For Quick Alerts
ALLOW NOTIFICATIONS  
For Daily Alerts

ನಾವೆಲ್ಲಾ ತಿಳಿಯಲೇಬೇಕಾದ ಎಸ್‌ಪಿಬಿ ಕುರಿತ ಆಸಕ್ತಿಕರ ಸಂಗತಿಗಳು

|

ಸಂಗೀತ ಲೋಕದ ದಿಗ್ಗಜ ಎಸ್.ಪಿ. ಬಾಲ ಬಾಲಸುಬ್ರಹ್ಮಣ್ಯ ತಮ್ಮ 74ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಎಸ್‌ಪಿಬಿ ನಂತರ ದಿನಗಳಲ್ಲಿ ಚೇತರಿಸಿಕೊಂಡಿದ್ದರು.

SPB Passes Away: Interesting Facts about Veteran Singer SP Balasubrahmanyam in Kannada

ಅವರು ಕೋವಿಡ್ 19 ವರದಿ ಕೂಡ ನೆಗೆಟಿವ್ ಬಂದಿತ್ತು, ಇನ್ನೇನು ಬಾಲು ಸರ್‌ ಮತ್ತೆ ತಮ್ಮ ಮಧುರ ಕಂಠಗಳಿಂದ ನಮ್ಮ ಮುಂದೆ ಬರಲಿದ್ದಾರೆ ಎಂದು ಅಪಾರ ಅಭಿಮಾನಿಗಳ ನಿರೀಕ್ಷಿಸಿದ್ದರು.

ಆದರೆ ಎಲ್ಲರ ನಿರೀಕ್ಷೆಯನ್ನು ಹುಸಿಯಾಗಿಸಿ ಬಾಲು ಸರ್ ಇಹಲೋಕ ತ್ಯಜಿಸಿದ್ದಾರೆ. ಬಹು ಅಂಗಾಗ ವೈಫಲ್ಯದಿಂದಾಗಿ ಸೆಪ್ಟೆಂಬರ್ 25ಕ್ಕೆ ಕೊನೆಯುಸಿರು ಎಳೆದರು. ಆದರೆ ಅವರು ಸಂಗೀತದ ಮೂಲಕ ಚಿರಾಯು ಆಗಿದ್ದಾರೆ.

ಎಸ್‌ ಪಿ. ಬಿ ಕುರಿತ ಕೆಲವೊಂದು ಆಸಕ್ತಿಕರ ವಿಷಯಗಳನ್ನು ಇಲ್ಲಿ ಹೇಳಿದ್ದೇವೆ ನೋಡಿ:

ಎಂಜಿನಿಯರ್ ಡ್ರಾಪ್‌ಔಟ್ ಆದರು ಸಂಗೀತ ಲೋಕದ ದಿಗ್ಗಜ

ಎಂಜಿನಿಯರ್ ಡ್ರಾಪ್‌ಔಟ್ ಆದರು ಸಂಗೀತ ಲೋಕದ ದಿಗ್ಗಜ

ಶ್ರೀಪತಿ ಪಂಡಿತಾರಾದ್ಯುಲ ಬಾಲಸುಬ್ರಹ್ಮಣ್ಯಂ ಇದು ಎಸ್‌ಪಿಬಿ ಅವರ ಪೂರ್ಣ ಹೆಸರು. ಎಸ್‌ಪಿಬಿ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ1946 ರ ಜೂನ್ 4 ರಂದು ಹರಿಕಥಾ ಕಲಾವಿದರಾಗಿದ್ದ ಎಸ್.ಪಿ. ಸಾಂಬಮೂತಿ೯- ಶಕುಂತಲಾ ದಂಪತಿ ಪುತ್ರನಾಗಿ ಜನನ. ಬಾಲ್ಯದಲ್ಲಿಯೇ ಬಾಲುವನ್ನು ಆಕಷಿ೯ಸಿದ್ದು ಸಂಗೀತ.. ಅಪ್ಪನ ಹರಿಕಥೆಯೂ ಬಾಲುವಿನಲ್ಲಿ ಸಂಗೀತದ ಒಲವು ಹೆಚ್ಚುವಂತೆ ಮಾಡಿತು.

ಇಂಜಿನಿಯರ್ ಆಗುವ ಆಸೆಯಿಂದ ಅನಂತಪುರದ ಇಂಜಿನಿಯರಿಂಗ್ ಕಾಲೇಜಿಗೆ ಸೇಪ೯ಡೆಯಾದ ಬಾಲು ಕಾಲೇಜಿನ ಸಾಂಸ್ಕೖತಿಕ ಸ್ಪಧೆ೯ಯಲ್ಲಿ ಪ್ರಥಮ ಸ್ಥಾನ ಪಡೆದಾಗ ಈತನಿಗೆ ಉಜ್ವಲ ಭವಿಷ್ಯ ಸಂಗೀತ ಲೋಕದಲ್ಲಿದೆ ಎಂದು ತೀಪು೯ಗಾರರು ಹೇಳಿದ್ದರು.

ಆದರೆ ಕಾಲೇಜಿನಲ್ಲಿ ಕಾಡಿದ ವಿಷಮಶೀತ ಜ್ವರದಿಂದಾಗಿ ಇಂಜಿನಿಯರಿಂಗ್ ಶಿಕ್ಷಣವನ್ನು ಅಧ೯ದಲ್ಲಿಯೇ ಬಿಟ್ಟು ಬಾಲಸುಬ್ರಹ್ಮಣ್ಯಂ, ಚೆನ್ನೈಗೆ ತೆರಳಿದರು. ಅಲ್ಲಿಂದ ಎಸ್‌ಪಿಬಿ ಎಂದು ಲೋಕಕ್ಕೆ ಪರಿಚಯವಾದರು.

ಮೊದಲ ಹಾಡಿನ ಮೂಲಕವೇ ದಕ್ಷಿಣ ಭಾರತದಲ್ಲಿ ಫೇಮಸ್ ಆದ ಎಸ್‌ಪಿಬಿ

ಮೊದಲ ಹಾಡಿನ ಮೂಲಕವೇ ದಕ್ಷಿಣ ಭಾರತದಲ್ಲಿ ಫೇಮಸ್ ಆದ ಎಸ್‌ಪಿಬಿ

ತಮಿಳಿನ ಹೆಸರಾಂತ ನಿರ್ದೇಶಕ ಕೋದಂಡಪಾಣಿ ಇವರಿಗೆ ಪರಿಚಯವಾಗುತ್ತಾರೆ. ಇವರಲ್ಲಿದ್ದ ಸಂಗೀತ ಆಸಕ್ತಿಯನ್ನು ಗುರುತಿಸಿದ ಅವರು ಶ್ರೀಶ್ರೀಶ್ರೀ ಮಯಾ೯ದೆ ರಾಮಣ್ಣ ಎಂಬ ಸಿನಿಮಾಕ್ಕೆ ಹಾಡೊಂದನ್ನು ಹಾಡಿಸುತ್ತಾರೆ. ಆ ಹಾಡು ಮೆಗಾ ಹಿಟ್ ಆಗುತ್ತದೆ. ದಿನ ಕಳೆದು ಬೆಳಗಾಗುವಷ್ಟರಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪ್ರಸಿದ್ಧರಾಗುತ್ತಾರೆ. ಆ ನಂತರ ಅವರಿಗೆ ಬೇರೆ-ಬೇರೆ ಭಾಷೆಯ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಾ ಹೋಗುತ್ತದೆ.

ಎಸ್‌ಪಿಬಿ ದಾಖಲೆ ಸರಿಗಟ್ಟಿದ ಮತ್ತೋರ್ವ ಗಾಯಕ ದೇಶದಲ್ಲಿಲ್ಲ

ಎಸ್‌ಪಿಬಿ ದಾಖಲೆ ಸರಿಗಟ್ಟಿದ ಮತ್ತೋರ್ವ ಗಾಯಕ ದೇಶದಲ್ಲಿಲ್ಲ

ಎಸ್‌ಪಿಬಿ ಕಂಠಿ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾಗಲಿಲ್ಲ, ಬಾಲಿವುಡ್‌ ಸಿನಿಮಾ ಚಿತ್ರಗಳಲ್ಲಿಯೂ ಹಾಡಿದರು. ಇವರು ಸುಮಾರು ನಲ್ವತ್ತು ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ, ಸುಮಾರು 16 ಭಾಷೆಗಳಲ್ಲಿ ಹಾಡಿದ ಹಿರಿಮೆ ಎಸ್‌ಪಿಬಿ ಅವರದ್ದು. ಇವರ ಈ ದಾಖಲೆ ಸರಿಗಟ್ಟಿದ ಮತ್ತೋರ್ವ ಗಾಯಕ ದೇಶದಲ್ಲಿಲ್ಲ.

ವಿಶ್ವದಾಖಲೆ ಮಾಡಿದ ಎಸ್‌ಪಿಬಿ

ವಿಶ್ವದಾಖಲೆ ಮಾಡಿದ ಎಸ್‌ಪಿಬಿ

ಎಸ್‌ಪಿಬಿ ತಮ್ಮ ಸಂಗೀತ ಮೂಲಕ ಭಾರತದಲ್ಲಿ ಗುರುತಿಸಿಕೊಂಡಿದ್ದು ಮಾತ್ರವಲ್ಲದೆ ವಿಶ್ವದಾಖಲೆಯನ್ನು ಕೂಡ ಮಾಡುತ್ತಾರೆ. 1981ರ ಸೆಪ್ಟೆಂಬರ್‌ನಲ್ಲಿ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ತಮಿಳಿನ 19, ಹಿಂದಿಯ 6 ಸೇರಿದಂತೆ ಒಂದೇ ದಿನ ಒಟ್ಟು 22 ಹಾಡಿಗೆ ಧ್ಲನಿ ನೀಡುತ್ತಾರೆ. ಖ್ಯಾತ ಸಂಗೀತ ನಿರ್ದೇಶಕ ಉಪೇಂದ್ರಕುಮಾರ್‌ ಎಲ್ಲಾ ಹಾಡುಗಳಿ ನಿರ್ದೇಶಕರಾಗಿದ್ದರು.

ಮೋಡಿ ಮಾಡಿದ ಏಕ್ ದುಜೇ ಕೇ ಲಿಯೇ

ಮೋಡಿ ಮಾಡಿದ ಏಕ್ ದುಜೇ ಕೇ ಲಿಯೇ

ಬಾಲು ಸರ್ ಹಾಡಿದ ಏಕ್ ದುಜೇ ಕೇ ಲಿಯೇ ಹಾಡು ಬಾಲಿವುಡ್‌ನಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತು. ಎಸ್‌ಪಿಬಿ ಧ್ವನಿಯಲ್ಲಿ ಬರುತ್ತಿದ್ದ ಪ್ರತಿಯೊಂದು ಹಾಡುಗಳೂ ಹಿಟ್ ಆಗುತ್ತಿದ್ದೆವು. ಇವರ ಧ್ವನಿಗೆ ಮನಸೋಲದವರೇ ಇಲ್ಲ ಎನ್ನಬಹುದು. ಹೆಸರಾಂತ ಸಂಗೀತ ನಿರ್ದೇಶಕರಾದ ಕೀರವಾಣಿ, ರಾಜಕುಮಾರ್, ಇಳಯರಾಜ, ನಾದ ಬ್ರಹ್ಮ ಹಂಸಲೇಖ, ವೆಂಕಟೇಶ್‌, ಎ ಆರ್ ರೆಹಮಾನ್ ಹೀಗೆ ಇವರ ಧ್ವನಿಯ ಮೋಡಿಗೆ ಸಿಲುಕದ ಸಂಗೀತ ನಿರ್ದೇಶಕರೇ ಇಲ್ಲ. ಸತತ 50 ದಶಕಗಳವರೆಗೆ ಸಂಗೀತ ಲೋಕದಲ್ಲಿ ಮಿಂಚಿದ ಪ್ರತಿಭೆ.

ನಟನೆ ಮೂಲಕವೂ ಗಮನ ಸೆಳೆದ ಎಸ್‌ಪಿಬಿ

ನಟನೆ ಮೂಲಕವೂ ಗಮನ ಸೆಳೆದ ಎಸ್‌ಪಿಬಿ

ಎಸ್‌ಪಿಬಿ ಹಾಡುಗಳ ಜೊತೆಗೆ ನಟನೆಯಲ್ಲೂ ಗುರುತಿಸಿಕೊಂಡರು. ಅಣ್ಣನಾಗಿ, ತಂದೆಯಾಗಿ ಕಾಣಿಸಿಕೊಳ್ಳುವ ಮೂಲಕ ನಟನೆ ಮೂಲಕವೂ ಗಮನ ಸೆಳೆದಿದ್ದರು. ಇವರು ಹಿನ್ನಲೆ ಧ್ವನಿಯನ್ನೂ ನೀಡುತ್ತಿದ್ದರು. ಇದಕ್ಕಾಗಿ ಇವರಿಗೆ ಅತ್ಯುತ್ತಮ ಹಿನ್ನಲೆ ಧ್ಲನಿ ಕಲಾವಿದ ಪ್ರಶಸ್ತಿ ಕೂಡ ಬಂದಿತ್ತು.

ಎಲ್ಲಕ್ಕಿಂತ ಮಿಗಿಲಾಗಿ ಅತ್ಯುತ್ತಮ ಮನುಷ್ಯರಾಗಿದ್ದರು

ಎಲ್ಲಕ್ಕಿಂತ ಮಿಗಿಲಾಗಿ ಅತ್ಯುತ್ತಮ ಮನುಷ್ಯರಾಗಿದ್ದರು

ಎಸ್‌ಪಿಬಿಯವರು ತಮ್ಮ ಶರೀರದಂತೆ ವ್ಯಕ್ತಿತ್ವದಲ್ಲೂ ತೂಕವನ್ನು ಹೊಂದಿದ ವ್ಯಕ್ತಿ. ತುಂಬಾ ಮೃದುಹೃದಯಿ. ಯಾರ ಮೇಲೂ ರೇಗುತ್ತಿರಲಿಲ್ಲ, ಯಾವುದೇ ವಿವಾದಗಳು ಇವರನ್ನು ಸುತ್ತಿಕೊಳ್ಳಲಿಲ್ಲ. ಮಾನವೀಯತೆಯ ಪ್ರತಿರೂಪವಾಗಿದ್ದರು. ಇವರ ಮಾತುಗಳನ್ನು ಕೇಳುವುದು ಕೂಡ ಇವರ ಹಾಡಿನಷ್ಟೇ ಹಿತವಾಗಿತ್ತು.

English summary

SPB Passes Away: Interesting Facts about Veteran Singer SP Balasubrahmanyam in Kannada

SP Balasubramanyam is a gifted singer who has got that power of mesmerizing the audience with his magical voice texture. Here are interesting facts about veteran singer SP Balasubrahmanyam, Read on
X
Desktop Bottom Promotion