For Quick Alerts
ALLOW NOTIFICATIONS  
For Daily Alerts

ಥೇಟ್ ಕ್ಯಾಮರಾದಂಥ ಮನೆ , ಮಕ್ಕಳಿಗೂ ಕ್ಯಾಮರಾ ಹೆಸರಿಟ್ಟ ಫೋಟೋಗ್ರಾಫರ್

|

ನಮ್ಮೆಲ್ಲರಿಗೂ ಒಂದೊಂದು ಹವ್ಯಾಸ ಇರುತ್ತದೆ. ಆದರೆ ಕೆಲವರಿಗೆ ಮಾತ್ರ ಹವ್ಯಾಸವೇ ಬದುಕಾಗಿರುತ್ತದೆ. ತಮ್ಮ ಆಸಕ್ತಿವಿರುವ ವಿಷಯದಲ್ಲಿ ಬದುಕನ್ನು ರೂಪಿಸಿಕೊಳ್ಳುತ್ತಾರೆ. ಪೇಂಟಿಂಗ್ , ಫೋಟೋಗ್ರಫಿ, ಮ್ಯೂಸಿಕ್ ಹೀಗೆ ತಮ್ಮ-ತಮ್ಮ ಪ್ರತಿಭೆಗೆ ಅನುಗುಣವಾಗಿ ವಿವಿಧ ಕ್ಷೇತ್ರಗಳನ್ನು ಮಿಂಚುತ್ತಿರುವವರನ್ನು ನೋಡುತ್ತೇವೆ.

ಇನ್ನು ಕೆಲವರಂತೂ ತಮ್ಮ ಹವ್ಯಾಸವನ್ನು ಬಿಟ್ಟು ಒಂದು ಕ್ಷಣ ಬಿಟ್ಟಿರಲಾರದಷ್ಟು ಹಚ್ಚಿಕೊಂಡಿರುತ್ತಾರೆ. ತಾವು ನಿಂತರೂ, ಕೂತರೂ ಸದಾ ತಮ್ಮ ಆಸಕ್ತಿಯ ವಿಷಯದತ್ತಲೇ ಅವರ ಗಮನ ಇರುತ್ತದೆ. ನಾವು ಇಲ್ಲಿ ಹೇಳ ಹೊರಟಿರುವುದು ಅಂಥದ್ದೇ ವಿಷಯದ ಬಗ್ಗೆ. ಅವರ ಹೆಸರು ರವಿ ಹೊಂಗಲ್‌.

ಬೆಳಗಾವಿಯಲ್ಲಿ ಕ್ಯಾಮರಾ ಹೌಸ್

ಬೆಳಗಾವಿಯಲ್ಲಿ ಕ್ಯಾಮರಾ ಹೌಸ್

ಇವರು ಕರ್ನಾಟಕದ ಬೆಳಗಾವಿಯವರು. ಇವರ ವೃತ್ತಿ ಹಾಗೂ ಹವ್ಯಾಸ ಫೋಟೋಗ್ರಫಿ. ಆದರೆ ಈಗ ಇವರು ಗಮನ ಸೆಳೆದಿರುವುದು ತಾವು ಕಟ್ಟಿಸಿರುವ ಮನೆಯಿಂದ. ಮನೆ ಕಟ್ಟಿಸುವಾಗ ಪ್ರತಿಯೊಬ್ಬರಿಗೂ ತಮ್ಮದೇ ಆದ ಪರಿಕಲ್ಪನೆ ಇರುತ್ತದೆ. ತಾನು ವಾಸಿಸುವ ಪ್ರೀತಿಯ ಗೂಡು ಹೇಗಿರಬೇಕೆಂಬ ಕಲ್ಪನೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಅದರಂತೆಯೇ ಮನೆ ಕಟ್ಟಿಸುವಾಗ ಮನೆಯನ್ನು ತಮ್ಮ ಇಷ್ಟದಂತೆ ಕಟ್ಟಿಸುತ್ತಾರೆ.

ಗಮನ ಸೆಳೆದ ಮನೆ

ಗಮನ ಸೆಳೆದ ಮನೆ

ಇಲ್ಲೊಬ್ಬರು ಮನೆಯನ್ನು ತಮ್ಮ ಇಷ್ಟದಂತೆ ಮಾತ್ರವಲ್ಲ ತಮ್ಮ ಹವ್ಯಾಸಕ್ಕೆ ಹೊಂದುವಂತೆ ಕಟ್ಟಿಸಿದ್ದಾರೆ. ಇವರ ಮನೆ ನೋಡಿದರೆ ಥೇಟ್‌ ಕ್ಯಾಮರಾದಂತೆಯೇ ಇದೆ. ಇದೀಗ ಈ ಮನೆ ತನ್ನ ವಿಶಿಷ್ಟ ವಿನ್ಯಾಸದಿಂದಾಗಿ ಗಮನ ಸೆಳೆಯುತ್ತಿದೆ.

ಫೋಟೋಗ್ರಫಿ ಕ್ರೇಜ್

ಫೋಟೋಗ್ರಫಿ ಕ್ರೇಜ್

ಚಿಕ್ಕ ವಯಸ್ಸಿನಲ್ಲಿಯೇ ಅವರಿಗೆ ಫೋಟೋಗ್ರಫಿ ಕಡೆ ವಿಪರೀತ ಸೆಳೆತ. ತಮ್ಮ Pentax ಕ್ಯಾಮರಾ ತೆಗೆದುಕೊಂಡು ಹಳ್ಳಿಗಳಿಗೆ ಹೋಗಿ ಫೋಟೋ ಕ್ಲಿಕ್ ಮಾಡುತ್ತಿದ್ದರು, ನಂತರ ಫೋಟೋಗ್ರಫಿ ಅವರ ಹವ್ಯಾಸವಾಯಿತು, ನಂತರ ಅದನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದರು.

ಮಕ್ಕಳಿಗೂ ಕ್ಯಾಮರಾ ಹೆಸರು

ಮಕ್ಕಳಿಗೂ ಕ್ಯಾಮರಾ ಹೆಸರು

ಇನ್ನು ಅವರು ತಮ್ಮ ಗಂಡು ಮಕ್ಕಳಿಗೆ ಕೂಡ Epson, Canon, Nikon (ಎಪ್ಸೋನ್, ಕೆನೋನ್, ನಿಕೋನ್‌' ಎಂದು ನಾಮಕರಣ ಮಾಡಿದ್ದಾರೆ.

ಕ್ಯಾಮರಾದ ಬಗ್ಗೆ ವಿಪರೀತ ಕ್ರೇಜಿ ಇರುವ ಇವರು ಈಗ ಕ್ಯಾಮರಾ ಮನೆಯಲ್ಲಿ ವಾಸಿಸುತ್ತಿದ್ದಾರೆ. ಕ್ಲಿಕ್, ಲೆನ್ಸ್, ರೀಲ್ಮ ಶೆಟರ್‌ಸ್ಪೀಡ್ ಹೀಗೆ ಕ್ಯಾಮರಾದ ಪ್ರತಿಯೊಂದು ಫೀಚರ್‌ಗಳನ್ನು ಇವರ ಮನೆಯಲ್ಲಿ ನೋಡಬಹುದಾಗಿದೆ.

Photo courtesy : FB

Read more about: home life ಮನೆ ಜೀವನ
English summary

Karnataka Photographer Builds Camera-Shaped House

That is exactly what this photographer did. Ravi Hongal lives in Belgaum, Karnataka and is a photographer by profession.
X