For Quick Alerts
ALLOW NOTIFICATIONS  
For Daily Alerts

ಇಂಜಿನಿಯರ್ ದಿನ: ದೇಶ ಕಂಡ ಮಹಾನ್ ಬುದ್ಧಿವಂತ ಇಂಜಿನಿಯರ್ ವಿಶ್ವೇಶ್ವರಯ್ಯ

|

ಮೋಕ್ಷಗುಂಡಂ ವಿಶ್ವೇಶ್ವರಯ್ಯ ದೇಶ ಕಂಡ ಮಹಾನ್ ಬುದ್ಧಿವಂತ ಇಂಜಿನಿಯರ್. ಇವರು ದೇಶಕ್ಕೆ ನೀಡಿದ ಕೊಡುಗೆ ಅಪಾರ. ಈ ಮೇರು ವ್ಯಕ್ತಿಯ ಜನ್ಮ ದಿನವನ್ನು (ಸೆ. 15) ಇಂಜಿನಿಯರ್ ದಿನವನ್ನಾಗಿ ಆಚರಿಸಲಾಗುತ್ತಿದೆ.

Engineer Day: Know About Visvesvaraya, One Of The Greatest Engineer

ಸೆಪ್ಟೆಂಬರ್ 15, 1860ರಂದು ನಮ್ಮ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದರು. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ ವಿಶ್ವೇಶ್ವರಯ್ಯನವರು ನಂತರ ಮುಂಬೈನ ಪುಣೆಯಲ್ಲಿ 1884 ರಲ್ಲಿ ಇಂಜನಿಯರಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಂಬೈ ಸರ್ಕಾರದಲ್ಲಿ ಸೇವೆಯನ್ನು ಆರಂಭಿಸಿದರು. 1907 ರವರೆಗೆ ಮುಂಬೈ ಸರ್ಕಾರದಲ್ಲಿ ಸೇವೆ ಸಲ್ಲಿಸಿ ನಂತರ ಸ್ವಯಂ ನಿವೃತ್ತಿ ಪಡೆಯುತ್ತಾರೆ. ಮುಂದೆ ಅವರು ತಮ್ಮ ಅಪೂರ್ವ ಪ್ರತಿಭೆ ಹಾಗೂ ಬುದ್ಧಿಶಕ್ತಿಯಿಂದಾಗಿ ಭಾರತದಲ್ಲಿ ಪ್ರಸಿದ್ಧರಾದರು.

ಇವರು ಮುಂಬೈನಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ಇಟಲಿ ದೇಶದ ಮಿಲಾನ್ ಮತ್ತು ಈಡನ್ ನಗರಗಳಿಗೆ ಭೇಟಿ ನೀಡಿ ಆ ನಗರಗಳ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗಳ ಯೋಜನೆಯನ್ನು ರೂಪಿಸಿದ್ದರು. ನಂತರ ಪುಣೆ, ಕೊಲ್ಹಾಪುರ, ಸೋಲಾಪುರ, ವಿಜಾಪುರ, ಮತ್ತು ಧಾರವಾಡ ಈ ನಗರಗಳಿಗೆ ನೀರಿನ ವ್ಯವಸ್ಥೆಯನ್ನು ವಿನ್ಯಾಸಗೊಳಿಸುವಲ್ಲಿ ಪ್ರಮುಖ ಪಾತರವಹಿಸಿದರು.

ಇವರ ಹಲವಾರು ಸಾಧನೆಗಳಲ್ಲಿ ಒಂದು ಕೃಷ್ಣರಾಜಸಾಗರ ಅಣೆಕಟ್ಟು

ಕಾವೇರಿ ನದಿಗೆ ಮಂಡ್ಯ ಜಿಲ್ಲೆಯಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಿಸುವ ಮೂಳಕ ಹರಿದು ಪೋಲಾಗುತ್ತಿದ್ದ ನೀರಿನ ಸದ್ಬಳಿಕೆಗೆ ಅನುವು ಮಾಡಿಕೊಟ್ಟರು. ಕನ್ನಂಬಾರಿ ಅಣೆಕಟ್ಟು ನಿರ್ಮಾಣ ಮಾಡುವ ಸಂದರ್ಭದಲ್ಲಿ ವಿಶ್ವೇಶ್ವರಯ್ಯನವರು ಮದ್ರಾಸ್ ಸರ್ಕಾರದ ವಿರೋಧದ ನಡುವೆಯೂ ಕಟ್ಟಿದರು.

ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಅಡಿಪಾಯ ಹಾಕಿದರು

ಮೈಸೂರಿನ ನಾಲ್ಕನೇ ಕೃಷ್ಣರಾಜ ಒಡೆಯರ ಆಳ್ವಿಕೆಯ ಕಾಲದಲ್ಲಿ ವಿಶ್ವೇಶ್ವರಯ್ಯನವರು ದಿವಾನರಾಗಿ ಕಾರ್ಯ ನಿರ್ವಹಿಸಿದರು. ಈ ಕಾಲಾವಧಿಯಲ್ಲಿ ಕಷ್ಟು ಮಹತ್ಕಾರ್ಯಗಳನ್ನು ಮಾಡಿದ್ದರು. ಭದ್ರಾವತಿಯ ಉಕ್ಕಿನ ಕಾರ್ಖಾನೆ, ಜೋಗದ ಶರಾವತಿ ವಿದ್ಯುತ್‌ ಯೋಜನೆ, ಮೈಸೂರು ಸ್ಯಾಂಡಲ್‌ ಸಾಬೂನಿನ ಕಾರ್ಖಾನೆ , ಮೈಸೂರು ಬ್ಯಾಂಕ್ ಸ್ಥಾಪನೆ, ಮೈಸೂರು ವಿಶ್ವ ವಿದ್ಯಾನಿಲಯ ಸ್ಥಾಪನೆ, ಕನ್ನಡ ಸಾಹಿತ್ಯ ಸ್ಥಾಪನೆ ಹೀಗೆ ಮಹತ್ವದ ಕೊಡುಗೆಗಳನ್ನು ನಮ್ಮ ಕನ್ನಡ ನಾಡಿಗೆ ನೀಡಿ ನಮ್ಮೆಲ್ಲರ ಮನಸ್ಸಿನಲ್ಲಿ ಅಜರಾಮರರಾಗಿ ನೆಲೆಸಿದ್ದಾರೆ.

ಭಾರತ ರತ್ನ

ವಿಶ್ವೇಶ್ವರಯ್ಯನವರ ಸಾಧನೆ ಮೆಚ್ಚಿ ಇವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಬ್ರಿಟಿಷ್ ಸರಕಾರ ಇವರಿಗೆ ನೈಟ್‌ಹುಡ್ ನೀಡಿ ಗೌರವಿಸಿತು. 1955ರಲ್ಲಿ ಭಾರತ ಸರ್ಕಾರ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನ ನೀಡಿ ಗೌರವಿಸಿತು. ತುಂಬು ಜೀವನ ನಡೆಸಿದ ಇವರು ಶತಾಯುಷಿಗಳಾಗಿ 1962ನೇ ಎಪ್ರಿಲ್‌ 12ಕ್ಕೆ ವಿಧಿವಶರಾದರು.

ಈ ಮಹಾನ್‌ ಜನ್ಮ ದಿನವನ್ನು ಇಂಜಿನಿಯರ್ ದಿನವನ್ನಾಗಿ ಆಚರಿಸಲಾಗುತ್ತದೆ. ದೇಶಕ್ಕೆ, ದೇಶದ ಪ್ರಮುಖ ಯೋಜನೆಗಳಿಗೆ ಭದ್ರ ಬುನಾದಿ ಹಾಕುವಲ್ಲಿ ಇಂಜಿನಿಯರ್‌ಗಳ ಪಾತ್ರ ಪ್ರಮುಖವಾದದ್ದು. ಇಂಜಿನಿಯರ್‌ಗ ಳ ಕ್ರಿಯಾಶೀಲತೆ, ಬುದ್ಧಿವಂತಿಕೆ ದೇಶ, ನಗರ ಒಂದು ಸಂಸ್ಥೆಯನ್ನು ಆರ್ಥಿಕವಾಗಿ ಅಭಿವೃದ್ಧಿಗೆ ಕೊಂಡೊಯ್ಯುತ್ತದೆ. ವಿಶ್ವೇಶ್ವರಯ್ಯನಂಥ ಮತ್ತಷ್ಟು ಕೊಡುಗೆಗಳನ್ನು ಇಂಜಿನಿಯರ್‌ಗಳು ನೀಡುವಂತಾಗಲಿ... ಎಲ್ಲಾ ಇಂಜಿನಿಯರ್‌ಗಳಿಗೆ 'ಇಂಜಿನಿಯರ್‌ ದಿನ'ದ ಶುಭಾಶಯಗಳು...

English summary

Engineers Day : Sir M. Visvesvaraya Achievements in Kannada

Every year September 15 observed as Engineer Day, Here are information about One of the greatest engineer Sir M Visvesvaraya
X
Desktop Bottom Promotion