For Quick Alerts
ALLOW NOTIFICATIONS  
For Daily Alerts

ನವೆಂಬರ್ 11ಕ್ಕೆ ಒನಕೆ ಓಬವ್ವ ಜಯಂತಿ: ವೀರವನಿತೆಯ ಬಗ್ಗೆ ನಿಮಗೆ ತಿಳಿದಿರದ ಕೆಲವು ಸಂಗತಿಗಳಿವು

|

ನವೆಂಬರ್ 11ರಂದು ಒನಕೆ ಓಬವ್ವ ಜಯಂತಿ ಆಚರಣೆಗೆ ಕರ್ನಾಟಕ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಆದೇಶ ಹೊರಡಿಸಿದ್ದು, ರಾಜ್ಯದಾದ್ಯಂತ ಓಬ್ಬವ್ವರ ಜನ್ಮದಿನವನ್ನು ಆಚರಣೆ ಮಾಡಲಾಗುವುದು. ಈ ಹಿನ್ನಲೆಯಲ್ಲಿ ಒನಕೆ ಓಬವ್ವರ ಕುರಿತು ನೀವು ತಿಳಿದುಕೊಳ್ಳಲೇಬೇಕಾದ ಕೆಲವೊಂದು ಸಂಗತಿಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Onake Obavva Jayanti; Interesting Facts about Onake Obavva in Kannada

ಒನಕೆ ಓಬವ್ವರ ಕುರಿತು ನೀವು ತಿಳಿದುಕೊಳ್ಳಲೇಬೇಕಾದ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಈ ಕೆಳಗೆ ನೀಡಲಾಗಿದೆ:

ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ಉಳಿದಿರುವ ಐತಿಹಾಸಿಕ ಸ್ಥಳಗಳಲ್ಲಿ ಚಿತ್ರದುರ್ಗವೂ ಒಂದು. ಚಿತ್ರದುರ್ಗ ಎಂದಾಕ್ಷಣ ನೆನಪಾಗುವುದೇ ಹೈದರಾಲಿಯ ಸೈನ್ಯದೊಂದಿಗೆ ಏಕಾಂಗಿಯಾಗಿ ಹೋರಾಡಿದ ವೀರವನಿತೆ ಒನಕೆ ಓಬವ್ವ. ಆಕೆಯ ಸಾಹಸದ ಕತೆ ಎಂದಿಗೂ ಅಜರಾಮರ. ಅಂತಹ ಧೀರ ಮಹಿಳೆ ಜನಿಸಿದ ನಾಡಿನಲ್ಲಿ ನಾವಿರುವುದು ಬಹಳ ಹೆಮ್ಮೆಯ ವಿಚಾರ.

1. ಕರ್ನಾಟಕ ರಾಜ್ಯದ ಚಿತ್ರದುರ್ಗದಲ್ಲಿ ಹೈದರ್ ಅಲಿಯ ಪಡೆಗಳ ವಿರುದ್ಧ ಏಕಾಂಗಿಯಾಗಿ ಒನಕೆಯೊಂದಿಗೆ ಹೋರಾಡಿದ ಮಹಿಳೆ ಒನಕೆ ಓಬವ್ವ. ಆಕೆಯ ಪತಿ ಚಿತ್ರದುರ್ಗದ ಕಲ್ಲಿನ ಕೋಟೆಯ ಕಾವಲು ಗೋಪುರದ ಕಾವಲುಗಾರರಾಗಿದ್ದರು. ಕರ್ನಾಟಕ ರಾಜ್ಯದಲ್ಲಿ, ಅಬ್ಬಕ್ಕ ರಾಣಿ, ಕೆಳದಿ ಚೆನ್ನಮ್ಮ ಮತ್ತು ಕಿತ್ತೂರು ಚೆನ್ನಮ್ಮರ ಜೊತೆ ಒನಕೆ ಓಬವ್ವ ಕೂಡ, ಅಗ್ರಗಣ್ಯ ಮಹಿಳಾ ಯೋಧೆಯಾಗಿ ಮತ್ತು ದೇಶಭಕ್ತರಾಗಿ ಆಚರಿಸಲ್ಪಡುತ್ತಾರೆ.

2. ಮದಕರಿ ನಾಯಕನ ಆಳ್ವಿಕೆಯಲ್ಲಿ, ಚಿತ್ರದುರ್ಗ ನಗರವನ್ನು ಹೈದರ್ ಅಲಿ (1754-1779) ಪಡೆಗಳು ಮುತ್ತಿಗೆ ಹಾಕಿದವು. ಬಂಡೆಗಳ ರಂಧ್ರದ ಮೂಲಕ ವ್ಯಕ್ತಿಯೊಬ್ಬ ಚಿತ್ರದುರ್ಗದ ಕೋಟೆಯನ್ನು ಪ್ರವೇಶಿಸುವುದನ್ನು ಆಕಸ್ಮಿಕವಾಗಿ ನೋಡಿದ ಹೈದರ್ ಅಲಿ ತನ್ನ ಸೈನಿಕರನ್ನು ಆ ರಂಧ್ರದ ಮೂಲಕ ಕಳುಹಿಸುವ ಯೋಜನೆ ಮಾಡಿಕೊಂಡನು. ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಹಳೆ ಊದುವಾತ ಹನುಮ ಊಟ ಮಾಡಲು ಮನೆಗೆ ಹೋಗಿದ್ದನು. ಊಟದ ಸಮಯದಲ್ಲಿ ಮದಕರಿ ನಾಯಕನಿಗೆ ಕುಡಿಯಲು ಸ್ವಲ್ಪ ನೀರು ಬೇಕಿತ್ತು, ಆದ್ದರಿಂದ ಅವನ ಹೆಂಡತಿ ಓಬವ್ವ ಕೊಳದಿಂದ ಪಾತ್ರೆಯಲ್ಲಿ ನೀರುತರಲು ಹೋದಳು. ಆಗ ಶತ್ರು ಸೈನ್ಯವು ರಂಧ್ರದ ಮೂಲಕ ಕೋಟೆಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿರುವುದನ್ನು ಅವಳು ಗಮನಿಸಿದಳು. ಆಗ ಊಟ ಮಾಡುತ್ತಿದ್ದ ಪತಿಯನ್ನು ಕರೆಯಲು ಮನಸ್ಸಾಗದೇ, ಆಕೆಯೇ ಒನಕೆ ಹಿಡಿದು, ಕಿಂಡಿಯಿಂದ ನುಸುಳುತ್ತಿದ್ದ ಸೈನಿಕರನ್ನು ಒಬ್ಬೊಬ್ಬರ ತಲೆಗೆ ಬಡಿದು, ಕೊಂದಳು. ಊಟ ಮುಗಿಸಿ ಬಂದ, ಮದಕರಿ ನಾಯಕ ಇದನ್ನು ನೋಡಿ, ತನ್ನ ಸೈನ್ಯಕ್ಕೆ ಆದೇಶ ನೀಡಿದನು. ಈ ಹೋರಾಟದ ನಡುವೆ, ಆಕೆಗೆ ಶತ್ರು ಪಡೆಯ ಸೈನಿಕನೊಬ್ಬ ಹಿಂದಿನಿಂದು ಬಂದು, ಆಕೆಯನ್ನು ಕೊಂದನು. ಆಕೆಯ ಈ ಹೋರಾಟವು ಆಕೆಗೆ ಒನಕೆ ಓಬವ್ವ ಎಂಬ ಬಿರುದನ್ನು ತಂದುಕೊಟ್ಟಿತ್ತು.

3. ಅವಳು ಹೊಲಯ (ಚಲವಾದಿ) ಸಮುದಾಯಕ್ಕೆ ಸೇರಿದವರು.

4. ಆಕೆಯನ್ನು ಕನ್ನಡದ ಹೆಣ್ಣಿನ ಅಭಿಮಾನದ ಪ್ರತಿರೂಪವೆಂದು ಪರಿಗಣಿಸಲಾಗಿದೆ. ಹೈದರ್ ಅಲಿಯ ಸೈನಿಕರು ನುಸುಳಿದ ರಂಧ್ರವನ್ನು ಒನಕೆ ಓಬವ್ವನ ಕಿಂಡಿ ಅಥವಾ ಒನಕೆ ಕಿಂಡಿ ಎಂದು ಕರೆಯಲಾಗುತ್ತದೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದಲ್ಲಿನ ಪ್ರಸಿದ್ಧ ಹಾಡಿನಲ್ಲಿ ಆಕೆಯ ವೀರತ್ವವನ್ನು ಚಿತ್ರಿಸಲಾಗಿದೆ.

5. ಚಿತ್ರದುರ್ಗದ ಕ್ರೀಡಾಂಗಣಕ್ಕೆ, ವೀರ ವನಿತೆ ಒನಕೆ ಓಬವ್ವ ಕ್ರೀಡಾಂಗಣ ಎಂಬ ಹೆಸರನ್ನು ಇಡಲಾಗಿದೆ.

6. ಚಿತ್ರದುರ್ಗದ ಜಿಲ್ಲಾಧಿಕಾರಿ ಕಛೇರಿ ಮುಂದೆ ಒನಕೆ ಓಬವ್ವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.

English summary

Onake Obavva Jayanti; Interesting Facts about Onake Obavva in Kannada

Here we talking about Onake Obavva Jayanti; Interesting Facts about Onake Obavva in Kannada, read on
X
Desktop Bottom Promotion