For Quick Alerts
ALLOW NOTIFICATIONS  
For Daily Alerts

ಅ. 31ರಂದು ಬ್ಲೂ ಮೂನ್: ಈ ರಾತ್ರಿಯ ವಿಶೇಷತೆ ಏನು?

|

ಇನ್ನೇನು 2020ರ ಅಕ್ಟೋಬರ್‌ ತಿಂಗಳು ಮುಗೀತಾ ಬಂದಿದೆ. ನವರಾತ್ರಿ, ದಸರಾ ಸಂಭ್ರಮ ಸವಿದ ನಾವೆಲ್ಲಾ ನವೆಂಬರ್‌ನಲ್ಲಿ ಬರುವ ದೀಪಾವಳಿಯನ್ನು ಎದುರು ನೋಡುತ್ತಿದ್ದೇವೆ.

ಈ ಅಕ್ಟೋಬರ್‌ನಲ್ಲಿ ಇನ್ನೇನು ವಿಶೇಷ ಇಲ್ಲ ಅಂದುಕೊಂಡಿದ್ದರೆ, ನೀವು ಅಕ್ಟೋಬರ್ 31ರ ಬಗ್ಗೆ ತಿಳಿಯಲೇಬೇಕು. ಈ ದಿನದ ವಿಶೇಷತೆ ಎಂದರೆ ನಾವೆಲ್ಲಾ ಬ್ಲೂ ಮೂನ್‌ಗೆ ಸಾಕ್ಷಿಯಾಗಲಿದ್ದೇವೆ. ತುಂಬಾ ಅಪರೂಪಕ್ಕೆ ಸಂಭವಿಸುವ ಘಟನೆ ಇದಾಗಿದೆ.

 ಬ್ಲೂ ಮೂನ್ ಎಂದರೇನು?

ಬ್ಲೂ ಮೂನ್ ಎಂದರೇನು?

ಬ್ಲೂ ಮೂನ್ ಎಂದ ತಕ್ಷಣ ಚಂದ್ರ ನೀಲಿ ಬಣ್ಣದಲ್ಲಿ ಕಾಣುತ್ತಾನೆ ಎಂದೆಲ್ಲಾ ಊಹಿಸಬೇಡಿ, ಒಂದೇ ತಿಂಗಳಿನಲ್ಲಿ ಹುಣ್ಣಿಮೆ ಎರಡು ಬಾರಿ ಬಂದರೆ ಬ್ಲೂ ಮೂನ್ ಹೇಳುತ್ತೇವೆ. ಈ ತಿಂಗಳ ಮೊದಲಿಗೆ ಹುಣ್ಣಿಮೆ ಇತ್ತು. ಇಷ್ಟು ವಿಶೇಷ ಬಿಟ್ಟರೆ ಈ ಹುಣ್ಣಿಮೆಯಲ್ಲಿ ಮತ್ತೇನು ವಿಶೇಷತೆ ಇಲ್ಲ.

 ಖಗೋಳ ಶಾಸ್ತ್ರದ ಲೆಕ್ಕಾಚಾರ

ಖಗೋಳ ಶಾಸ್ತ್ರದ ಲೆಕ್ಕಾಚಾರ

ಖಗೋಳ ಶಾಸ್ತ್ರದ ಪ್ರಕಾರ 29 ದಿನ, 12 ಗಂಟೆ 44 ನಿಮಿಷ, 38 ಸೆಕೆಂಡುಗಳಿಗೆ ಒಂದು ಹುಣ್ಣಿಮೆ ಎಂದು ಪರಿಗಣಿಸಲಾಗಿದೆ. ಹೀಗಾಗಿ 2ರಿಂದ ಮೂರು ವರ್ಷಗಳಿಗೆ ಒಮ್ಮೆ 31 ದಿನ ಇರುವ ತಿಂಗಳಲ್ಲಿ ಎರಡು ಬಾರಿ ಹುಣ್ಣಿಮೆ ಸಂಭವಿಸುತ್ತದೆ.

ಯಾವಾಗ ಬ್ಲೂ ಮೂನ್ ಬರುತ್ತದೆ

ಯಾವಾಗ ಬ್ಲೂ ಮೂನ್ ಬರುತ್ತದೆ

ತಿಂಗಳಿನ ಮೊದಲಿಗೆ ಅಥವಾ ಎರಡನೇ ತಾರೀಕು ಹುಣ್ಣಿಮೆ ಇದ್ದರೆ ಆ ತಿಂಗಳಿನಲ್ಲಿ 31 ದಿನವಿದ್ದರೆ ಈ ರೀತಿ ಬ್ಲೂ ಮೂನ್ ಸಂಭವಿಸಲಿದೆ. 2018ರಲ್ಲಿ ಕೂಡ ಎರಡು ಬ್ಲೂ ಮೂನ್ ಉಂಟಾಗಿತ್ತು. ನೆಕ್ಸ್ಟ್ ನೀವು ಬ್ಲೂ ಮೂನ್ ಅನ್ನು 2023ರ ಆಗಸ್ಟ್ 31ರಂದು ನೋಡುವಿರಿ.

 ಬ್ಲೂ ಮೂನ್‌ ಅಂದು ಗ್ರಹಣ ಸಂಭವಿಸುತ್ತದೆಯೇ?

ಬ್ಲೂ ಮೂನ್‌ ಅಂದು ಗ್ರಹಣ ಸಂಭವಿಸುತ್ತದೆಯೇ?

ಈ ಪ್ರಶ್ನೆ ಕೆಲವರಲ್ಲಿ ಮೂಡುತ್ತದೆ, ಆದರೆ ಇಲ್ಲ. ಚಾಂದ್ರ ಕ್ಯಾಲೆಂಡರ್ ಪ್ರಕಾರ ಒಂದು ಹುಣ್ಣಿಮೆಯಿಂದ ಮತ್ತೊಂದು ಹುಣ್ಣಿಮೆಗೆ ಇರುವ ಅಂತರ 29.5 ದಿನಗಳು ಮಾತ್ರ. ಆದರೆ ವಿಶ್ವಾದ್ಯಂತ ಗ್ರಿಗೇರಿಯನ್ ಕ್ಯಾಲೆಂಡ್ ಬಳಸಲಾಗುತ್ತದೆ, ಇದರ ಪ್ರಕಾರ ತಿಂಗಳ ಅವಧಿ 28ರಿಂದ 31 ದಿನಗಳು, ಹಾಗಾಗಿ ತಿಂಗಳಿನಲ್ಲಿ ಎರಡು ಬಾರಿ ಹುಣ್ಣಿಮೆ ಅಪರೂಪಕ್ಕೆ ಉಂಟಾಗುವುದು. ಇನ್ನು ಭೂಮಿಯ ಸೌರನಕ್ಷೆ ಮತ್ತು ಚಂದ್ರ ಭೂಮಿಯ ಸುತ್ತಲು ಬಳಸುವ ಕಕ್ಷೆಗಳ ನಡುವೆ 5 ಡಿಗ್ರಿಗಳ ಅಂತರವಿರುವುದರಿಂದ ಯಾವುದೇ ಗ್ರಹಣ ಸಂಭವಿಸುವುದಿಲ್ಲ.

English summary

What is a Blue Moon? Time to significance and everything you need to know in kannada

The 'Blue Moon' will be visible in the night sky on October 31st from around 8.19 PM. Everything you need to know in kannada,
Story first published: Thursday, October 29, 2020, 15:14 [IST]
X
Desktop Bottom Promotion