For Quick Alerts
ALLOW NOTIFICATIONS  
For Daily Alerts

ಅಕ್ಷಯ ತೃತೀಯ : ಚಿನ್ನ ಖರೀದಿಗೆ ಉತ್ತಮ ಸಮಯವಿದು

|

ಇದೇ ಬರುವ ಮೇ 14ರಂದು ಹೆಂಗಳೆಯರ ಫೇವರೆಟ್ ದಿನ. ಅಂದರೆ ಚಿನ್ನ ಕೊಳ್ಳುವ ಅಕ್ಷಯ ತೃತೀಯ. ಈ ಅಕ್ಷಯ ತೃತೀಯದಂದು ಜನರು ಹೆಚ್ಚಾಗಿ ಚಿನ್ನ ಹಾಗೂ ಸಂಪತ್ತನ್ನು ಕೊಳ್ಳುತ್ತಾರೆ. ಏಕೆಂದರೆ ಇಂದು ಕೊಂಡ ಈ ಸಂಪತ್ತು ಮುಂದಿನ ದಿನಗಳಲ್ಲಿ ದುಪ್ಪಟ್ಟಾಗುತ್ತದೆ ಎಂಬ ನಂಬಿಕೆ ಧಾರ್ಮಿಕ ಮನೋಭಾವದವರದ್ದು. ಚಿನ್ನ ಖರೀದಿಸಲು ಈ ದಿನವಿಡೀ ಉತ್ತಮವಾಗಿದ್ದರೂ, ಇದಕ್ಕಾಗಿ ಕೆಲವರು ಶುಭ ಮುಹೂರ್ತವನ್ನು ಹುಡುಕುತ್ತಾರೆ. ಅಂತಹವರಿಗಾಗಿ ಈ ಲೇಖನ. ಈ ಸಲದ ಅಕ್ಷಯ ತೃತೀಯದಲ್ಲಿ ಚಿನ್ನ ಖರೀದಿಸಲು ಶುಭ ಮುಹೂರ್ತ ಹಾಗೂ ಘಳಿಗೆಗಳನ್ನು ಈ ಕೆಳಗೆ ನೀಡಲಾಗಿದೆ.

2021ರ ಅಕ್ಷಯ ತೃತೀಯದಂದು ಚಿನ್ನ ಖರೀದಿಸಲು ಶುಭ ಮುಹೂರ್ತ ಈ ಕೆಳಗಿದೆ:

2021ರ ಅಕ್ಷಯ ತೃತೀಯದಂದು ಚಿನ್ನ ಖರೀದಿಸಲು ಶುಭ ಮುಹೂರ್ತ ಈ ಕೆಳಗಿದೆ:

ಅಕ್ಷಯ ತೃತೀಯ ಚಿನ್ನದ ಖರೀದಿ ಸಮಯ 2021 ಮೇ 14 ರ ಬೆಳಗ್ಗೆ 05:30ರಿಂದ ಮೇ 15 ರವರೆಗೆ. (ಅವಧಿ: 23 ಗಂಟೆ 52 ನಿಮಿಷಗಳು)

ಇತರ ಶುಭ ಮುಹೂರ್ತಗಳು:

ಇತರ ಶುಭ ಮುಹೂರ್ತಗಳು:

ಬೆಳಿಗ್ಗಿನ ಮುಹೂರ್ತ : 05:38 ರಿಂದ 10:36ರವರೆಗೆ

ಮಧ್ಯಾಹ್ನ : 12:18 ರಿಂದ 01:59ರವರೆಗೆ

ಸಂಜೆ ಮುಹೂರ್ತ:: 05:23 ರಿಂದ 07:04ರವರೆಗೆ

ರಾತ್ರಿ ಮುಹೂರ್ತ: 09:41 ರಿಂದ 10:59

ಮೇ 15 ಬೆಳಿಗ್ಗೆ 04:12ರವರೆಗೆ

ತ್ರೇತಾಯುಗದ ಆರಂಭ:

ತ್ರೇತಾಯುಗದ ಆರಂಭ:

ಹಿಂದೂ ಪುರಾಣದ ಪ್ರಕಾರ, ತ್ರೇತಾ ಯುಗವು ಅಕ್ಷಯ ತೃತೀಯ ದಿನದಂದು ಪ್ರಾರಂಭವಾಯಿತು. ಸಾಮಾನ್ಯವಾಗಿ, ಅಕ್ಷಯ ತೃತೀಯ ಮತ್ತು ಪರಶುರಾಮನ ಜನ್ಮದಿನ (ಭಗವಾನ್ ವಿಷ್ಣುವಿನ 6 ನೇ ಅವತಾರ) ಒಂದೇ ಆಗಿರುತ್ತದೆ. ಆದಾಗ್ಯೂ, ಕೆಲವೊಮ್ಮೆ ತಿಥಿ ಪರಶುರಾಮ ಜಯಂತಿ ಯನ್ನು ಅವಲಂಬಿಸಿ ಅಕ್ಷಯ ತೃತೀಯ ದಿನಕ್ಕೆ ಒಂದು ದಿನ ಮೊದಲು ಬೀಳಬಹುದು.

English summary

Akshaya Tritiya 2021: Check Auspicious Date and Time to Buy Gold

Here we talking about Akshaya Tritiya 2021: Check auspicious date and time to buy gold, read on
X