಾಗಿದ್ದು ಮಾತ್ರ ನಟನೆಯಾಗಿರಲಿಲ್ಲ. ಸಾರಿಕಾ ಗರ್ಭವತಿಯೆಂದು ಘೋಷಿಸಿದ ಬಳಿಕ ಅವರು ವಾಣಿಯವರೊಂದಿಗಿನ ತಮ್ಮ ಸಂಬಂಧವನ್ನು ಕಡಿದುಕೊಂಡು ಬಳಿಕ ಸಾರಿಕಾರನ್ನು ವಿವಾಹವಾದರು.

ಸಾರಿಕಾ ಮತ್ತು ಕಮಲ್ ಹಾಸನ್

ಸಾರಿಕಾ ಮತ್ತು ಕಮಲ್ ಹಾಸನ್

ಇದು ಸಂಭವಿಸಿದ್ದು 1985ರಲ್ಲಿ. 1986ರಲ್ಲಿ ಶೃತಿ ಹಾಸನ್ ಮತ್ತು 1991ರಲ್ಲಿ ಅಕ್ಷರಾ ಹಾಸನ್ ಎಂಬ ಇಬ್ಬರು ಹೆಣ್ಣುಮಕ್ಕಳನ್ನು ಪಡೆದ ಬಳಿಕ ಇವರಿಬ್ಬರ ನಡುವೆ ದಾಂಪತ್ಯದಲ್ಲಿ ಬಿರುಕು ಕಂಡುಬಂದಿತ್ತು. ದಾಂಪತ್ಯದ್ರೋಹದ ಆಪಾದನೆಯನ್ನು ಕಾರಣವಾಗಿಸಿ 2004ರಲ್ಲಿ ಸಾರಿಕಾರೇ ಕಮಲ್ ಹಾಸನ್ ರಿಗೆ ವಿಚ್ಛೇದನ ನೀಡಿ ದಾಂಪತ್ಯದಿಂದ ಹೊರಬಂದರು.

ಶಬಾನಾ ಆಜ್ಮಿ ಮತ್ತು ಜಾವೇದ್ ಅಖ್ತರ್

ಶಬಾನಾ ಆಜ್ಮಿ ಮತ್ತು ಜಾವೇದ್ ಅಖ್ತರ್

ಬಹುಮುಖ ಪ್ರತಿಭೆಯ ನಟಿ ಶಬಾನಾ ಆಜ್ಮಿ ತನ್ನ ತಂದೆ ಕೈಫೀ ಆಜ್ಮಿಯರವಂತೆ ಸಾಹಿತಿಯಾಗಬಹುದೆಂದುಕೊಂಡಿದ್ದರೆ ಅವರು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಮೂಡಿಸುತ್ತಾ ಹೋದರು. ಅಂತೆಯೇ ಜಾವೇದ್ ಅಖ್ತರ್ ಸಹಾ ಹಿಂದಿ ಸಾಹಿತ್ಯರಂಗದ ಖ್ಯಾತ ಸಾಹಿತಿಯಾಗಿದ್ದು ಹಲವಾರು ಚಿತ್ರಗಳಿಗೆ ಸಾಹಿತ್ಯ ನೀಡಿದ್ದಾರೆ. ಇವರು ಪರಸ್ಪರ ಭೇಟಿಯಾದ ಬಳಿಕ ಇಬ್ಬರೂ ಒಬ್ಬರಿಗೊಬ್ಬರು ಹೇಳಿ ಮಾಡಿಸಿದ ಜೋಡಿ ಎಂದು ಅನ್ನಿಸತೊಡಗಿತು.

ಶಬಾನಾ ಆಜ್ಮಿ ಮತ್ತು ಜಾವೇದ್ ಅಖ್ತರ್

ಶಬಾನಾ ಆಜ್ಮಿ ಮತ್ತು ಜಾವೇದ್ ಅಖ್ತರ್

ಇದು ಪ್ರೇಮಕ್ಕೆ ತಿರುಗಿ ವಿವಾಹಕ್ಕೆ ಪ್ರಚೋದನೆ ನೀಡಿತು. ಆದರೆ ಇದಕ್ಕೂ ಮುನ್ನ ಜಾವೇದ್ ಅಖ್ತರ್ ರವರು ಹನಿ ಇರಾನಿಯವರನ್ನು ವಿವಾಹವಾಗಿದ್ದು ಇಬ್ಬರು ಮಕ್ಕಳ ತಂದೆಯಾಗಿದ್ದರು. ಆದರೆ ಪ್ರೇಮಕ್ಕಾಗಿ ಈ ವಿವಾಹದಿಂದ ವಿಚ್ಚೇದನ ಪಡೆದು ಹೊರಬಂದ ಜಾವೇದ್ ಶಬಾನಾರನ್ನು 1972ರಲ್ಲಿ ವಿವಾಹವಾದರು.

ಶ್ರೀದೇವಿ ಮತ್ತು ಬೋನಿ ಕಪೂರ್

ಶ್ರೀದೇವಿ ಮತ್ತು ಬೋನಿ ಕಪೂರ್

ಬೋನಿ ಕಪೂರ್ ಓರ್ವ ಚಿತ್ರ ನಿರ್ಮಾಪಕರಾಗಿದ್ದು ತಮ್ಮ ಚಿತ್ರದಲ್ಲಿ ನಟಿಸಲು ಆಗಮಿಸಿದ್ದ ಶ್ರೀದೇವಿಯವರಿಗೆ ಮನೆಯ ಆತಿಥ್ಯ ಒದಗಿಸಲು ಬೋನಿಕಪೂರ್ ಮತ್ತು ಮೋನಾ ಕಪೂರ್ ದಂಪತಿಗಳು ಆತ್ಮೀಯವಾಗಿ ಸ್ವಾಗತಿಸಿದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು ಅತಿಥಿಯಾಗಿ ಬಂದ ಶ್ರೀದೇವಿ ಬೋನಿಯವರ ಮನಸ್ಸು ಮತ್ತು ಹೃದಯವನ್ನೇ ಕದ್ದರು. ಪರಿಣಾಮವಾಗಿ ಬೋನಿಕಪೂರ್ ರವರು ತಮ್ಮ ಮೊದಲ ಪತ್ನಿ ಮೋನಾರಿಗೆ ವಿಚ್ಛೇದನ ನೀಡಿ ಶ್ರೀದೇವಿಯವರನ್ನು ತಮ್ಮ ಮನೆಯಲ್ಲಿ ಶಾಶ್ವತವಾಗಿರಿಸಿಕೊಂಡರು.

ಶ್ರೀದೇವಿ ಮತ್ತು ಬೋನಿ ಕಪೂರ್

ಶ್ರೀದೇವಿ ಮತ್ತು ಬೋನಿ ಕಪೂರ್

1996ರಲ್ಲಿ ನಡೆದ ಈ ವಿವಾಹದಿಂದ ಅವರಿಗೆ ಇಬ್ಬರು ಮಕ್ಕಳಿದ್ದಾರೆ. (ಜ್ಹಾನ್ನವಿ ಕಪೂರ್ ಮತ್ತು ಖುಷಿ ಕಪೂರ್) ಅವರ ನಟನೆಯ ಪ್ರತಿಭೆಯನ್ನು ಗುರುತಿಸಿದ ಸರ್ಕಾರ 2013ರಲ್ಲಿ ಪದ್ಮಶ್ರೀ ಪದವಿ ನೀಡಿ ಗೌರವಿಸಿದೆ.

ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ

ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ

ಬಾಜಿಗರ್ ಚಿತ್ರ ಶಿಲ್ಪಾ ಶೆಟ್ಟಿಯವರ ಎರಡನೆಯ ಚಿತ್ರವಾಗಿದ್ದರೂ ಅವರನ್ನು ಜನರು ಗುರುತಿಸಿದ್ದು ಇದೇ ಚಿತ್ರದಿಂದ. ತಮ್ಮ ಬಿನ್ನಾಣದಿಂದ ಯಾರನ್ನು ಅವರು ವರಿಸುತ್ತಾರೆ ಎಂಬ ಕುತೂಹಲವನ್ನು ತಲೆಕೆಳಗಾಗಿಸಿ ಅವರು ವರಿಸಿದ್ದು ಮಾತ್ರ ರಾಜ್ ಕುಂದ್ರಾರನ್ನು. ರಾಜ್ ಅದಕ್ಕೂ ಮೊದಲು ಕವಿತಾರನ್ನು ವಿವಾಹವಾಗಿದ್ದು ಸುಖಜೀವನ ನಡೆಸುತ್ತಿದ್ದರು. ಆದರೆ ಯಾವ ಮೋಹನ ಮುರಳಿ ಕರೆಯಿತೋ, ರಾಜ್ ತಮ್ಮ ಮೊದಲ ಪತ್ನಿ ಕವಿತಾರಿಗೆ ವಿಚ್ಛೇದನ ನೀಡಿ ಶಿಲ್ಪಾರನ್ನು 2009ರಲ್ಲಿ ವರಿಸಿದರು.

ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ

ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ

ತಮ್ಮ ಮದುವೆ ಮುರಿಯಲು ಶಿಲ್ಪಾ ಮನೆಹಾಳು ಕೆಲಸ ಮಾಡಿದ್ದಾರೆ ಎಂದು ಕವಿತಾ ಮಾಧ್ಯಮಗಳ ಮೂಲಕ ಬೊಬ್ಬೆ ಹೊಡೆದರೂ ಈ ಜೋಡಿ ಅದಕ್ಕೆಲ್ಲಾ ಜಪ್ಪೆನ್ನದೇ ಸುಖಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ ಶಿಲ್ಪಾರಿಗೆ ಗಂಡು ಮಗುವಾಗಿದ್ದು ವಿಯಾನ್ ರಾಜ್ ಕುಂದ್ರಾ ಎಂದು ನಾಮಕರಣ ಮಾಡಿದ್ದಾರೆ.

English summary

Famous Celebrities Who Married Divorced Men

These tinsel town celebrities fell in love with men who have been married before. But their divorced status didn't keep these celebrities from staying in the relationship for the long haul and even tying the knot. Check out the women who got married to divorced stars.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X