For Quick Alerts
ALLOW NOTIFICATIONS  
For Daily Alerts

ಗೂಗಲ್‌ ಮಾತೃಸಂಸ್ಥೆ ಆಲ್ಫಾಬೆಟ್‌ ಸಿಇಓ ಆದ ಸುಂದರ್‌ ಪಿಚೈ ಕುರಿತ ಆಸಕ್ತಿಕರ ಸಂಗತಿಗಳು

|

ಭಾರತದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಸುಂದರ್‌ ಪಿಚೈ ಇಂದು ಗೂಗಲ್‌ನ ಮಾತೃಸಂಸ್ಥೆ ಆಲ್ಭಾಬೆಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ. ಪ್ರತಿಭೆ, ಪರಿಶ್ರಮವಿದ್ದರೆ ದೊಡ್ಡ ವ್ಯಕ್ತಿಯಾಗಿ ಬೆಳೆಯಬಹುದು ಎಂಬುವುದಕ್ಕೆ ಸುಂದರ್ ಪಿಚೈ ಸ್ಪೂರ್ತಿದಾಯಕ. ಇವರು ಬರೀ ಗೂಗಲ್‌ಗೆ ಸಿಇಒ ಆಗಿದ್ದಾಗ ಇವರ ಪ್ರತಿದಿನದ ಸಂಬಳವೇ 3.5 ಕೋಟಿ ಇತ್ತು. ಇದೀಗ ಗೂಗಲ್‌ನ ಮಾತೃಸಂಸ್ಥೆಗೇ ಇವರೇ ಬಿಗ್‌ಬಾಸ್‌ ಎಂದ ಮೇಲೆ ನೀವೇ ಊಹಿಸಿ.

 

ಗೂಗಲ್‌ ಸಹ ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸೆರ್ಗಿ ಬ್ರಿನ್‌ 'ಆಲ್ಬಾಬೆಟ್' ಮುಖ್ಯಸ್ಥರ ಜವಾಬ್ದಾರಿಯಿಂದ ಹೊರಗೆ ಬಂದ ಮೇಲೆ ಆ ಪ್ರಭಾವ ಸ್ಥಾನವನ್ನು ಸುಂದರ್‌ ಪಿಚೈ ಅಲಂಕರಿಸಿದ್ದಾರೆ. ಇಲ್ಲಿ ನಾವು ಸುಂದರ್‌ ಪಿಚೈ ಕುರಿತು ಕೆಲವೊಂದು ಆಸಕ್ತಿಕರ ಸಂಗತಿಗಳನ್ನು ಹೇಳಿದ್ದೇವೆ, ಅವರ ಕುರಿತು ಈ ಸಂಗತಿಗಳು ತಿಳಿದ ಮೇಲೆ ನಿಮಗೂ ಸ್ಪೂರ್ತಿ ಸಿಗುವುದು ನೋಡಿ:

'ಆಲ್ಭಾಬೆಟ್‌ ಸಿಎಒ

'ಆಲ್ಭಾಬೆಟ್‌ ಸಿಎಒ

'ಆಲ್ಭಾಬೆಟ್‌' ಜವಾಬ್ದಾರಿಯಿಂದ ಹೊರಗೆ ಬಂದಿರುವ ಲ್ಯಾರಿ ಪೇಜ್ ಮತ್ತು ಸೆರ್ಗಿ ಬ್ರಿನ್‌ ಗೂಗಲ್ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ 'ಆಡಳಿತ ಸ್ವರೂಪವನ್ನು ಮತ್ತಷ್ಟು ಸರಳಗೊಳಿಸಲು ಇದು ಸಕಾಲ, ಆಲ್ಭಾಬೆಟ್ ಹಾಗೂ ಗೂಗಲ್‌ ಸಂಸ್ಥೆಗೆ ಎರಡು ಪ್ರತ್ಯೇಜ ಸಿಇಒಗಳು ಹಾಗೂ ಒಬ್ಬ ಅಧ್ಯಕ್ಷನ ಅಗ್ಯತವಿಲ್ಲ, ಗೂಗಲ್ ಹಾಗೂ ಆಲ್ಭಾಬೆಟ್ ಎರಡಕ್ಕೂ ಸುಂದರ್‌ ಪಿಚೈ ಸಿಇಒ ಆಗಲಿದ್ದಾರೆ. ಅವರು ಗೂಗಲ್‌ ಜತೆಗೆ ಆಲ್ಭಾಬೆಟ್‌ ಹೂಡಿಕೆಯ ಜವಾಬ್ದಾರಿ ಹೊರಲಿದ್ದಾರೆ. ನಾವು ಮಂಡಳಿಯ ಸದಸ್ಯರಾಗಿ, ಷೇರುದಾರರಾಗಿ ಹಾಗೂ ಸಹ-ಸಂಸ್ಶಾಪಕರಾಗಿ ಮುಂದುವರೆಯುತ್ತೇವೆ' ಎಂದಿದ್ದಾರೆ.

ಸುಂದರ್‌ ಪಿಚೈ ಕೂಡ 'ಈ ಬದಲಾವಣೆಯು ಆಲ್ಭಾಬೆಟ್‌ ಕಾರ್ಯನಿರ್ಹಣೆಯಲ್ಲಿ ಅಥವಾ ಸ್ವರೂಪದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಎಲ್ಲರಿಗೂ ಅತ್ಯಂತ ಸಹಕಾರಿಯಾಗುವಂತೆ ಗೂಗಲ್‌ ಅನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು' ಎಂದು ಪತ್ರದ ಮೂಲಕ ಉದ್ಯೋಗಿಗಳಿಗೆ ತಿಳಿಸಿದ್ದಾರೆ.

ಗೂಗಲ್ ಸೇರುವುದಕ್ಕೂ ಮುನ್ನ ಸುಂದರ್‌ ಪಿಚೈ ಬದುಕು
 

ಗೂಗಲ್ ಸೇರುವುದಕ್ಕೂ ಮುನ್ನ ಸುಂದರ್‌ ಪಿಚೈ ಬದುಕು

ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಹುಡುಗನೊಬ್ಬ ಸುಂದರ್‌ ಪಿಚೈ ಗೂಗಲ್‌ ಸೇರಿದ್ದು, ಗೂಗಲ್ ಸಿಇಓ ಆಗಿದ್ದು, ಇದೀಗ ಆಲ್ಭಾಬೆಟ್‌ ಸಿಇಓ ಕೂಡ ಆಗಿರುವ ಕತೆ ತುಂಬಾ ರೋಚಕವಾಗಿದೆ.

*ಚೆನ್ನೈನ ಮಧ್ಯಮ ವರ್ಗದ ಕುಟುಂಬದಲ್ಲಿ 1972ರಲ್ಲಿ ಸುಂದರ್ ಪಿಚೈ ಜನನ.

* ಪಿಚೈ ತಂದೆ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್‌ ಆಗಿದ್ದರು. ಸ್ವಂತವಾಗಿ ಎಲೆಕ್ಟ್ರಿಕಲ್ ಬಿಡಿಭಾಗವನ್ನು ತಯಾರಿಸುವ ಫ್ಯಾಕ್ಟರಿ ನಡೆಸುತ್ತಿದ್ದರು. ತಾಯಿ ಸ್ಟೆನೊಗ್ರಾಫರ್ ಆಗಿದ್ದರು, ಇವರು ಜನಿಸಿದ ಬಳಿಕ ಮಗುವನ್ನು ನೋಡಿಕೊಳ್ಳುವ ಸಲುವಾಗಿ ಗೃಹಿಣಿಯಾದರು. ತಂತ್ರಜ್ಞಾನ ಬಗ್ಗೆ ಆಸಕ್ತಿ ಹೊಂದಲು ಪಿಚೈಗೆ ತಂದೆಯೇ ಸ್ಪೂರ್ತಿ. ತಂದೆ ನಡೆಸುತ್ತಿದ್ದ ಫ್ಯಾಕ್ಟರಿಯ ಎಲೆಕ್ಟ್ರಿಕ್ ಬಿಡಿಭಾಗಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ತೋರುತ್ತಿದ್ದರು. ಇದುವೇ ಅವರು ತಂತ್ರಜ್ಞಾನದ ಹಾದಿಯಲ್ಲಿ ಮುನ್ನೆಡೆಯಲು ಕಾರಣವಾಯಿತು.

* ಎರಡು ಬೆಟ್‌ರೂಂನ ಚಿಕ್ಕ ಅಪಾರ್ಟ್‌ಮೆಂಟ್‌ನಲ್ಲಿದ್ದ ಪಿಚೈ ಕುಟುಂಬದಲ್ಲಿ ಅವರು ಬಾಲ್ಯದಲ್ಲಿರುವಾಗ ಒಂದು ಟಿವಿ ಕೂಡ ಇರಲಿಲ್ಲ.

* ಅವರಿಗೆ 12 ವರ್ಷವಿದ್ದಾಗ ಮೊದಲ ದೂರವಾಣಿ ಸಂಪರ್ಕ ದೊರೆಯಿತು, ಅದು ವಾರ ಮೇಲೆ ಗಾಢವಾದ ಪರಿಣಾಮ ಬೀರಿತು.

* ಅವರ ಜ್ಞಾಪಕ ಶಕ್ತಿ ಎಷ್ಟರ ಮಟ್ಟಿಗೆ ಇದೆಯೆಂದರೆ ಮನೆಯ ಹಾಗೂ ಸಂಬಂಧಿಕರ ಎಲ್ಲಾ ಫೋನ್‌ ನಂಬರ್‌ಗಳು ಇವರಿಗೆ ನೆನಪಿನಲ್ಲಿರುತ್ತಿತ್ತು. ಸಂಬಂಧಿಕರು ಯಾರ ಫೋನ್‌ ನಂಬರ್ ಕೇಳಿದ್ದರೂ ಇವರ ತಲೆಯಲ್ಲಿ ಸ್ಟೋರ್‌ ಆಗಿದ್ದ ಕಾರಣ ತಟ್ಟನೆ ಹೇಳಿ ಬಿಡುತ್ತಿದ್ದರು.

* ಖರಗ್‌ಪುರದ ಐಐಟಿಯಿಂದ ಪದವಿ ಪಡೆದ ಪಿಚೈಗೆ ಸ್ಟ್ಯಾನ್‌ಪೋರ್ಡ್‌ವಿವಿಯಲ್ಲಿಕಲಿಯಲು ಸ್ಕಾಲರ್‌ಷಿಪ್ ಸಿಕ್ಕಿತು. ಆದರೆ ಅಲ್ಲಿಗೆ ಹೋಗಲು ವಿಮಾನ ಟಿಕೆಟ್‌ ಖರೀದಿಸಿದ ಹಣ ಅವರ ತಂದೆಯ ವರ್ಷದ ಸಂಪಾದನೆಯಷ್ಟಿತು. ಆದರೂ ಮಗನ ವಿದ್ಯಾಭ್ಯಾಸಕ್ಕಾಗಿ ತಂದೆ ತಾವು ದುಡಿದ ಮೊತ್ತವನ್ನು ನೀಡಿದರು. ನಂತರ ಸ್ಕಾಲರ್‌ಷಿಪ್‌ ಪಡೆದು ಸ್ಟ್ಯಾನ್‌ಪೋರ್ಡ್ ವಿವಿಯಲ್ಲಿ ಮೆಟಿರಿಯಲ್ ಸೈನ್ಸ್ ಮತ್ತು ಸೆಮಿಕಂಡಕ್ಟರ್‌ ಫಿಸಿಕ್ಸ್‌ನಲ್ಲಿ ಅಧ್ಯಯನ ಮುಂದುವರೆಸುತ್ತಾರೆ.

2004ರಲ್ಲಿ ಗೂಗಲ್‌ ಸೇರಿದ ಪಿಚೈ

2004ರಲ್ಲಿ ಗೂಗಲ್‌ ಸೇರಿದ ಪಿಚೈ

ಗೂಗಲ್‌ಗೆ ಸೇರಲು ಆಹ್ವಾನ ಬಂದಿರುವ ಹಿಂದೆ ಒಂದು ಸ್ವಾರಸ್ಯಕರ ಸಂಗತಿ ಇದೆ. ಅವರಿಗೆ 2004ರ ಏಪ್ರಿಲ್ 1ಕ್ಕೆ ಗೂಗಲ್‌ನಿಂದ ಕೆಲಸದ ಆಹ್ವಾನ ಬರುತ್ತೆ. ಅದನ್ನು ಏಪ್ರಿಲ್ ಫೂಲ್‌ ಆಗಿರಬಹುದೆಂದೇ ಭಾವಿಸಿದ್ದರು.

* ಕಾಲೇಜ್‌ ಪರೀಕ್ಷೆಯಲ್ಲಿ ಸಿ ಗ್ರೇಡ್‌ ತೆಗೆದುಕೊಂಡಿದ್ದೆ ಎಂದು ಪಿಚೈಯವರೇ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ನಂತರ ಕಷ್ಟಪಟ್ಟು ಓದಿ ಚೆನ್ನಾಗಿ ಸ್ಕೋರ್‌ ಮಾಡಿದರಂತೆ.

* ಜಿಮೇಲ್, ಗೂಗಲ್ ಕ್ರೋಮ್, ಗೂಗಲ್ ಮ್ಯಾಪ್ ಅಭಿವೃದ್ಧಿ ಪಡಿಸಿರುವುದರಲ್ಲಿ ಪಿಚೈ ಪಾತ್ರ ಪ್ರಮುಖವಾದದು.

* ಪಿಚೈ ಗೂಗಲ್ ಸೇರಿದ ಬಳಿಕ ಗೂಗಲ್‌ ದೈತ್ಯದ ಷೇರುಮಾರುಕಟ್ಟೆ ಮೌಲ್ಯ ದುಪ್ಪಟ್ಟಾಗಿದೆ. ಪ್ರಸ್ತುತ ಮೌಲ್ಯ 894 ಬಿಲಿಯನ್ ಡಾಲರ್‌ ಇದೆ.

* ಪಿಚೈ ವಾರ್ಷಿಕ ಸಂಬಳ 150 ಮಿಲಿಯನ್ ಡಾಲರ್

ಪಿಚೈ ಪ್ರೇಮ ಕತೆ

ಪಿಚೈ ಪ್ರೇಮ ಕತೆ

ಕಾಲೇಜಿನಲ್ಲಿ ಅಂಜಲಿ ಎಂಬ ಹುಡುಗಿಯನ್ನು ಪ್ರೀತಿಸಿದ ಪಿಚೈ ಅವರನ್ನು ಮದುವೆಯಾಗಿ ಕಾವ್ಯಾ, ಕಿರಣ್ ಎಂಬ ಎರಡು ಮಕ್ಕಳಿದ್ದಾರೆ. ಇವರ ಪ್ರೇಮ ಕತೆ ಯಾವ ಸಿನಿಮಾ ಸ್ಟೋರಿಗೂ ಕಮ್ಮಿಯಿಲ್ಲ.

ಈಗ ದಿನಕ್ಕೆ ಕೋಟಿಗಟ್ಟಲೆ ಸಂಬಳ ಎಣಿಸುತ್ತಿರುವ ಪಿಚೈ ಲವ್‌ ಮಾಡುವಾಗ ಖಾಲಿ ಜೇಬು, ಕಾರಿಲ್ಲ, ಲಕ್ಷುರಿ ಮನೆಯಿಲ್ಲ, ಟಿವಿಯೂ ಇರಲಿಲ್ಲ.

ಐಐಟಿ ಖರಗ್‌ಪುರದಲ್ಲಿ ಎಂಜಿನಿಯರಿಂಗ್ ಅಭ್ಯಾಸಕ್ಕೆ ಹೋದಾಗ ಅಂಜಲಿ ಜತೆ ಪ್ರೇಮಾಂಕುರವಾಗುತ್ತದೆ. ಅಂಜಲಿ ಕೂಡ ಪಿಚೈ ಬಳಿ ಹಣ ಇದೆಯೇ ಎಂದು ನೋಡದೆ ಅವರ ಗುಣ ನೋಡಿ ಪ್ರೀತಿಸಿದರು. ಪಿಚೈ ಬಡತನ, ಮನೆಯ ಪರಿಸ್ಥಿತಿ ಎಲ್ಲವೂ ಅಂಜಲಿಗೆ ಗೊತ್ತಿತ್ತು. ಪಿಚೈ ಗೂಗಲ್ ಸೇರಿದ ಮೇಲೆ ಅಂಜಲಿಯನ್ನು ಮದುವೆಯಾದರು.

ಪಿಚೈ ಗೂಗಲ್‌ ಸೇರಿದ ಮೇಲೆ ಮೈಕ್ರೋಸಾಫ್ಟ್, ಯಾಹೂ, ಟ್ವಿಟರ್‌ನಿಂದ ಆಫರ್‌ಗಳು ಬಂದಿದ್ದೆವು. ಆದರೆ ಅಂಜಲಿ ಮಾತ್ರ ನೀವು ಗೂಗಲ್‌ನಲ್ಲಿಯೇ ಮುದುವರೆಯಿರಿ ಎಂಬ ಸಲಹೆ ನೀಡಿದರು. ಇದರ ಪರಿಣಾಮ ಅವರಿವತ್ತು ಗೂಗಲ್‌ ಮಾತ್ರವಲ್ಲ ಗೂಗಲ್ ಮಾತೃಸಂಸ್ಥೆಯ ಸಿಒಒ ಆಗಿದ್ದಾರೆ.

ಒಬ್ಬ ಭಾರತೀಯ ಗೂಗಲ್‌ ದೈತ್ಯದ ಸಿಇಒ ಆಗಿರುವುದು ಭಾರತೀಯರಾದ ನಾವು ಹೆಮ್ಮೆ ಪಡುವ ವಿಷಯವಾಗಿದೆ.

Read more about: google ಗೂಗಲ್
English summary

Sundar Pichai: Facts About Alphabet's New CEO That Will Inspire You

Let's check out some interesting facts about Sundar Pichai and we are hundred per cent certain that it will inspire you to give your best in everything.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more