For Quick Alerts
ALLOW NOTIFICATIONS  
For Daily Alerts

ಈ ನಾಲ್ಕು ರಾಶಿಯ ಜನರೇ ಅತಿ ಹೆಚ್ಚು ಬೋರು ಹೊಡೆಸುತ್ತಾರಂತೆ!

|

ಒಂದು ವೇಳೆ ನೀವು ರಾಶಿಫಲವನ್ನು ನಂಬುವ ಜನರಾಗಿದ್ದರೆ ಹಾಗೂ ಭವಿಷ್ಯದ ಬಗ್ಗೆ ನಿಮ್ಮ ರಾಶಿಫಲವನ್ನು ಅನುಸರಿಸಿಯೇ ಭವಿಷ್ಯದ ಬಗ್ಗೆ ನಿರ್ಣಯಿಸುವ ವ್ಯಕ್ತಿಯಾಗಿರುತ್ತೀರಿ.

ಇಂದಿನ ಲೇಖನದಲ್ಲಿ ನಾಲ್ಕು ರಾಶಿಫಲಗಳಿಗೆ ಸೇರಿದ ವ್ಯಕ್ತಿಗಳ ಬಗ್ಗೆ ವಿವರಿಸಲಾಗಿದ್ದು ಈ ವ್ಯಕ್ತಿಗಳು ಒಲವು ಮೂಡಿಸುವ ಅಥವಾ ಮನರಂಜನೆ ನೀಡುವ ಯಾವುದೇ ಕ್ರಿಯೆಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಾ ಅತಿ ಹೆಚ್ಚು ಬೋರು ಹೊಡೆಸುವವರಾಗಿದ್ದಾರೆ.

 ಈ ನಾಲ್ಕು ರಾಶಿಯವರು ತುಂಬಾನೇ ಬೋರಿಂಗ್‌ ವ್ಯಕ್ತಿಗಳಂತೆ!

ಓರ್ವ ವ್ಯಕ್ತಿ ಬೋರು ಹೊಡೆಸುತ್ತಾರೆ ಎಂದರೆ ಏನರ್ಥ? ಆತನ ವಿಚಾರಗಳು ಅಥವಾ ನಡವಳಿಕೆ ಅಥವಾ ನಂಬಿಕೆಗಳು ನಿಮಗೆ ಹಿಡಿಸದೇ ಹೋದಾಗ ಆ ವ್ಯಕ್ತಿಯತ್ತ ಯಾವುದೇ ಆಕರ್ಷಣೆ ಉಳಿಯುವುದಿಲ್ಲ.

ಇದನ್ನೇ ಬೋರು ಹೊಡೆಸುವ ವ್ಯಕ್ತಿ ಎಂದು ಕರೆಯುತ್ತಾರೆ. ಇಷ್ಟವಿಲ್ಲದ ಪಠ್ಯದ ಬಗ್ಗೆ ಎಷ್ಟೇ ಚೆನ್ನಾಗಿ ವಿವರಿಸಿದರೂ ಮೇಷ್ಟ್ರು ಇಷ್ಟವಾಗದೇ ಹೋಗುವುದು ಈ ಕಾರಣಕ್ಕಾಗಿಯೇ! ಎಲ್ಲಾ ರಾಶಿಗಳಲ್ಲಿಯೂ ಈ ನಾಲ್ಕು ರಾಶಿಯ ಜನರು ಅತಿ ಹೆಚ್ಚು ಬೋರು ಹೊಡೆಸುತ್ತಾರೆ ಎಂದು ಜ್ಯೋತಿಷಿಗಳು ತಿಳಿಸುತ್ತಾರೆ. ಬನ್ನಿ, ಈ ರಾಶಿಗಳು ಯಾವುವು ಎಂಬುದನ್ನು ನೋಡೋಣ:

ಮಕರ: (ಡಿಸೆಂಬರ್ 23 ರಿಂದ ಜನವರಿ 20)

ಅತಿ ಹೆಚ್ಚು ಬೋರು ಹೊಡೆಸುವ ವ್ಯಕ್ತಿಗಳ ಪಟ್ಟಿಯಲ್ಲಿ ಈ ರಾಶಿಯ ವ್ಯಕ್ತಿಗಳು ಪ್ರಥಮ ಸ್ಥಾನ ಪಡೆಯುತ್ತಾರೆ. ಈ ವ್ಯಕ್ತಿಗಳಿಗೆ ಜೋಕು ಹೇಳಿ, ಇಲ್ಲದಿದ್ದರೆ ತಲೆ ಚೂರು ಮಾಡುವೆ ಎಂದು ತಲೆಗೆ ಬಂದೂಕು ಗುರಿಯಿಟ್ಟು ಕೇಳಿದರೂ ಇವರಿಂದ ಒಂದು ಜೋಕು ಹೊರಡಿಸಲು ಅಥವಾ ಇವರನ್ನು ಕುಣಿಸಲು ಸಾಧ್ಯವಿಲ್ಲ. ಈ ವ್ಯಕ್ತಿಗಳು ಸಾಮಾನ್ಯವಾಗಿ ತಮ್ಮ ಯಾವುದೇ ಕೆಲಸ ಸರಿಯಾಗಬಹುದೆಂಬ ನಿರೀಕ್ಷೆಗಿಂತಲೂ ಎಲ್ಲಾದರೂ ತಪ್ಪಾಗಿಬಿಡಬಹುದು ಎಂಬ ಅಳುಕಿನಲ್ಲಿಯೇ ಇರುತ್ತಾರೆ. ಆದರೆ ಈ ವ್ಯಕ್ತಿಗಳು ವಿವೇಕವಂತರೂ ತಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ಇಳಿಸುವವರೂ ಆಗಿರುತ್ತಾರೆ.

ಈ ನಾಲ್ಕು ರಾಶಿಯವರು ತುಂಬಾನೇ ಬೋರಿಂಗ್‌ ವ್ಯಕ್ತಿಗಳಂತೆ!

ಕನ್ಯಾ: (ಆಗಸ್ಟ್ 24ರಿಂದ ಸೆಪ್ಟೆಂಬರ್ 23)

ಈ ಪಟ್ಟಿಯಲ್ಲಿ ಕನ್ಯಾರಾಶಿಯ ವ್ಯಕ್ತಿಗಳು ಎರಡನೇ ಸ್ಥಾನ ಪಡೆಯುತ್ತಾರೆ. ಈ ವ್ಯಕ್ತಿಗಳು ಸಾಮಾನ್ಯವಾಗಿ ಜೀವಮಾನಪರ್ಯಂತ ಮೌನಧಾರಣೆಯಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಾರೆ. ಇವರಿಗೆ ತಮ್ಮ ಸ್ವಂತ ನೆರಳೇ ಭಯಾನಕವಾಗಿರುತ್ತದೆ ಹಾಗೂ ಇದೇ ಕಾರಣಕ್ಕೆ ಹೆಚ್ಚಿನದನ್ನು ಸಾಧಿಸದೇ ಹೋಗುತ್ತಾರೆ. ಇವರಿಗೆ ಜೀವನದಲ್ಲಿ ಮುನ್ನುಗ್ಗವ ಛಲ ಇರುವುದಿಲ್ಲ ಹಾಗೂ ಸದಾ ಸುರಕ್ಷಿತ ಹಾಗೂ ಅಪಾಯ ಅಥವಾ ನಷ್ಟದ ಸಾಧ್ಯತೆ ಇಲ್ಲದ ಕೆಲಸಗಳನ್ನೇ ಬಯಸುತ್ತಾರೆ. ಇವರು ಸಾಂಪ್ರಾದಾಯಿಕ, ವಾಡಿಕೆಯ ಹಾಗೂ ಬಲಾವಣೆಯನ್ನು ಬಯಸದ ವ್ಯಕ್ತಿಗಳಾಗಿರುತ್ತಾರೆ.

ಈ ನಾಲ್ಕು ರಾಶಿಯವರು ತುಂಬಾನೇ ಬೋರಿಂಗ್‌ ವ್ಯಕ್ತಿಗಳಂತೆ!

ತುಲಾ: (ಸೆಪ್ಟೆಂಬರ್ 24-ಅಕ್ಟೋಬರ್ 23)

ಈ ವ್ಯಕ್ತಿಗಳು ಕಾರ್ಯರೂಪಿಗಳಾಗಿದ್ದರೂ ಇವರಿಗೆ ಊಹಾಶಕ್ತಿ ಕಡಿಮೆ ಇರುತ್ತದೆ. ಈ ರಾಶಿಯ ಜನರು ಏಕೆ ಬೋರು ಹೊಡೆಸುತ್ತಾರೆಂದರೆ ಇವರಿಗೆ ನಿಷ್ಕ್ರಿಯತೆಯಲ್ಲಿ ಇರುವ ಅತ್ಯುತ್ಸಾಹ. ಇವರು ತಮ್ಮ ಕೆಲಸವನ್ನು ಕಡಿಮೆಗೊಳಿಸಲು ಕೆಲವು ಕುತಂತ್ರಗಳನ್ನು ಬಳಸುವಲ್ಲಿ ನಿಷ್ಣಾತರಾಗಿದ್ದು ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಲೋಕಕ್ಕೆ ಗೊತ್ತಾಗುವುದಿಲ್ಲ ಎಂಬ ಭ್ರಮೆಯಲ್ಲಿರುತ್ತಾರೆ ಹಾಗೂ ಇವರ ಈ ಗುಣವನ್ನು ಕಂಡವರು ಇವರ ಬಗ್ಗೆ ನಿರುತ್ಸಾಹ ತೋರಲು ಇವರೇ ಸ್ವತಃ ಕಾರಣರಾಗುತ್ತಾರೆ.

ಈ ನಾಲ್ಕು ರಾಶಿಯವರು ತುಂಬಾನೇ ಬೋರಿಂಗ್‌ ವ್ಯಕ್ತಿಗಳಂತೆ!

ಕಟಕ: (ಜೂನ್ 21ರಿಂದ -ಜುಲೈ 22)

ಈ ವ್ಯಕ್ತಿಗಳಿಗೆ ಹೊಸ ಸ್ಥಳಗಳಿಗೆ ತೆರಳುವುದೆಂದರೆ ಆಗದ ಕೆಲಸ, ಹೊಸ ರುಚಿಯೊಂದನ್ನು ಸವಿಯುವುದು, ಹೊಸ ವಿಚಾರವನ್ನು ಕಲಿಯುವುದು ಮೊದಲಾದವುಗಳಿಂದ ಇವರು ದೂರ ಉಳಿಯುತ್ತಾರೆ. ಇದೇ ಸಮಯದಲ್ಲಿ, ಇವರು ನಾಟಕವನ್ನೂ ಇಷ್ಟಪಡದ ವ್ಯಕ್ತಿಗಳಾಗಿದ್ದಾರೆ. ಈ ವ್ಯಕ್ತಿಗಳಿಗೆ ತಮ್ಮ ಜೀವನದ ಅತ್ಯುತ್ತಮ ಕ್ಷಣಗಳನ್ನು ಅನುಭವಿಸುವ ಘಳಿಗೆ ಬಂದಿದ್ದರೂ ಇವರು ತಮ್ಮ ಭಾವನೆಗಳನ್ನು ತೋರ್ಪಡಿಸಲು ಸಾಧ್ಯವಾಗದೇ ಹೋಗುವ ಮೂಲಕ ಇತರರು ಈ ಬಗ್ಗೆ ಅರಿಯಲು ಸಾಧ್ಯವಾಗುವುದಿಲ್ಲ, ಹಾಗಾಗಿ ಈ ವ್ಯಕ್ತಿಗಳೂ ಬೋರು ಹೊಡೆಸುತ್ತಾರೆ.

ನಿಮ್ಮ ರಾಶಿಫಲ ಮೇಲಿನ ನಾಲ್ಕರಲ್ಲಿ ಒಂದಾಗಿಲ್ಲವೇ? ಹಾಗಾದರೆ ನೀವು ವಿನೋದಪ್ರಿಯ ವ್ಯಕ್ತಿಯಾಗಿದ್ದೀರಿ ಎಂದು ಅರ್ಥೈಸಿಕೊಳ್ಳಬಹುದು. ರಾಶಿಫಲಕ್ಕೆ ಸಂಬಂಧಿಸಿದ ಇನ್ನೂ ಹೆಚ್ಚಿನ ಕುತೂಹಲಕಾರಿ ಮಾಹಿತಿಗಾಗಿ ಈ ತಾಣದವನ್ನು ಗಮನಿಸುತ್ತಿರಿ, ನಾವು ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಗಳನ್ನು ಒದಗಿಸುವವರಿದ್ದೇವೆ.

Read more about: zodiac sign predictions
English summary

ಈ ನಾಲ್ಕು ರಾಶಿಯ ಜನರೇ ಅತಿ ಹೆಚ್ಚು ಬೋರು ಹೊಡೆಸುತ್ತಾರಂತೆ!

There are 4 zodiac signs which are known to be the least in terms of being fun-loving and entertaining. They are ranked according to their boring nature. These are based on the sun signs. These signs are Capricorn, Virgo, Libra and Cancer. These 4 most boring zodiac signs are ranked as per their dull nature.
Story first published: Friday, April 20, 2018, 13:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more