Just In
Don't Miss
- Movies
ರಾಬರ್ಟ್ ಸಂಭ್ರಮ: ವಿನಯದಿಂದ ತೆಲುಗು ಅಭಿಮಾನಿಗಳ ಮನಸು ಕದ್ದ ದರ್ಶನ್
- Finance
ಫಾಸ್ಟ್ಟ್ಯಾಗ್ ಟೋಲ್ ಕಲೆಕ್ಷನ್: ಒಂದು ದಿನಕ್ಕೆ 104 ಕೋಟಿ ರೂಪಾಯಿ
- Automobiles
ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಬಗ್ಗೆ ಸುಳಿವು ನೀಡಿದ ಪೆಟ್ರೋಲಿಯಂ ಸಚಿವ
- News
ರೈತರ ಕಲ್ಯಾಣಕ್ಕಾಗಿ ಅರ್ಪಿಸಿಕೊಂಡವರು: ಜನ್ಮದಿನದಂದು ಯಡಿಯೂರಪ್ಪಗೆ ಮೋದಿ ಶುಭಾಶಯ
- Sports
ಮೊಟೆರಾ ಪಿಚ್ ಬಗ್ಗೆ ವಿರಾಟ್ ಕೊಹ್ಲಿ ಹೇಳಿಕೆಗೆ ಅಲಾಸ್ಟೇರ್ ಕುಕ್ ಕಿಡಿ
- Education
RBI Grade B Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಲಾಕ್‌ಡೌನ್ ವೇಳೆ ಭಾರತದಲ್ಲಿ ಹೆಚ್ಚುತ್ತಿದೆ ಕೌಟುಂಬಿಕ ದೌರ್ಜನ್ಯ
ಕೊರೋನಾ ತಡೆಗೆ ವಿಶ್ವದೆಲ್ಲೆಡೆಯಲ್ಲಿ ಈಗ ಹೆಚ್ಚಿನ ರಾಷ್ಟ್ರಗಳು ಲಾಕ್ ಡೌನ್ ಮಾಡಿದ್ದು, ಇದರಿಂದಾಗಿ ಕೆಲವೊಂದು ರಾಷ್ಟ್ರಗಳಲ್ಲಿ ಈ ಸೋಂಕು ಹರಡುವುದು ಕಡಿಮೆ ಆಗಿದೆ. ಆದರೆ ಲಾಕ್ ಡೌನ್ ನಿಂದ ಆಗಿರುವಂತಹ ಕೆಲವು ಉಪಯೋಗಗಳ ಹೊರತಾಗಿಯೂ ಕೆಲವು ಆಘಾತಕಾರಿ ಅಂಶಗಳು ಹೊರಗೆ ಬೀಳುತ್ತಿದೆ. ಇದರಲ್ಲಿ ಮುಖ್ಯವಾಗಿ ವಿಶ್ವದೆಲ್ಲೆಡೆಯಲ್ಲಿ ಗೃಹ ಹಿಂಸೆಯ ಪ್ರಮಾಣವು ಹೆಚ್ಚಾಗುತ್ತಲಿದೆ ಎಂದು ಅಂಕಿಅಂಶಗಳು ಹೇಳಿವೆ.
ಮನೆಯಲ್ಲೇ ಇಡೀ ದಿನ ಉಳಿದುಕೊಂಡಿರುವ ಪರಿಣಾಮವಾಗಿ ಕೆಲವರಲ್ಲಿ ಮಾನಸಿಕವಾಗಿ ಇದರ ಪರಿಣಾಮ ಬೀರುತ್ತಲಿದೆ. ಯಾಕೆಂದರೆ ಕಚೇರಿ, ಕೆಲಸಕ್ಕೆ ಹೋಗದೆ ಪ್ರತೀ ದಿನವೂ ಇರುವ ಪರಿಣಾಮವಾಗಿ ಮಾನಸಿಕ ಒತ್ತಡವು ಹೆಚ್ಚಾಗುತ್ತಲಿದೆ ಮತ್ತು ಇದರಿಂದ ಜನರಲ್ಲಿ ಜಗಳಗಳಾಗುತ್ತಿದೆ.
ಭಾರತದಲ್ಲಿ ಮೊದಲ ದಿನ ಲಾಕ್ ಡೌನ್ ಘೋಷಿಸಿದ ದಿನದಿಂದ ಇದುವರೆಗೆ ಸುಮಾರು 92 ಸಾವಿರ ಕರೆಗಳು ಹೆಲ್ಪ್ ಲೈನ್ ನಂಬರ್ ಗೆ ಬಂದಿದೆ. ಇದರಲ್ಲಿ ಅಸಭ್ಯ ಬೈಗಳು ಮತ್ತು ಹಿಂಸೆ ತಡೆಯಲು ಸಲಹೆ ಕೇಳಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ನಡೆಯುವ ಮನೆಯಲ್ಲಿನ ಹಿಂಸೆಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಕೇರಳ ಸರ್ಕಾರವು ವಾಟ್ಸಪ್ ನಂಬರ್ ಕೂಡ ಜಾರಿ ಮಾಡಿದೆ. ಈ ನಂಬರ್ 9400090292 ಆಗಿದೆ.
ಮನೆಯಲ್ಲಿ ಆಗುತ್ತಿರುವ ಹಿಂಸೆಯನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ವಿಶ್ವಸಂಸ್ಥೆಯು ಇತ್ತೀಚೆಗೆ ಹೇಳಿತ್ತು. ಹೆಚ್ಚಿನವರಿಗೆ ಮನೆಯು ಸುರಕ್ಷಿತ ತಾಣವಾದರೂ ಸಾವಿರಾರು ಮಹಿಳೆಯರು ಹಾಗೂ ಮಕ್ಕಳಿಗೆ ಇಲ್ಲಿ ಹಿಂಸೆಯಾಗುತ್ತಿರಬಹುದು. ಮನೆಯಲ್ಲಿನ ಹಿಂಸೆಯು ಲಾಕ್ ಡೌನ್ ಸಂದರ್ಭದಲ್ಲಿ ಹೆಚ್ಚುತ್ತಿರಬಹುದು ಎನ್ನಲಾಗಿದೆ.

ಕುಟುಂಬ ಒಂದಾಗಿರಬೇಕಾದ ಸಮಯದಲ್ಲಿ ಅತಿಯಾದ ಹಿಂಸೆ
ಕುಟುಂಬವು ಹೆಚ್ಚು ಸಮಯ ಜತೆಯಾಗಿ ಇರುವ ಸಮಯದಲ್ಲಿ ಹಿಂಸೆಯು ಹೆಚ್ಚಾಗಿರುವುದು ಎಂದು ಅಧ್ಯಯನಗಳು ಹೇಳಿವೆ. ಇದರಲ್ಲಿ ಮುಖ್ಯವಾಗಿ ಶಾಲೆಯ ರಜೆ, ಕ್ರಿಸ್ಮಸ್ ರಜೆ ಇತ್ಯಾದಿ ಸಂದರ್ಭದಲ್ಲಿ ಮನೆಯಲ್ಲಿ ಹಿಂಸೆಯು ಹೆಚ್ಚಾಗಿರುವುದು. ಕೊರೋನಾ ವೈರಸ್ ನಿಂದಾಗಿ ಈಗ ಮನೆಯಲ್ಲೇ ಇರುವ ಪ್ರಮೇಯ ಬಂದಿರುವ ಕಾರಣದಿಂದಾಗಿ ಪೀಡಿತರು ತಮ್ಮ ಮೇಲೆ ಹಿಂಸೆ ಮಾಡುತ್ತಿರುವವರ ಮಧ್ಯೆ ಸಿಲುಕಿಕೊಂಡಂತೆ ಆಗಿದೆ.
ಕೊರೋನಾ ವೈರಸ್ ನಿಂದಾಗಿ ಈಗ ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲಿನ ಹಿಂಸೆಯು ಹೆಚ್ಚಾಗಿದೆ ಎಂದು ತಿಳಿದುಂದಿದೆ. ಇದಕ್ಕೆ ಕೆಲವೊಂದು ಅಂಕಿಅಂಶಗಳು ಸಾಕ್ಷ್ಯವಾಗಿದೆ. ನಾಲ್ಕು ಗೋಡೆಗಳ ಮಧ್ಯೆ ಎಲ್ಲರೂ ಇರುವ ಕಾರಣದಿಂದಾಗಿ ಜಗಳ, ಬೈಗುಳ ಮತ್ತು ಹಿಂಸೆಯು ಹೆಚ್ಚಾಗಿರಬಹುದು. ಗೃಹ ಹಿಂಸೆಯ ತಜ್ಞರ ಪ್ರಕಾರ ಇದೊಂದು ರೀತಿಯಲ್ಲಿ ``ನಿಕಟ ಭಯೋತ್ಪಾದನೆ''. ಇದು ಭಾವನಾತ್ಮಕ, ದೈಹಿಕ ಮತ್ತು ಮಾನಸಿಕವಾಗಿ ಒಬ್ಬರ ಮೇಲೆ ದಾಳಿ ಮಾಡುವುದಾಗಿದೆ.

ಮಹಿಳೆ ಮತ್ತು ಹುಡುಗಿಯರಿಗೆ ಹೆಚ್ಚಿನ ಅಪಾಯ
ಮನೆಯನ್ನು ತುಂಬಾ ಸುರಕ್ಷಿತವೆಂದು ಭಾವಿಸುತ್ತಿರುವಂತಹ ಸಂದರ್ಭದಲ್ಲಿ ಮಹಿಳೆಯರು ಹಾಗೂ ಹುಡುಗಿಯರಿಗೆ ಇದು ತುಂಬಾ ಅಪಾಯದ ತಾಣವಾಗುತ್ತಿದೆ ಎಂದು ವಿಶ್ವಸಂಸ್ಥೆಯ ಮುಖ್ಯ ಕಾರ್ಯದರ್ಶಿ ಅಂಟೊನಿಯೊ ಆಂಟೋನಿಯೊ ಗುಟೆರೆಸ್ ತಿಳಿಸಿದ್ದಾರೆ. ಕೆಲವೊಂದು ರಾಷ್ಟ್ರಗಳಲ್ಲಿ ನೆರವಿಗಾಗಿ ಮಹಿಳೆಯರು ಕರೆಯ ಮಾಡುತ್ತಿರುವ ಸಂಖ್ಯೆಯು ದ್ವಿಗುಣವಾಗಿದೆ.
ಆದರೆ ಈ ರಾಷ್ಟ್ರಗಳು ಯಾವುದು ಎಂದು ಅವರು ಬಹಿರಂಗಪಡಿಸಲ್ಲ. ಆದರೆ ಚೀನಾ, ಭಾರತ, ಸ್ಪೇನ್ ಮತ್ತು ಇಟಲಿಯಲ್ಲಿ ಗೃಹ ಹಿಂಸೆಯು ಹೆಚ್ಚಾಗುತ್ತದೆ. ಲಾಕ್ ಡೌನ್ ನ ಮೊದಲ ವಾರದಲ್ಲಿ ಭಾರತದಲ್ಲಿ ಸಾಮಾನ್ಯಕ್ಕಿಂತ ಎರಡು ಪಟ್ಟು ಹೆಚ್ಚು ಸಂಖ್ಯೆಯ ದೂರುಗಳು ಬಂದಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗವು ತಿಳಿಸಿದೆ.
ಫ್ರಾನ್ಸ್ ನಲ್ಲಿ ಲಾಕ್ ಡೌನ್ ಮಾಡಿದ ಒಂದು ವಾರದಲ್ಲಿ ಈ ಸಂಖ್ಯೆಯು ಮೂರು ಪಟ್ಟು ಹೆಚ್ಚಾಗಿದೆ. ಅದೇ ಆಸ್ಟ್ರೇಲಿಯಾದಲ್ಲಿ ಶೇ.75ರಷ್ಟು ಸಂಖ್ಯೆಯು ಹೆಚ್ಚಾಗಿದ್ದು. ಗೃಹ ಹಿಂಸೆಗೆ ಸಂಬಂಧಿಸಿದಂತೆ ಇಂಟರ್ನೆಟ್ ನಲ್ಲಿ ಹುಡುಕಾಡುತ್ತಿರುವವರ ಸಂಖ್ಯೆಯು ಹೆಚ್ಚಾಗಿದೆ.
ಹಿಂಸಾಕೋರರಿಗೆ ಯಾವುದೇ ಸುಳಿವು ಸಿಗದಂತೆ ಕೆಲವೊಂದು ಮೆಡಿಕಲ್ ಮತ್ತು ಕಿರಣಿ ಅಂಗಡಿಗಳಲ್ಲಿ ಎಚ್ಚರಿಕೆಯ ಕರೆಗಂಟೆಗಳನ್ನು ಇಡಬೇಕು ಎಂದು ವಿಶ್ವಸಂಸ್ಥೆಯವರು ತಿಳಿಸಿದ್ದಾರೆ.

ಭಾರತದಲ್ಲಿ ಗೃಹಹಿಂಸೆಯಲ್ಲಿ ಶೇ.50ರಷ್ಟು ಹೆಚ್ಚಳ
ರಾಷ್ಟ್ರೀಯ ಮಹಿಳಾ ಆಯೋಗದ ಪ್ರಕಾರ ಲಾಕ್ ಡೌನ್ ಮೊದಲ ದಿನದಿಂದ ಗೃಹಹಿಂಸೆಯಲ್ಲಿ ಎರಡು ಪಟ್ಟು ಹೆಚ್ಚಳವಾಗಿದೆ. ಇದರಲ್ಲಿ ಮಹಿಳೆಯರ ಮೇಲೆ ಹೆಚ್ಚಿನ ದಾಳಿಯಾಗಿದೆ. ಮಾರ್ಚ್ ಮೊದಲ ವಾರ (ಮಾ.2-8)ರಲ್ಲಿ 116 ಇತ್ತು ಮತ್ತು ಇದು ಕೊನೆಯ ವಾರ ಮಾರ್ಚ್ 23-ಏಪ್ರಿಲ್1) ತನಕ 257ಕ್ಕೆ ಏರಿಕೆ ಆಗಿದೆ.
ಉತ್ತರ ಪ್ರದೇಶ, ಬಿಹಾರ, ಹರ್ಯಾಣ ಮತ್ತು ಪಂಜಾಬ್ ನಲ್ಲಿ ಗೃಹ ಹಿಂಸೆಯ ಪ್ರಕರಣಗಳು ಹೆಚ್ಚು ದಾಖಲಾಗಿದೆ. ಪ್ರಸಕ್ತ ಪರಿಸ್ಥಿತಿಯಲ್ಲಿ ಮನೆಯಲ್ಲಿಯೇ ನಿರ್ಬಂಧ ಹೇರಿರುವ ಕಾರಣದಿಂದಾಗಿ ಪುರುಷರಲ್ಲಿ ಸಿಡುಕುತನ ಹೆಚ್ಚಾಗಿದೆ ಎಂದು ವರದಿಗಳು ಹೇಳಿವೆ. ಇಂತಹ ಸಿಡುಕುತನವನ್ನು ಅವರು ಮಹಿಳೆಯರ ಮೇಲೆ ತೋರಿಸುತ್ತಿದ್ದಾರೆ.
ಉದ್ಯೋಗ ಕಳೆದುಕೊಳ್ಳುವುದು, ವೇತನ ಕಡಿತ ಮತ್ತು ಭವಿಷ್ಯದ ಬಗ್ಗೆ ಅಸ್ಥಿರತೆಯು ಇರುವ ಕಾರಣದಿಂದಾಗಿ ಈ ರೀತಿ ಪುರುಷರಲ್ಲಿ ಸಿಡುಕುತನ ಬಂದಿದೆ. ಪೀಡಿತರು ಹೆಚ್ಚಾಗಿ ಬೈಗುಳ ಮತ್ತು ಹಿಂಸೆಗೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಮಾನಸಿಕ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರಿದೆ ಎಂದು ತಿಳಿದುಬಂದಿದೆ.

ಮಕ್ಕಳ ಹೆಲ್ಪ್ ಲೈನ್ ನಲ್ಲಿ ಶೇ.50ರಷ್ಟು ಕರೆಗಳ ಹೆಚ್ಚಳ
ಈ ಹಿಂಸೆಯು ಕೇವಲ ಮಹಿಳೆಯರ ಮೇಲೆ ಮಾತ್ರವಲ್ಲದೆ, ಮಕ್ಕಳ ಮೇಲೂ ತಮ್ಮ ಮನೆಯೊಳಗೆ ಆಗುತ್ತಲಿದೆ. ಚೈಲ್ಡ್ ಲೈನ್ ನಲ್ಲಿ ಇದುವರೆಗೆ ಸುಮಾರು 92 ಸಾವಿರ ಎಸ್ ಒಎಸ್ ಕರೆಗಳು ಬಂದಿದೆ. ಇದರಲ್ಲಿ ಮಕ್ಕಳು ಬೈಗುಳ ಮತ್ತು ಹಿಂಸೆಯಿಂದ ರಕ್ಷಣೆ ಹೇಳುತ್ತಿದ್ದಾರೆ.
ಚೈಲ್ಡ್ ಲೈನ್ 1098 ನಂಬರ್ ನಲ್ಲಿ ಸುಮಾರು 3.07 ಲಕ್ಷ ಕರೆಗಳು ಬಂದಿದೆ. ಇದರಲ್ಲಿ ಸುಮಾರು 92,105 ಕರೆಗಳಲ್ಲಿ ಮನೆಯಲ್ಲಿ ಆಗುತ್ತಿರುವ ಹಿಂಸೆಯಿಂದ ರಕ್ಷಣೆ ನೀಡುವಂತೆ ಕೋರಿಕೊಳ್ಳಲಾಗಿದೆ.

ವಿಶ್ವಮಟ್ಟದಲ್ಲಿ ಆರ್ಥಿಕ ಹಿನ್ನಡೆ
ಕೆಲವೊಂದು ರಾಷ್ಟ್ರಗಳಲ್ಲಿ ಸರಿಯಾದ ಕ್ರಮ ಹಾಗೂ ನಿರ್ಧಾರಗಳು ಇಲ್ಲದೆ ಇರುವ ಕಾರಣದಿಂದಾಗಿ ಲಾಕ್ ಡೌನ್ ವೇಳೆ ಗೃಹ ಹಿಂಸೆಯು ಹೆಚ್ಚಾಗುತ್ತಲಿದೆ. ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರವು ನಾಗರಿಕ ಮತ್ತು ಇತರ ಗುಂಪುಗಳಿಗೆ ಬೆಂಬಲ ನೀಡಬೇಕು. ಕೊರೋನಾ ವೈರಸ್ ನಿಂದಾಗಿ ಲಾಕ್ ಡೌನ್ ಮುಂದುವರಿಯುತ್ತಲೇ ಇರುವ ಪರಿಣಾಮವಾಗಿ ವಿಶ್ವಮಟ್ಟದಲ್ಲಿ ಆರ್ಥಿಕ ಹಿನ್ನಡೆಯು ಉಂಟಾಗಲಿದೆ. ಇದರಿಂದಾಗಿ ಹೆಚ್ಚಿನ ಸಂಬಂಧದಲ್ಲಿ ಪೀಡಿತರಿಗೆ ಜತೆಯಾಗಿ ಉಳಿಯಲು ತುಂಬಾ ಕಷ್ಟವಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ನೀವು ನೆರವು ಪಡೆದರೆ ತುಂಬಾ ಒಳ್ಳೆಯದು.

ರಾಷ್ಟ್ರೀಯ ಮಹಿಳಾ ಆರೋಗ್ಯದ ಕೆಲವು ಹೆಲ್ಪ್ ಲೈನ್ ನಂಬರ್
ಮಹಿಳೆಯರ ಒತ್ತಡಕ್ಕೆ
ಕೇಂದ್ರ ಸಮಾಜ ಕಲ್ಯಾಣ ಮಂಡಳ-ಪೊಲೀ ಹೆಲ್ಪ್ ಲೈನ್1091/1291(011), 23317004
ಶಕ್ತಿ ಶಾಲಿನಿ 10920
ಶಕ್ತಿ ಶಾಲಿನಿ ಮಹಿಳಾ ಆಶ್ರಯ (011) 24373736/ 24373737
ಸಾರ್ಥಕ್ (011) 26853846/ 26524061
ಅಖಿಲ ಭಾರ ಮಹಿಳಾ ಕಾನ್ಫರೆನ್ಸ್ 10921/ (011) 23389680
ಜಾಗೊರಿ (011) 26692700
ಜಂಟಿ ಮಹಿಳಾ ಕಾರ್ಯಕ್ರಮ(ಬೆಂಗಳೂರು, ಕೊಲ್ಕತ್ತಾ, ಚೆನ್ನೈಯಲ್ಲಿ ಶಾಖೆಗಳಿವೆ) (011) 24619821
ಸಾಕ್ಷಿ ಹಿಂಸೆ ತಡೆ ಕೇಂದ್ರ (0124) 2562336/ 5018873
ಸಹೇಲಿ ಮಹಿಳಾ ಸಂಘಟನೆ (011) 24616485 (ಶನಿವಾರಗಳಂದು)
ನಿರ್ಮಲಾ ನಿಕೇತನ (011) 27859158
ನಾರಿ ರಕ್ಷ ಸಮಿತಿ (011) 23973949
ಕೀಟಗಳಿಂದ ಶಮನ ಮತ್ತು ಗುಣಮುಖ(ರಾಹಿ). ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳಾ ಮತ್ತು ಮಕ್ಕಳ ಬೆಂಬಲ ಕೇಂದ್ರ (011) 26238466/ 26224042, 26227647

ಕಾನೂನು ಸಲಹೆ
ಮಾನವ ಹಕ್ಕು ಕಾನೂನು ಮಾಧ್ಯಮ ಹೆಲ್ಪ್ ಲೈನ್ ನಡೆಸುತ್ತಿದೆ ಮತ್ತು ಇದರಿಂದ ಕಾನೂನು ಸೇವೆ ಕೂಡ ನೀಡುತ್ತಿದೆ. (011) 24316922/ 24324503
ಗೃಹ ಹಿಂಸೆ ಸಂಬಂಧಿ ಪ್ರಕರಣಗಳಿಗೆ ವಕೀಲರ ಸಂಘಟಿತ ಮಹಿಳಾ ಹಕ್ಕು ಇನಿಶಿಯೇಟಿವ್ (011) 24373993/ 24372923

ಮಾರ್ಗ್(ಮಲ್ಟಿಪಲ್ ಆಕ್ಷನ್ ರಿಸರ್ಚ್ ಗ್ರೂಪ್ (011) 26497483 / 26496925
ದೆಹಲಿ ಪೊಲೀಸ್ ಹೆಲ್ಪ್ ಲೈನ್ 1091
ಮಹಿಳಾ ಹಕ್ಕು ಆಯೋಗ ದೆಹಲಿ (011) 23379181/ 23370597
ಮಹಿಳಾ ಸೆಲ್ ದೆಹಲಿ ಪೊಲೀಸ್ (011) 24673366 / 4156 / 7699
ರಾಷ್ಟ್ರೀಯ ಮಾನವ ಹಕ್ಕು ಆಯೋಗ (011) 23385368/9810298900
ಪ್ರತಿಧಿ (011) 22527259
ಏಡ್ಸ್ ಗೆ ಸಂಬಂಧಿಸಿದ ಮಾಹಿ ಮತ್ತು ಸೇವೆ : ಸರ್ಕಾರಿ ಏರ್ಡ್ ಸಹಾಯವಾಣಿ 1097
ಚೈಲ್ಡ್ ಲೈನ್ 24 ಗಂಟೆಯು ದೇಶದೆಲ್ಲೆಡೆಯಲ್ಲಿ ನಡೆಯುತ್ತಿರುವ ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಸ್ಥಾಪಿಸಲಾಗಿರುವ ಸಹಾಯವಾಣಿ. 1098
ಕ್ಯಾಟ್ಸ್ ದೆಹಲಿ ಸರ್ಕಾರ 1099
ಒತ್ತಡದಲ್ಲಿರುವ ಮಹಿಳೆಯರಿಗೆ ಕೌನ್ಸಿಲಿಂಗ್ ದೆಹಲಿ ಪೊಲೀಸ್ 3317004
ಸರ್ತಕ್ ವೃತ್ತಿ ಸಂಬಂಧಿ ಕೌನ್ಸಿಲಿಂಗ್ 9628052777, 9628019278, 9628019279.