For Quick Alerts
ALLOW NOTIFICATIONS  
For Daily Alerts

ನಿಮ್ಮ ಇಷ್ಟಾರ್ಥ ಈಡೇರಲು ನಿರ್ಜಲ ಏಕಾದಶಿಯಂದು ಇವುಗಳನ್ನು ಕೈಲಾದಷ್ಟು ದಾನ ಮಾಡಿ

|

ಹಿಂದೂ ಕ್ಯಾಲೆಂಡರ್ ಪ್ರಕಾರ, ಒಂದು ವರ್ಷದಲ್ಲಿ 24 ಏಕಾದಶಿಗಳಿದ್ದು, ಎಲ್ಲದಕ್ಕೂ ವಿಶೇಷ ಧಾರ್ಮಿಕ ಮಹತ್ವವಿದೆ. ನಾರಾಯಣ ಅಂದರೆ ವಿಷ್ಣುವನ್ನು ಮುಖ್ಯವಾಗಿ ಏಕಾದಶಿ ದಿನದಂದು ಪೂಜಿಸಲಾಗುತ್ತದೆ. ಈ ಎಲ್ಲ ಏಕಾದಶಿಗಳಲ್ಲಿ, ಕೆಲವೊಂದು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿರುವ ಏಕಾದಶಿಗಳಿವೆ, ಅವುಗಳಲ್ಲಿ ಒಂದು ನಿರ್ಜಲ ಏಕಾದಶಿ.

ನಿರ್ಜಲ ಏಕಾದಶಿಯಂದು ಉಪವಾಸ ಮಾಡುವ ವ್ಯಕ್ತಿಯು ವರ್ಷದ ಉಳಿದ 23 ಏಕಾದಶಿಗಳಿಗೆ ಉಪವಾಸ ಮಾಡುವಷ್ಟೇ ಪುಣ್ಯವನ್ನು ಪಡೆಯುತ್ತಾನೆ ಎಂದು ನಂಬಕೆಯಿದೆ. ಈ ದಿನ ದಾನ ಮಾಡುವುದು ಸಹ ಅಷ್ಟೇ ಮಹತ್ವ ಪಡೆದಿದೆ. ಈ ವರ್ಷ ನಿರ್ಜಲ ಏಕಾದಶಿ ಜೂನ್ 21 ರಂದು ಬಂದಿದ್ದು, ಈ ದಿನ ಯಾವ ವಸ್ತುಗಳನ್ನು ದಾನ ಮಾಡಬೇಕು ಎಂದು ಇಲ್ಲಿ ಹೇಳಿದ್ದೇವೆ.

Nirjala Ekadashi 2021 Daan: Donate These Things on Ekadashi

ನಿರ್ಜಲ ಏಕಾದಶಿ:

ನಿರ್ಜಲ ಏಕಾದಶಿಯನ್ನು ಪಾಂಡವ ಏಕಾದಶಿ ಮತ್ತು ಭೀಮಸೇನಾ ಏಕಾದಶಿ ಎಂದೂ ಕರೆಯುತ್ತಾರೆ. ಈ ದಿನ ಉಪವಾಸವನ್ನು ಆಚರಿಸುವವನು ದೀರ್ಘಾಯುಷ್ಯದ ಜೊತೆಗೆ ಮೋಕ್ಷವನ್ನು ಪಡೆಯುತ್ತಾನೆ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಈ ಏಕಾದಶಿ ದಿನದಂದು ಯಾವುದೇ ದಾನ, ಧರ್ಮ, ಹೋಮ ಮತ್ತು ಪೂಜೆಗಳನ್ನು ಮಾಡಿದರೂ ಅದರ ಫಲವು ಸಿಕ್ಕೇ ಸಿಗುವುದು ಎಂದು ಪದ್ಮ ಪುರಾಣದಲ್ಲಿ ತಿಳಿಸಲಾಗಿದೆ. ನಿರ್ಜಲ ಏಕಾದಶಿ ದಿನದಂದು ಲಕ್ಷ್ಮಿ ದೇವಿಯನ್ನು ವಿಷ್ಣುವಿನೊಂದಿಗೆ ಪೂಜಿಸಲಾಗುತ್ತದೆ. ಈ ದಿನ ಲಕ್ಷ್ಮಿ ದೇವಿಯ ವಿಶೇಷ ಪೂಜೆ ಮಾಡುವ ಮೂಲಕ ಮನೆಯಲ್ಲಿ ಹಣದ ಕೊರತೆಯಿರುವುದಿಲ್ಲ.

ನಿರ್ಜಲ ಏಕಾದಶಿಯಂದು ಫಲ ಪಡೆಯಲು ದಾನ ಮಾಡಬೇಕಾದ ವಸ್ತುಗಳು ಈ ಕೆಳಗಿನಂತಿವೆ:

1. ಧರ್ಮಗ್ರಂಥಗಳ ಪ್ರಕಾರ, ನಿರ್ಜಲ ಏಕಾದಶಿ ದಿನದಂದು ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡುವುದು ವಿಷ್ಣುವನ್ನು ಮೆಚ್ಚಿಸಲು ಸಹಾಯ ಮಾಡುತ್ತದೆ.

2. ಈ ದಿನದಂದು ನೀರಿನ ದಾನವನ್ನು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ, ಆದ್ದರಿಂದ ನೀರಿನ ವಿತರಣೆಯನ್ನು ಸಾರ್ವಜನಿಕವಾಗಿ ಮಾಡಬೇಕು. ಅದು ಉತ್ತಮ ಪ್ರಯೋಜನಗಳನ್ನು ನೀಡುತ್ತದೆ.

3. ಆಹಾರವನ್ನು ದಾನ ಮಾಡುವುದು ಉತ್ತಮವಾಗಿದ್ದು, ಬಡ ಮತ್ತು ನಿರ್ಗತಿಕ ಜನರಿಗೆ ಆಹಾರವನ್ನು ದಾನ ಮಾಡಿ.

4. ಬ್ರಾಹ್ಮಣ ಆರಾಧನೆ ಮತ್ತು ಅಗತ್ಯ ವಸ್ತುಗಳನ್ನು ಬ್ರಾಹ್ಮಣರಿಗೆ ದಾನ ಮಾಡುವುದರಿಂದ ಒಳ್ಳೆಯ ಪ್ರಯೋಜನ ಸಿಗುವುದರಿಂದ ಮುಖ್ಯವಾಗಿ ಅವರಿಗೆ ಚಪ್ಪಲಿ, ಶೂಗಳನ್ನು ದಾನ ಮಾಡಿ. ಅದರಿಂದಾಗಿ ಜೀವನದಲ್ಲಿ ಸಕಾರಾತ್ಮಕ ಶಕ್ತಿಯ ಪರಿಣಾಮವು ಹೆಚ್ಚಾಗುತ್ತದೆ.

5. ವಿಷ್ಣುವಿನ ದೇವಸ್ಥಾನಕ್ಕೆ ಹೋಗಿ ಮಾವು, ಕಲ್ಲಂಗಡಿ ಮುಂತಾದ ಹಣ್ಣುಗಳನ್ನು ಅರ್ಪಿಸಿ ಮತ್ತು ಈ ಹಣ್ಣುಗಳನ್ನು ಸಹ ದಾನ ಮಾಡಿ, ಅದು ಕುಟುಂಬ ಸಮಸ್ಯೆಗಳನ್ನು ಕೊನೆಗೊಳಿಸುತ್ತದೆ.

6. ವಿಷ್ಣುವಿನ ದೇವಾಲಯದಲ್ಲಿ ನೀರು ತುಂಬಿದ ಮಣ್ಣಿನ ಜಗ್ ಅನ್ನು ದಾನ ಮಾಡಿ, ಅದರ ವಿಶೇಷ ಪ್ರಾಮುಖ್ಯತೆಯನ್ನು ಧರ್ಮಗ್ರಂಥಗಳಲ್ಲಿ ತಿಳಿಸಲಾಗಿದೆ.

7. ಸಕ್ಕರೆ ದಾನ ಮಾಡುವುದನ್ನು ಉಪಯುಕ್ತವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಈ ವಸ್ತುಗಳನ್ನು ಬಡ ಜನರಿಗೆ ದಾನ ಮಾಡಿ.

8. ಈ ದಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಹಣವನ್ನು ದಾನ ಮಾಡುವುದು ಸಹ ಒಳ್ಳೆಯದೇ. ಹಣವನ್ನು ದಾನ ಮಾಡುವುದರಿಂದ ಜೀವನದ ದೋಷಗಳನ್ನು ಹೋಗಲಾಡಿಸಬಹುದು.

9. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳಲು, ನಿರ್ಜಲ ಏಕಾದಶಿ ದಿನದಂದು ಹಾಲು ದಾನ ಮಾಡಬೇಕು. ಹಾಲು ದಾನ ಮಾಡುವುದರಿಂದ ಆರ್ಥಿಕ ತೊಂದರೆಗಳು ಕೊನೆಗೊಳ್ಳುತ್ತವೆ.

10. ಇದಲ್ಲದೆ ನಿರ್ಜಲ ಏಕಾದಶಿ ದಿನದಂದು ನಿರ್ಗತಿಕರಿಗೆ ಬಟ್ಟೆ ದಾನ ಮಾಡುವುದರಿಂದಲೂ ನಿಮ್ಮ ಸಮಸ್ಯೆಗಳನ್ನು ತೊಡೆದುಹಾಕಬಹುದು.

English summary

Nirjala Ekadashi 2021 Daan: Donate These Things on Ekadashi

Here we talking about Nirjala Ekadashi 2021 Daan: Donate These Things on Ekadashi , read on
X
Desktop Bottom Promotion