For Quick Alerts
ALLOW NOTIFICATIONS  
For Daily Alerts

ಛತ್ರಪತಿ ಶಿವಾಜಿ ಜಯಂತಿ 2022: ಹಿಂದೂಗಳಿಗೆ ಆದರ್ಶ ಅವರ ಈ ವ್ಯಕ್ತಿತ್ವ

|

ಗ್ರೆಗೋರಿಯನ್ ಕ್ಯಾಲೆಂಡರ್‌ ಪ್ರಕಾರ ಛತ್ರಪತಿ ಶಿವಾಜಿ ಜಯಂತಿ ಫೆಬ್ರವರಿ 19ಕ್ಕೆ, ಹಿಂದೂ ಕ್ಯಾಲೆಂಡರ್‌ ಪ್ರಕಾರ ಶಿವಾಜಿ ಜಯಂತಿಯನ್ನು ಮಾರ್ಚ್‌ 21ಕ್ಕೆ ಆಚರಿಸಲಾಗುವುದು. ಈ ದಿನ ಮರಾಠ ಸಾಮ್ರಾಟ ಛತ್ರಪತಿ ಶಿವಾಜಿಯವರ 392ನೇ ಜಯಂತಿಯನ್ನು ಆಚರಿಸಲಾಗುವುದು.

Chhatrapati Shivaji Maharaj Jayanti

ಭಾರತದ ಇತಿಹಾಸದಲ್ಲಿ ತಮ್ಮ ಸಾಮ್ರಾಜ್ಯ ಕಟ್ಟಿ ಆಳಿದ ವೀರಾಧಿವೀರರಾದ ರಾಜರುಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಕೂಡ ಒಬ್ಬರು. ಇವರು ಮರಾಠ ಸಾಮ್ರಾಜ್ಯದ ಸ್ಥಾಪಕರು.
 ಹಿಂದೂ ರಾಜನೀತಿಗೆ ಪುನರುಜ್ಜೀವನ ನೀಡಿದ ವೀರ

ಹಿಂದೂ ರಾಜನೀತಿಗೆ ಪುನರುಜ್ಜೀವನ ನೀಡಿದ ವೀರ

ಆಗ ದೇಶದಲ್ಲಿ ಮೊಗಲ್‌ ಸಾಮ್ರಾಜ್ಯ ತುಂಬಾ ಪ್ರಬಲವಾಗಿತ್ತು. ಮಹಾರಾಷ್ಟ್ರ, ಕರ್ನಾಟಕ, ಆಂಧ್ರದಲ್ಲಿ ಪ್ರಬಲವಾಗಿದ್ದ ಸುಲ್ತಾರು, ತಮ್ಮ ಸಾಮ್ರಾಜ್ಯ ವಿಸ್ತರಿಸುತ್ತಾ ಸಾಗುತ್ತಿದ್ದ ಬ್ರಿಟಿಷರು ಇವರೆಲ್ಲರನ್ನೂ ವಿರೋಧಿಸಿ ಛತ್ರಪತಿ ಶಿವಾಜಿ ಮರಾಠ ಸಾಮ್ರಾಜ್ಯ ಸ್ಥಾಪಿಸಿದರು.

ಅವರ ತಾಯಿ ಜೀಜಾಬಾಯಿಯರ ತಂದೆ ಮೊಘಲ್‌ ದೊರೆಯ ಸೇನೆಯಲ್ಲಿ ಇದ್ದರು. ಆದರೆ ಜೀಜಾಬಾಯಿಗೆ ಹಿಂದೂಧರ್ಮವನ್ನು ಮತ್ತೆ ಸ್ಥಾಪಿಸಬೇಕೆಂಬುವುದು ದೊಡ್ಡ ಕನಸ್ಸಾಗಿತ್ತು. ಮಗನಿಗೆ ಪ್ರೇರಣೆ ನೀಡುವ ಕತೆಗಳನ್ನು ಹೇಳುತ್ತಾ ಅವರಲ್ಲಿ ಧೈರ್ಯ ಹಾಗೂ ಮತ್ತೆ ಹಿಂದೂ ಸಾಮ್ರಾಜ್ಯ ಕಟ್ಟಬೇಕೆಂಬ ಛಲ ತುಂಬಿದರು. ಇದರಿಂದಾಗಿ ಛತ್ರಪತಿ ಶಿವಾಜಿಗೆ ಎಲ್ಲರನ್ನು ವಿರೋಧಿಸಿ ಮರಾಠ ಸಾಮ್ರಾಜ್ಯ ಕಟ್ಟಿದರು. ಈ ಮೂಲಕ ಅವರು ಯುಗ ಪುರುಷರಾಗಿದ್ದಾರೆ.

 ಧಾರ್ಮಿಕ ಸಹಿಷ್ಣರು ಆಗಿದ್ದ ಶಿವಾಜಿ ಮಹಾರಾಜರು

ಧಾರ್ಮಿಕ ಸಹಿಷ್ಣರು ಆಗಿದ್ದ ಶಿವಾಜಿ ಮಹಾರಾಜರು

ಇವರು ಮೊಗಲ್‌ರ ಆಡಳಿತ ಕಾಲದಲ್ಲಿ ಹಿಂದೂ ಸಮ್ರಾಜ್ಯ ಸ್ಥಾಪಿಸಿದರೂ ಧರ್ಮ ಸಹಿಷ್ಣುಗಳಾಗಿದ್ದರು. ಅವರ ಆಡಳಿತದಲ್ಲಿ ಹಿಂದೂಗಳಿಗೆ ಮಾತ್ರವಲ್ಲ ಮುಸ್ಲಿಂರಿಗೂ ಧಾರ್ಮಿಕ ಸ್ವಾತಂತ್ರ್ಯ ನೀಡಿದ್ದರು. ಮುಸ್ಲೀಂರೂ ಮಸೀದಿಗಳನ್ನು ನಿರ್ಮಿಸಲು ಅನುಮತಿ ನೀಡಿದ್ದರು. ಅವರ ಆಸ್ಥಾನದಲ್ಲಿ ಹಿಂದೂ ಪಂಡಿತರಿಗೆ ಎಷ್ಟು ಗೌರವ ನೀಡಲಾಗುತ್ತಿತ್ತೋ ಅಷ್ಟೇ ಗೌರವವನ್ನು ಮುಸ್ಲಿಂ ಸಂತರಿಗೆ, ಫಕೀರರಿಗೆ ನೀಡಿದ್ದರು. ಅವರ ಸೇನೆಯಲ್ಲೂ ಮುಸ್ಲಿಂರಿದ್ದರು. ಅವರ ಕಾಲದಲ್ಲಿ ಹಿಂದೂ ಮೌಲ್ಯಗಳಿಗೆ ಹಾಗೂ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಲಾಗಿತ್ತು.

ತಪ್ಪು ಮಾಡಿದವರನ್ನು ಸಹಿಸುತ್ತಿರಲಿಲ್ಲ ಶಿವಾಜಿ

ತಪ್ಪು ಮಾಡಿದವರನ್ನು ಸಹಿಸುತ್ತಿರಲಿಲ್ಲ ಶಿವಾಜಿ

ಅವರ ಮಗ ಸಂಭಾಜಿ ಏನೋ ಅಪರಾಧ ಮಾಡಿದಾಗ ಆತನನ್ನು ಸೆರೆಮನೆ ಶಿಕ್ಷೆ ನೀಡಿದ್ದರು. ಹೀಗೆ ಶಿವಾಜಿ ತನ್ನ ಮಕ್ಕಳಾಗಲಿ, ಪ್ರಜೆಗಳಾಗಿ ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸುತ್ತಿದ್ದರು. ಧರ್ಮದ ಹೆಸರಿನಲ್ಲಿ ಯಾರಾದರೂ ಹಿಂದೂ ಧರ್ಮಕ್ಕೆ ಆಘಾತ ಉಂಟು ಮಾಡಿದರೆ ಅವರಿಗೆ ತಕ್ಕ ಶಾಸ್ತಿ ಮಾಡುತ್ತಿದ್ದರು.

ಗೋವಾದಲ್ಲಿ ಹಿಂದೂಗಳನ್ನು ಕ್ರೈಸ್ತ ಮಿಷನರಿಗಳು ಮತಾಂತರ ಮಾಡುತ್ತಿದ್ದರು. ಆಗ ಶಿವಾಜಿ ಮಹಾರಾಜರು ಇವೆಲ್ಲಾ ಮಾಡುವುದು ಸರಿಯಲ್ಲ ಬಿಟ್ಟುಬಿಡಿ ಎಂದು ಹೇಳಿದಾಗ ಅವರು ಮತಾಂತರ ಮಾಡುವುದು ನಮ್ಮ ಧರ್ಮಾಜ್ಞೆಯೆಂದು ಹೇಳಿದಾಗ ಶಿವಾಜಿ ' ಮತಾಂತರ ಮಾಡುವವನ ಕತ್ತು ಕತ್ತರಿಸಬೇಕೆಂಬುವುದು ನಮ್ಮ ಧರ್ಮಾಜ್ಞೆಯಾಗಿದೆ ಎಂದು ಹೇಳಿದರು.

ಹಿಂದೂ ಧರ್ಮದ ರಕ್ಷಕರಾಗಿ ಸರ್ವಧರ್ಮಕ್ಕೂ ಗೌರವ ನೀಡುತ್ತಿದ್ದರು.

Read more about: life ಜೀವನ india ಭಾರತ
English summary

Chhatrapati Shivaji Maharaj Jayanti 2022: Interesting Facts about Maratha king in kannada

Chhatrapati Shivaji Maharaj Jayanti 2022: Interesting Facts about Maratha king in kannada, read on...
X
Desktop Bottom Promotion