For Quick Alerts
ALLOW NOTIFICATIONS  
For Daily Alerts

ಆಟಿ ಅಮಾವಾಸ್ಯೆ : ಜಾತಕದಲ್ಲಿರುವ ಪಿತೃದೋಷದಿಂದ ಮುಕ್ತಿ ಪಡೆಯಲು ಇಲ್ಲಿವೆ ಈ ಪರಿಹಾರ ಕ್ರಮಗಳು

|

ಪ್ರತಿ ತಿಂಗಳ ಅಮಾವಾಸ್ಯೆ ತಿಥಿ ಪೂರ್ವಜರಿಗೆ ಬಹಳ ಮುಖ್ಯ. ಈ ದಿನ ಪೂರ್ವಜರಿಗಾಗಿ ಕೆಲವು ಪ್ರಮುಖ ಕೆಲಸಗಳನ್ನು ಮಾಡಿದರೆ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಇದರಿಂದ ಪಿತೃದೋಷ ನಿವಾರಣೆಯಾಗಿ ಆಶೀರ್ವಾದ ಸಿಗುವುದು ಎಂಬ ನಂಬಿಕೆ ಭಾರತೀಯರಲ್ಲಿದೆ. ಈ ಕಾರಣಕ್ಕಾಗಿ, ಅಮಾವಾಸ್ಯೆಯ ದಿನದಂದು ಪೂರ್ವಜರ ಹೆಸರಿನಲ್ಲಿ ದಾನ ಮಾಡುವುದು.

ಇನ್ನೂ ಆಷಾಢ ಅಮಾವಾಸ್ಯೆ ಅಥವಾ ಆಟಿ ಅಮಾವಾಸ್ಯೆ ಆಗಸ್ಟ್ 8ರಂದು ನಡೆಯಲಿದೆ. ಪಿತೃಗಳ ವಿಚಾರಕ್ಕೆ ಬಂದರೆ ಈ ಅಮಾವಾಸ್ಯೆಗೆ ಹೆಚ್ಚಿನ ಪ್ರಾಶಸ್ತ್ಯ ಇದೆ. ಈ ದಿನ ಮಾಡುವ ಕಾರ್ಯಗಳು ಪೂರ್ವಜರ ಆತ್ಮಗಳನ್ನು ತೃಪ್ತಿಪಡಿಸುತ್ತದೆ. ಅದರಲ್ಲಿ ಒಂದು ಗಿಡನೆಡುವುದು. ಜ್ಯೋತಿಷ್ಯದ ಪ್ರಕಾರ, ಅಮಾವಾಸ್ಯೆ ದಿನದಂದು ಒಂದು ಗಿಟ್ಟರೆ ನಿಮಗೆ ಜೀವನದಲ್ಲಿ ಉತ್ತಮವಾಗುವುದು. ಈ ಸಸ್ಯ ಬೆಳೆದ ರೀತಿಯಲ್ಲೇ ಜೀವನದಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

ನಿಮ್ಮ ಜಾತಕದಲ್ಲಿ ಪಿತೃದೋಷ ಹೊಂದಿದ್ದರೆ ನೀವು ಖಂಡಿತವಾಗಿಯೂ ಆಟಿ ಅಮಾವಾಸ್ಯೆಯಂದು ಕೆಲ ಸಸ್ಯಗಳನ್ನು ನೆಡಬೇಕು. ಇದು ನಿಮ್ಮ ಪೂರ್ವಜರಿಗೆ ಶಾಂತಿಯನ್ನು ನೀಡುತ್ತದೆ ಜೊತೆಗೆ ಅವರ ಆಶೀರ್ವಾದವು ನಿಮಗೆ ಲಭ್ಯವಾಗುವುದು.

ಪೂರ್ವಜರಿಗೆ ಬಹಳ ಶುಭವೆಂದು ಪರಿಗಣಿಸಲಾದ ಸಸ್ಯಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಆಲದ ಗಿಡ:

ಆಲದ ಗಿಡ:

ಆಲದ ಮರವನ್ನು ನಮ್ಮ ಪೌರಾಣಿಕ ಗ್ರಂಥಗಳಲ್ಲಿ ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಈ ಮರಕ್ಕೆ ಮೋಕ್ಷ ಎಂಬ ಹೆಸರಿನಿಂದಲೂ ಕರೆಯಲಾಗುಗುವುದು. ಅಮಾವಾಸ್ಯೆಯ ದಿನದಂದು ಈ ಗಿಡವನ್ನು ನೆಟ್ಟರೆ, ಪೂರ್ವಜರಿಗೆ ಸಾಕಷ್ಟು ಶಾಂತಿ ಸಿಗುತ್ತದೆ ಎಂದು ನಂಬಲಾಗಿದೆ. ಈ ದಿನ ಶಿವನನ್ನು ಆಲದ ಮರದ ಕೆಳಗೆ ಕುಳಿತು ಪೂಜಿಸಬೇಕು. ಇದು ಕುಟುಂಬದೊಳಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.

ಅರಳಿ ಮರ:

ಅರಳಿ ಮರ:

ಆಲದ ಮರದಂತೆ, ನಮ್ಮ ಪೌರಾಣಿಕ ಗ್ರಂಥಗಳಲ್ಲಿ ಅರಳಿ ಮರವನ್ನು ಸಹ ಬಹಳ ಶುಭವೆಂದು ಪರಿಗಣಿಸಲಾಗಿದೆ. ಅಮಾವಾಸ್ಯೆಯ ದಿನದಂದು ನೀವು ಈ ಮರವನ್ನು ನೆಟ್ಟರೆ, ನಿಮ್ಮ ಪೂರ್ವಜರಿಗೆ ಮೋಕ್ಷ ಸಿಗುತ್ತದೆ. ಅಮಾವಾಸ್ಯೆಯ ದಿನದಂದು ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆ ದೀಪವನ್ನು ಬೆಳಗಿಸಿದರೆ, ಅದು ನಿಮಗೆ ತುಂಬಾ ಶುಭವಾಗಿರುತ್ತದೆ. ನಿಮ್ಮ ಜಾತಕದಲ್ಲಿ ಗುರು ಚಾಂಡಾಲ ಯೋಗ ಇದ್ದರೆ, ನೀವು ಅಮಾವಾಸ್ಯೆಯ ದಿನದಂದು ಅರಳಿ ಗಿಡವನ್ನು ನೆಡಬೇಕು.

ತುಳಸಿ ಗಿಡ:

ತುಳಸಿ ಗಿಡ:

ನಮ್ಮ ಸಂಸ್ಕೃತಿಯಲ್ಲಿ ತುಳಸಿ ಸಸ್ಯಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಇದರ ಮೂಲಕ ನಾವು ವೈಕುಂಠ ಧಾಮದೊಂದಿಗೆ ಸಂಪರ್ಕ ಸಾಧಿಸಬಹುದು ಎಂಬ ನಂಬಿಕೆಯಿದೆ. ಅಮಾವಾಸ್ಯೆಯ ದಿನದಂದು ನಿಮ್ಮ ಪೂರ್ವಜರ ಹೆಸರಿನಲ್ಲಿ ತುಳಸಿ ಗಿಡವನ್ನು ನೆಟ್ಟರೆ, ಪೂರ್ವಜರಿಗೆ ಮೋಕ್ಷ ಸಿಗುತ್ತದೆ ಮತ್ತು ಅವರು ನೇರವಾಗಿ ವೈಕುಂಠ ಅಥವಾ ಸ್ವರ್ಗಕ್ಕೆ ಹೋಗುತ್ತಾರೆ. ಯಾವ ಮನೆಯಲ್ಲಿ ತುಳಸಿಗಿಡವಿರುವುದೋ ಅವರ ಮನೆ ವಾಸ್ತುದೋಷ ಮುಕ್ತವಾಗಿರುತ್ತದೆ ಎಂಬ ನಂಬಿಕೆಯಿದೆ.

ಬಿಲ್ವಪತ್ರೆ:

ಬಿಲ್ವಪತ್ರೆ:

ಈ ಮರವು ಶಿವನ ಅತ್ಯಂತ ಪ್ರಿಯವಾದ ಮರವಾಗಿದೆ. ಅಮಾವಾಸ್ಯೆಯ ದಿನದಂದು ಇದನ್ನು ನೆಡುವುದರಿಂದ, ಪೂರ್ವಜರ ಆತ್ಮಗಳಿಗೆ ಶಾಂತಿ ಸಿಗುತ್ತದೆ. ಪೂರ್ವಜರ ಹೆಸರಿನಲ್ಲಿ ಗಂಗಾಜಲ ಅರ್ಪಿಸಿ, ನಂತರ ಶಿವಲಿಂಗಕ್ಕೆ ಬಿಲ್ವಪತ್ರೆಯನ್ನು ಅರ್ಪಿಸಿದರೆ, ಅದು ಪೂರ್ವಜರ ಆತ್ಮಗಳಿಗೆ ಶಾಂತಿಯನ್ನು ನೀಡುತ್ತದೆ.

English summary

Ashadha Amavasya 2021: Plant These Trees on Amavasya If You have Pitra Dosha in Your Kundli

Here we talking about Ashadha Amavasya 2021: Plant These Trees on Amavasya If You have Pitra Dosha in Your Kundli, read on
X
Desktop Bottom Promotion