ಕ್ರಿಸ್ಮಸ್ ಬಗ್ಗೆ ಇರುವ ಐದು ಪುರಾಣಕಥೆಗಳು

By Hemanth P
Subscribe to Boldsky
ಕ್ರಿಸ್ ಮಸ್ ಹಿಂದಿರುವ 5 ಪುರಾಣಿಕ ಕಥೆಗಳು | Oneindia Kannada

ಸುಂದರವಾಗಿ ಅಲಂಕರಿಸಿರುವ ಕ್ರಿಸ್ಮಸ್ ಗಿಡ, ಕೆಲವೊಂದು ಸಂಪ್ರದಾಯ, ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಆಚರಣೆ ಹೀಗೆ ಹಲವಾರು ವಿಧಗಳಿಂದ ಕ್ರಿಸ್ಮಸ್ ಎನ್ನುವುದು ಶತಮಾನಗಳಿಂದ ಆಚರಿಸಿಕೊಂಡು ಬರುತ್ತಿರುವ ಅತ್ಯಂತ ಸಂಭ್ರಮದ ಹಬ್ಬ. ಈ ಹಬ್ಬದ ಬಗ್ಗೆ ಕೆಲವೊಂದು ಪುರಾಣ ಕಥೆಗಳಿವೆ ಮತ್ತು ಇದರ ಜನಪ್ರಿಯತೆಯ ಹೊರತಾಗಿಯೂ ಇದು ಜನರನ್ನು ಬೆಸೆಯುವ ಹಬ್ಬವಾಗಿದೆ. ಕ್ರಿಸ್ಮಸ್ ಬಗ್ಗೆ ಇರುವ ಕೆಲವೊಂದು ಜನಪ್ರಿಯ ಪುರಾಣಕಥೆ ಮತ್ತು ಅದರ ಹಿಂದಿರುವ ನಿಜವಾದ ಕಥೆಗಳ ಬಗ್ಗೆ ತಿಳಿದುಕೊಳ್ಳುವ.

ನಿಮ್ಮನ್ನು ಅಚ್ಚರಿಗೀಡು ಮಾಡಬಲ್ಲ ಕ್ರಿಸ್ಮಸ್ ಬಗ್ಗೆ ಇರುವ ಐದು ಪುರಾಣಕಥೆಗಳು

5 Myths about Christmas

ಸಾಂತಾ ಒಂದು ದೊಡ್ಡ ಬಿಳಿ ಗಡ್ಡದ ಕೊಬ್ಬು

ಸಾಂತಾನ ಬಗ್ಗೆ ನಮಗೆಲ್ಲರಿಗೂ ತಿಳಿದಿರುವುದು. ಆದಾಗ್ಯೂ ಸಾಂತಾನ ನಿಜವಾದ ವಿವರಣೆ ಯಾವತ್ತೂ ನೀಡಲಾಗಿಲ್ಲ. ಸಾಂತಾನ ಬಗ್ಗೆ ಇರುವ ಸಾಂಪ್ರದಾಯಿಕ ಕಥೆಯೆಂದರೆ ನಾಲ್ಕನೇ ಶತಮಾನದಲ್ಲಿ ಡೆರ್ಮೆ ಬಿಷಪ್ ಆಗಿದ್ದ ಸೇಂಟ್ ನಿಕ್ ಅವರು ಮಕ್ಕಳನ್ನು ತುಂಬಾ ಇಷ್ಟಪಡುತ್ತಿದ್ದರು. ಅವರು ತನ್ನ ಬೆನ್ನ ಹಿಂದಿದ್ದ ದೊಡ್ಡ ಚೀಲದಲ್ಲಿ ಆಟಿಕೆ ಮತ್ತು ಉಡುಗೊರೆಗಳನ್ನು ಮಕ್ಕಳಿಗೆ ಕೊಡುತ್ತಿದ್ದರು. ಸಮಯ ಉರುಳಿದಂತೆ ವಿಶ್ವದೆಲ್ಲೆಡೆಯ ಲೇಖಕರು ಇದನ್ನು ಬದಲಾಯಿಸಿ, ಸಾಂತಾ ಚಿಮಿನಿಯಿಂದ ಮೇಲೆ ಬಂದು ಮನೆಗಳಿಗೆ ಭೇಟಿ ನೀಡುತ್ತಾನೆ ಎಂದಾಯಿತು. ಸಾಂತಾನನ್ನು ಗಡ್ಡ, ದೊಡ್ಡ ಹೊಟ್ಟೆಯಿಲ್ಲದೆ ಕೂಡ ವರ್ಣಿಸಲಾಗಿದೆ ಎನ್ನುವುದನ್ನು ಕೇಳಿ ನಿಮಗೆ ಆಘಾತವಾಗಬಹುದು.

ಕ್ರಿಸ್ಮಸ್ ಗಿಡಗಳಿಗೆ ಬೇಗನೆ ಬೆಂಕಿ ಹಿಡಿಯುತ್ತದೆ

ಕ್ರಿಸ್ಮಸ್ ಗಿಡಗಳಿಗೆ ಬೇಗನೆ ಬೆಂಕಿ ಹತ್ತಿಕೊಳ್ಳುತ್ತದೆ ಮತ್ತು ಅದು ಸುಲಭವಾಗಿ ಬೆಂಕಿಯನ್ನು ಹಬ್ಬುತ್ತದೆ ಎಂದು ಹೆಚ್ಚಿನವರಿಗೆ ಹೇಳಲಾಗಿದೆ. ಇದು ಸತ್ಯವಲ್ಲ! ಇದು ಸತ್ಯವೋ, ಸುಳ್ಳೋ, ಆದರೆ ಕ್ರಿಸ್ಮಸ್ ಗಿಡಗಳು ಕೂಡ ಸಾಮಾನ್ಯ ಗಿಡಗಳಂತೆ ಇರುತ್ತದೆ ಮತ್ತು ಬೆಂಕಿ ಹತ್ತಿಕೊಳ್ಳದು. ಆದಾಗ್ಯೂ ಕೆಲವೊಂದು ಸಲ ಗಿಡಗಳಿಗೆ ಹಾಕುವ ವಿದ್ಯುತ್ ದೀಪಗಳಿಂದಾಗಿ ಹೀಗೆ ಆಗಿರಬಹುದು.

ಈಸ್ಟರ್ ಮೇಲೆ ಕ್ರಿಸ್ಮಸ್ ನಿಯಮಗಳು ಜನಪ್ರಿಯ

ಕ್ರಿಸ್ಮಸ್ ಕಥೆಗಳು ನಮಗೆ ಹಬ್ಬದ ಪ್ರಾಮುಖ್ಯತೆ ಬಗ್ಗೆ ತಿಳಿಸುತ್ತದೆ. ಆದರೆ ಕ್ರಿಸ್ಮಸ್ ಕ್ಯಾಲೆಂಡರ್ ಮತ್ತೊಂದು ಬಗೆಯ ಕಥೆ ಹೇಳುತ್ತದೆ. ಕ್ರಿಸ್ತನ ಪುನರುತ್ಥಾನದ ದಿನ ಅಂದರೆ ಈಸ್ಟರ್ ನ್ನು ವಿಶ್ವದೆಲ್ಲೆಡೆಯ ಕ್ರೈಸ್ತರು ಸಡಗರದಿಂದ ಆಚರಿಸಿಕೊಳ್ಳುತ್ತಾರೆ ಎಂದು ಪರಿಗಣಿಸಲಾಗಿದೆ.

ಕ್ರಿಸ್ಮಸ್ ಗೆ ಗ್ರೀಟಿಂಗ್ ಕಾರ್ಡ್ ಕಳುಹಿಸುವುದು ಸಂಪ್ರದಾಯ

ಪ್ರತೀ ವರ್ಷ ನೀವು ಕ್ರಿಸ್ಮಸ್ ವೇಳೆ ಮನೆಯಿಂದ ಹೊರಗಿದ್ದರೆ ಆಗ ನೀವು ಮನೆಯಲ್ಲಿರುವ ಪ್ರೀತಿಪಾತ್ರರಿಗೆ ಕ್ರಿಸ್ಮಸ್ ನ ಗ್ರೀಟಿಂಗ್ ಕಾರ್ಡ್ ಕಳುಹಿಸಬೇಕು. ಹೆಚ್ಚಿನವರಿಗೆ ಇದು ಸಂಪ್ರದಾಯ ಹೌದೋ, ಅಲ್ಲವೋ ಎನ್ನುವುದು ತಿಳಿದಿಲ್ಲ. ಸತ್ಯ ಹೇಳಬೇಕೆಂದರೆ 19ನೇ ಶತಮಾನದಲ್ಲಿ ವ್ಯಾಪಾರಿಯೊಬ್ಬ ಇದನ್ನು ಆರಂಭಿಸಿದ್ದನಂತೆ.

ಕ್ರಿಸ್ಮಸ್ ಗಿಡ ಸಂಪ್ರದಾಯ

ಮನೆಯಲ್ಲಿ ಕ್ರಿಸ್ಮಸ್ ಗಿಡ ಇಟ್ಟು ರಜಾದಿನದ ಹಬ್ಬ ಆಚರಿಸುತ್ತೇವೆ. ಇದು ಸಂಪ್ರದಾಯವೆಂದು ನಮಗೆಲ್ಲರಿಗೂ ತಿಳಿದಿದೆ. ಆದಾಗ್ಯೂ 18ನೇ ಶತಮಾನದಲ್ಲಿ ಸ್ಥಳೀಯ ಚರ್ಚ್ ಒಂದರಲ್ಲಿ ಜರ್ಮನಿಯಿಂದ ಬಂದಿದ್ದ ನಿರಾಶ್ರಿತರು ಮೊದಲ ಕ್ರಿಸ್ಮಸ್ ಗಿಡವನ್ನು ಇಟ್ಟಿದ್ದರಂತೆ. 19ನೇ ಶತಮಾನದಲ್ಲಿ ವಿಕ್ಟೋರಿಯಾದವರು ಈ ಸಂಪ್ರದಾಯ ಪಾಲಿಸಿದರು ಮತ್ತು ಇಂದು ಇದು ವಿಶ್ವದೆಲ್ಲೆಡೆ ಹೃದಯಪೂರ್ವಕವಾಗಿ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯವಾಗಿದೆ.

ದೂರದ ಜನಪದ ಮತ್ತು ಪುರಾಣ ಕಥೆಗಳು ಮರುಕಂಡುಕೊಳ್ಳಲು ಮತ್ತು ಕ್ರಿಸ್ಮಸ್ ಆಚರಿಸಲು ಒಂದು ಮಾರ್ಗವಾಗಿದೆ.

For Quick Alerts
ALLOW NOTIFICATIONS
For Daily Alerts

    English summary

    5 Myths about Christmas

    A beautiful decorated Christmas tree, warm traditions and wonderful friends and family to celebrate, Christmas has always been a heartwarming occasion that is being celebrated since centuries.
    ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more