Just In
Don't Miss
- News
Mood Of The Nation ಸಮೀಕ್ಷೆ: ಈಗ ಚುನಾವಣೆ ನಡೆದರೂ ಗೆಲ್ಲೋದು ಎನ್ಡಿಎ
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Movies
ಬಾಂಬೆ ಹೈಕೋರ್ಟ್ ನಲ್ಲಿ ಹಿನ್ನಡೆ: ಸಂಕಷ್ಟದಲ್ಲಿ ಸೋನು ಸೂದ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಎಲ್ಲರ ಹುಬ್ಬೇರಿಸುತ್ತಿದೆ 72 ವರ್ಷದ ಇಳಿವಯಸ್ಸಿನ ಮಹಿಳೆಯ ಜಿಮ್ ಕಸರತ್ತು!
ಎಪ್ಪತ್ತೆರಡರ ಹರೆಯ ಎಂದರೆ ದೇಹದಲ್ಲಿ ಎಲ್ಲಾ ರೀತಿಯ ಶಕ್ತಿಯು ಕುಂದಿರುತ್ತವೆ. ನಮ್ಮ ಕೆಲಸವನ್ನು ನಾವು ಹೇಗೋ ಮಾಡಿಕೊಂಡು ಹೋಗುತ್ತೇವೆ. ವೃದ್ಧಾಪ್ಯದ ಮಧ್ಯದಲ್ಲಿ ಇರುವ ಈ ವಯಸ್ಸಿನಲ್ಲಿ ಸಾಕಷ್ಟು ಜನ ಹಾಸಿಗೆಯನ್ನು ಹಿಡಿದ ಅಥವಾ ವಿಧಿವಶರಾಗಿರುವುದನ್ನು ನಾವು ಕಾಣಬಹುದು. ಹಾಗಾಗಿಯೇ 70ರ ನಂತರದ ವಯಸ್ಸು ಎಂದರೆ ಇತರರ ಮೇಲೆ ಅವಲಂಭಿತರಾಗಿರುವ ಸಮಯ. ಈ ಸಮಯದಲ್ಲಿ ಸಾಮಾನ್ಯವಾಗಿ ವೃದ್ಧರು ದೇವರ ನಾಮ, ಅಷ್ಟೋತ್ತರಗಳನ್ನು ಓದುತ್ತಾ ಮನೆಯಲ್ಲಿ ಆದಷ್ಟು ವಿಶ್ರಾಂತಿಯನ್ನು ಪಡೆಯುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಮಾತ್ರ ಈ ಎಲ್ಲಾ ಸಂಗತಿಗಳಿಗೂ ತದ್ವಿರುದ್ಧವಾದ ವರ್ತನೆಯನ್ನು ತೋರುತ್ತಿದ್ದಾಳೆ.
ವಯಸ್ಸು ದೇಹಕ್ಕೆ ಹೊರತು ಚೈತನ್ಯಕ್ಕಲ್ಲ
ಅವಳ ಚೈತನ್ಯ ಹಾಗೂ ಕ್ರಿಯಾಶೀಲತೆ ಅನ್ನು ನೋಡಿದರೆ ಆಕೆಗೆ ಈಗ 20ರ ಹರೆಯ ಎಂದು ತೋರುತ್ತದೆ. ಆದರೆ ಅವಳ ನಿಜವಾದ ವಯಸ್ಸು 72. ಜೀವನದಲ್ಲಿ ಎಲ್ಲವೂ ಮುಗಿಯಿತು ಎನ್ನುವ ಅವಧಿಯಲ್ಲಿ ಅವಳು ತೋರುವ ಸಾಹಸಗಳು ಹಾಗೂ ದೇಹ ದಂಡನೆಯ ಪರಿಯನ್ನು ನೋಡಿದರೆ ಯುವಕರಿಗೆ ನಾಚಿಕೆ ಆಗುವುದರಲ್ಲಿ ಸಂದೇಹವಿಲ್ಲ. ಯುವಕರಂತೆ ನಾನು. ನನ್ನ ದೇಹಕ್ಕೆ ವಯಸ್ಸಾಗಿದೆ ಹೊರತು ನನ್ನ ಚೈತನ್ಯಗಳಿಗಲ್ಲ ಎನ್ನುವ ಅವಳ ದೃಢತೆಯು ಇನ್ನಷ್ಟು ಕಸರತ್ತುಗಳಿಗೆ ಉತ್ತೇಜನ ನೀಡುವುದು.
ಚಿತ್ರ ಕೃಪೆ: ಎಬಿಸಿ ನ್ಯೂಸ್
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿರುವ ಒಂದು ವೃದ್ಧೆಯ ಜಿಮ್ ಕಸರತ್ತುಗಳು ಎಲ್ಲರ ಹುಬ್ಬನ್ನು ಏರಿಸುವಂತೆ ಇದೆ. ಆಕೆ ತನ್ನ ವಯಸ್ಸಿನಲ್ಲಿ ವೃದ್ಧೆಯಾಗಿರಬಹುದು. ಆದರೆ ಅವಳು ಕೈಗೊಳ್ಳುವ ಜಿಮ್ ಕಸರತ್ತುಗಳು 30ರ ಆಸು ಪಾಸಿನ ವ್ಯಕ್ತಿಗಳು ಮಾಡುವಂತಿದೆ. ವಿಭಿನ್ನ ಕಸರತ್ತುಗಳನ್ನು ಮಾಡುವುದರ ಮೂಲಕ ತನ್ನ ಆರೋಗ್ಯ ಹಾಗೂ ಫಿಟ್ ನೆಸ್ ಅನ್ನು ಕಾಯ್ದುಕೊಂಡಿದ್ದಾಳೆ.
ಪ್ರಾಧ್ಯಾಪಕಿಯ ಜಿಮ್ ಮೋಡಿ ನೋಡಿ!
ಈಕೆಯ ಸಾಹಸಗಳನ್ನು ವೀಡಿಯೋ ಮಾಡಿ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತಿದ್ದಂತೆಯೇ 12 ಗಂಟೆಯೊಳಗೆ 1.2 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ. ಆ ವೀಡಿಯೋ ಒಂದರಲ್ಲಿ ಕಾಣಿಸಿಕೊಂಡ ಮಹಿಳೆಯ ಹೆಸರು ಲಾರೆನ್ ಬ್ರೊಝೋನ್. 72 ವರ್ಷದ ಈಕೆ ವೃತ್ತಿಯಲ್ಲಿ ಪ್ರಾಧ್ಯಾಪಕಿ. ತನ್ನ ಬಿಡುವಿನ ಸಮಯದಲ್ಲಿ ಜಿಮ್ ಕಸರತ್ತುಗಳನ್ನು ಮಾಡುವ ಮೂಲಕ ದೇಹವನ್ನು ದಂಡಿಸುತ್ತಾರೆ. ಇವರು ಆರಂಭದಲ್ಲಿ ಲಘುವಾದ ವ್ಯಾಯಾಮ ಮಾಡುವುದರ ಮೂಲಕ ಜಿಮ್ ಬಗ್ಗೆ ಆಸಕ್ತಿಯನ್ನು ಪಡೆದುಕೊಂಡರು. ನಂತರ ಹೆಚ್ಚಿನ ಆಸಕ್ತಿಯನ್ನು ತೋರುವುದರ ಮೂಲಕ ಅದರಲ್ಲೊಂದು ಗುರಿಯನ್ನು ಸಾಧಿಸಿದ್ದಾರೆ. ಅವರ ಕಸರತ್ತು ಹಾಗೂ ನಿರಂತರ ಪರಿಶ್ರಮವು ಇದೀಗ ಎಲ್ಲೆ ಮೀರಿದ ಪರಿಣಿತಿಯನ್ನು ಪಡೆಯಲು ಸಹಾಯವಾಗಿದೆ.
ಅವರು ಜಿಮ್ ಕಸರತ್ತುಗಳಲ್ಲಿ ತೂಕದ ಹಲಗೆಯನ್ನು ಎತ್ತುವುದು, ಬೋಸ್ ಬಾಲ್, ಪುಷ್ ಅಪ್‍ಗಳು, ಬೆಂಚ್ ಪ್ರೆಸ್ ಮತ್ತು ವಿಪರೀತ ಹಲಗೆಯನ್ನು ಎತ್ತುವುದರ ಮೂಲಕ ಅನೇಕ ಕೆಲಸವನ್ನು ಮಾಡುತ್ತಾರೆ. ಇವರ ಈ ಕೆಲಸದ ಪರಿ ಹಾಗೂ ದೇಹ ದಂಡನೆಯನ್ನು ನೋಡುತ್ತಿದ್ದರೆ ಅವರಲ್ಲಿ ಎಷ್ಟು ಶ್ರದ್ಧೆ ಹಾಗೂ ಏಕಾಗ್ರತೆ ಇದೆ ಎನ್ನುವುದು ಶೋಭಿತವಾಗುವುದು.
ಸುಕ್ಕಾಗದ ಚರ್ಮ
72ರ ವಯಸ್ಸಿನಲ್ಲಿ ಸಾಮಾನ್ಯವಾಗಿ ವ್ಯಕ್ತಿಯ ಚರ್ಮವು ತನ್ನ ಬಿಗಿತವನ್ನು ಕಳೆದುಕೊಂಡಿರುತ್ತದೆ. ಜೋಲುವ ಹಾಗೂ ಬೊಜ್ಜಿನಿಂದ ಕೂಡಿರುವ ಸ್ನಾಯುಗಳನ್ನು ಹೊಂದಿರುತ್ತಾರೆ. ಆದರೆ ಈಕೆ ಮಾತ್ರ ಇವೆಲ್ಲದಕ್ಕೂ ಅಪವಾದ ಎನ್ನುವಂತಿದ್ದಾಳೆ. ತನ್ನ ವಯಸ್ಸು 72 ಆದರೂ ಇವರ ತ್ವಚೆ ಹಾಗೂ ಮಾಂಸ ಕಂಡಗಳು ಇಂದಿಗೂ ಉತ್ತಮ ರೀತಿಯಲ್ಲಿ ಇರುವುದು ಹಾಗೂ ಹೊಳಪಿನಿಂದ ಕೂಡಿರುವುದನ್ನು ನಾವು ಕಾಣಬಹುದು.
ಇಳಿ ವಯಸ್ಸಿನಲ್ಲಿ ತೋರುವ ಈ ಸಾಧನೆಯು ಯುವಕರಿಗೆ ಅತ್ಯುತ್ತಮ ಪ್ರೇರಣೆ ಆಗುವುದರಲ್ಲಿ ಸಂದೇಹವಿಲ್ಲ. ಸ್ವಲ್ಪ ದೂರ ನಡೆದರೆ ಕಾಲು ನೋವು, ಅರ್ಧ ಗಂಟೆ ನಿಂತಿದ್ದರೆ ಸೊಂಟ ನೋವು ಎನ್ನುವವರಿಗೆಲ್ಲಾ ಈ ತಾಯಿ ಅದ್ಭುತ ಪ್ರೇರಣಾ ಮೂರ್ತಿ. ಈಕೆಯ ಹಾಗೆ ಕಸರತ್ತುಗಳನ್ನು ಮಾಡಲು ಸಾಧ್ಯವಾಗದಿದ್ದರೂ, ನಿಮ್ಮ ಬಿಡುವಾದ ಸಮಯದಲ್ಲಿ ಸಾಮಾನ್ಯವಾದ ದೈಹಿಕ ಕಸರತ್ತುಗಳನ್ನು ಮಾಡಿ. ನಿಮ್ಮ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಿ.