For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಮೊದಲ ಮಹಿಳಾ ಈಜುಗಾರ್ತಿ ಮಾನಾ ಪಾಟೇಲ್

|

ಮಾನಾ ಪಟೇಲ್‌ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತದ ಭರವಸೆ. ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಮಹಿಳಾ ಈಜುಗಾರ್ತಿ ಎಂಬ ಹೆಗ್ಗಳಿಕೆ ಇವರದ್ದು.

21 ವರ್ಷದ ಮಾನಾಗೆ ವಿಶ್ವವಿದ್ಯಾಲಯದ ಕೋಟಾದಡಿಯಲ್ಲಿ ಒಲಿಂಪಿಕ್ಸ್‌ನಲ್ಲಿ ಪ್ರವೇಶ ಸಿಕ್ಕಿದೆ. ಇವರು 100 ಮೀಟರ್‌ ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

Maana Patel

'ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೂರನೇ ಈಜುಪಟು ಮಾನಾ ಪಟೇಲ್. ಇವರಿಗಿಂತ ಮೊದಲು ಶ್ರೀಹರಿ ನಟರಾಜ ಮತ್ತು ಸಜನ್‌ ಪ್ರಕಾಶ್‌ ಅರ್ಹತೆ ಪಡೆದಿದ್ದಾರೆ.

ಕೊರೊನಾ ಸಮಯ ಈಜುಪಟುಗಳಿಗೆ ತುಂಬಾ ಸವಾಲಿನಿಂದ ಕೂಡಿತ್ತು. ಏಕೆಂದರೆ ಈ ಸಮಯದಲ್ಲಿ ಯಾವ ಈಜುಕೊಳದಲ್ಲೂ ಅಭ್ಯಾಸ ಮಾಡಲು ಅವಕಾಶ ನೀಡುತ್ತಿರಲಿಲ್ಲ. ದಿನಾ ವ್ಯಾಯಾಮ ಮಾಡಿ, ಆರೋಗ್ಯಕರ ಆಹಾರ ಮಾತ್ರ ಸೇವಿಸಿ, ಮನಸ್ಸನ್ನು ಉತ್ತಮವಾಗಿ ಇಡಲು ಒಳ್ಳೆಯ ಪುಸ್ತಕ ಓದಿ ಸಮಯ ಕಳೆಯುತ್ತಿದ್ದೆ ಎನ್ನುತ್ತಿದ್ದಾರೆ ಮಾನಾ ಪಾಟೇಲ್.

ಏಪ್ರಿಲ್‌ನಲ್ಲಿ ಉಜ್ಬೇಕಿಸ್ತಾನ್‌ನಲ್ಲಿ ನಡೆದ ಪಂದ್ಯದಲ್ಲಿ ಚಿನ್ನವನ್ನು ಗೆದ್ದು ಸೆರ್ಬಿಯಾ ಮತ್ತು ಇಟಲಿಯಲ್ಲಿ ಕೂಡ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಅವರು 100 ಮೀ ಬ್ಯಾಕ್‌ಸ್ಟ್ರೋಕ್‌ ಅನ್ನು 03.77 ಸೆಕೆಂಡ್‌ನಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದ್ದಾರೆ.

13 ವರ್ಷವಿದ್ದಾಗ ಭಾರತದಲ್ಲಿ 150 ಹಾಗೂ 200 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಭಾಗವಹಿಸ ಮೆಡಲ್‌ ಗೆದ್ದಿದೆ, ಅಲ್ಲಿಂದ ಹಿಂತಿರುಗಿ ನೋಡಿಲ್ಲ ಅಂತಾರೆ ಮಾನಾ ಪಾಟೇಲ್.

Read more about: life india ಭಾರತ ಜೀವನ
English summary

Who is Maana Patel? Know India's first female swimmer at tokyo olympics age, education, family details in kannada

Who is Maana Patel? Know India's first female swimmer at tokyo olympics age, education, family details in kannada,
Story first published: Thursday, July 8, 2021, 20:06 [IST]
X
Desktop Bottom Promotion