For Quick Alerts
ALLOW NOTIFICATIONS  
For Daily Alerts

ಅಂತಾರಾಷ್ಟ್ರೀಯ ಹುಲಿ ದಿನ: ಕಾಡಿನ ರಾಜನ ಉಳಿಸುವ ಶಪಥ ಮಾಡಲೇಬೇಕು..

|

ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ ಹುಲಿ. ಇದು ಪ್ರಾಣಿ, ಪರಿಸರ ವ್ಯವಸ್ಥೆಯ ಆರೋಗ್ಯ ಮತ್ತು ವೈವಿಧ್ಯತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ದುರಾದೃಷ್ಠಕರ ಸಂಗತಿಯೆಂದರೆ, ಇಂತಹ ಪ್ರಾಮುಖ್ಯತೆ ಪಡೆದಿರುವ ಈ ಪ್ರಾಣಿ ಇಂದು ಅಳಿವಿಂಚಿನತ್ತ ಸಾಗುತ್ತಿದೆ. ಇಲ್ಲಿಯವರೆಗೆ, ಬಾಲಿ ಟೈಗರ್, ಕ್ಯಾಸ್ಪಿಯನ್ ಟೈಗರ್, ಜವಾನ್ ಟೈಗರ್, ಮತ್ತು ಟೈಗರ್ ಹೈಬ್ರಿಡ್ಸ್ ಸೇರಿದಂತೆ ನಾಲ್ಕು ಜಾತಿಯ ಹುಲಿಗಳ ಸಂತತಿ ಅಳಿದುಹೋಗಿದೆ.

ಕಾಡುಗಳ ನಾಶ, ಕಾಂಕ್ರೀಟ್ ಕಾಡುಗಳ ನಿರ್ಮಾಣದಿಂದ ಹುಲಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಇದೆ. ಇದಕ್ಕೆ ಹುಲಿಗಳ ಬೇಟಿ, ಅವುಗಳ ಭಾಗಗಳ ಅಕ್ರಮ ಮಾರಾಟವೂ ಒಂದು ಕಾರಣವಿರಬಹುದು. ಆದ್ದರಿಂದ, ಹುಲಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು, ಅಂತಾರಾಷ್ಟ್ರೀಯ ಹುಲಿ ದಿನ ಅಥವಾ ಜಾಗತಿಕ ಹುಲಿ ದಿನವನ್ನು ಪ್ರತಿವರ್ಷ ಜುಲೈ 29 ರಂದು ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಹುಲಿ ದಿನದ ಇತಿಹಾಸ:

ಅಂತಾರಾಷ್ಟ್ರೀಯ ಹುಲಿ ದಿನದ ಇತಿಹಾಸ:

ಹುಲಿಗಳು ಕೇವಲ ಹದಿಮೂರು ರಾಷ್ಟ್ರಗಳಲ್ಲಿ ಮಾತ್ರ ಕಂಡುಬರುತ್ತಿರುವುದರಿಂದ ಜೊತೆಗೆ ಸಂಖ್ಯೆಯೂ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವುದನ್ನ ಮನಗಂಡ ರಾಷ್ಟ್ರಗಳು 2010 ರ ಜುಲೈ 29ರಂದು ರಷ್ಯಾದಲ್ಲಿ ನಡೆದ ಸೇಂಟ್ ಪೀಟರ್ಸ್‌ಬರ್ಗ್‌ ಟೈಗರ್‌ ಶೃಂಗಸಭೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದವು. ಜಾಗತಿಕವಾಗಿ ಕಡಿಮೆಯಾಗುತ್ತಿರುವ ಹುಲಿಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಹುಲಿಗಳ ನೈಸರ್ಗಿಕ ಆವಾಸಸ್ಥಾನವನ್ನು ಕಾಪಾಡುವುದು ಈ ಒಪ್ಪಂದದ ಪ್ರಮುಖ ಅಂಶ. ಅಲ್ಲದೆ, 2022ರ ಅಂತ್ಯದ ವೇಳೆಗೆ ಹುಲಿ ಹೆಚ್ಚಾಗಿರುವ ಹುಲಿ ಜನಸಂಖ್ಯೆಯನ್ನು ದ್ವಿಗುಣವಾಗುವಂತೆ ಮಾಡುತ್ತೇವೆ ಎಂದು ವಿವಿಧ ದೇಶಗಳ ಪ್ರತಿನಿಧಿಗಳು ಘೋಷಿಸಿದರು.

ಅಂತಾರಾಷ್ಟ್ರೀಯ ಹುಲಿ ದಿನ 2021 ಥೀಮ್:

ಅಂತಾರಾಷ್ಟ್ರೀಯ ಹುಲಿ ದಿನ 2021 ಥೀಮ್:

"ಅವರ ಉಳಿವು ನಮ್ಮ ಕೈಯಲ್ಲಿದೆ" ಎನ್ನುವುದು ಈ ವರ್ಷದ ಅಂತಾರಾಷ್ಟ್ರೀಯ ಹುಲಿ ದಿನದ ಥೀಮ್‌ ಆಗಿದೆ. ಇನ್ನು, ಕೊರೊನಾ ಸಾಂಕ್ರಾಮಿಕದಿಂದಾಗಿ ಕಳೆದ ವರ್ಷ ಆಚರಣೆಯನ್ನು ಆನ್‌ಲೈನ್‌ನಲ್ಲಿ ನಡೆಸಲಾಯಿತು. ಜಾಗತಿಕ ಹುಲಿ ಜನಸಂಖ್ಯೆಯಲ್ಲಿ ಭಾರತವು ಸುಮಾರು 70% ರಷ್ಟನ್ನು ಹೊಂದಿರುವುದರಿಂದ, ವಾರ್ಷಿಕ ಆಚರಣೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ದೇಶದಲ್ಲಿ ಟೈಗರ್‌ ರಿಸರ್ವ್ಸ್ ಜಾರಿಯಲ್ಲಿರುವುದರಿಂದ ಮತ್ತು ಪರಿಸರ ಇಲಾಖೆಯ ಪ್ರಯತ್ನಗಳು ಜಾರಿಗೆ ಬರುತ್ತಿರುವುದರಿಂದ, ಭಾರತವು ಹುಲಿಗಳ ಸಂಖ್ಯೆಯನ್ನು ಹೆಚ್ಚಿಸುವ ದಾರಿಯಲ್ಲಿದೆ.

ಅಂತಾರಾಷ್ಟ್ರೀಯ ಹುಲಿ ದಿನದ ಘೋಷಣೆಗಳು:

ಅಂತಾರಾಷ್ಟ್ರೀಯ ಹುಲಿ ದಿನದ ಘೋಷಣೆಗಳು:

1. ಹುಲಿಗಳನ್ನು ಉಳಿಸಲು ನಿಮ್ಮ ಧ್ವನಿಯನ್ನು ಏರಿಸಿ

2. ಮುಂದಿನ ಪೀಳಿಗೆಗೆ ಹುಲಿಯನ್ನು ತೋರಿಸೋಣ, ಹುಲಿ ಇತ್ತೆಂಬ ಇತಿಹಾಸವನ್ನಲ್ಲ

3. ಹುಲಿ ಉಳಿಸಿ, ರಾಷ್ಟ್ರ ಹೆಮ್ಮೆ ಉಳಿಸಿ

4. ಕಾಡಿನ ರಾಜನನ್ನು ಉಳಿಸಿ

5. ಹುಲಿಗಳನ್ನು ಉಳಿಸಿ, ಪ್ರಕೃತಿಯನ್ನು ರಕ್ಷಿಸಿ

6. ಹುಲಿಗಳ ಸಂತತಿ ಉಳಿಸಲು ಕೈ ಜೋಡಿಸಿ

7. ಹುಲಿಗಳ ಹಕ್ಕಿಗಾಗಿ ಹೋರಾಡಿ

Read more about: insync
English summary

International Tiger Day: Theme 2021, History, Quotes & Slogans in Kannada

Here we talking about International Tiger Day: Theme 2021, History, Quotes & Slogans in Kannada, read on
Story first published: Thursday, July 29, 2021, 12:37 [IST]
X
Desktop Bottom Promotion