For Quick Alerts
ALLOW NOTIFICATIONS  
For Daily Alerts

ವೃತ್ತಿ ಜೀವನದಲ್ಲಿ ಬೆಳೆಯಬೇಕೆ? ವಾಸ್ತು ಶಾಸ್ತ್ರ ಏನು ಹೇಳಿದೆ ನೋಡಿ

|

ವೃತ್ತಿ ಜೀವನದಲ್ಲಿ ಬೆಳೆಯಬೇಕೆಂಬ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ, ಎಲ್ಲಾ ಸರಿಯಾಗಿದೆ ಎಂದು ಅನಿಸುವಷ್ಟರಲ್ಲಿ ಅಲ್ಲಿ ಬೇರೇನೋ ಸಮಸ್ಯೆ ಉದ್ಭವವಾಗಿರುತ್ತೆ. ಆ ಕೆಲಸ ಬೇಡ ಎಂದು ಬೇರೆ ಕೆಲಸಕಕ್ಕೆ ಸೇರಿದರೆ ಅಲ್ಲಿಯೂ ಸಮಸ್ಯೆ, ಬೇರೆಯವರ ಜೊತೆ ಕೆಲಸ ಮಾಡುವುದಕ್ಕಿಂತ ತಾನೇ ಏನಾದರೂ ಸ್ವಂತ ಬ್ಯುಸ್‌ನೆಸ್‌ ಮಾಡಿದರೆ ಅಲ್ಲಿಯೂ ಲಾಸ್, ಹೀಗೆ ವೃತ್ತಿ ಜೀವನದಲ್ಲಿ ಒಂದರ ಹಿಂದೆ ಮತ್ತೊಂದು ಎಂಬಂತೆ ಹೊಡೆತ ಬೀಳುವಾಗ ಏಕೆ ಹೀಗಾಗುತ್ತದೆ ಎಂದು ಅನಿಸಲಾರಂಭಿಸುತ್ತದೆ.

ವೃತ್ತಿ ಜೀವನದಲ್ಲಿ ಪ್ರಗತಿ ಹೊಂದಲು ಕೆಲವೊಂದು ಅಂಶಗಳನ್ನು ಗಮನಿಸಬೇಕೆಂದು ವಾಸ್ತು ಶಾಸ್ತ್ರ ಹೇಳುತ್ತದೆ. ವೃತ್ತಿ ಜೀವನದ ಪ್ರಗತಿಗೆ ವಾಸ್ತು ಶಾಸ್ತ್ರದಲ್ಲಿ ನೀಡಿರುವ ಟಿಪ್ಸ್ ಏನು ಎಂದು ನೋಡೋಣ ಬನ್ನಿ:

1. ಎಲೆಕ್ಟ್ರಾನಿಕ್ ವಸ್ತುಗಳನ್ನು ಯಾವ ಭಾಗದಲ್ಲಿ ಇಡಬೇಕು?

1. ಎಲೆಕ್ಟ್ರಾನಿಕ್ ವಸ್ತುಗಳನ್ನು ಯಾವ ಭಾಗದಲ್ಲಿ ಇಡಬೇಕು?

ನಿಮ್ಮ ಕೆಲಸಕ್ಕೆ ಲ್ಯಾಪ್‌ಟಾಪ್ ಅಥವಾ ಸ್ಮಾರ್ಟ್‌ಫೋನ್‌ ಬಳಸುವಾಗ ಅದನ್ನು ಯಾವ ದಿಕ್ಕಿನಲ್ಲಿಡುತ್ತೀರಿ ಎಂಬುವುದು ಮುಖ್ಯವಾಗುತ್ತೆ. ಎಲೆಕ್ಟ್ರಾನಿಕ್ ವಸ್ತುಗಳನ್ನು ಈಶಾನ್ಯ ಭಾಗದಲ್ಲಿಟ್ಟರೆ ಒಳ್ಳೆಯದು, ಅಲ್ಲದೆ ಕೆಲಸ ಮಾಡುವ ಟೇಬಲ್‌ ಅನ್ನು ಆಕರ್ಷಕವಾಗಿ ಇಡಬೇಕು.

2. ಕೂರುವ ರೀತಿ ಕೂಡ ಮುಖ್ಯವಾಗುತ್ತೆ

2. ಕೂರುವ ರೀತಿ ಕೂಡ ಮುಖ್ಯವಾಗುತ್ತೆ

ನೀವು ಕೆಲಸ ಮಾಡುವಾಗ ಹೇಗೆ ಕೂರುತ್ತೀರಿ ಎಂಬುವುದು ಮುಖ್ಯವಾಗುತ್ತೆ. ಕೆಲಸದ ಜಾಗದಲ್ಲಿ ಕಾಲ ಮೇಲೆ ಕಾಲು ಹಾಕ ಕೂರಬೇಡಿ. ವರ್ಕಿಂಗ್‌ ಫ್ರಂ ಹೋಂ ಮಾಡುತ್ತಿರುವವರೂ ಕೆಲಸದ ವಿಷಯದಲ್ಲಿ ಶಿಸ್ತು ಪಾಲಿಸಿ.

3. ಬಾತ್‌ರೂಂ ಪಕ್ಕದಲ್ಲಿ ಕೆಲಸ ಮಾಡುವ ಟೇಬಲ್‌ ಇಡಬೇಡಿ

3. ಬಾತ್‌ರೂಂ ಪಕ್ಕದಲ್ಲಿ ಕೆಲಸ ಮಾಡುವ ಟೇಬಲ್‌ ಇಡಬೇಡಿ

ಈಗೆಲ್ಲಾ ವರ್ಕ್‌ ಫ್ರಂ ಹೋಂ ಹೆಚ್ಚಾಗಿ ಮಾಡುತ್ತಿದ್ದಾರೆ. ಅಟ್ಯಾಚ್ಡ್‌ ಬಾತ್‌ರೂಂ ಇದ್ದರೆ ಅದರ ಪಕ್ಕ ಕೆಲಸದ ಟೇಬಲ್ ಇಡಬೇಡಿ.

4. ವರ್ಕಿಂಗ್‌ ಟೇಬಲ್

4. ವರ್ಕಿಂಗ್‌ ಟೇಬಲ್

ರೌಂಡ್‌ ಆಗಿರುವ,ರೊಟೇಟ್ ಆಗುವ ಟೇಬಲ್‌ನಲ್ಲಿ ಲ್ಯಾಪ್‌ಟಾಪ್‌ ಇಡಬೇಡಿ. ಚೌಕ ಅಥವಾ ಆಯತಾಕಾರದ ಟೇಬಲ್‌ ಬಳಸಿ.

5. ಕೆಲಸದ ಜಾಗದಲ್ಲಿ ಸ್ಪಟಿಕ ಬಳಸಿ

5. ಕೆಲಸದ ಜಾಗದಲ್ಲಿ ಸ್ಪಟಿಕ ಬಳಸಿ

ಕೆಲಸ ಜಾಗದಲ್ಲಿ ಸ್ಪಟಿಕ ಇಟ್ಟರೆ ಕೆಲಸದ ಸಾಮರ್ಥ್ಯ ಹೆಚ್ಚುವುದು. ನಿಮ್ಮ ವರ್ಕಿಂಗ್‌ ಟೇಬಲ್‌ ಮೇಲೆ ಬಿದಿರಿನ ಗಿಡ ಇಡಿ.

6. ಹೇಗೆ ಮಲಗಬೇಕು?

ಮಲಗುವಾಗ ಪೂರ್ವಕ್ಕೆ ಮುಖ ಮಾಡಿ ಮಲಗಿ. ಇದರಿಂದ ನಿಮ್ಮ ಏಕಾಗ್ರತೆ ಹಾಗೂ ಮಾನಸಿಕ ಶಕ್ತಿ ಹೆಚ್ಚುವುದು. ಇನ್ನು ಕೆಲಸಕ್ಕೆ ಕೂರುವಾಗ ಉತ್ತರ ಭಾಗದಲ್ಲಿ ಕೂರುವುದು ಒಳ್ಳೆಯದು.

ಇನ್ನು ನೀವು ಕೆಲಸ ಮಾಡಲು ಕೂರುವಾಗ ನಿಮ್ಮ ಬೆನ್ನ ಹಿಂದೆ ಗೋಡೆ ಇರಬೇಕು, ಕಿಟಕಿಯಲ್ಲ. ಕಿಟಕಿಯಿದ್ದರೆ ನಿಮ್ಮಲ್ಲಿ ಗೊಂದಲ ಹೆಚ್ಚುವುದು.

ಸೂಚನೆ: ಇಲ್ಲಿ ನೀಡಿರುವ ಅಂಶಗಳನ್ನು ವಾಸ್ತು ಸೈನ್ಸ್ ಪ್ರಕಾರ ಹೇಳಲಾಗಿದೆ.. ಇನ್ನೂ ಹೆಚ್ಚಿನ ನಿಖರ ಮಾಹಿತಿಗೆ ವಾಸ್ತು ತಜ್ಞರನ್ನು ಸಂಪರ್ಕಿಸಿ ತಿಳಿದುಕೊಳ್ಳಬಹುದು.

English summary

Vastu Tips for Instant Career Growth in Kannada

This Vastu Tips Helps you to grow in your career, read on.. .
Story first published: Saturday, August 20, 2022, 15:24 [IST]
X
Desktop Bottom Promotion