For Quick Alerts
ALLOW NOTIFICATIONS  
For Daily Alerts

ಇಂದು ವಿಶ್ವ ಮೊಟ್ಟೆ ದಿನ: ಈ ಆರೋಗ್ಯದಾಯಕ ಆಹಾರದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ವಿಚಾರಗಳಿವು

|

ಕೋಳಿ ಮೊದಲಾ, ಮೊಟ್ಟೆ ಮೊದಲಾ? ಎನ್ನುವ ಪ್ರಶ್ನೆ ಬಹಳ ಹಿಂದಿನದು. ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲವಾದರೂ, ಮೊಟ್ಟೆ ಮನುಷ್ಯನ ಆರೋಗ್ಯಕ್ಕೆ ಬಹಳ ಮುಖ್ಯವಾದುದು. ಪ್ರೋಟೀನ್‌ನ ಮೂಲವಾದ ಮೊಟ್ಟೆ ಹೆಚ್ಚಿನವರ ಪೇವರೆಟ್ ಆಗಿದೆ. ಇಂತಹ ಮೊಟ್ಟೆಯ ಅಗತ್ಯತೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಅಕ್ಟೋಬರ್ ಎರಡನೇ ಶುಕ್ರವಾರದಂದು ವಿಶ್ವ ಮೊಟ್ಟೆಯ ದಿನವನ್ನು ಆಚರಿಸಲಾಗುತ್ತದೆ. ಅದು ಈ ವರ್ಷ ಅಕ್ಟೋಬರ್ 8ರಂದು ಬಂದಿದ್ದು, ಜೊತೆಗೆ ಈ ವರ್ಷವು 25 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ವಿಶೇಷ ಸಂದರ್ಭದಲ್ಲಿ, ಈ ಮೊಟ್ಟೆ ದಿನದ ಬಗ್ಗೆ ಮಾಹಿತಿ ನಿಮಗಾಗಿ.

ವಿಶ್ವ ಮೊಟ್ಟೆ ದಿನದ ಇತಿಹಾಸವೇನು?:

ವಿಶ್ವ ಮೊಟ್ಟೆ ದಿನದ ಇತಿಹಾಸವೇನು?:

ಮೊಟ್ಟೆಗಳು ಮಾನವಕುಲಕ್ಕೆ ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ಮನುಷ್ಯನು ಮೊದಲು ಸೇವಿಸಿದ್ದು, ಕ್ರಿ.ಪೂ 7500 ರಂದು ಎಂದು ಇತಿಹಾಸ ಹೇಳುತ್ತದೆ. ಆದರೆ ಮೊದಲ ವಿಶ್ವ ಮೊಟ್ಟೆಯ ದಿನವನ್ನು 1996 ರಲ್ಲಿ ಐಇಸಿ ವಿಯೆನ್ನಾದಲ್ಲಿ ಆಚರಿಸಲಾಯಿತು. ಪ್ರಪಂಚದಾದ್ಯಂತದ 40 ಕ್ಕೂ ಹೆಚ್ಚು ದೇಶಗಳಲ್ಲಿ ಅಕ್ಟೋಬರ್ ಎರಡನೇ ಶುಕ್ರವಾರದಂದು ಆಚರಿಸಲಾಗುತ್ತದೆ.

ಈ ದಿನದ ಮಹತ್ವವೇನು?:

ಈ ದಿನದ ಮಹತ್ವವೇನು?:

ಮೊಟ್ಟೆಗಳು ಹೃದಯಕ್ಕೆ ಒಳ್ಳೆಯದು. ಅವು ಪ್ರೋಟೀನ್‌ನ ಉತ್ತಮ ಮೂಲ ಮಾತ್ರವಲ್ಲದೇ, ಅಗತ್ಯ ವಿಟಮಿನ್ಗಳಾದ ಡಿ, ಬಿ 6, ಬಿ 12, ಮತ್ತು ಖನಿಜಗಳಾದ ಸತು, ತಾಮ್ರ ಮತ್ತು ಕಬ್ಬಿಣವನ್ನು ಸಹ ಒದಗಿಸುತ್ತವೆ. ವಿಶೇಷವಾಗಿ ಹಳದಿ ಲೋಳೆ ಎ, ಡಿ, ಇ, ಮತ್ತು ಕೆ ನಂತಹ ವಿಟಮಿನ್, ಲೆಸಿಥಿನ್ ಕೂಡ ಸಮೃದ್ಧವಾಗಿದೆ. ಇಂತಹ ಮೊಟ್ಟೆಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಸಲುವಾಗಿ ವಿಶ್ವ ಮೊಟ್ಟೆ ದಿನವನ್ನು ಆಚರಿಸಲಾಗುತ್ತದೆ.

ಮೊಟ್ಟೆಗಳು ನಿಮ್ಮ ರಕ್ತದಲ್ಲಿ ಎಲ್ಡಿಎಲ್ ಪ್ರೋಟೀನ್ ಮಟ್ಟವನ್ನು ಹೆಚ್ಚಿಸುತ್ತವೆ, ಇದು ಹೃದಯಾಘಾತ ಮತ್ತು ಪಾರ್ಶ್ವವಾಯುಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಅವುಗಳು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದ್ದು, ಕಣ್ಣಿನ ಪೊರೆ ಮತ್ತು ಕಣ್ಣುಗಳಿಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ವಿಶ್ವ ಮೊಟ್ಟೆ ದಿನ 2021ರ ಥೀಮ್:

ವಿಶ್ವ ಮೊಟ್ಟೆ ದಿನ 2021ರ ಥೀಮ್:

ಈ ವರ್ಷದ ಥೀಮ್ "ಮೊಟ್ಟೆಗಳು ಎಲ್ಲರಿಗೂ: ಪ್ರಕೃತಿಯ ಪರಿಪೂರ್ಣ ಪ್ಯಾಕೇಜ್". ಥೀಮ್ ಸರಿಯಾಗಿ ಸೂಚಿಸುವಂತೆ, ಮೊಟ್ಟೆಗಳು ನಿಜವಾಗಿಯೂ ಪ್ರಕೃತಿ ನಮಗೆ ನೀಡಿರುವ ಪರಿಪೂರ್ಣ ಪ್ಯಾಕೇಜ್ ಆಗಿದೆ. ಈ ವರ್ಷದ ಥೀಮ್ ನಮ್ಮ ದಿನನಿತ್ಯದ ಆಹಾರದಲ್ಲಿ ಮೊಟ್ಟೆಯನ್ನು ಸೇರಿಸುವುದರ ಮಹತ್ವವನ್ನು ಎತ್ತಿ ತೋರಿಸುತ್ತದೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೆ, ಮೊಟ್ಟೆಗಳು ಎಲ್ಲರಿಗೂ ಪೌಷ್ಟಿಕಾಂಶದ ಮೂಲವಾಗಿದೆ.

ವಿಶ್ವ ಮೊಟ್ಟೆಯ ದಿನವನ್ನು ಹೇಗೆ ಆಚರಿಸಲಾಗುತ್ತದೆ?

ವಿಶ್ವ ಮೊಟ್ಟೆಯ ದಿನವನ್ನು ಹೇಗೆ ಆಚರಿಸಲಾಗುತ್ತದೆ?

ಕಳೆದ ವರ್ಷ ಮೊಟ್ಟೆಯ ದಿನಾಚರಣೆಯು ಡಿಜಿಟಲ್ ತಿರುವು ಪಡೆದಿದ್ದರೂ, ಈವೆಂಟ್ ಅನ್ನು ವಾಸ್ತವಿಕವಾಗಿ ನಡೆಸಲಾಗುತ್ತಿತ್ತು. ಈ ವರ್ಷ, ಈ ದಿನವನ್ನು ದೊಡ್ಡ ಮಟ್ಟದಲ್ಲಿ ಆಚರಿಸುವ ನಿರೀಕ್ಷೆಯಿದೆ. ವಿಶ್ವ ಮೊಟ್ಟೆ ದಿನದ 25 ನೇ ವಾರ್ಷಿಕೋತ್ಸವವನ್ನು ನೀವು ಈ ರೀತಿ ಆಚರಿಸಬಹುದು.

1. ಮೊಟ್ಟೆಯ ಉತ್ಸವದಲ್ಲಿ ನಿಮ್ಮ ದಿನವನ್ನು ಕಳೆಯಬಹುದು.

2.ಎಗ್ ಪೇಂಟಿಂಗ್ ಈವೆಂಟ್‌ನಲ್ಲಿ ಪಾಲ್ಗೊಳ್ಳಬಹುದು, ಅಲ್ಲಿ ನೀವು ಮೊಟ್ಟೆಗಳನ್ನು ವಿವಿಧ ಬಣ್ಣಗಳಿಂದ ಚಿತ್ರಿಸಬಹುದು ಮತ್ತು ಅದನ್ನು ನಿಮ್ಮ ಸ್ನೇಹಿತರು ಮತ್ತು ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ನೀಡಬಹುದು.

3. ನೀವು ಕಿರಾಣಿ ಅಂಗಡಿಗೆ ಹೋಗಿ ಕೆಲವು ತಾಜಾ ಸಾವಯವ ಮೊಟ್ಟೆಗಳನ್ನು ಖರೀದಿಸಬಹುದು.

4. ರೆಸ್ಟೋರೆಂಟ್‌ಗೆ ಹೋಗಿ ಅವರ ಮೆನುವಿನಲ್ಲಿ ರುಚಿಯಾದ ಮೊಟ್ಟೆಯ ರೆಸಿಪಿ ಸವಿಯಬಹುದು.

ಮೊಟ್ಟೆಯ ಪಾಕವಿಧಾನ:

ಮೊಟ್ಟೆಯ ಪಾಕವಿಧಾನ:

ಮೊಟ್ಟೆಯಿಂದ ನಾನಾ ಪಾಕಗಳನ್ನು ತಯಾರಿಸಬಹುದು. ಕೆಲವರಿಗೆ ಬೇಯಿಸಿದ ಮೊಟ್ಟೆ ಇಷ್ಟವಾದರೆ, ಇನ್ನು ಕೆಲವರಿಗೆ ಆಮ್ಲೆಟ್, ಎಗ್ ಬುರ್ಜಿ, ಹಾಫ್ ಬಾಯ್ಡ್‌ ಈ ರೀತಿ ವಿವಿಧ ರೀತಿಯಲ್ಲಿ ಮೊಟ್ಟೆಯನ್ನು ಸವಿಯುತ್ತಾರೆ. ಇಂದು ವಿಶ್ವ ಮೊಟ್ಟೆ ದಿನ ಆಗಿರುವುದರಿಂದ ನಿಮಗಿಷ್ಟವಾದ ಮೊಟ್ಟೆ ರೆಸಿಪಿ ಮಾಡಿ, ನಿಮ್ಮ ಪ್ರೀತಿಪಾತ್ರರಿಗೆ ಬಡಿಸಿ, ಈ ದಿನಕ್ಕೊಂದು ಅರ್ಥ ನೀಡಿ.

English summary

World Egg Day 2021 Date, History, Significance, Theme & More

Here we talking about World Egg Day 2021 Date, History, Significance, Theme & More, read on
Story first published: Friday, October 8, 2021, 12:16 [IST]
X
Desktop Bottom Promotion