For Quick Alerts
ALLOW NOTIFICATIONS  
For Daily Alerts

ನೀವು ನಿಮ್ಮ ಕೆಲಸವನ್ನು ಇಷ್ಟಪಡುತ್ತೀರಿ ಎಂಬುದಕ್ಕೆ 10 ಕಾರಣಗಳು

By Super
|

ಯಾವುದೇ ಕೆಲಸವನ್ನು ಶ್ರದ್ಧೆಯಿಟ್ಟು ಮಾಡಿದಲ್ಲಿ ಯಶಸ್ಸು ನಿಮ್ಮ ಕೈ ಸೇರುವುದರಲ್ಲಿ ಅನುಮಾನವಿಲ್ಲ.ನಿಮ್ಮ ಯಶಸ್ಸು ನೀವು ಕೆಲಸದ ಮೇಲಿಟ್ಟಿರುವ ಪ್ರೀತಿಯ ಮೇಲೂ ಅವಲಂಬಿತವಾಗಿರುತ್ತದೆ. ನೀವು ನಿಮ್ಮ ಕೆಲಸವನ್ನು ಇಷ್ಟಪಟ್ಟು ಮಾಡುತ್ತಿದ್ದೀರಿ ಎಂದಾದರೆ ನಿಮಗೆ ಅದರಿಂದ ಆನಂದ ದೊರಕುವುದು ಖಂಡಿತ.

ನೀವು ಯಾವಾಗಲು ಕೆಲಸ ಎಷ್ಟು ಸೊಗಸಾಗಿದೆ ಅಥವಾ ಈ ಕೆಲಸ ಮಾಡುತ್ತಿರುವುದು ಎಷ್ಟು ಖುಷಿ ನೀಡುತ್ತಿದೆ ಎಂದು ಹೇಳಲು ಇಚ್ಚಿಸದೇ ಇರಬಹುದು. ಆದರೂ ನೀವು ನಿಮ್ಮ ಕೆಲಸವನ್ನು ಇಷ್ಟಪಡುತ್ತೀರಿ ಎಂದಾದರೆ ಕೆಲವು ಕುರುಹುಗಳನ್ನು ನೀವು ಗಮನಿಸಲೇ ಬೇಕು ಮತ್ತು ನಿಮ್ಮ ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳಬಹುದು.

ಹೌದು ಯಾವುದೇ ಕೆಲಸವನ್ನು ಮಾಡುತ್ತಿರುವಾಗ ನಿಮಗೆ ಇದು ಸಂಪೂರ್ಣವಾಗಿ ಸರಿಯಾಗಿದೆ ಎಂದೆನಿಸದೆ ಇರಬಹುದು ಆದರೆ ಕೆಲವೊಮ್ಮೆ ನೀವು ಹಣವನ್ನು ಲೆಕ್ಕಿಸದೇ ಈ ಕೆಲಸದಿಂದ ಖುಷಿ ಸಿಗುತ್ತಿದೆ ಎಂದು ಭಾವಿಸಿರಬಹುದು.ನೀವು ನಿಮ್ಮ ಕೆಲಸವನ್ನು ಇಷ್ಟ ಪಡುತ್ತಿದ್ದೀರಿ ಎಂಬುದಕ್ಕೆ ಇಲ್ಲಿ ಕೆಲವು ಉದಾಹರಣೆಗಳನ್ನು ನೀಡಲಾಗಿದೆ ಓದಿನೋಡಿ.

*ನೀವು ಕೆಲಸ ಮಾಡುವಲ್ಲಿ ಸಾಕಷ್ಟು ಸ್ನೇಹಿತರಿದ್ದರೆ. ನಾವು ಯಾವಾಗಲೂ ಹೆಚ್ಚು ಜನರಿರುವಲ್ಲಿ ನಮ್ಮ ಅಭಿರುಚಿಗೆ ಸರಿಹೊಂದಿದ ಸಹೋದ್ಯೋಗಿಗಳನ್ನು ಇಷ್ಟಪಡುತ್ತೇವೆ .ಅಂತಹ ಸ್ನೇಹಿತರು ಕೆಲಸದ ಸ್ಥಳದಲ್ಲಿದ್ದರೆ ಅಂತಹ ಕೆಲಸ ಕುಶಿ ನೀಡುವುದು ಖಂಡಿತ.

ನೀವು ನಿಮ್ಮ ಕೆಲಸವನ್ನು ಇಷ್ಟಪಡುತ್ತೀರಿ ಎಂಬುದಕ್ಕೆ ೧೦ ಚಿನ್ಹೆಗಳು

ಬಿಡುವಿನ ವೇಳೆಯಲ್ಲಿ ನೀವು ಮಾಡಬೇಕಾದ ಕೆಲಸಗಳು

*ನಿಮ್ಮ ಸಹೋದ್ಯೋಗಿಗಳಿಗೆ ನೀವು ಸಹಾಯ ಮಾಡುತ್ತಿದ್ದರೆ.ಅವರ ಕೆಲಸದಲ್ಲಿ ನೀವು ಕೂಡ ನಿಮ್ಮ ಕೆಲಸದಲ್ಲಿ ಮಾಡುವಂತೆಯೇ ಸಹಾಯ ಮಾಡುತ್ತಿದ್ದಲ್ಲಿ ನಿಮಗೆ ಅಂತಹ ಕೆಲಸ ಹೆಚ್ಚು ಸಂತೋಷವನ್ನು ನೀಡಬಲ್ಲದು.

*ಅದು ಹೇಗೆ ಸಂಜೆ 4 ಆಯಿತು ಎಂದು ನೀವು ಆಶ್ಚರ್ಯ ಪಡುತ್ತಿರಬಹುದು. ನೀವು ಕೆಲಸದಲ್ಲಿ ಹೇಗೆ ಬ್ಯುಸಿ ಇದ್ದೀರಿ ಎಂದರೆ ನಿಮಗೆ ಸಮಯ ಸರಿದಿದ್ದೇ ತಿಳಿಯುತ್ತಿಲ್ಲ. ಇಂತಹ ಕೆಲಸ ನೀವು ಖುಷಿಯಿಂದ ಕೆಲಸದಲ್ಲಿ ತೊಡಗಿಕೊಂಡಿದ್ದೀರಿ ಎಂದು ಸೂಚಿಸುತ್ತದೆ.

*ನಿಮಗೆ ಹುಷಾರಿಲ್ಲದಾಗ ನೀವು ನಿಮ್ಮ ಕೆಲಸವನ್ನು ಬೇರೆಯವರು ಮಾಡುತ್ತಾರೆ ಎಂದು ಗೊತ್ತಿದ್ದರೂ ನೀವೇ ಹೋಗಿ ಮಾಡಬೇಕಿತ್ತು. ಆಫೀಸ್ ನಲ್ಲಿ ಇರಬೇಕಿತ್ತು ಎಂದು ಬಯಸಿದರೆ ನೀವು ನಿಜವಾಗಿಯೂ ನಿಮ್ಮ ಕೆಲಸವನ್ನು ಇಷ್ಟ ಪಡುತ್ತಿದ್ದೀರಿ ಎಂದೇ ಅರ್ಥ.

*ವಾರಂತ್ಯವನ್ನು ನೀವು ಸೋಮವಾರಕ್ಕೆ ತಯಾರಿಯಾಗಿ ಬಳಸುತ್ತೀರಿ ಅಥವಾ ಸೋಮವಾರ ಯಾಕಾದರೂ ಬರುತ್ತದೆಯೋ ಎಂದು ಚಿಂತಿಸುತ್ತಿದ್ದರೆ ಅದು ಖಂಡಿತವಾಗಿ ನೀವು ಕೆಲಸವನ್ನು ಇಷ್ಟ ಪಡುತ್ತೀರಿ ಎಂಬುದನ್ನು ತೋರಿಸುತ್ತದೆ.

ಸ್ತ್ರೀಯರು ಕದ್ದು ಮುಚ್ಚಿ ಮಾಡುವ ಕಾರ್ಯ ಯಾವುದು ಗೊತ್ತೇ?

*ನೀವು ಇತರರೊಂದಿಗೆ ನಿಮ್ಮ ಕ್ರೆಡಿಟ್ ಶೇರು ಮಾಡಲು ಬಯಸುತ್ತೀರಿ ಮತ್ತು ನೀವು ನಿಮ್ಮ ಯಶಸ್ಸನ್ನು ಇತರರೊಂದಿಗೆ ಸಮಾನವಾಗಿ ಹಂಚಿಕೊಳ್ಳಲು ತಯಾರಿರುತ್ತೀರಿ ಎಂದಾದರೆ ನಿಮ್ಮ ಕೆಲಸದಲ್ಲಿ ನಿಮಗೆ ಹೆಚ್ಚು ಆಸಕ್ತಿ ಇದೆ ಎಂದೇ ಅರ್ಥ.

*ನೀವು ಕೆಲಸವನ್ನು ಹೆಚ್ಚು ಹೆಚ್ಚು ಮಾಡಲು ಬಯಸುತ್ತೀರಿ ಆ ಮೂಲಕ ಇತರರಿಗೆ ನಿಮ್ಮ ಮೇಲೆ ಹೆಚ್ಚು ಭರವಸೆ ಕೂಡ ಉಂಟು ಮಾಡಿದ್ದೀರಿ ಎಂದಾದರೆ ಹೌದು ನಿಮಗೆ ಈ ಕೆಲಸ ಇಷ್ಟವಾಗಿದೆ.

*ಕೆಲಸದ ವೇಳೆಯಲ್ಲಿ ಸಣ್ಣಪುಟ್ಟ ಬದಲಾವಣೆಯಿಂದ ಚಿಂತಿಸಬೇಕಾಗಿಲ್ಲ ಇದನ್ನು ಎದುರಿಸಲು ನಾನು ಸಿದ್ಧ ಎನ್ನುವಂತಿದ್ದರೆ ಮತ್ತು ನೀವು ಕೇವಲ ದೊಡ್ಡ ವಿಷಯಗಳಿಗೆ ಮಾತ್ರ ಯೋಚಿಸುವಂತವರಾದರೆ ನಿಮಗೆ ಕೆಲಸದಲ್ಲಿ ಹೆಚ್ಚು ಆಸಕ್ತಿ ಇದೆ ಎಂದರ್ಥ.

*ಸಮಸ್ಯೆಗಳಿಂದ ದೂರ ಹೋಗುವ ಬದಲು ಸಮಸ್ಯೆಯನ್ನು ಎದುರಿಸುವ ಪ್ರಯತ್ನ ಮಾಡಿ.ನೀವು ಮತ್ತು ನಿಮ್ಮ ಸಹೋದ್ಯೋಗಿ ಸ್ನೇಹಿತರು ಕಾಫಿ ಬಾರಿನ ಬಗ್ಗೆ ಚರ್ಚಿಸುವ ಬದಲು ನಿಮ್ಮ ಕೆಲಸದಲ್ಲಿ ಯಾವ ರೀತಿಯ ಬದಲಾವಣೆ ತಂದು ಸಮಸ್ಯೆಗಳನ್ನು ಬದಲಾಯಿಸಬಹುದು ಎಂಬುದರ ಬಗ್ಗೆ ಯೋಚಿಸಿ ಪರಿಹಾರ ಕಂಡುಕೊಳ್ಳಿ. ಈ ರೀತಿಯ ಯೋಚನೆ ನೀವು ನಿಮ್ಮ ಕೆಲಸ ಇಷ್ಟ ಪಡುತ್ತೀರಿ ಎಂಬುದನ್ನು ತೋರಿಸುತ್ತದೆ.

ದಕ್ಷಿಣದ ಹುಡುಗಿಯನ್ನು ಮೆಚ್ಚಲು ಹನ್ನೆರಡು ಕಾರಣಗಳು

*ಪ್ರತಿ ದಿನ ಮಾಡುವ ಕೆಲಸ ಮುಂದೊಂದು ದಿನ ದೊಡ್ಡ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ ಎಂಬುದನ್ನು ತಿಳಿದುಕೊಳ್ಳುವುದು ಸೂಕ್ತ.ಈ ರೀತಿ ಯೋಚಿಸುವವರು ನೀವಾದರೆ ನಿಮಗೆ ನಿಮ್ಮ ಕೆಲಸದ ಮೇಲೆ ಅತಿ ಹೆಚ್ಚು ಪ್ರೀತಿ ಹುಟ್ಟುತ್ತದೆ.

Read more about: ಜೀವನ ಕೆಲಸ life work
English summary

ನೀವು ನಿಮ್ಮ ಕೆಲಸವನ್ನು ಇಷ್ಟಪಡುತ್ತೀರಿ ಎಂಬುದಕ್ಕೆ ೧೦ ಚಿನ್ಹೆಗಳು

You may not like bragging all day about how wonderful your job is or how lucky you are that you are doing something you really enjoy, but you should know that there are still a few very telling signs you love your job that won’t pass unnoticed among your loved ones. So, here are 10 of the most telling signs you love your job:
X
Desktop Bottom Promotion