For Quick Alerts
ALLOW NOTIFICATIONS  
For Daily Alerts

ಭಗವದ್ಗೀತೆ ಮುಟ್ಟಿ ಪ್ರಮಾಣವಚನ ಸ್ವೀಕರಿಸಿದ್ದ ರಿಷಿ ಸುನಕ್‌: ಬ್ರಿಟನ್‌ನ ನೂತನ ಪ್ರಧಾನಿ ಕುರಿತ ಆಸಕ್ತಿಕರ ಸಂಗತಿಗಳು

|

ಯುಕೆಯಲ್ಲಿ ಪ್ರಧಾನಿ ಹುದ್ದೆಗಾಗಿ ಬೆಳವಣಿಗೆಗಳು ನಡೆಯುತ್ತಿದ್ದರೆ ಎಲ್ಲಾಆ ರಾಷ್ಟ್ರಗಳಿಗೆ ತುಂಬಾನೇ ಕುತೂಹಲ ಅದರಲ್ಲೂ ಭಾರತಕ್ಕೆ ಇನ್ನಷ್ಟು ಕುತೂಹಲ ಅದಕ್ಕೆ ಕಾರಣ ಯುಕೆ ಪ್ರಧಾನಿ ಪಟ್ಟಕ್ಕೆ ಕೇಳಿ ಬಂದ ಹೆಸರು. ಅವರೇ ರಿಷಿ ಸುನಕ್‌, ಬ್ರಿಟನ್‌ನಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಾರ್ಟಿಯ ನಾಯಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಈ ಹೆಸರು ತುಂಬಾನೇ ಕೇಳಿ ಬರ್ತಾ ಇತ್ತು, ಆದರೆ ಬ್ರಿಟನ್‌ ಪ್ರಧಾನಿ ಸ್ಥಾನಕ್ಕೆ ಲಿಜ್ ಟ್ರುಸ್ ಆಯ್ಕೆಯಾದರು. ಪ್ರಧಾನಿ 45ನೇ ದಿನಕ್ಕೆ ಆ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದರಿಂದಾಗಿ ಬ್ರಿಟನ್‌ನ ಪ್ರಧಾನಿಯಾಗುವ ಅದೃಷ್ಟ ರಿಷಿ ಸುನಕ್ ಅವರಿಗೆ ಒಲಿದಿದೆ.

ಇದೀಗ ರಿಷಿ ಸುನಕ್‌ರವರಿಗೆ ಪ್ರಧಾನಿ ಪಟ್ಟ ಸಿಕ್ಕಿರುವುದಕ್ಕೆ ಭಾರತೀಯರು ತುಂಬಾನೇ ಖುಷಿ ಪಡುತ್ತಿದ್ದಾರೆ. ಹಿಂದೆ ನಮ್ಮನ್ನು ಆಳಿದ್ದರು ಬ್ರಿಟಿಷರು, ಇದೀಗ ಭಾರತೀಯ ಮೂಲದ ವ್ಯಕ್ತಿ ಬ್ರಿಟಿಷರಿಗೆ ಪ್ರಧಾನಿಯಾಗುತ್ತಿದ್ದಾರೆ. ಅಷ್ಟು ಮಾತ್ರವಲ್ಲ ಭಾರತದಲ್ಲಿ ಬೃಹತ್ತಾದ ಟೆಕ್‌ ಸಾಮ್ರಾಜ್ಯ ಕಟ್ಟಿರುವ ಇನ್ಫೋಸಿಸ್ ನಾರಾಯಣ ಮೂರ್ತಿಯವರ ಅಳಿಯ ಎಂಬುವುದು ಮತ್ತೊಂದು ಖುಷಿ. ಇವರ ಮದುವೆ ಬೆಂಗಳೂರಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ನಡೆದಿತ್ತು. ಈ ದಂಪತಿಗೆ ಕೃಷ್ಣಾ, ಅನುಷ್ಕಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಇದೀಗ ಇಂಗ್ಲೆಂಡ್‌ನ ನೂತನ ಪ್ರಧಾನಿಯಾಗಿರುವ ಇನ್ನೂ ಅನೇಕ ಆಸಕ್ತಿಕರ ಸಂಗತಿಗಳನ್ನು ತಿಳಿಯೋಣ:

200 ವರ್ಷಗಳಲ್ಲಿಯೇ ಬ್ರಿಟನ್‌ನನ್ನು ಆಳುತ್ತಿರುವ ಕಿರಿಯ ವಯಸ್ಸಿನ ಪ್ರಧಾನಿ

200 ವರ್ಷಗಳಲ್ಲಿಯೇ ಬ್ರಿಟನ್‌ನನ್ನು ಆಳುತ್ತಿರುವ ಕಿರಿಯ ವಯಸ್ಸಿನ ಪ್ರಧಾನಿ

ರಿಷಿ ಸುನಕ್ ವಯಸ್ಸು 42, ಕಳೆದ 200 ವರ್ಷಗಳಿಂದ ಬ್ರಿಟನ್‌ನನ್ನು ಆಳಿರುವ ಪ್ರಧಾನಿಗಳಲ್ಲಿ ಅತೀ ಚಿಕ್ಕ ವಯಸ್ಸಿನವರು ರಿಷಿ ಸುನಕ್.

ಬ್ರಿಟನ್‌ನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾಮೂರ್ತಿ

ಬ್ರಿಟನ್‌ನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾಮೂರ್ತಿ

ಬ್ರಿಟನ್‌ನ ಅತ್ಯಂತ ಶ್ರೀಮಂತರ 250 ಪಟ್ಟಿಯ್ಲಿ 222ನೇ ಸ್ಥಾನದಲ್ಲಿದ್ದಾರೆ. ರಿಷಿ ಸುನಕ್ ಅವರ ಪತ್ನಿ ಅಕ್ಷತಾಮೂರ್ತಿಯವರ ಒಟ್ಟು ಆಸ್ತಿ £730 ಮಿಲಿಯನ್. ಈ ದಂಪತಿ ಬ್ರಿಟನ್‌ನ ರಾಣಿಯಾಗಿದ್ದ 2ನೇ ಎಲಿಜಬತ್‌ರವರಿಗಿಂತಲೂ ಶ್ರೀಮಂತರು. ರಾಣಿಯ ಒಟ್ಟು ಆಸ್ತಿ £430 ಮಿಲಿಯನ್ ಆಗಿದೆ.

ರಿಷಿ ಸುನಕ್‌ ಮತ್ತು ಅಕ್ಷತಾ ಮೂರ್ತಿ ದಂಪತಿಗೆ ಒಟ್ಟು ನಾಲ್ಕು ಮನೆಗಳಿವೆ, ಎರಡು ಲಂಡನ್‌ನಲ್ಲಿ ಒಂದು ಯಾರ್ಕ್‌ಶೈರ್ ಮತ್ತು ಲಾಸ್ಏಂಜಲೀಸ್‌ನಲ್ಲಿದೆ.

ರಿಷಿ ಸುನಕ್‌ ತಮ್ಮ ಇಪ್ಪತ್ತರ ಹರೆಯದಲ್ಲಿಯೇ ಮಿಲಿಯನರ್‌. ಅವರು ಅಕ್ಷತಾಮೂರ್ತಿಯನ್ನು ಮದುವೆಯಾದ ಬಳಿಕ ಅವರ ಸಂಪತ್ತು ಮತ್ತಷ್ಟು ಹೆಚ್ಚಾಯಿತು.

ಬಾರತೀಯ ಮೂಲದ ವ್ಯಕ್ತಿ

ಬಾರತೀಯ ಮೂಲದ ವ್ಯಕ್ತಿ

ರಿಷಿ ಸುನಕ್‌ರವರ ತಂದೆ-ತಾಯಿ ಪಂಜಾಬಿನವರು. ಪೂರ್ವ ಆಫ್ರಿಕದಲ್ಲಿ ನೆಲೆಸಿದ್ದ ಕುಟುಂಬ 1960ರಲ್ಲಿ ಯುಕೆಗೆ ಹೋಗಿ ವಾಸಿಸಿ ಅಲ್ಲಿಯ ಪೌರತ್ವ ಪಡೆದರು. ರಿಷಿ ಸುನಕ್‌ ಹುಟ್ಟಿ ಬೆಳೆದದ್ದು ಬ್ರಿಟನ್‌ನಲ್ಲಿಯೇ.

ಇಷ್ಟೊಂದು ಆದಾಯದ ಮೂಲ

ಇಷ್ಟೊಂದು ಆದಾಯದ ಮೂಲ

ರಿಷಿ ಸುನಕ್ ಅವರು ವಿಂಚೆಸ್ಟರ್ ಕಾಲೇಜು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ವಿದ್ಯಾಭ್ಯಾಸ ಮುಗಿಸಿ ನಂತರ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮಾಡುತ್ತಾರೆ, ಅಲ್ಲಿಯೇ ಅವರು ಅಕ್ಷತಾಮೂರ್ತಿಯವರನ್ನು ಭೇಟಿಯಾಗಿ, ಅವರಿಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಸಲಾರಂಭಿಸಿದರು. ವಿದ್ಯಾಭ್ಯಾಸದ ನಂತರ ಇನ್‌ವೆಸ್ಟ್‌ ಬ್ಯಾಂಕ್‌ ಕಂಪನಿಯೊಂದರಲ್ಲಿ ಅವರು ಅನಾಲಿಸ್ಟ್ ಆಗಿ ನಾಲ್ಕು ವರ್ಷ ಸೇವೆ ಸಲ್ಲಿಸಿದ್ದಾರೆ. ಹೀಗೆ ವಿವಿಧ ಕಂಪನಿಗಳಲ್ಲಿ ಅವರು ಕೆಲಸ ಮಾಡಿದ್ದಾರೆ.

ಸಂಸದರಾದಾಗ ಭಗವದ್ಗೀತೆ ಮುಟ್ಟಿ ಪ್ರಮಾಣ ಮಾಡಿದ್ದರು

ಸಂಸದರಾದಾಗ ಭಗವದ್ಗೀತೆ ಮುಟ್ಟಿ ಪ್ರಮಾಣ ಮಾಡಿದ್ದರು

ಭಾರತದಲ್ಲಿ ಸಂಸದರು ಭಗವದ್ಗೀತೆ ಮುಟ್ಟಿ ಪ್ರಮಾಣ ಮಾಡುವುದು ಹೊಸತಲ್ಲ, ಆದರೆ ಇವರು ಬ್ರಿಟನ್‌ನ ಸಂಸದರಾಗಿದ್ದಾಗ ಭಗವದ್ಗೀತೆ ಮುಟ್ಟಿ ಪ್ರಮಾಣವಚನ ಸ್ವೀಕರಿಸಿದ್ದರು.

ಕೊರೊನಾ ಸಮಯದಲ್ಲಿ ಉಂಟಾಗಿದ್ದ ಆರ್ಥಿಕ ಸಂಕಷ್ಟ ನಿವಾರಿಸುವ ಯತ್ನ ಮಾಡಿದ್ದಾರೆ

ಕೊರೊನಾ ಸಮಯದಲ್ಲಿ ಉಂಟಾಗಿದ್ದ ಆರ್ಥಿಕ ಸಂಕಷ್ಟ ನಿವಾರಿಸುವ ಯತ್ನ ಮಾಡಿದ್ದಾರೆ

ಕೊರೊನಾ ಸಮಯದಲ್ಲಿ ಬ್ರಿಟನ್‌ನಲ್ಲಿ ಸಂಸದರಾಗಿ ಆರ್ಥಿಕ ಸಂಕಷ್ಟ ನಿವಾರಿಸಲು ಹಲವಾರು ಯೋಜನೆ ರೂಪಿಸಿದ್ದರು. ಆರ್ಥಿಕ ಸವಾಲಿನ ಕಾರಣ ಮಾಜಿ ಪ್ರಧಾನಿ ಲಿಜ್ ಟ್ರಸ್ ಅಧಿಕಾರ ತ್ಯಜಿಸಿದ್ದರು, ಇದೀಗ ನೂತನ ಪ್ರಧಾನಿಯಾಗಿರುವ ರಿಷಿ ಸುನಕ್‌ ಅವರ ಎದುರಿನಲ್ಲಿ ಸಾಕಷ್ಟು ಸವಾಲುಗಳಿದ್ದರೂ ಅದನ್ನು ಅವರು ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ಭರವಸೆ ಅವರ ಪಾರ್ಟಿ ಹಾಗೂ ಬ್ರಿಟನ್‌ನ ಜನತೆಗೆ ಇದೆ.

ಬ್ರಿಟಿನ್‌ನ ನೂತನ ಪ್ರಧಾನಿಗೆ ನಮ್ಮ ಪ್ರಧಾನಿ ನರೇಂದ್ರಮೋದಿಯವರು ಹಾಗೂ ಭಾರತೀಯರು ಶುಭಾಶಯ ತಿಳಿಸುತ್ತಿದ್ದಾರೆ.

English summary

Interesting Facts About UK PM Rishi Sunak in Kannada

Here are more interesting facts about UK PM Rishi Sunak, read on.....
X
Desktop Bottom Promotion