Just In
- 22 min ago
ಫೆಬ್ರವರಿಯಲ್ಲಿದೆ ಶುಕ್ರ ಗ್ರಹ ಮಾಲವ್ಯ ಯೋಗ: ಈ 3 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗುವುದು
- 1 hr ago
'ಸಿಂಗಾರ ಸಿರಿಯೇ' ಎಂದು 60ನೇ ವಯಸ್ಸಿನಲ್ಲಿ ವೆಡ್ಡಿಂಗ್ ಫೋಟೋಶೂಟ್: ರೊಮ್ಯಾಂಟಿಕ್ ವೀಡಿಯೋ ಸಕತ್ ವೈರಲ್
- 6 hrs ago
ನವಣೆ ಬಳಿಸಿದರೆ ಕ್ಯಾನ್ಸರ್ನಿಂದ ಫೈಲ್ಸ್ವರೆಗೆ ಕಾಯಿಲೆ ತಡೆಗಟ್ಟಬಹುದು,ಗೊತ್ತಾ?
- 7 hrs ago
Chankya Neeti: ಶತ್ರುವಿನ ವಿರುದ್ಧ ಗೆಲ್ಲಬೇಕಾ..? ಚಾಣಾಕ್ಯನ ಈ ನೀತಿ ಅನುಸರಿಸಿ..!
Don't Miss
- Sports
ಈ ಭಾರತೀಯ ತಾನು ಎದುರಿಸಿದ 'ಅತ್ಯಂತ ಅಪಾಯಕಾರಿ ಬೌಲರ್' ಎಂದ ಜೋಸ್ ಬಟ್ಲರ್
- Movies
'ಕಬ್ಜ' ಸಿನಿಮಾದ ಹಾಡು ಬಿಡುಗಡೆ: ಹೇಗಿದೆ ಮೊದಲ ಹಾಡು?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಈ 7 ವಾಸ್ತು ಕ್ರಮಗಳಿಂದ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಜೀವನದಲ್ಲಿ ಯಶಸ್ವಿಯಾಗಿ
ಜೀವನದಲ್ಲಿ ಯಶಸ್ವಿಯಾಗಲು, ಎಲ್ಲದಕ್ಕಿಂತ ಮುಖ್ಯವಾಗಿ ನಮ್ಮಲ್ಲಿ ಆತ್ಮವಿಶ್ವಾಸ ಇರಬೇಕು. ಇಲ್ಲವಾದಲ್ಲಿ ಕಠಿಣ ಪರಿಶ್ರಮದ ನಂತರವೂ ಯಶಸ್ಸನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆತ್ಮಸ್ಥೈರ್ಯದ ಕೊರತೆಯಿಂದ ಅನೇಕ ಬಾರಿ ಯಾವುದೇ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ವಾಸ್ತು ಶಾಸ್ತ್ರದಲ್ಲಿ ಕೆಲವೊಂದು ಕ್ರಮಗಳನ್ನು ವಿವರಿಸಿದ್ದು, ಇದನ್ನು ಅನುಸರಿಸುವುದರಿಂದ, ಮೂಲಕ ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸಬಹುದು. ಹಾಗಾದರೆ, ಅಂತಹ ಕ್ರಮಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.
ಆತ್ಮವಿಶ್ವಾಸ ಹೆಚ್ಚಾಗಲು ವಾಸ್ತು ಪರಿಹಾರಗಳು ಹೀಗಿವೆ:

ಗೋಡೆ ಮೇಲೆ ಈ ಚಿತ್ರವಿರಲಿ:
ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಕೋಣೆಯಲ್ಲಿ ಉದಯಿಸುವ ಸೂರ್ಯ ಅಥವಾ ಓಡುವ ಕುದುರೆಯ ಚಿತ್ರವನ್ನು ನೇತುಹಾಕಿ. ಇದು ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಮನೆಯಿಂದ ನಕಾರಾತ್ಮಕತೆಯನ್ನು ಸಹ ತೆಗೆದುಹಾಕುತ್ತದೆ. ಚಿತ್ರದಲ್ಲಿರುವ ಕುದುರೆ ಒಳಮುಖವಾಗಿ ಓಡುತ್ತಿರಬೇಕು ಎಂಬುದನ್ನು ಗಮನಿಸಿ. ಖಾಲಿ ಗೋಡೆಗೆ ಎದುರಾಗಿ ಕುಳಿತುಕೊಳ್ಳಬೇಡಿ ಏಕೆಂದರೆ ಅದು ನಿಮ್ಮ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರಬಹುದು.

ಕಿಟಕಿ ಹೀಗಿರಲಿ:
ವಾಸ್ತು ಪ್ರಕಾರ, ನಿಮ್ಮ ಮನೆಯ ಕಿಟಕಿಗಳನ್ನು ತೆರೆದಿಡಿ. ಹೀಗೆ ಮಾಡುವುದರಿಂದ ಧನಾತ್ಮಕ ಶಕ್ತಿ ಮನೆಯೆಲ್ಲಾ ಹರಡುತ್ತದೆ. ಜೊತೆಗೆ ಕಿಟಕಿಗೆ ಬೆನ್ನು ಹಾಕಿ, ಕುಳಿತುಕೊಳ್ಳಬೇಡಿ, ಏಕೆಂದರೆ ನಿಮ್ಮಿಂದ ಇದು ಶಕ್ತಿಯನ್ನು ಹೊರಹಾಕುತ್ತದೆ ಮತ್ತು ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ.

ಅಕ್ವೇರಿಯಂ ಮನೆಯಲ್ಲಿರಲಿ:
ವಾಸ್ತು ಪ್ರಕಾರ, ಮನೆಯಲ್ಲಿ ಮೀನಿನ ಅಕ್ವೇರಿಯಂ ಅನ್ನು ಇರಿಸಿ, ಅದರಲ್ಲಿ ಕನಿಷ್ಠ ಎರಡು ಗೋಲ್ಡ್ ಫಿಷ್ ಇರಬೇಕು. ಅವುಗಳಿಗೆ ನಿಯಮಿತವಾಗಿ ಆಹಾರವನ್ನು ನೀಡುತ್ತಿರಿ. ಇದು ನಿಮ್ಮ ಆತ್ಮವಿಶ್ವಾಸವನ್ನು ಬಹಳ ಮಟ್ಟಿಗೆ ಹೆಚ್ಚಿಸುತ್ತದೆ.

ಆತ್ಮವಿಶ್ವಾಸ ಹೆಚ್ಚಾಗಲು ಜ್ಯೋತಿಷ್ಯ ಪರಿಹಾರಗಳು ಹೀಗಿವೆ:
ಇದಲ್ಲದೆ, ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲು ನೀವು ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಸಹ ಪ್ರಯತ್ನಿಸಬಹುದು. ಅವುಗಳೆಂದರೆ:
ಪಕ್ಷಿಗಳಿಗೆ ಆಹಾರ ನೀಡಿ:
ಪಕ್ಷಿಗಳಿಗೆ ಆಹಾರ ಮತ್ತು ನೀರನ್ನು ಒದಗಿಸುವುದು ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಆದ್ದರಿಂದ, ನೀವು ನಿಯಮಿತವಾಗಿ ನಿಮ್ಮ ಮನೆಯ ಛಾವಣಿಯ ಮೇಲೆ ಪಕ್ಷಿಗಳಿಗೆ ಕಾಳು ಮತ್ತು ನೀರು ಹಾಕಿ ಇಡಬೇಕು.

ಶನಿಯಂತ್ರ ಸಹಕಾರಿ:
ಶನಿ ಯಂತ್ರವನ್ನು ನಿಮ್ಮ ಮನೆಯಲ್ಲಿ ಇರಿಸಿ. ಇದಲ್ಲದೇ, ನಿಮ್ಮ ಮನೆಯ ದ್ವಾರದಲ್ಲಿ ನಿಂಬೆ ಮತ್ತು ಹಸಿರು ಮೆಣಸಿನಕಾಯಿಯನ್ನು ನೇತು ಹಾಕಿ. ನಿಂಬೆ ಒಣಗಿದರೆ ಶನಿವಾರ ಮಾತ್ರ ಅದನ್ನು ಬದಲಾಯಿಸಿ.

ಸೂರ್ಯನ ಆರಾಧನೆ:
ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಲು ಮುಂಜಾನೆ ಬೇಗ ಎದ್ದು ಸೂರ್ಯೋದೇಯವನ್ನು ಆರಾಧಿಸಿ. ನಿಯಮಿತವಾಗಿ 'ಆದಿತ್ಯ ಹೃದಯ ಸ್ತೋತ್ರ' ಪಠಿಸಿ. ಪ್ರತಿದಿನ ಬೆಳಗ್ಗೆ ಸೂರ್ಯನಿಗೆ ನೀರು ಅರ್ಪಿಸುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಊಟ ಮಾಡುವಾಗ ಪೂರ್ವಕ್ಕೆ ಮುಖ ಮಾಡಿ ಕುಳಿತುಕೊಳ್ಳಿ.

ಗಾಯತ್ರಿ ಮಂತ್ರ ಪಠಣೆ:
ಬೆಳಿಗ್ಗೆ ಗಾಯತ್ರಿ ಮಂತ್ರವನ್ನು ಪಠಿಸಿ. ನಿಮ್ಮ ಆಸನದ ಹಿಂದೆ ಪರ್ವತದ ಚಿತ್ರವನ್ನು ಹಾಕಿ. ಸಕಾರಾತ್ಮಕ ಶಕ್ತಿಯಿಂದ ತುಂಬಿರುವ ಜನರೊಂದಿಗೆ ನಿಮ್ಮ ಸಮಯವನ್ನು ಕಳೆಯಿರಿ ಮತ್ತು ಇತರರಲ್ಲಿ ತಪ್ಪುಗಳನ್ನು ಕಂಡುಕೊಳ್ಳುವ ಜನರಿಂದ ದೂರವಿರಿ.