For Quick Alerts
ALLOW NOTIFICATIONS  
For Daily Alerts

ಅ. 28ಕ್ಕೆ ಚಂದ್ರಗ್ರಹಣ: ಸೂತಕ ಕಾಲದಲ್ಲಿ ಈ ಕೆಲಸಗಳನ್ನು ಮಾಡುವುದು ಒಳಿತಲ್ಲ

|

ಅಕ್ಟೋಬರ್‌ 28ಕ್ಕೆ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ.

ಹಿಂದೂ ನಂಬಿಕೆಗಳ ಪ್ರಕಾರ, ಗ್ರಹಣದ ಸಮಯದಲ್ಲಿ ಏನನ್ನೂ ತಿನ್ನಬಾರದು. ಏಕೆಂದರೆ ಗ್ರಹಣ ಸೂತಕ ಕಾಲದಲ್ಲಿ ಭೂಮಿಯ ವಾತಾವರಣವು ಕಲುಷಿತಗೊಳ್ಳುತ್ತದೆ. ಈ ಸಮಯದಲ್ಲಿ ಏನಾದರೂ ಸೇವಿಸಿದರೆ, ಅದು ಹಾನಿಕಾರಕ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಈ ದಿನ ಉಪವಾಸ ಮಾಡುವವರು ಏನನ್ನು ಸೇವಿಸಬೇಕು? ಏನನ್ನು ಸೇವಿಸಬಾರದು ಎಂಬುದನ್ನು ಇಲ್ಲಿ ನೋಡೋಣ.

ಚಂದ್ರಗ್ರಹಣ ಸಮಯದಲ್ಲಿ ಯಾವುದನ್ನು ಸೇವಿಸಬೇಕು, ಯಾವ ಕೆಲಸ ಮಾಡಬಾರದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಚಂದ್ರ ಗ್ರಹಣ ಸಮಯದಲ್ಲಿ ಏನನ್ನು ತಿನ್ನಬಾರದು?:

ಚಂದ್ರ ಗ್ರಹಣ ಸಮಯದಲ್ಲಿ ಏನನ್ನು ತಿನ್ನಬಾರದು?:

ಎಲ್ಲಾ ರೀತಿಯ ಆಹಾರ ಪದಾರ್ಥಗಳನ್ನು ಘನ ಅಥವಾ ದ್ರವ ಎರಡನ್ನೂ ಸೂತಕ ಅವಧಿಯಲ್ಲಿ ನಿಷೇಧಿಸಲಾಗಿದೆ. ಆದಾಗ್ಯೂ, ಮಕ್ಕಳು, ರೋಗಿಗಳು ಮತ್ತು ವೃದ್ಧರು ಅಗತ್ಯವಿದ್ದರೆ ಸೂತಕ ಸಮಯದಲ್ಲಿ ತಿನ್ನಬಹುದು.

ಗರ್ಭಿಣಿಯರು ಎಚ್ಚರವಾಗಿರಿ:

ಗರ್ಭಿಣಿಯರು ಎಚ್ಚರವಾಗಿರಿ:

ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಹೊರಗೆ ಹೋಗದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಗ್ರಹಣದ ಸಮಯದಲ್ಲಿ ಕಲುಷಿತ ವಾತಾವರಣಕ್ಕೆ ಒಡ್ಡಿಕೊಳ್ಳುವುದರಿಂದ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಮತ್ತು ಗರ್ಭಪಾತದ ಸಂಭವನೀಯತೆ ಹೆಚ್ಚಾಗುತ್ತದೆ.

ಈ ಚಟುವಟಿಕೆಗಳನ್ನು ಮಾಡಬೇಡಿ:

ಈ ಚಟುವಟಿಕೆಗಳನ್ನು ಮಾಡಬೇಡಿ:

ತೈಲ ಮಸಾಜ್, ನೀರು ಕುಡಿಯುವುದು, ಮಲ-ಮೂತ್ರ ವಿಸರ್ಜನೆ, ಕೂದಲು ಬಾಚುವುದು, ಹಲ್ಲುಜ್ಜುವುದು ಮತ್ತು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಗ್ರಹಣ ಸಮಯದಲ್ಲಿ ನಿಷೇಧಿಸಲಾಗಿದೆ.

ಗ್ರಹಣ ನಂತರ ಏನು ಮಾಡಬೇಕು?:

ಗ್ರಹಣ ನಂತರ ಏನು ಮಾಡಬೇಕು?:

ಗ್ರಹಣ ಶುರುವಾಗುವ ಮುನ್ನ ತಯಾರಿಸಿದ ಆಹಾರವನ್ನು ತ್ಯಜಿಸಬೇಕು. ಗ್ರಹಣ ಮುಗಿದ ನಂತರ, ಸ್ನಾನ ಮಾಡಿ, ಮನೆಯನ್ನು ಸ್ವಚ್ಛಗೊಳಿಸಿ ಮತ್ತು ತಾಜಾ ಆಹಾರವನ್ನು ತಯಾರಿಸಿ. ಗೋಧಿ, ಅಕ್ಕಿ, ಇತರ ಧಾನ್ಯಗಳು ಮತ್ತು ಉಪ್ಪಿನಕಾಯಿಗಳಂತಹ ಆಹಾರ ಪದಾರ್ಥಗಳ ಪಾತ್ರೆಗಳಲ್ಲಿ ದರ್ಬೆ ಹುಲ್ಲು ಅಥವಾ ತುಳಸಿ ಎಲೆಗಳನ್ನು ಹಾಕಿಡಿ. ಅಲ್ಲದೆ, ಗ್ರಹಣದ ನಂತರ ದೇಣಿಗೆ ನೀಡುವುದು ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ಗ್ರಹಣದ ಸಮಯದಲ್ಲಿ ಪಠಿಸಬೇಕಾದ ಮಂತ್ರ:

ಗ್ರಹಣದ ಸಮಯದಲ್ಲಿ ಪಠಿಸಬೇಕಾದ ಮಂತ್ರ:

ತಮೋಮಯ ಮಹಾಭೀಮಾ ಸೋಮಸೂರ್ಯವಿಮರ್ದನ ಹೇಮಾತರಪ್ರದಾನೇನ ಮಮ ಶಾಂತಿಪ್ರದೋ ಭವ

ವಿಧುಂತುದಾ ನಮಸ್ತುಭ್ಯಂ ಸಿಂಹಿಕಾನಂದನಚ್ಯುತ ದಾನೇನಾನೇನ ನಾಗಸ್ಯ ರಕ್ಷ ಮಾಂ

ವೇಧಜದ್ಭಯಾತ್

English summary

Lunar Eclipse 2023 fasting rules: What to eat, what to avoid during chandra grahan in Kannada

Here we talking about Lunar Eclipse 2021 fasting rules: What to eat, what to avoid during chandra grahan in Kannada, read on
X
Desktop Bottom Promotion