For Quick Alerts
ALLOW NOTIFICATIONS  
For Daily Alerts

ಮಹಾತ್ಮಗಾಂಧಿ ಪುಣ್ಯ ತಿಥಿ: ಗೋಡ್ಸೆ ಗಾಂಧಿಯನ್ನು ಕೊಂದಿದ್ದು ಏಕೆ?

|

ಜನವರಿ 30 ಮಹಾತ್ಮ ಗಾಂಧಿಯವರ 74ನೇ ಪುಣ್ಯ ತಿಥಿಯ ದಿನ. 1948, ಜನವರಿ 30ರಂದು ಮಹಾತ್ಮ ಗಾಂಧೀಜಿಯವರನ್ನು ನಾಥೂರಾಮ್‌ ಗೋಡ್ಸೆ ದೆಹಲಿಯ ಬಿರ್ಲಾ ಹೌಸ್‌ನಲ್ಲಿ ಹತ್ಯೆ ಮಾಡಿದ ದಿನವನ್ನು ಹುತಾತ್ಮ ದಿನವೆಂದು ಕರೆಯಲಾಗುತ್ತಿದೆ.

Mahatma Gandhi Death Anniversary

ಬ್ರಿಟಿಷರ ಕೈಯಿಂದ ಭಾರತವನ್ನು ಸ್ವಾತಂತ್ರ್ಯಗೊಳಿಸಲು ಕೆಲ ಹೋರಾಟಗಾರರು ಕ್ರಾಂತಿಕಾರಿ ಮಾರ್ಗವನ್ನು ಅನುಸರಿಸಿದರೆ ಮಹಾತ್ಮ ಗಾಂಧೀಜಿ ಅಹಿಂಸಾ ಮಾರ್ಗವನ್ನು ಅನುಸರಿಸಿದರು. ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ಬ್ರಿಟಿಷರಲ್ಲಿ ನಡುಕ ಹುಟ್ಟಿಸಿದ್ದರು. ಭಾರತಕ್ಕೆ ಸ್ವಾತಂತ್ರ್ಯವನ್ನು ತಂದು ಕೊಡಲು ಅಹಿಂಸಾ ಮಾರ್ಗವನ್ನು ಅನುಸರಿಸಿದ ಗಾಂಧೀ ಗುಂಡೇಟಿನಿಂದ ಅದು ಸ್ವಾತಂತ್ರ್ಯ ಸಿಕ್ಕಿ 6 ತಿಂಗಳಾಗುವಷ್ಟರಲ್ಲಿ ಒಬ್ಬ ಭಾರತೀಯನಿಂದ ಗುಂಡೇಟಿಗೆ ಬಲಿಯಾಗಿದ್ದು ವಿಪರ್ಯಾಸ.

ಗೋಡ್ಸೆ ಗಾಂಧಿಯನ್ನು ಕೊಂದಿದ್ದು ಏಕೆ?
ಗೋಡ್ಸೆ ಗಾಂಧಿಯನ್ನು ಕೊಲ್ಲಲು ಕಾರಣವೇನು? ಎಂಬ ಪ್ರಶ್ನೆ ಈಗಲೂ ಭಾರತೀಯರನ್ನು ಕಾಡುತ್ತಿದೆ. ಗಾಂಧೀಜಿ ಮಾಡುತ್ತಿದ್ದ ಉಪವಾಸ ಸತ್ಯಗ್ರಹ ಎಂದರೆ ಬ್ರಿಟಿಷರು ಭಯಪಡುತ್ತಿದ್ದರು, ಅವರ ಉಪವಾಸ ಸತ್ಯಾಗ್ರಹಕ್ಕೆ ಅಂಥ ಶಕ್ತಿಯಿತ್ತು, ತಾವು ಬಯಸಿದ್ದನ್ನು ಉಪವಾಸ ಕೈಗೊಳ್ಳುವ ಪಡೆಯುವುದು ಗಾಂಧೀಜಿ ಹೋರಾಟದ ಮಾರ್ಗವಾಗಿತ್ತು. ಆದರೆ ಸ್ವಾತಂತ್ರ್ಯದ ಬಳಿಕ ಗಾಂಧೀಜಿ ಕೈಗೊಂಡ ಅಂಥ ನಿರಸನ ಹೋರಾಟವೇ ಅವರ ಸಾವಿಗೆ ಕಾರಣವಾಯಿತು.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ಸಮಸ್ಯೆಗಳು ಬಗೆ ಹರಿಯಲಿಲ್ಲ, ಸ್ವಾತಂತ್ರ್ಯ ಸಿಕ್ಕ ಬಳಿಕ ಅನೇಕ ಸಾವು- ನೋವು ಸಂಭವಿಸಿತ್ತು, ಲಕ್ಷಾಂತರ ಮಂದಿ ನಿರ್ಗತಿಕರಾದರರು, ಅದಕ್ಕೆ ಕಾರಣ ಅಖಂಡ ಹಿಂದೂಸ್ಥಾನ ಭಾರತ-ಪಾಕಿಸ್ತಾನವಾಗಿ ವಿಭಜನೆಯಾಗಿದ್ದು.

ಪಾಕಿಸ್ತಾನ ವಿಭಜನೆಯಾದ ಬಳಿಕ ತನ್ನ ವರಸೆ ಪ್ರಾರಂಭಿಸಿತು, ಭಾರತದ ಬಳಿ 55 ಕೋಟಿ ಹಣವನ್ನು ಪಾವತಿಸಿ ಎಂದು ಭಾರತದ ಮೇಲೆ ಒತ್ತಡ ಹೇರಲಾರಂಭಿಸಿತು. ಆಗ ಭಾರತದ ಉಪ ಪ್ರಧಾನಿಯಾಗಿದ್ದ ಸರ್ದಾರ್ ವಲ್ಲಭಬಾಯ್‌ ಪಟೇಲರು ಕಾಶ್ಮೀರ ಸಮಸ್ಯೆ ಬಗೆ ಹರಿಯುವವರೆಗೆ ಪಕಿಸ್ತಾನಕ್ಕೆ ಹಣ ಪಾವತಿಸಲು ಭಾರತ ಮುಂದೆ ಬರಲ್ಲ ಎಮದು 1948 ಜನವರಿ 12ರಂದು ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.

ಇದರಿಂದ ಗಾಂಧೀಜಿ ತೀವ್ರ ಅಸಮಧಾನ ಪಟ್ಟರು. ಪಾಕಿಸ್ತಾನಕ್ಕೆ ನೀಡಬೇಕಾಗಿದ್ದ ಹಣವನ್ನು ಭಾರತ ಕೊಡಲೇಬೇಕೆಂದು ಒತ್ತಾಯಿಸಿದರು, ಅಲ್ಲದೆ ಜನವರಿ 13ರಿಂದ ನಿರಸನ ಕೈಗೊಂಡುಬಿಟ್ಟರು. ಇದುವೇ ಅವರ ಸಾವಿಗೆ ಕಾರಣವಾಯಿತು.

ಗಾಂಧೀಜಿ ನಿರ್ಧಾರ ನಾಥೂರಾಮ್‌ ಗೋಡ್ಸೆಗೆ ಕೋಪ ತರಿಸುತ್ತೆ, 1948 ಜನವರಿ 30ರಮದು ದೆಹಲಿಯ ಬಿರ್ಲಾ ಭವನದಲ್ಲಿ ಸಂಜೆ ಪ್ರಾರ್ಥನೆ ಮಾಡಲು ಗಾಂಧೀಜಿ ತಮ್ಮ ಅನುಯಾಯಿಗಳ ಜೊತೆ ಬರುತ್ತಾರೆ, ಅದೇ ಸಮಯಕ್ಕಾಗಿ ಕಾಯುತ್ತಿದ್ದ ಗೋಡ್ಸೆ ಯಾರಿಗೂ ಅನುಮಾನ ಬಾರದಂತೆ ಗುಂಪಿನಲ್ಲಿದ್ದು, ಗಾಂಧೀಜಿ ಬರುತ್ತಿದ್ದಂತೆ ಅವರ ಪಾದಕ್ಕೆ ನಮಸ್ಕರಿಸಿ ಏಕಾಏಕಿ ಗುಂಡು ಹಾರಿಸಿ ಬಿಡುತ್ತಾರೆ. ಕುಸಿದು ಬಿದ್ದ ಗಾಂಧೀಜಿ ಕೊನೆಯುಸಿರು ಎಳೆಯುತ್ತಾರೆ. ಈ ದಿನವನ್ನು ಹುತಾತ್ಮರ ದಿನವನ್ನು ಕರೆಯಲಾಗುತ್ತಿದೆ.

ಆ ಬಳಿಕ ಗೋಡ್ಸೆ ತನ್ನನ್ನು ಬಂದಿಸುವಂತೆ ಪೋಲೀಸರಿಗೆ ಹೇಳುತ್ತಾರೆ, ಈ ಕೇಸ್‌ನ ವಿಚಾರಣೆ ನಡೆಸಿ ಗೋಡ್ಸೆ ಅವರನ್ನು 1949 ನವೆಂಬರ್ 15ರಂದು ಗಲ್ಲಿಗೇರಿಸಲಾಯಿತು.

Read more about: india life ಭಾರತ ಜೀವನ
English summary

Mahatma Gandhi Death Anniversary: Remembering the Father of the Nation on Martyrs’ Day

Mahatma Gandhi Death Anniversary: Remembering the Father of the Nation on Martyrs’ Day,
Story first published: Saturday, January 29, 2022, 21:42 [IST]
X
Desktop Bottom Promotion