For Quick Alerts
ALLOW NOTIFICATIONS  
For Daily Alerts

ನಿಮಗೆ 30ವರ್ಷ ತುಂಬುವ ಮೊದಲು ಈ ಹತ್ತು ಕೆಲಸಗಳನ್ನು ಮಾಡಲು ಮರೆಯದಿರಿ

|

ಇರುವೊಂದೇ ಜೀವನ. ಈ ಜೀವನವನ್ನು ಅರ್ಥಪೂರ್ಣವಾಗಿ ಜೊತೆಗೆ ಸಂಪೂರ್ಣವಾಗಿ ಜೀವಿಸುವುದು ನಮ್ಮ ಕೈಯಲ್ಲೇ ಇದೆ. ವಿಧ್ಯಾಭ್ಯಾಸ ಮುಗಿದು, ಉದ್ಯೋಗ ಸಿಗುವವರೆಗಿನ ಹೋರಾಟ ಒಂದು ಕಡೆಯಾದರೆ, ಅದರ ನಂತರದ ಬದುಕು ಮತ್ತೊಂದೆಡೆ. ಆದರೆ, ನಿಮಗೆ 30ವರ್ಷ ವಯಸ್ಸು ತುಂಬುವುದರೊಳಗೆ ಕೆಲವೊಂದು ವಿಚಾರಗಳನ್ನು ಮಾಡಬೇಕು. ಈ ಅನುಭವಗಳೇ ಮುಂದಿನ ಜೀವನಕ್ಕೆ ಸಹಕಾರಿ. ಹಾಗಾದರೆ, ಅಂತಹ ಕೆಲಸಗಳಾವುವು ಎಂಬುದನ್ನು ಇಲ್ಲಿ ಹೇಳಿದ್ದೇವೆ.

ನಿಮಗೆ 30ವರ್ಷ ತುಂಬುವೊದರೊಳಗೆ ಮಾಡಬೇಕಾದ ಕೆಲಸಗಳನ್ನು ಈ ಕೆಳಗೆ ನೀಡಲಾಗಿದೆ:

ವಿಶ್ವದ ಒಂದು ಅದ್ಭುತವನ್ನಾದರೂ ನೋಡಿ:

ವಿಶ್ವದ ಒಂದು ಅದ್ಭುತವನ್ನಾದರೂ ನೋಡಿ:

ಮೂವತ್ತು ತುಂಬುವ ಮುನ್ನ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದನ್ನಾದರೂ, ಭೇಟಿ ಮಾಡಿ. ಒಮ್ಮೆ ನೀವು ಪ್ರಪಂಚದ ಅದ್ಭುತಗಳನ್ನು ಭೇಟಿ ಮಾಡಿದರೆ, ಆ ಸ್ಥಳದ ಇತಿಹಾಸ, ನಾವೀನ್ಯತೆಗಳು ಮತ್ತು ಆ ವಿಷಯಗಳನ್ನು ಜಗತ್ತಿನಲ್ಲಿ ಏಕೆ ಶ್ರೇಷ್ಠವೆಂದು ಪರಿಗಣಿಸಲಾಗಿದೆ ಎಂಬುದರ ಕುರಿತು ಸಾಕಷ್ಟು ತಿಳಿದುಕೊಳ್ಳುತ್ತೀರಿ.

ಬೆಟ್ಟವನ್ನೇರಿ:

ಬೆಟ್ಟವನ್ನೇರಿ:

ಪರ್ವತವನ್ನು ಏರಲು ಸಾಕಷ್ಟು ಧೈರ್ಯ ಮತ್ತು ಶಕ್ತಿ ಬೇಕು. ಈ ಚಟುವಟಿಕೆಯು ನಿಸರ್ಗಕ್ಕೆ ನಿಮ್ಮ ಹೊಂದಿಕೊಳ್ಳುವಿಕೆಯನ್ನ ಹೆಚ್ಚಿಸುವುದಲ್ಲದೇ, ನಿಮ್ಮ ಏಕಾಗ್ರತೆ ಮತ್ತ ನಿರ್ಣಯವನ್ನು ಹೆಚ್ಚಿಸುತ್ತದೆ.

ಏಕಾಂಗಿ ಪ್ರವಾಸ ಕೈಗೊಳ್ಳಿ:

ಏಕಾಂಗಿ ಪ್ರವಾಸ ಕೈಗೊಳ್ಳಿ:

ಏಕಾಂಗಿಯಾಗಿ ಟ್ರಿಪ್ ಮಾಡುವ ಸಾಹಸದ ಹೊರತಾಗಿ, ಇದು ನಿಮಗೆ ಬಹಳಷ್ಟು ಕಲಿಸುತ್ತದೆ. ಹಣಕಾಸಿನ ನಿರ್ವಹಣೆಯಿಂದ ಹಿಡಿದು, ಅಜ್ಞಾತ ಸ್ಥಳದಲ್ಲಿನ ಹೋರಾಟಗಳು, ಯಾವುದೇ ಸ್ನೇಹಿತರು ಮತ್ತು ಕುಟುಂಬವಿಲ್ಲದೇ ಸಂತೋಷವಾಗಿರುವುದು ಹೇಗೆ ಎಲ್ಲವನ್ನೂ ಹೇಳಿಕೊಡುತ್ತದೆ ಮುಖ್ಯವಾಗಿ ಸಾಕಷ್ಟು ಆತ್ಮಾವಲೋಕನಕ್ಕೆ ಸಹಾಯಕ.

ಹೂಡಿಕೆ ಮಾಡಿ:

ಹೂಡಿಕೆ ಮಾಡಿ:

ಹೂಡಿಕೆಯ ಮಹತ್ವವನ್ನು ಅರಿತುಕೊಳ್ಳುವುದು ಬಹಳ ಮುಖ್ಯ. ನೀವು ಈಗ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ಮುಂಬರುವ ಜೀವನವು ಸುಗಮವಾಗಿರುತ್ತದೆ. ಹಣವನ್ನು ಉಳಿಸುವ ಅಭ್ಯಾಸ ಮಾಡಿಕೊಳ್ಳಿ.

ಸಂಗೀತ ಕಲಿಯಿರಿ:

ಸಂಗೀತ ಕಲಿಯಿರಿ:

ನೀವು ಉದ್ಯೋಗ ಪ್ರಾರಂಭಿಸಿದ ನಂತರ, ನಿಮ್ಮಲ್ಲಿ ಕಲಿಯುವ ಉತ್ಸಾಹ ಕಡಿಮೆಯಾಗುತ್ತದೆ. ಆದರೆ, ನೀವು ಯಾವುದಾದರೊಂದು ಸಂಗೀತ ಉಪಕರಣವನ್ನು ಕಲಿಯಲು ಪ್ರಾರಂಭಿಸಿ, ಇದು ನಿಮ್ಮನ್ನು ಉಲ್ಲಾಸದಾಯಕವಾಗಿರಿಸುತ್ತದೆ ಮತ್ತು ಹೊಸ ವಿಷಯಗಳನ್ನು ಕಲಿಯುವ ನಿಮ್ಮ ಬಯಕೆ ನಿಮಮ್ನ್ನು ರಿಫ್ರೆಶ್ ಮಾಡುತ್ತದೆ. ಮುಂದಿನ ಜೀವನದಲ್ಲಿ ಬರುವ ತಿರುವುಗಳನ್ನು ಎದುರಸಲು ಸಹಾಯ ಮಾಡುತ್ತದೆ.

ಟ್ಯಾಟೂ ಹಾಕಿಸಿಕೊಳ್ಳಿ:

ಟ್ಯಾಟೂ ಹಾಕಿಸಿಕೊಳ್ಳಿ:

ಹಚ್ಚೆ ಅಥವಾ ಟ್ಯಾಟೂ ಒಂದು ನಂಬಿಕೆ. ಇದು ನೋವಿನ ಭಯದಿಂದ ಕೂಡಿರುತ್ತದೆ. ಆದರೆ, ಇದನ್ನು ಹಾಕಿಸಿಕೊಳ್ಳುವುದರಿಂದ, ನಿಮ್ಮ ಭಯವನ್ನು ಹೋಗಲಾಡಿಸುವ ಶಕ್ತಿಯನ್ನು ನೀಡುತ್ತದೆ. ಯಾವುದನ್ನಾದರೂ ಬಲವಾಗಿ ನಂಬುವುದರಿಂದ, ಪವಾಡಸದೃಶವಾಗಿ ಅದು ನಡೆದುಬಿಡುತ್ತದೆ.

ಪೂರ್ಣ ದೇಹ ತಪಾಸಣೆ ಮಾಡಿಸಿ:

ಪೂರ್ಣ ದೇಹ ತಪಾಸಣೆ ಮಾಡಿಸಿ:

ಚಾಲ್ತಿಯಲ್ಲಿರುವ ಆರೋಗ್ಯ ಸಮಸ್ಯೆಯನ್ನು ನಿಯಮಿತವಾಗಿ ತಪಾಸಣೆ ಮಾಡಿಸುವುದರಿಂದ ಮಾತ್ರ ಸರಿಪಡಿಸಬಹುದು. ಆರೋಗ್ಯಕರ ದೇಹದೊಂದಿಗೆ 30ರ ದಶಕ್ಕೆ ಕಾಲಿಡುವುದು ಮುಖ್ಯವಾಗಿದೆ. ಅದಕ್ಕಾಗಿ ದೇಹದೊಳಗೆ ನಿಖರವಾಗಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು.

ಐಷಾರಾಮಿ ಉಡುಗೊರೆಯನ್ನು ನಿಮಗಾಗಿ ಖರೀದಿಸಿ:

ಐಷಾರಾಮಿ ಉಡುಗೊರೆಯನ್ನು ನಿಮಗಾಗಿ ಖರೀದಿಸಿ:

ಪ್ರತಿಯೊಬ್ಬರಲ್ಲೂ ನಾವೇನಾದರೂ ದುಬಾರಿಯಾದ ವಸ್ತುವನ್ನು ಖರೀದಿಸಬೇಕು ಎಂಬ ಆಸೆಯಿರುತ್ತದೆ. ಆದ್ದರಿಂದ ಅದನ್ನು ಮೂವತ್ತು ತುಂಬುವುದೊಳಗೆ ನೀವೇ ಸೆಲ್ಫ್ ಗಿಫ್ಟ್ ನೀಡಿ. ಇದಕ್ಕಾಗಿ ಉಳಿತಾಯ ಮಾಡಿಕೊಂಡು, ನಿಮ್ಮ ಕನಸಿನ ಉಡುಗೊರೆಯನ್ನು ಖರೀದಿಸಿ.

ಹೊಸ ತಿನಿಸುಗಳ ರುಚಿಯನ್ನು ಬೆಳೆಸಿಕೊಳ್ಳಿ:

ಹೊಸ ತಿನಿಸುಗಳ ರುಚಿಯನ್ನು ಬೆಳೆಸಿಕೊಳ್ಳಿ:

ಹೊಸ ಪಾಕಪದ್ದಧತಿಯ ರುಚಿ ಅರಿವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಆದರೆ, ಅಂತಿಮವಾಗಿ ಅದನ್ನು ಪ್ರೀತಿಸಲು ಪ್ರಾರಂಭಿಸುತ್ತೀರಿ. ಇದಲ್ಲದೇ, ಇದರಿಂದ ವಿವಿಧ ರೀತಿಯ ಪದಾರ್ಥಗಳನ್ನು ಸೇವಿಸಲು ಮತ್ತು ಅಡುಗೆಮನೆಯನ್ನು ಆವಿಷ್ಕರಿಸಲು ವಿವಿಧ ವಿಧಾನಗಳನ್ನು ತಿಳಿಯುವಿರಿ.

ಭಾಷೆ ಗೊತ್ತಿಲ್ಲದ ಕಡೆ ಪ್ರಯಾಣ ಮಾಡಿ:

ಭಾಷೆ ಗೊತ್ತಿಲ್ಲದ ಕಡೆ ಪ್ರಯಾಣ ಮಾಡಿ:

ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಮಾತೇ ಇದೆ. ಹೊಸಭಾಷೆಯನ್ನು ಕಲಿಯಲು ಸಾಕಷ್ಟು ದಾರಿಗಳಿವೆ. ಆದರೆ, ಅದನ್ನು ಪಾಲಿಸುವವರು ಬಹಳ ವಿರಳ. ಬದಲಾಗಿ, ಇದಕ್ಕಾಗಿ ಭಾಷೆ ಗೊತ್ತಿಲ್ಲದ ಸ್ಥಳಕ್ಕೆ ಪ್ರಯಾಣಿಸಿ ಮತ್ತು ಸ್ಥಳೀಯರು ಏನು ಮಾತನಾಡುತ್ತಿದ್ದಾರೆಂದು ತಿಳಿಯದೇ ಹೇಗೆ ನಿರ್ವಹಿಸಬೇಕೆಂದು ಕಲಿಯುತ್ತೀರಿ.

Read more about: life ಜೀವನ
English summary

Things to Do Before You Turn 30 This year in Kannada

Here we talking about Things to Do Before You Turn 30 This year in Kannada, read on
Story first published: Thursday, January 6, 2022, 10:48 [IST]
X
Desktop Bottom Promotion