For Quick Alerts
ALLOW NOTIFICATIONS  
For Daily Alerts

ಬಾಹ್ಯಾಕಾಶ ತಜ್ಞ ವಿಕ್ರಮ್ ಸಾರಾಭಾಯಿ ಜನ್ಮಶತಮಾನೋತ್ಸವಕ್ಕೆ ಗೂಗಲ್ ಡೂಡಲ್ ಗೌರವ

ಭಾರತದ ಹಿರಿಯ ವಿಜ್ಞಾನಿ, ಬಾಹ್ಯಾಕಾಶ ಸಾಧನೆಗೆ ಮುನ್ನುಡಿ ಬರೆದ ಭೌತಶಾಸ್ತ್ರಜ್ಞ, ಉದ್ಯಮಿ, ಸಂಶೋಧಕ ಹಾಗೂ ಇಸ್ರೋ ಸ್ಥಾಪಕ ಡಾ. ವಿಕ್ರಂ ಸಾರಾಭಾಯಿ ಅವರ ಜನ್ಮಶತಮಾನೋತ್ಸವದ ಪ್ರಯುಕ್ತ ಗೂಗಲ್ ಡೂಡಲ್ ಗೌರವ ಸಲ್ಲಿಸಿದೆ. ಈ ಹಿನ್ನೆಲೆ ವಿಕ್ರಂ ಕುರ

|

ಭಾರತದ ಬಾಹ್ಯಾಕಾಶ ಸಾಧನೆಗೆ ಮುನ್ನುಡಿ ಬರೆದ ಭೌತಶಾಸ್ತ್ರಜ್ಞ, ಉದ್ಯಮಿ, ಸಂಶೋಧಕ ಹಾಗೂ ಇಸ್ರೋ ಸ್ಥಾಪಕ ಡಾ. ವಿಕ್ರಂ ಸಾರಾಭಾಯಿ ಅವರ ಜನ್ಮಶತಮಾನೋತ್ಸವದ ಪ್ರಯುಕ್ತ ಗೂಗಲ್ ಡೂಡಲ್ ಗೌರವ ಸಲ್ಲಿಸಿದೆ.

ಮುಂಬೈ ಮೂಲದ ಕಲಾವಿದ ಪವನ್ ರಾಜುಕರ್ ರಚಿತ ವಿಕ್ರಂ ಛಾಯಾಚಿತ್ರವನ್ನು ಗೂಗಲ್ ಡೂಡಲ್ ಪ್ರಕಟಿಸಿದೆ.

ವಿದೇಶಗಳಲ್ಲಿ ಬಾಹ್ಯಾಕಾಶ ಸಂಶೋಧನೆಗೆ ನೀಡಿರುವ ಪ್ರಾಮುಖ್ಯತೆ ಅರಿತ ವಿಕ್ರಂ ಭಾರತದಲ್ಲೂ ಇದಕ್ಕೆ ಅಗತ್ಯ ಮನ್ನಣೆ ದೊರೆಯಬೇಕೆಂದು ಸರ್ಕಾರಕ್ಕೆ ಮನವರಿಕೆ ಮಾಡಿ ಇಸ್ರೋ ಸ್ಥಾಪಿಸುವಲ್ಲಿ ಯಶಸ್ವಿಯಾದರು. ಇವರ ಈ ಕೊಡುಗೆಯಿಂದ ಭಾರತ ಬಾಹ್ಯಾಕಾಶ ಸಂಶೋಧನೆಯಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಾಮುಖ್ಯತೆ ಪಡೆಯಲು ಸಾಧ್ಯವಾಗಿಸಿದೆ.

ವಿಕ್ರಮ್ ಸಾರಾಭಾಯಿ ಬಗ್ಗೆ ಕಿರು ಪರಿಚಯ

ವಿಕ್ರಮ್ ಸಾರಾಭಾಯಿ ಬಗ್ಗೆ ಕಿರು ಪರಿಚಯ

ತಂದೆ ಅಂಬಾಲಾಲ್ ಸಾರಾಭಾಯ್, ತಾಯಿ ಸರಳಾದೇವಿ ದಂಪತಿಯ ಪುತ್ರ ವಿಕ್ರಂ ಸಾರಾಭಾಯಿ 1919 ಆಗಸ್ಟ್ 12ರಂದು ಗುಜರಾತಿನ ಅಹಮದಾಬಾದ್ ನ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಬಾಲ್ಯದಲ್ಲೆ ಬಹಳ ಬುದ್ದಿವಂತನಾಗಿದ್ದ ವಿಕ್ರಂ ಕೇಂಬ್ರಿಡ್ಜ್ ವಿಶ್ವ ವಿದ್ಯಾಲಯದಲ್ಲಿ ಪಿಹೆಚ್ ಡಿ ಪದವಿ ಪಡೆದರು.

ವಿಶ್ವ ಕಿರಣಗಳ ತೀಕ್ಷ್ಣತೆ ಕುರಿತ ಸಂಶೋಧನೆ

ವಿಶ್ವ ಕಿರಣಗಳ ತೀಕ್ಷ್ಣತೆ ಕುರಿತ ಸಂಶೋಧನೆ

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯಲ್ಲಿ ವಿಜ್ಞಾನಿ ಸಿ.ವಿ.ರಾಮನ್‌ರೊಂದಿಗೆ ಸಂಶೋಧನೆ ನಡೆಸಿದ ಅವರು ವಿಶ್ವ ಕಿರಣಗಳ ತೀಕ್ಷ್ಣತೆಯಲ್ಲುಂಟಾಗುವ ಬದಲಾವಣೆಗಳ ಬಗ್ಗೆ ಸಂಶೋಧನೆ ನಡೆಸಿ, ಅವುಗಳ ಕಾಲ ತೀಕ್ಷ್ಣತೆ ದಿನಕ್ಕೆ ೨ ಬಾರಿ ಬದಲಾಗುವುದನ್ನು ಕಂಡುಹಿಡಿದು. ಈ ಸಂಶೊಧನೆ ಮುಂದೆ ಬಾಹ್ಯಾಕಾಶ ಸಂಶೋಧನೆಗಳಿಗೆ ಸಾಕಷ್ಟು ನೆರವಾಯಿತು.

ಮೊದಲ ಬಾಹ್ಯಾಕಾಶ ಉಪಗ್ರಹ ಆರ್ಯಭಟ ಉಡಾವಣೆ

ಮೊದಲ ಬಾಹ್ಯಾಕಾಶ ಉಪಗ್ರಹ ಆರ್ಯಭಟ ಉಡಾವಣೆ

ಭಾರತದ ಮೊದಲ ಉಪಗ್ರಹವನ್ನು ತಯಾರಿಸಿ ಉಡಾವಣೆ ಮಾಡಿದ ಕೀರ್ತಿ ಸಹ ವಿಕ್ರಂ ಅವರಿಗೆ ಸಲ್ಲುತ್ತದೆ. ಭಾರತದ ಮೊದಲ ಆರ್ಯಭಟವನ್ನು 1975ರಲ್ಲಿ ರಷ್ಯಾ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು.

ಸಾಧನೆ

ಸಾಧನೆ

ಅಣು ಶಕ್ತಿ ಆಯೋಗದ ಅಧ್ಯಕ್ಷರಾಗಿದ್ದ ಹೋಮಿ ಜಹಾಂಗೀರ್ ಭಾಭಾ ಅವರ ನಿಧನದ ನಂತರ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡ ವಿಕ್ರಂ ಸಮರ್ಥ ಕಾರ್ಯನಿರ್ವಹಣೆಯಿಂದ ಉತ್ತಮ ಆಡಳಿತಗಾರರೆಂಬ ಹೆಸರು ಪಡೆದರು. ಅಹರ್ನಿಶಿ ಸಂಬಂಧ ಹಲವು ಸಂಶೋಧನೆಗಳನ್ನು ಮಾಡಿದರು.

ಅಹ್ಮಮದಾಬಾದಿನಲ್ಲಿ ಸಂಶೋಧನಾ ಕೇಂದ್ರದ ಸ್ಥಾಪನೆ ಮತ್ತು ನಿರ್ದೇಶಕ, ಕಾಶ್ಮೀರದ ಗುಲ್ಮಾರ್ಗ್ ವಿಶ್ವಕಿರಣಗಳ ಸಂಶೋಧನಾ ಕೇಂದ್ರ ಸ್ಥಾಪನೆ, ಭಾರತೀಯ ವಿಜ್ಞಾನ ಕಾಂಗ್ರೆಸ್ ನ ಸಮ್ಮೇಳನದ ಭೌತ ವಿಜ್ಞಾನ ವಿಭಾಗದ ಅಧ್ಯಕ್ಷತೆ ಸೇರಿದಂತೆ ನೆಹರೂ ಫೌಂಡೇಷನ್, ಕಮ್ಯೂನಿಟಿ ಸೈನ್ಸ್ ಸೆಂಟರ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳಂಥ ಹಲವು ಸಂಘ, ಸಂಸ್ಥೆಗಳನ್ನು ಹುಟ್ಟು ಹಾಕಿದರು.

ಸನ್ಮಾನ-ಗೌರವ ಪುರಸ್ಕಾರ

ಸನ್ಮಾನ-ಗೌರವ ಪುರಸ್ಕಾರ

ಬಾಹ್ಯಾಕಾಶ ಕ್ಷೇತ್ರದಲ್ಲಿ ಅಪಾರ ಸಾಧನೆಗೈದ ವಿಕ್ರ ಅವರಿಗೆ ಭಾರತ ಸರ್ಕಾರದ ಭಾಟ್ನಾಗರ್ ಸ್ಮಾರಕ ಪಾರಿತೋಷಕ, ಪದ್ಮಭೂಷಣ, ಮರಣೋತ್ತರ ಪದ್ಮವಿಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡ ಕೀರ್ತಿ ಸಲ್ಲುತ್ತದೆ.

English summary

Google Doodle Celebrates 100th Birthday of Vikram Sarabhai

Google is honouring Dr Vikram Sarabhai's 100th birthday with a doodle today. Considered the Father of the Indian space program, Vikram Sarabhai was an award-winning physicist, industrialist, and innovator who established Indian Space Research Organisation.
X
Desktop Bottom Promotion