For Quick Alerts
ALLOW NOTIFICATIONS  
For Daily Alerts

ಕೊರೊನಾ ಟೈಮಲ್ಲಿ ಹೊಸ ವರ್ಷ ಆಚರಣೆಗೆ ಇಲ್ಲಿದೆ ಬೆಸ್ಟ್ ಐಡಿಯಾ

|

ಇದೀಗ ನಾವಿರೋದು ಡಿಸೆಂಬರ್ ತಿಂಗಳಲ್ಲಿ. ಅಂದ್ರೆ ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ ಇರುವ ಮಾಸದಲ್ಲಿ. ಈ ಹಿಂದೆ ಡಿಸೆಂಬರ್ ಅಂದ್ರೆ ಏನೋ ಖುಷಿ, ಹುರುಪು, ಉತ್ಸಾಹ. ಹೊಸ ವರ್ಷವನ್ನು ವೆಲ್‌ಕಮ್ ಮಾಡಲು ವಿಶೇಷವಾದ ತಯಾರಿ ಆಗ್ತಾ ಇತ್ತು. ಹೇಗೆ ಸ್ವಾಗತ ಮಾಡೋದು? ಎಲ್ಲಿ ಪಾರ್ಠಿ ಮಾಡೋದು? ಯಾವ ಪ್ಲೇಸಲ್ಲಿ ಹೊಸ ವರ್ಷ ಆಚರಣೆ ಮಾಡೋದು? ಹೀಗೆ ಸಾಕಷ್ಟು ಪ್ರಿಪರೇಷನ್ಸ್ ನನಡೀತಾ ಇತ್ತು. ಆದ್ರೆ ಈ ಬಾರಿ ಕೊರೋನ ಅನ್ನೋ ಮಹಾಮಾರಿ ಎಲ್ಲಾ ಸಂಭ್ರಮಕ್ಕೆ ಬ್ರೇಕ್ ಹಾಕಿದೆ.

ದಿನ ದಿನೇ ಹೆಚ್ಚಾಗ್ತಿರುವ ಕೊರೊನಾ ಹಾವಳಿಯಿಂದ ತಪ್ಪಿಸಿಕೊಳ್ಳಲು ಈ ಬಾರಿ ಹೊಸವರ್ಷಾಚರಣೆಯ ಅದ್ದೂರಿ ಆಚರಣೆಗೆ ಸರ್ಕಾರ ನಿರ್ಬಂಧ ಹೇರಿದೆ. ಆದರೆ ಚಿಂತೆ ಮಾಡೋ ಅಗತ್ಯ ಇಲ್ಲ. ಮನೆಯೊಳಗೆ ಇದ್ಕೊಂಡು ಅಥವಾ ಕ್ವಾರಂಟೈನ್‌ನಲ್ಲೇ ಇದ್ಕೊಂಡು ನೀವು ವರ್ಚುವಲ್ ಆಗಿ ಹೊಸ ವರ್ಷ ಆಚರಣೆ ಮಾಡ್ಬೋದು. ಈ ಕೊರೋನಾ ಬಂದ್ಮೇಲೆ ಈ ವರ್ಚುವಲ್ ಅನ್ನೋ ಪದ ಬಳಕೆ ಜಾಸ್ತಿ ಆಗಿರೋದು ಎಲ್ಲರಿಗೂ ಗೊತ್ತು. ಅದೇ ವರ್ಚುವಲ್ ಪ್ಲಾಟ್‌ಫಾರಂ ಮೂಲಕ ಈ 2021ರ ಹೊಸ ವರ್ಷವನ್ನು ಹೇಗೆ ಆಚರಣೆ ಮಾಡೋದು ಅಂತ ತಿಳ್ಕೊಂಡು ಬರೋಣ ಬನ್ನಿ.

ವರ್ಚುವಲ್ ಆಚರಣೆ

ವರ್ಚುವಲ್ ಆಚರಣೆ

ಮೊದಲಿಗೆ ನಿಮ್ಮ ನೆಚ್ಚಿನ ವೀಡಿಯೊ ಚಾಟ್ ಪ್ಲಾಟ್‌ಫಾರ್ಮ್ ಅನ್ನು ಆರಿಸಿ, ನಿಮ್ಮ ಪ್ರೀತಿಪಾತ್ರರನ್ನು ಮತ್ತು ನಿಮ್ಮ ಕೆಲವು ಮಕ್ಕಳ ಸ್ನೇಹಿತರನ್ನು ಆಹ್ವಾನಿಸಿ ಮತ್ತು ನಿಮ್ಮ ವರ್ಚುವಲ್ ಆಚರಣೆಗಾಗಿ ಈ ಕೆಳಗಿನ ಕೆಲವು ಮಕ್ಕಳ ಸ್ನೇಹಿ ಸಂಭಾಷಣೆ ಮತ್ತು ಚಟುವಟಿಕೆಗಳನ್ನು ಪ್ರಯತ್ನಿಸಿ.

ಹೊಸ ವರ್ಷಕ್ಕೆ ಒಂದು ಮ್ಯೂಸಿಕ್ ಥೀಮ್ ಆರಿಸಿ:

ಹೊಸ ವರ್ಷಕ್ಕೆ ಒಂದು ಮ್ಯೂಸಿಕ್ ಥೀಮ್ ಆರಿಸಿ:

"2021" ಸ್ವಾಗತಿಸಲು ಎಲ್ಲರೂ ಒಂದೇ ಹಾಡನ್ನು ಆರಿಸಿಕೊಳ್ಳಿ. ಅದನ್ನು ನಿಮ್ಮ ಸ್ನೇಃಹಿತರೊಂದಿಗೆ ಹಂಚಿಕೊಳ್ಳಲು ಸ್ಪಾಟಿಫೈನಂತಹ ಉಚಿತ ಪ್ಲಾಟ್‌ಫಾರ್ಮ್ ಬಳಸಿ, ಮತ್ತು ಕಾರ್ಯಕ್ರಮದ ನಂತರ ಲಿಂಕ್ ಅನ್ನು ಎಲ್ಲರಿಗೂ ಕಳುಹಿಸಿ.

2020ಕ್ಕೆ ಧನ್ಯವಾದಗಳು:

2020ಕ್ಕೆ ಧನ್ಯವಾದಗಳು:

ಕಳೆದ ವರ್ಷವು ಸಂತೋಷಕ್ಕಿಂತ ನಷ್ಟ ಮತ್ತು ಸವಾಲುಗಳು ಹೆಚ್ಚಾಗಿತ್ತು. ಆದರೆ 2020ರಲ್ಲಿ ನೀವು ಕೃತಜ್ಞತೆ ಹೇಳಲು ಬಯಸುವ ಒಂದು ವಿಷಯಕ್ಕಾಗಿ ಪ್ರತಿಯೊಬ್ಬರನ್ನು ಆಹ್ವಾನಿಸುವುದು ನಿಮ್ಮ ಮಗುವಿಗೆ ಸಕಾರಾತ್ಮಕ ಚಿಂತನೆಯನ್ನು ಕಲಿಸುತ್ತದೆ. ಇದು ಒತ್ತಡವನ್ನು ನಿಭಾಯಿಸಲು ಸಹಾಯ ಮಾಡುತ್ತದೆ.

2020ರ ಗುಲಾಬಿಗಳು, ಮುಳ್ಳುಗಳು ಮತ್ತು ಮೊಗ್ಗುಗಳು:

2020ರ ಗುಲಾಬಿಗಳು, ಮುಳ್ಳುಗಳು ಮತ್ತು ಮೊಗ್ಗುಗಳು:

ಈ ಮಾತು ಅಥವಾ ಉಪಮೇಯ ಮಕ್ಕಳಿಗೆ ಹಿಂದಿನದನ್ನು ಪ್ರತಿಬಿಂಬಿಸಲು ಸಹಾಯ ಮಾಡುತ್ತದೆ ಮತ್ತು ಮುಂದೆ ಏನಿದೆ ಎಂಬುದರ ಕುರಿತು ಸುಳಿಹು ನೀಡುತ್ತದೆ. ಭಾಗವಹಿಸಿದ ಪ್ರತಿ ಅತಿಥಿಯು 2020ರ ಅತೀ ಮುಖ್ಯ ಘಟನೆಗಳನ್ನು (ಗುಲಾಬಿ), ಒಂದು ಸವಾಲಿನ ಅಥವಾ ದುಖಃದ ಕ್ಷಣ(ಮುಳ್ಳಿನ) ಹಾಗೂ 2021ರಲ್ಲಿ ಎದುರು ನೋಡುತ್ತಿರುವ ಸಂಗತಿ( ಮೊಗ್ಗು)ಗಳನ್ನು ಹಂಚಿಕೊಳ್ಳಬೇಕು. ಇದರಿಂದ ನಿಮ್ಮ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ.

2021ರ ಭವಿಷ್ಯವಾಣಿಗಳು:

2021ರ ಭವಿಷ್ಯವಾಣಿಗಳು:

ಇವುಗಳು ಹಾಸ್ಯಸ್ಪದ, ಗಂಭೀರ ಅಥವಾ ಸಿಹಿಯಾಗಿರಬಹುದು. ಆದರೆ ನಾವು ಸಿಲ್ಲಿ ವಿಚಾರವನ್ನು ಅನ್ನು ಶಿಫಾರಸು ಮಾಡುತ್ತೇವೆ. ಪ್ರತಿ ಅತಿಥಿಯು 2021ಕ್ಕೆ ಯಾವುದೇ ವ್ಯಕ್ತಿಯ ಕುರಿತು ಭವಿಷ್ಯ ನುಡಿಯಿರಿ. ಅವುಗಳನ್ನು ಬರೆಯಿರಿ ಮತ್ತು ಮುಂದಿನ ವರ್ಷದ ಮುನ್ನಾದಿನದಂದು, ಅಂದ್ರೆ 2022ರ ಹೊಸ ವರ್ಷಾಚರಣೆಯ ಸಮಯದಲ್ಲಿ ಈ ಭವಿಷ್ಯವಾಣಿಗಳು ನಿಜವಾಗಿದೆಯೇ ಎಂದು ನೋಡಬಹುದು.

2021ರ ನಿರ್ಣಯಗಳು:

2021 ಕ್ಕೆ ಒಂದು ವೈಯಕ್ತಿಕ ಗುರಿಯನ್ನು ಬಹಿರಂಗಪಡಿಸುವಂತೆ ಪ್ರತಿಯೊಬ್ಬರಲ್ಲೂ ಕೇಳಿ.ನಮ್ಮ ಗುರಿಗಳನ್ನು ಹೇಳಿಕೊಂಡಾಗ ಅದನ್ನು ಸಾಧಿಸಲು ನಮಗೆ ಸಹಾಯ ಆಗುತ್ತದೆ.

21ಕ್ಕೆ ವಿಶ್ ಮಾಡಿ:

ಹೊಸ ವರ್ಷದ ಶುಭಾಶಯಗಳನ್ನು ಹಂಚಿಕೊಳ್ಳಲು ತಮ್ಮ ಗುಂಪಿನ ಪ್ರತಿಯೊಂದು ಸದಸ್ಯರನ್ನು ಆಹ್ವಾನಿಸಿ. ಇವುಗಳನ್ನು ನೀವು ಆನ್‌ಲೈನ್ ವರ್ಡ್ ಕ್ಲೌಡ್ ಜನರೇಟರ್‌ನಲ್ಲಿ ಪ್ಲಗ್ ಮಾಡಬಹುದು, ನಂತರ ವರ್ಷಪೂರ್ತಿ ಸ್ಫೂರ್ತಿಗಾಗಿ ನಿಮ್ಮ ಮನೆಯಲ್ಲಿ ಮುದ್ರಿಸಿ ಮತ್ತು ಅಂಟಿಸಬಹುದು.

ನಿಮ್ಮ ಹೊಸ ವರ್ಷದ ವರ್ಚುವಲ್ ಪಾರ್ಟಿಗಾಗಿ ಮಕ್ಕಳ ಸ್ನೇಹಿ ಚಟುವಟಿಕೆಗಳು:

ನಿಮ್ಮ ಹೊಸ ವರ್ಷದ ವರ್ಚುವಲ್ ಪಾರ್ಟಿಗಾಗಿ ಮಕ್ಕಳ ಸ್ನೇಹಿ ಚಟುವಟಿಕೆಗಳು:

ಬ್ಯಾಕ್‌ಡ್ರಾಪ್ ಸವಾಲು:

ಅವಳಿ ಮಕ್ಕಳು ಮತ್ತು ಹದಿಹರೆಯದವರನ್ನು ಸೃಜನಶೀಲರಾಗಿಸಲು ಇದೊಂದು ಉತ್ತಮ ಮಾರ್ಗ. ನಿಮ್ಮ ಗೆಳೆಯರಿಗೆ 2021ಕ್ಕೆ ಶುಭಾಶಯ ಕೋರುವ ದೊಡ್ಡ ದೊಡ್ಡ ಅಕ್ಷರಗಳು, ಆಕಾಶಬುಟ್ಟಿಗಳು, ಪೇಪರ್ ಕಟ್ಟಿಂಗ್‌ಗಳನ್ನು ತಯಾರಿಸಲು ಹೇಳಿ. ಹೊಸವರ್ಷದ ಹಿಂದಿನ ದಿನ ರಾತ್ರಿ ಈ ಕಟ್ಟಿಂಗ್‌ಗಳನ್ನು ನಿಮ್ಮ ಮನೆಯಲ್ಲಿ ಅಂದ್ರೆ ನೀವು ವರ್ಚುವಲ್ ಆಗಿ ಕಾಣಿಸಿಕೊಳ್ಳುವ ಪರದೆಯ ಹಿಂದೆ ಹಾಕಿ.

ಫೋಟೋ ಬೂತ್ ಮಾಂಟೇಜ್ :

ನಿಮ್ಮ ಮಗುವಿಗೆ ಡ್ರೆಸ್ ಮಾಡಿಕೊಳ್ಳುವುದು ಇಷ್ಟವಾಗಿದ್ದರೆ ಈ ಚಟುವಟಿಕೆ ಹೇಳಿ ಮಾಡಿಸಿದ್ದು. ನಿಮ್ಮ ಸ್ನೇಹಿತರಿಗೆ 3-4 ತರಹದ ಉಡುಗೆಗಳನ್ನು ತೊಟ್ಟು ರ‍್ಯಾಂಪ್ ವಾಕ್ ಮಾಡಲು ಹೇಳಿ. ಆ ಉಡುಗೆಯನ್ನು ಅವರೇ ತಯಾರಿಸಬೇಕು. ಅದು ವಿಭಿನ್ನಶೈಲಿಯಲ್ಲಿರಬೇಕು. ಪ್ರತಿಯೊಬ್ಬರೂ ಉಡುಗೆ ತೊಟ್ಟು ವಾಕ್ ಮಾಡುವಾಗ ಎಲ್ಲರ ಫೋಟೋವನ್ನು ಸ್ಕ್ರೀನ್ ಶಾಟ್ ತೆಗೆದಿಡಿ. ಎಲ್ಲರ ಸರದಿ ಮುಗಿದಾಗ ನಿಮ್ಮ ಬಳ ಸಾಕಷ್ಟು ನಗು ತರಿಸುವಂತಹ ಫೋಟೋಗಳಿರುತ್ತವೆ ಅಷ್ಟೇ ಅಲ್ಲ ಒಳ್ಳೆಯ ನೆನಪುಗಳಿರುತ್ತವೆ.

ನೃತ್ಯ ವಿರಾಮ:

ನಿರಂತರವಾಗಿ ಕೇವಲ ಚಟುವಟಿಕೆ ಮಾಡುವುದು ಅಂದ್ರೆ ಯಾರಿಗಾದ್ರೂ ಬೋರ್ ಅನಿಸಬಹುದು. ಅದಕ್ಕಾಗಿ ನಿಮ್ಮ ಮಗುವಿಗೆ ಮುಂಚಿತವಾಗಿ ಒಂದೆರಡು ಲವಲವಿಕೆಯ ಹಾಡುಗಳನ್ನು ಆಯ್ಕೆ ಮಾಡಿಕೊಂಡು ಡ್ಯಾನ್ಸ್ಗೆ ರೆಡಿಯಾಗಿರಿ. ಇದು ಪ್ರತಿಯೊಬ್ಬರನ್ನು ಕುಪ್ಪಳಿಸುವಂತೆ ಮಾಡುತ್ತದೆ.

 ರಾತ್ರಿ ಆಟ:

ರಾತ್ರಿ ಆಟ:

ಇದೊಂದು ಆಟ. ನಿಮ್ಮ ಮಕ್ಕಳಿಗೆ ನಿಮ್ಮ ಮನೆಯ ಬಗ್ಗೆ ಎಷ್ಟು ಗೊತ್ತು ಎಂದು ಅರಿಯಲು ಸಹಾಯವಾಗುತ್ತದೆ. ಅಂದ್ರೆ ನೀವು ನಿಮ್ಮ ಮಕ್ಕಳಿಗೆ ಕೆಲವೊಂದು ಸಾಮಗ್ರಿಗಳನ್ನು ಹುಡುಕಿ ತರಲು ಹೇಳಬೇಕು. ಕನಿಷ್ಠ ಅಂದರೂ 20 ಸಾಮಾಗ್ರಿಗಳಾಗಿರಬೇಕು. ಅದಕ್ಕೆ ಸಮಯಕಾಶವೂ ನೀಡಬೇಕು. ಇದರಿಂದ ಮನೆಯವರೆಲ್ಲರೂ ಗೇಮ್‌ನಲ್ಲಿ ಪಾಲ್ಗೊಳ್ಳುತ್ತಾರೆ. ನಿಮ್ಮ ಮಕ್ಕಳಿಗೂ ಸ್ವಲ್ಪ ಅರಿವು ಮೂಡುತ್ತೆ.

ತೋರಿಸಿ ಮತ್ತು ಹೇಳಿ:

ಪ್ರತಿ ಅತಿಥಿಯು ತಮ್ಮ ಮನೆಯವರನ್ನು ಬಿಟ್ಟು ಹೊರಗಿನವರಿಗೆ ತಿಳಿಯದ ಯಾವುದಾದರೊಂದು ವಸ್ತುವನ್ನು ತೋರಿಸಿ, ಅದರ ಬಗ್ಗೆ ಹೇಳಬೇಕು. ಉದಾಹರಣೆಗೆ, ನಿಮ್ಮ ಮಗು ನೆಚ್ಚಿನ ಆಟಿಕೆ ತೋರಿಸಬಹುದು...ಮತ್ತು ನಿಮ್ಮ ಮೊಟ್ಟಮೊದಲ ಬಣ್ಣ ಮಾಸಿದ ಟೀ ಶರ್ಟ್ ಅನ್ನು ನೀವು ಪ್ರದರ್ಶಿಸಬಹುದು.

ಪಾರ್ಟಿಗೆ ಡ್ರೆಸ್ ಥೀಮ್:

ಹೊಸವರ್ಷಕ್ಕೆ ಹೊಸ ಡ್ರೆಸ್ ಥೀಮ್ ಆಯ್ಕೆ ಮಾಡಿ. ಥೀಮ್ ಆಯ್ಕೆ ಮಾಡಲು ನಿಮ್ಮ ಮಗು ನಿಮಗೆ ಸಹಾಯ ಮಾಡಿ. ಡಿಸ್ಕೋ, 80ರ ದಶಕದ, ನಿಮ್ಮ ಮಗುವಿನ ನೆಚ್ಚಿನ ಕಾಲ್ಪನಿಕ ಪಾತ್ರಗಳು...ಅಥವಾ ಪೈಜಾಮಾ ಹೀಗೆ ಯಾವುದೂ ಬೇಕಾದರೂ ಆಯ್ಕೆ ಮಾಡಬಹುದು.

English summary

Ways to Celebrate a Virtual New Year’s Eve Party During COVID-19

Here we told about Best Ways to Celebrate the New Year in Kannada, Read on,
X