For Quick Alerts
ALLOW NOTIFICATIONS  
For Daily Alerts

PV Sindhu: ಒಲಿಂಪಿಕ್ಸ್‌ ಇತಿಹಾಸದಲ್ಲಿಯೇ ಹೊಸ ಸಾಧನೆ ಮಾಡಿದ ಪಿ ವಿ ಸಿಂಧು

|

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್‌ ವಿಭಾಗದ ಕಂಚಿನ ಪದಕದ ಸುತ್ತಿನಲ್ಲಿ ಗೆದ್ದು ಕಂಚಿನ ಪದಕವನ್ನು ಭಾರತಕ್ಕೆ ತಂದು ಕೊಟ್ಟಿದ್ದಾರೆ.

Interesting Facts About PV Sindhu who won bronze medal to create history for India at Tokyo Olympics

ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದು ಕೊಟ್ಟಿದ ಪಿ ವಿ ಸಿಂಧು ಅವರು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದು ತಂದಿದ್ದಾರೆ. ಆಗಸ್ಟ್‌ 1ರಮದು ಭಾನುವಾರ ನಡೆದ ಪಂದ್ಯದಲ್ಲಿ ತಮ್ಮ ಎದುರಾಳು ಹಿ ಬಿಂಗ್‌ ಜಿಯಾವೂ ಅವರನ್ನು ಸೋಲಿಸಿ ಕಂಚಿನ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ, ಈ ಮೂಲಕ ಕೋಟ್ಯಾಂತರ ಭಾರತೀಯರ ಪ್ರೀತಿಗೆ ಪಾತ್ರರಾಗಿದ್ದಾರೆ. ಪಿವಿ ಸಿಂಧು ಇದ್ದಾರೆ ಎಂದಾರೆ ಭಾರತಕ್ಕೆ ಒಂದು ಪದಕ ಗ್ಯಾರಂಟಿ ಎಂಬ ಭರವಸೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

ಸೆಮಿಫೈನಲ್‌ನಲ್ಲಿ ಸೋತಾಗ ಕಣ್ಣೀರಿಟ್ಟಿದ್ದ ಸಿಂಧು

2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಯಾವುದೇ ಪಂದ್ಯದಲ್ಲಿ ಸೋಲದೆ ಸೆಮಿಫೈನಲ್‌ ಹಂತ ಯಶಸ್ವಿಯಾಗಿ ತಲುಪಿದಾಗ ಬೆಳ್ಳಿ ಅಥವಾ ಚಿನ್ನ ಸಿಕ್ಕೇ ಸಿಗುತ್ತದೆ ಎಂಬ ಭರವಸೆ ಮೂಡಿತ್ತು, ಆದರೆ ಸೆಮಿಫೈನಲ್‌ನಲ್ಲಿ ಸೋತಾಗ ಪಿವಿ ಸಿಂಧು ನೋವಿನಿಂದ ಕಣ್ಣೀರಿಟ್ಟಿದ್ದರು.
ಆದರೆ ಅವರಿಗೆ ಅವರ ತಂದೆ ಧೈರ್ಯ ತುಂಬಿ 'ನನಗೋಸ್ಕರ ಕಂಚಿನ ಪದಕದ ಸುತ್ತಿನಲ್ಲಿ ನೀನು ಪಂದ್ಯ ಗೆಲ್ಲಬೇಕು, ಆ ಪಂದ್ಯ ಗೆದ್ದರೆ ಅದುವೇ ನೀನು ನನಗೆ ಕೊಡುವ ಉಡುಗೊರೆ' ಎಂದು ಹೇಳಿ ಧೈರ್ಯ ತುಂಬಿದರು ಎಂದು ಕಂಚು ಗೆದ್ದ ಬಳಿಕ ಪಿ ವಿ ಸಿಂಧು ಹೇಳಿದ್ದಾರೆ.

ದಾಖಲೆ ಮಾಡಿರುವ ಪಿ ವಿ ಸಿಂಧು

2016 ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಈ ಮೂಲಕ ಒಲಿಂಪಿಕ್ಸ್‌ ಇತಿಹಾಸದಲ್ಲಿಯೇ 2 ಬಾರಿ ಪದಕ ಪಡೆದ ಭಾರತೀಯೆ ಎಂಬ ದಾಖಲೆ ಮಾಡಿದ್ದಾರೆ.

ನಿಮ್ಮ ಈ ಸಾಧನೆ ಹೀಗೆ ಮುಂದುವರೆಯಲಿ ಪಿ ವಿ ಸಿಂಧು...

English summary

Interesting Facts About PV Sindhu who won bronze medal to create history for India at Tokyo Olympics

Here are the Interesting Facts About PV Sindhu who won bronze medal to create history for India at Tokyo Olympics in kannada. Read on.
X
Desktop Bottom Promotion