For Quick Alerts
ALLOW NOTIFICATIONS  
For Daily Alerts

ಟ್ವಿಟರ್‌ ಖರೀದಿಸಿದ ಎಲನ್ ಮಸ್ಕ್‌, ಜಗತ್ತಿನ ನಂ.1 ಶ್ರೀಮಂತನ ಕುರಿತ ಆಸಕ್ತಿಕರ ಸಂಗತಿಗಳಿವು

|

ಸಾಮಾಜಿಕ ಜಾಲತಾಣ ಉದ್ಯಮದಲ್ಲಿ ಮಹತ್ತರದ ಬೆಳವಣಿಗೆಯಾಗಿದೆ. ವಿಶ್ವದ ನಂಬರ್ 1 ಶ್ರೀಮಂತ, ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಟ್ವಿಟರ್‌ನನ್ನು ಖರೀದಿಸುತ್ತಿರುವುದಾಗಿ ಹೇಳಿದ್ದಾರೆ. 44 ಬಿಲಿಯನ್‌ ಡಾಲರ್‌ಗೆ (3.37 ಲಕ್ಷ ಕೋಟಿ ರೂಗೆ) ಈ ಖರೀದಿ ನಡೆಯಲಿದ್ದು ಉದ್ಯಮ ವಲಯದಲ್ಲಿ ನಡೆದ ಬೃಹತ್‌ ಡೀಲ್ ಇದಾಗಿದೆ.

ಇದರಿಂದ ಉದ್ಯಮ ವಲಯದಲ್ಲಿ ಭಾರೀ ಸಂಚಲನ ಉಂಟು ಮಾಡಿದೆ. ಇದರಿಂದ ಟ್ವಿಟರ್ ಷೇರ್‌ ಬೇಡಿಕೆ ಹೆಚ್ಚಿದೆ. ಆದರೆ ಟ್ವಿಟರ್‌ ಸಿಇಒ ಆಗಿರುವ ಪರಾಗ್‌ ಅಗರ್‌ವಾಲ್‌ ' ಎಲಾನ್‌ ಮಸ್ಕ್‌ ಅಧೀನದಲ್ಲಿ ಟ್ವಿಟರ್‌ ಭವಿಷಯ ಅಸ್ಪಷ್ಟ" ಎಂಬುವುದಾಗಿ ಹೇಳಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ನಾವಿಲ್ಲಿ ಈ ಉದ್ಯಮ ವ್ಯವಹಾರದ ಬಗ್ಗೆ ಇಲ್ಲಿ ವಿಶ್ಲೇಷಣೆ ಮಾಡುತ್ತಿಲ್ಲ, ಈ ಲೇಖನದಲ್ಲಿಎಲನ್ ಮಸ್ಕ್‌ ಕುರಿತು ಕೆಲ ಆಸಕ್ತಿರ ಸಂಗತಿಗಳ ಬಗ್ಗೆ ಹೇಳಿದ್ದೇವೆ ನೋಡಿ:

ಜಗತ್ತಿನ ನಂ.1 ಶ್ರೀಮಂತ ಎಲನ್ ಮಸ್ಕ್ ಕುರಿತ ಆಸಕ್ತಿಕರ ಸಂಗತಿಗಳಿವು

ಜಗತ್ತಿನ ನಂ.1 ಶ್ರೀಮಂತ ಎಲನ್ ಮಸ್ಕ್ ಕುರಿತ ಆಸಕ್ತಿಕರ ಸಂಗತಿಗಳಿವು

1. 12ನೇ ವಯಸ್ಸಿನಲ್ಲಿಯೇ ಎಲನ್ ಮಸ್ಕ್‌ ಮ್ಯಾಗ್‌ಜಿನ್‌ಗೆ ವೀಡಿಯೋ ಗೇಮ್ ತಯಾರಿಸಿ ಮಾರಾಟ ಮಾಡಿದ್ದರು. ಆ ಫೈಟಿಂಗ್ ಗೇಮ್ ಹೆಸರು ಬ್ಲಾಸ್ಟರ್ ಎಂಬುವುದಾಗಿತ್ತು. PC and Office Technology ಮ್ಯಾಗ್‌ಜಿನ್‌ ಅದನ್ನು 500ಡಾಲರ್‌ಗೆ ಖರೀದಿಸಿತ್ತು. ಅಲ್ಲದೆ 'ರಾಕೆಟ್ ಸೈನ್ಸ್' ಎಂಬ ಗೇಮಿಂಗ್ ಸ್ಟಾರ್ಟ್ ಅಪ್‌ ಕೂಡ ಮಾಡಿದ್ದರು.

2. ಮಸ್ಕ್‌ ಮೊದಲಿಗೆ Zip2 ಕಂಪನಿ ಸ್ಥಾಪಿಸಿದರು. ಈ ಕಂಪನಿ ನ್ಯೂಸ್‌ಪೇಪರ್‌ಗೆ ಮ್ಯಾಪ್ ಮತ್ತು ಬ್ಯುಸ್‌ನೆಸ್‌ ಡೈರೆಕ್ಟರಿ ಒದಗಿಸುವ ಕೆಲಸ ಮಾಡುತ್ತಿತ್ತು, ನಂತರ ಆ ಕಂಪನಿ 307 ಮಿಲಿಯನ್‌ ಡಾಲರ್‌ಗೆ ಮಾರಾಟವಾಯ್ತು.

ಜಗತ್ತಿನ ನಂ.1 ಶ್ರೀಮಂತ ಎಲನ್ ಮಸ್ಕ್ ಕುರಿತ ಆಸಕ್ತಿಕರ ಸಂಗತಿಗಳಿವು

ಜಗತ್ತಿನ ನಂ.1 ಶ್ರೀಮಂತ ಎಲನ್ ಮಸ್ಕ್ ಕುರಿತ ಆಸಕ್ತಿಕರ ಸಂಗತಿಗಳಿವು

3.Paypal, erstwhile X.com ಅನ್ನು 1999ರಲ್ಲಿ ಸ್ಐಆಪಿಸಿದರು ಈ ಮೂಲಕ ಸಾಕಷ್ಟು ಸಂಪತ್ತು ಗಳಿಸಿದು.

4. 2002ರಲ್ಲಿ ಮಸ್ಕ್‌ ಸ್ಪೇಸ್‌ ಎಕ್ಸ್‌ಪ್ಲೋರೇಷನ್‌ ಟೆಕ್ನೋಲಾಜಿ ಸ್ಥಾಪಿಸಿದರು, ಇದನ್ನು SpaceX ಎಂದು ಕರೆಯಲಾಗುವುದು. ಇದು ರಾಕೆಟ್ ಉಡಾವಣೆ ತಂತ್ರಜ್ಞಾನದ ಸಂಸ್ಥೆಯಾಗಿದೆ. ಇವರು 2018ರಲ್ಲಿ ಪ್ರಾರಂಭಿಸಿರುವ ಪಾಲ್ಕೋನ್‌ ಹೆವಿ 53, 000 ಕೆಜಿ ತೂಕದ ರಾಕೆಟ್‌ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಇತರ ಸ್ಪರ್ಧಿಗಳಿಗಿಂತ ಇವರ ಫಾಲ್ಕೋನ್‌ ಎರಡು ಪಟ್ಟು ಸಾಮಾರ್ಥ್ಯವನ್ನು ಹೊಂದಿದೆ.

ಜಗತ್ತಿನ ನಂ.1 ಶ್ರೀಮಂತ ಎಲನ್ ಮಸ್ಕ್ ಕುರಿತ ಆಸಕ್ತಿಕರ ಸಂಗತಿಗಳಿವು

ಜಗತ್ತಿನ ನಂ.1 ಶ್ರೀಮಂತ ಎಲನ್ ಮಸ್ಕ್ ಕುರಿತ ಆಸಕ್ತಿಕರ ಸಂಗತಿಗಳಿವು

5. ಮಸ್ಕ್‌ನಿಂದಾಗಿ ಸ್ಪೇಸ್‌ಗೆ ಪ್ರಯಾಣ ಖರ್ಚುಶೇ.90ರಷ್ಟು ಕಡಿಮೆ ಇದೆ. ಮೊದಲು ಒಂದು ಮಿಷನ್‌ಗೆ $1 ಬಿಲಿಯನ್‌ ತೆಗೆದುಕೊಳ್ಳುತ್ತಿದ್ದವರು ಈಗ $60 ಮಿಲಿಯನ್ ಹಣ ಪಡೆಯುತ್ತಿದ್ದಾರೆ. ಈ ಬದಲಾವಣೆ ಮಸ್ಕ್‌ನಿಂದಾಗಿ ಆಗಿದೆ.

ಜಗತ್ತಿನ ನಂ.1 ಶ್ರೀಮಂತ ಎಲನ್ ಮಸ್ಕ್ ಕುರಿತ ಆಸಕ್ತಿಕರ ಸಂಗತಿಗಳಿವು

ಜಗತ್ತಿನ ನಂ.1 ಶ್ರೀಮಂತ ಎಲನ್ ಮಸ್ಕ್ ಕುರಿತ ಆಸಕ್ತಿಕರ ಸಂಗತಿಗಳಿವು

6. ಮಸ್ಕ್‌ ಟೆಸ್ಲಾದ ಸ್ಥಾಪಕ. ಎಲೆಕ್ಟ್ರಿಕ್‌ ಗಾಡಿ ಖರೀದಿಸಲು ಜನರು ಹಿಂದೇಟು ಹಾಕುತ್ತಿರುವಾಗ ಟೆಸ್ಲಾ ರೋಡ್‌ಸ್ಟರ್‌ ಮೂಲಕ ಕ್ರಾಂತಿ ಮಾಡಿತು. ಅದರ ಆಕರ್ಷಕ ಲುಕ್‌ ಹಾಗೂ ಒಮ್ಮೆ ಚಾರ್ಜ್‌ ಮಾಡಿದರೆ 394 ಕಿಮಿ ರೇಂಜ್‌ ಈ ಕ್ವಾಲಿಟಿ ಮೂಲಕ ಗ್ರಾಹಕರನ್ನು ಆಕರ್ಷಿಸಿದೆ.

2018ರಲ್ಲಿ ಮಸ್ಕ್‌ ಹೈಪರ್‌ಲೂಪ್‌ ಎಂಬ ಟ್ರಾನ್ಸ್‌ಪೋರ್ಟ್‌ ಸಿಸ್ಟಮ್ ಪರಿಚಯಿಸಿದರು. ಇದರಿಂದ ಲಾಸ್‌ ಏಂಜಲಿಸ್‌ನಿಂದ ಸ್ಯಾನ್‌ ಫ್ರಾನ್ಸಿಸ್ಕೋಗೆ ಕೇವಲ 90 ನಿಮಿಷದಲ್ಲಿ ಜನರು ಪ್ರಯಾಣಿಸುವಂತಾಯಿತು.

English summary

Who is Elon Musk? Know Interesting Facts about tech billionaire in kannada

Who is Elon Musk? Know Interesting Facts about tech billionaire in kannada, read on...
X
Desktop Bottom Promotion