For Quick Alerts
ALLOW NOTIFICATIONS  
For Daily Alerts

ವಾಸ್ತುಶಾಸ್ತ್ರದ ಪ್ರಕಾರ, ಹನುಮನ ಯಾವ ಭಂಗಿಯ ಫೋಟೋ ಮನೆಗೆ ಸಂಪತ್ತು, ಸಮೃದ್ಧಿಯನ್ನು ತರುವುದು ಗೊತ್ತಾ?

|

ಪವನಪುತ್ರ, ಶ್ರೀ ರಾಮನ ಭಕ್ತನಾದ ಹನುಮ ಧೈರ್ಯ ಹಾಗೂ ಬಲಕ್ಕೆ ಹೆಸರುವಾಸಿ. ಈ ಆಜನ್ಮ ಬ್ರಹ್ಮಚಾರಿಯನ್ನು ಪೂಜಿಸಲು ಕೆಲವೊಂದು ನಿಯಮಗಳಿವೆ. ಶ್ರದ್ಧೆ ಭಕ್ತಿಯಿಂದ ಪೂಜಿಸುವುದರ ಜೊತೆಗೆ ಒಳ್ಳೆಯ ಮನಸ್ಸಿನಿಂದ ಕೇಳಿಕೊಂಡರೆ, ಬೇಡಿದ್ದನ್ನು ಕೊಡದೇ ಇರಲಾರನು ಹನುಮ ಎಂಬ ನಂಬಿಕೆಯಿದೆ.

ಹನುಮಂತನ ಆರಾಧನೆಯನ್ನು ಮಾಡುವುದರಿಂದ, ಜೀವನದ ತೊಂದರೆಗಳು ಮರೆಯಾಗಿ, ಮನಸ್ಸಿಗೆ ಸಂತೋಷ ಮತ್ತು ಶಾಂತಿಯನ್ನು ದೊರೆಯುವುದು. ಜೊತೆಗೆ ಶಕ್ತಿ, ಬುದ್ಧಿವಂತಿಕೆ ಮತ್ತು ಜ್ಞಾನ ಪ್ರಾಪ್ತಿಯಾಗುತ್ತದೆ. ಇಂತಹ ಹನುಮನ ವಿಗ್ರಹ ಇರುವ ಮನೆಗಳಲ್ಲಿ ಶನಿ ದೋಷ, ಪಿತೃ ದೋಷ ಮತ್ತು ಭೂತ ಪಿಶಾಚಿಗಳ ಭಯ ಹಾಗೂ ಕಾಟವಿರುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಾದರೆ ಮನೆಯಲ್ಲಿ ಹನುಮನ ಪೋಟೋ ಅಥವಾ ವಿಗ್ರಹವನ್ನು ಎಲ್ಲಿ ಮತ್ತು ಹೇಗೆ ಹಾಕಬೇಕು ಎಂಬುದನ್ನು ಇಲ್ಲಿ ನೋಡೋಣ.

ದುಷ್ಟಶಕ್ತಿಗಳ ನಿಯಂತ್ರಣಕ್ಕಾಗಿ ಹನುಮನ ಯಾವ ಫೋಟೋವನ್ನು ಮನೆಯಲ್ಲಿ ಎಲ್ಲಿ ಹಾಕಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಸಾಮಾನ್ಯ ಹನುಮನ ಚಿತ್ರ:

ಸಾಮಾನ್ಯ ಹನುಮನ ಚಿತ್ರ:

ನಿಮ್ಮ ಮನೆಯ ಮೇಲೆ ನಕಾರಾತ್ಮಕ ಶಕ್ತಿಗಳ ಪರಿಣಾಮ ಬಿದ್ದಿದೆ ಎಂದು ನಿಮಗೆ ಅನಿಸಿದರೆ, ಆಗ ಹನುಮಂತನ ಫೋಟೋವನ್ನು ಮನೆಯ ಎದುರು ಹಾಕಬೇಕು. ಜೊತೆಗೆ ಪಂಚಮುಖಿ ಹನುಮನ ಚಿತ್ರವನ್ನು ಮುಖ್ಯ ಬಾಗಿಲಿನ ಮೇಲೆ ಹಾಕಬಹುದು ಅಥವಾ ಎಲ್ಲರಿಗೂ ಕಾಣುವಂತಹ ಸ್ಥಳದಲ್ಲಿ ಇರಿಸಬಹುದು. ಇದನ್ನು ಮಾಡುವುದರಿಂದ, ಯಾವುದೇ ರೀತಿಯ ದುಷ್ಟ ಶಕ್ತಿಯು ಮನೆಗೆ ಪ್ರವೇಶಿಸುವುದಿಲ್ಲ.

ಪಂಚಮುಖಿ ಹನುಮಂತ:

ಪಂಚಮುಖಿ ಹನುಮಂತ:

ವಾಸ್ತು ಶಾಸ್ತ್ರದ ಪ್ರಕಾರ, ಪಂಚಮುಖಿ ಹನುಮನ ವಿಗ್ರಹ ಇರುವ ಮನೆಯಲ್ಲಿ, ಪ್ರಗತಿಯ ಹಾದಿಯಲ್ಲಿನ ಅಡೆತಡೆಗಳು ನಿವಾರಣೆಯಾಗಿ, ಸಂಪತ್ತು ಹೆಚ್ಚಾಗುತ್ತದೆ. ನಿಮ್ಮ ಮನೆಯ ಕಟ್ಟಡದಲ್ಲಿ ನೀರಿನ ಮೂಲವು ತಪ್ಪು ದಿಕ್ಕಿನಲ್ಲಿ ಇದ್ದರೆ, ಈ ವಾಸ್ತು ದೋಷದಿಂದಾಗಿ, ಕುಟುಂಬದಲ್ಲಿ ಶತ್ರು ಅಡೆತಡೆಗಳು, ಅನಾರೋಗ್ಯ ಮತ್ತು ವೈಷಮ್ಯ ಉದ್ಭವಿಸುತ್ತದೆ. ಈ ದೋಷವನ್ನು ತೆಗೆದುಹಾಕಲು, ಪಂಚಮುಖಿ ಹನುಮಂತನ ಫೋಟೋ ಅಥವಾ ವಿಗ್ರಹವನ್ನು ಆ ಕಟ್ಟಡದಲ್ಲಿ ಅಳವಡಿಸಬೇಕು. ಆ ನೀರಿನ ಮೂಲಕ್ಕೆ ನೈಋತ್ಯ ದಿಕ್ಕಿಗೆ ಫೋಟೋ ಹಾಕಬೇಕು.

ಶ್ರೀರಾಮನ ಪಾದದ ಬಳಿಯಿರುವ ಹನುಮನ ಚಿತ್ರ:

ಶ್ರೀರಾಮನ ಪಾದದ ಬಳಿಯಿರುವ ಹನುಮನ ಚಿತ್ರ:

ಇಂತಹ ಚಿತ್ರ ನಿಮ್ಮ ಬಳಿ ಇದ್ದರೆ ಅದನ್ನು ನಿಮ್ಮ ಮನೆಯಲ್ಲಿ ಭಜನೆಗಳೇನಾದರೂ ನಡೆಯುತ್ತಿದ್ದರೆ ಆ ಸ್ಥಳದಲ್ಲಿ ಇಡಬಹುದು. ಇದರ ಹೊರತಾಗಿ, ಪಂಚಮುಖಿ ಹನುಮನ ಚಿತ್ರ, ಹನುಮ ಪರ್ವತವನ್ನು ಎತ್ತುವ ಚಿತ್ರವನ್ನು ಶ್ರೀರಾಮನ ಕುರಿತು ನಡೆಯುವ ಭಜನೆ ಕಾರ್ಯಕ್ರಮದಲ್ಲಿ ಹಾಕಬಹುದು. ಇದು ಮನೆಗೆ ಶ್ರೇಯಸ್ಸನ್ನು ತರುವುದು.

ಹನುಮಂತ ಪರ್ವತವನ್ನು ಎತ್ತುವ ಚಿತ್ರ:

ಹನುಮಂತ ಪರ್ವತವನ್ನು ಎತ್ತುವ ಚಿತ್ರ:

ಸಂಜೀವಿನಿ ತರಲು ಪರ್ವತವನ್ನೇ ಹೊತ್ತ ಹನುಮನ ಫೋಟೋ ಏನಾದರೂ ನಿಮ್ಮ ಮನೆಯಲ್ಲಿದ್ದರೆ, ನಿಮ್ಮಲ್ಲಿ ಧೈರ್ಯ, ಶಕ್ತಿ, ವಿಶ್ವಾಸ ಮತ್ತು ಜವಾಬ್ದಾರಿ ಬೆಳೆಯುತ್ತದೆ. ಇದರಿಂದ ಜೀವನದಲ್ಲಿ ಉಂಟಾಗುವ ಯಾವುದೇ ಪರಿಸ್ಥಿತಿಗೆ ಹೆದರುವುದಿಲ್ಲ. ಪ್ರತಿಯೊಂದು ಸನ್ನಿವೇಶವೂ ನಿಮ್ಮ ಮುಂದೆ ಚಿಕ್ಕದಾಗಿ ಕಾಣುತ್ತದೆ ಮತ್ತು ಅದನ್ನು ತಕ್ಷಣವೇ ಪರಿಹರಿಸಿಕೊಳ್ಳಾಗುತ್ತದೆ. ಇದನ್ನು ನೀವು ದೇವರ ಮನೆಯಲ್ಲಿ ಇಡಬಹುದು.

ಹಾರುವ ಹನುಮಂತ:

ಹಾರುವ ಹನುಮಂತ:

ಸೀತೆಯನ್ನು ಹುಡುಕಿ ಲಂಕೆಗೆ ಹಾರಿದ ಹುನುಮನ ಚಿತ್ರ ನಿಮ್ಮ ಮನೆಯಲ್ಲಿದ್ದರೆ ನಿಮ್ಮ ಪ್ರಗತಿ ಮತ್ತು ಯಶಸ್ಸನ್ನು ಯಾರೂ ತಡೆಯಲು ಸಾಧ್ಯವಿರುವುದಿಲ್ಲ. ಎಲ್ಲಾ ಕೆಲಸಗಳಲ್ಲೂ ಧೈರ್ಯದಿಂದ ಮುಂದುವರಿಯಲು ನಿಮಗೆ ಉತ್ಸಾಹ ಮತ್ತು ಧೈರ್ಯವಿರುತ್ತದೆ. ಯಶಸ್ಸಿನ ಹಾದಿಯಲ್ಲಿ ನೀವು ಬೆಳೆಯುತ್ತಲೇ ಇರುತ್ತೀರಿ. ಇದನ್ನು ಕೂಡ ದೇವರ ಮನೆಯಲ್ಲಿ ಇಡಬಹುದು.

ಶ್ರೀರಾಮನನ್ನು ಪೂಜಿಸುವ ಹನುಮಂತ:

ಶ್ರೀರಾಮನನ್ನು ಪೂಜಿಸುವ ಹನುಮಂತ:

ಈಗಾಗಲೇ ಹೇಳಿದಂತೆ ಶ್ರೀರಾಮನ ಕಟ್ಟಾ ಭಕ್ತನಾಗಿರುವ ಹನುಮಂತ ಶ್ರೀರಾಮನನ್ನು ಪೂಜಿಸದೇ ಇರಲಾರನು. ಇಂತಹ ಚಿತ್ರ ನಿಮ್ಮ ಮನೆಯಲ್ಲಿದ್ದರೆ , ನಿಮ್ಮಲ್ಲಿ ಭಕ್ತಿ ಮತ್ತು ನಂಬಿಕೆ ಇರುತ್ತದೆ. ಈ ಭಕ್ತಿ ಮತ್ತು ನಂಬಿಕೆ ನಿಮ್ಮ ಜೀವನದಲ್ಲಿ ಯಶಸ್ಸಿಗೆ ಆಧಾರವಾಗಿದೆ. ಈ ಪೋಟೋ ಅಥವಾ ವಿಗ್ರಹವನ್ನು ಪವಿತ್ರ ಸ್ಥಳದಲ್ಲಿ ಇಡುವುದು ಸೂಕ್ತ.

ಹನುಮನ ಫೋಟೋವನ್ನು ಎಲ್ಲಿ ಹಾಕಲೇಬಾರದು?:

ಹನುಮನ ಫೋಟೋವನ್ನು ಎಲ್ಲಿ ಹಾಕಲೇಬಾರದು?:

ಗ್ರಂಥಗಳ ಪ್ರಕಾರ ಹನುಮ ಬ್ರಹ್ಮಚಾರಿಯಾಗಿದ್ದು, ಈ ಕಾರಣಕ್ಕಾಗಿ ಅವನ ಚಿತ್ರವನ್ನು ಮಲಗುವ ಕೋಣೆಯಲ್ಲಿ ಇಡಬಾರದು. ಇದರ ಬದಲಾಗಿ ದೇವಸ್ಥಾನದಲ್ಲಿ ಅಥವಾ ಇತರ ಯಾವುದೇ ಪವಿತ್ರ ಸ್ಥಳದಲ್ಲಿ ಇಡುವುದು ಶುಭಕರ. ಮಲಗುವ ಕೋಣೆಯಲ್ಲಿ ಇಡುವುದು ಅಶುಭ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ಜಾಗದಲ್ಲಿ ಇಡಬೇಡಿ.

English summary

Vastu Tips to Place Lord Hanuman Photo At Your Home in Kannada

Here we talking about Vastu Tips to Place Lord Hanuman Photo At Your Home in Kannada, read on
X
Desktop Bottom Promotion