For Quick Alerts
ALLOW NOTIFICATIONS  
For Daily Alerts

ನಿಮ್ಮ ರಾಶಿಚಕ್ರದ ಪ್ರಕಾರ ಕಳೆದ ಜನ್ಮದಲ್ಲಿ ನೀವು ಏನಾಗಿದ್ದಿರಿ?

|

ನಮ್ಮಲ್ಲಿ ಹಲವಾರು ಮಂದಿ, ಮಾನವನು 7 ಬಾರಿ ಹುಟ್ಟುತ್ತಾನೆ ಮತ್ತು ಪ್ರತೀ ಬಾರಿ ಮೊದಲನೆಯ ರೂಪಕ್ಕಿಂತ ಭಿನ್ನವಾಗಿ ಅಥವಾ ಬೇರೆ ರೂಪದಲ್ಲಿ ಹುಟ್ಟುತ್ತಾನೆ ಎಂದು ನಂಬುತ್ತೇವೆ/ನಂಬಿದ್ದೇವೆ. ಎಂದಾದರೂ ನಿಮ್ಮ ಕನಸಿನಲ್ಲಿ, ಹಳೇ ಜನ್ಮದಲ್ಲಿ ನೀವು ಏನಾಗಿದ್ದಿರಿ ಎಂದು ಕಂಡಿದ್ದೀರಾ?

ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಗಳ ಪ್ರಸ್ತುತ ವ್ಯಕ್ತಿತ್ವ ಮತ್ತು ಅವನ ರಾಶಿಚಕ್ರದ ಚಿಹ್ನೆಯ ಮೂಲಕ ಆತ ಹಿಂದಿನ ಜನ್ಮದಲ್ಲಿ ಏನಾಗಿದ್ದ ಎಂದು ಬಹಿರಂಗಪಡಿಸಬಹುದು. ಹಾಗೆಂದು ಜ್ಯೋತಿಷ್ಯಾಸ್ತ್ರಜ್ನರು ಹೇಳುತ್ತಾರೆ. ಇದು ನಿಮ್ಮ ಸೂರ್ಯಚಿಹ್ನೆಯನ್ನು ಆಧರಿಸಿರುತ್ತದೆ.

ಹಾಗಾದರೆ ಬನ್ನಿ, ನಿಮ್ಮ ಹಿಂದಿನ ಜನ್ಮದಲ್ಲಿ ನೀವು ಏನಾಗಿದ್ದಿರಿ ಎಂದು ಪರಿಶೀಲಿಸಿ ...

ಮೇಷ ರಾಶಿ: ಮಾರ್ಚ್ 21-ಏಪ್ರಿಲ್ 19

ಮೇಷ ರಾಶಿ: ಮಾರ್ಚ್ 21-ಏಪ್ರಿಲ್ 19

ನಿಮ್ಮ ಹಿಂದಿನ ಜೀವನವು ಮೀನ ರಾಶಿಯಿಂದ ಪ್ರಭಾವಿತವಾಗಿದೆ, ಇದರ ಅರ್ಥ ನೀವು ಜವ್ದಾರಿಯುತ ಜೀವನದಿಂದ ಬಂದಿದ್ದೀರಿ. ಈ ಸೂರ್ಯ ಚಿಹ್ನೆಯಡಿಯಲ್ಲಿ ಜನಿಸಿದ ವ್ಯಕ್ತಿಗಳು ಹುಟ್ಟು ನಾಯಕರು ಎಂದು ನಂಬಲಾಗಿದೆ. ಭವಿಷ್ಯವಾಣಿಯಂತೆ ನಿಮ್ಮ ಹಿಂದಿನ ಜನ್ಮದಲ್ಲಿ ನೀವು ಯೋಧ ಅಥವಾ ರಾಜನಾಗಿದ್ದಿರಬಹುದು.
 ವೃಷಭ ರಾಶಿ: ಏಪ್ರಿಲ್ 20-ಮೇ 20

ವೃಷಭ ರಾಶಿ: ಏಪ್ರಿಲ್ 20-ಮೇ 20

ನಿಮ್ಮ ಹಿಂದಿನ ಜೀವನ ಮೇಷ ರಾಶಿಯ ಪ್ರಾಬಲ್ಯವನ್ನು ಹೊಂದಿದೆ, ಇದರರ್ಥ ನೀವು ನಿಮ್ಮ ಹಿಂದಿನ ಜೀವನದಿಂದ ಪ್ರಭಲವಾದ ಶಕ್ತಿಯನ್ನು ಈ ಜೀವನಕ್ಕೆ ತಂದಿದ್ಡೀರಿ ಮತ್ತು ಇದು ಸೃಜನಶೀಲ ಚಟುವಟಿಕೆಯಂತೆ ಬದಲಾಗಬಹುದು.

ಈ ವ್ಯಕ್ತಿಗಳು ಉತ್ತಮ ತಂಡ ಆಟಗಾರರಾಗಿದ್ದಾರೆ. ಇದರ ಮೂಲಕ ನೀವು ಜನಪ್ರಿಯ ಬ್ಯಾಸ್ಕೆಟ್ಬಾಲ್ ಅಥವಾ ಕಾಲ್ಚೆಂಡು(ಫೂಟ್ ಬಾಲ್)ಆಟಗಾರರಾಗಿದ್ದಿರಿ ಎಂದು ಊಹಿಸಲಾಗಿದೆ.

 ಮಿಥುನ ರಾಶಿ: ಮೇ 21 ಜೂನ್ 20

ಮಿಥುನ ರಾಶಿ: ಮೇ 21 ಜೂನ್ 20

ನಿಮ್ಮ ಸೃಜನಶೀಲ ಪ್ರಕೃತಿ ನಿಮ್ಮ ಹಿಂದಿನ ಜೀವನದಿಂದ ಬಂದಿದೆ. ಹಾಗೂ ಅದು ವೃಷಭದ ಪ್ರಾಬಲ್ಯದಿಂದ ಕೂಡಿತ್ತು. ನಿಮ್ಮ ಕಳೆದೆ ಜನ್ಮದಲ್ಲಿ, ನೀವು ಯಾರಾದರೂ ಪ್ರಸಿದ್ಧ ವ್ಯಕ್ತಿತ್ವವನ್ನು ಹೊಂದಿದ ವ್ಯಕ್ತಿಯ ಅವಳಿ ಜೋಡಿಯಾಗಿದ್ದಿರಬಹುದು. ಈ ವ್ಯಕ್ತಿ ಸಹ ವ್ಯಕ್ತಿವ್ವದಲ್ಲಿ ನಿಮಗೆ ನಿಖರವಾಗಿ ಹೋಲುವವರಾಗಿದ್ದಾರೆ.

 ಕರ್ಕ ರಾಶಿ: ಜೂನ್ 21-ಜುಲೈ 22

ಕರ್ಕ ರಾಶಿ: ಜೂನ್ 21-ಜುಲೈ 22

ನಿಮ್ಮ ಹಿಂದಿನ ಜೀವನ ಮಿಥುನದ ಪ್ರಾಬಲ್ಯದಿಂದ ಕೂಡಿತ್ತು ಮತ್ತು ನಿಮ್ಮ ಭಯ ಮತ್ತು ವಿಕಾರವಾದ ವಾಸ್ತವತೆಯು ಆ ಜೀವನದಿಂದ ಮುಂದೆ ತರಲ್ಪಟ್ಟಿದೆ. ಬಹುಶಃ ನಿಮ್ಮ ಹಿಂದಿನ ಜೀವನವನ್ನು, ಸಂಪೂರ್ಣವಾಗಿ ನೀವು ಇತರರ ಕಾಳಜಿ ವಹಿಸುತ್ತಾ ಕಳೆದಿದ್ದೀರಿ.

 ಸಿಂಹ ರಾಶಿ: ಜುಲೈ 23-ಆಗಸ್ಟ್ 23

ಸಿಂಹ ರಾಶಿ: ಜುಲೈ 23-ಆಗಸ್ಟ್ 23

ನಿಮ್ಮ ಹಿಂದಿನ ಜೀವನವು ಕರ್ಕ ರಾಶಿಯಿಂದ ಪ್ರಾಬಲ್ಯಗೊಂಡಿದೆ ಮತ್ತು ಇದರಿಂದಾಗಿ ನೀವು ಈಡೇರಿಕೆಯ ಅನುಭವವನ್ನು ಪಡೆಯುವುದು ಸವಾಲಿನ ಸಂಗತಿಯಾಗಿದೆ. ನಿಮ್ಮ ಹಿಂದಿನ ಜೀವನದಲ್ಲಿ ನೀವು ಕ್ರೂರವಾಗಿದ್ದರೂ, ಸುಂದರವಾದ ನಾಯಕರಾಗಿದ್ದಿರಬಹುದು.

 ಕನ್ಯಾರಾಶಿ: ಆಗಸ್ಟ್ 24-ಸೆಪ್ಟೆಂಬರ್ 23

ಕನ್ಯಾರಾಶಿ: ಆಗಸ್ಟ್ 24-ಸೆಪ್ಟೆಂಬರ್ 23

ನಿಮ್ಮ ಪ್ರಸ್ತುತ ಜೀವನವು ಸಿಂಹ ರಾಶಿಯ ಪ್ರಾಬಲ್ಯದ ವ್ಯಕ್ತಿಗಳಂತೆಯೇ ಇತರರ ಆರೈಕೆಯ ಸುತ್ತ ಸುತ್ತುತ್ತದೆ. ನೀವು ನಿಮ್ಮ ಜೀವನದ ಸಣ್ಣ ಸಣ್ಣ ವಿವರಗಳಿಗೆ ಹೆಚ್ಚಿನ ಗಮನವನ್ನು ಕೊಡುವುದರಿಂದ, ನಿಮ್ಮ ಹಿಂದಿನ ಜೀವನದಲ್ಲಿ ನೀವು ವಿಜ್ಞಾನಿ ಅಥವಾ ಗಣಿತಜ್ಞರಾಗಿರಬಹುದೆಂದು ತಿಳಿಸುತ್ತದೆ.

 ತುಲಾ ರಾಶಿ: ಸೆಪ್ಟೆಂಬರ್ 24-ಅಕ್ಟೋಬರ್ 23

ತುಲಾ ರಾಶಿ: ಸೆಪ್ಟೆಂಬರ್ 24-ಅಕ್ಟೋಬರ್ 23

ನಿಮ್ಮ ಹಿಂದಿನ ಜೀವನನದಲ್ಲಿ ನೀವು ಕನ್ಯಾರಾಶಿಯ ಪ್ರಾಬಲ್ಯದ ಜೀವನವನ್ನು ನಡೆಸಿದ್ದೀರಿ, ಮತ್ತು ಸಮತೋಲನದ ಜೀವನವನ್ನು ಪಡೆಯಲು ಬಹಳಷ್ಟು ಕಷ್ಟಕರ ಸಮಯವನ್ನು ಕಂಡಿದ್ದೀರಿ. ಭವಿಷ್ಯದ ಪ್ರಕಾರ, ನೀವು ಭಾವನೆಗಳನ್ನು ವ್ಯಕ್ತಪಡಿಸಲು ಪ್ರೀತಿಸುವ ವ್ಯಕ್ತಿಯಾದ್ದರಿಂದ, ಹಿಂದೆ ಬರಹಗಾರ ಅಥವಾ ಕವಿಯಾಗಿದ್ದಿರಬಹುದು.

 ವೃಶ್ಚಿಕ ರಾಶಿ: ಅಕ್ಟೋಬರ್ 24-ನವೆಂಬರ್ 22

ವೃಶ್ಚಿಕ ರಾಶಿ: ಅಕ್ಟೋಬರ್ 24-ನವೆಂಬರ್ 22

ಈ ಜೀವನದಲ್ಲಿ ನೀವು ವೃಶ್ಚಿಕ ರಾಶಿಯವರಾಗಿ ಜನಿಸಿದರೆ ನಿಮ್ಮ ಹಿಂದಿನ ಜೀವನದಲ್ಲಿ ನೀವು ತುಲಾರಾಶಿಯವರಾಗಿದ್ದಿರಿ. ಕಳೆದ ಜನ್ಮದಲ್ಲಿ ನೀವು ನಿಮ್ಮ ಮೇಲೆ ತುಂಬಾ ಸಮಯವನ್ನು ಕೇಂದ್ರೀಕರಿಸಿದ್ದಿರಿ. ಆದ್ದರಿಂದ ಹಿಂದಿನ ಜನ್ಮದಲ್ಲಿ, ನೀವು ವಕೀಲರಾಗಿದ್ದಿರಬಹುದು ಅಥವಾ ನ್ಯಾಯಾಧೀಶರಾಗಬಹುದು ಮತ್ತು ನಿಮ್ಮ ಸುತ್ತಲಿರುವ ಜನರಿಗೆ ನ್ಯಾಯವನ್ನು ಒದಗಿಸುವವರಾಗಿದ್ದಿರಬಹುದು.

 ಧನು ರಾಶಿ: ನವೆಂಬರ್ 23-ಡಿಸೆಂಬರ್ 22

ಧನು ರಾಶಿ: ನವೆಂಬರ್ 23-ಡಿಸೆಂಬರ್ 22

ನಿಮ್ಮ ಹಿಂದಿನ ಜೀವನದಲ್ಲಿ, ನೀವು ವೃಶ್ಚಿಕ ರಾಶಿಯ ಪ್ರಾಬಲ್ಯ ಹೊಂದಿದ್ದಿರಿ. ನಿಮ್ಮ ಕೆಲವು ಆಳವಾದ ಬೇರುಗಳು ಈ ಜನ್ಮದಲ್ಲಿ ಕೂಡಾ ವಿಸ್ತರಣೆಯ ಹಾದಿಯಲ್ಲಿವೆ.

ನಿಮ್ಮ ಹಿಂದಿನ ಜೀವನದಲ್ಲಿ ನೀವು ಖಂಡಿತವಾಗಿಯೂ ಹೃದಯವನ್ನು ಆಳುವವರಾಗಿದ್ದಿರಿ. ಜ್ಯೋತಿಷ್ಯಾಸ್ತ್ರಜ್ನರ ಪ್ರಕಾರ, ನಿಮ್ಮ ಹಿಂದಿನ ಜನನದಲ್ಲಿ, ನೀವು ಆಕರ್ಷಣೆಯ ಕೇಂದ್ರವಾಗಿರಲು ಇಷ್ಟಪಡುವಂತಹವರಾಗಿದ್ದಿರಿ.

 ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

ನಿಮ್ಮ ಹಿಂದಿನ ಜೀವನದಲ್ಲಿ, ನೀವು ಧನು ರಾಶಿಯ ಪ್ರಾಬಲ್ಯ ಹೊಂದಿದ್ದಿರಿ. ನಿಮ್ಮ ದಿನದ ಪ್ರಮುಖ ಭಾಗವನ್ನು, ಪ್ರಕೃತಿಯನ್ನು ಆಲಿಸುತ್ತಾ ಕಳೆಯುತ್ತಿದ್ದಿರಿ. ನಿಮ್ಮ ಹಿಂದಿನ ಜನನದಲ್ಲಿ, ನೀವು ಒಬ್ಬ ಪ್ರಸಿದ್ಧ ಪರಿಸರವಾದಿ ಅಥವಾ ಪುರಾತತ್ವಶಾಸ್ತ್ರಜ್ಞರಾಗಿದ್ದಿರಿ.

 ಕುಂಭ ರಾಶಿ: ಜನವರಿ 21-ಫೆಬ್ರವರಿ 18

ಕುಂಭ ರಾಶಿ: ಜನವರಿ 21-ಫೆಬ್ರವರಿ 18

ನೀವು ನಿಮ್ಮ ಸ್ವಂತ ಗುರುತನ್ನು ರೂಪಿಸಲು ಮತ್ತು ಆಳಲು ಹುಟ್ಟಿದ್ದೀರಿ. ನಿಮ್ಮ ಹಿಂದಿನ ಜನನವು ಮಕರ ರಾಶಿಯಿಂದ ಆಳಲ್ಪಟ್ಟಿದೆ ಅದರಂತೆ, ನೀವು ಬೇರೆಯೆವರಿಂದ ಪ್ರಭಾವಿತರಾಗದೇ, ಸ್ವತಂತ್ರವಾಗಿ ಶ್ರಮವಹಿಸಿ ಕೆಲಸಮಾಡುತ್ತಿದ್ದಿರಿ.

ಆದ್ದರಿಂದ ನಿಮ್ಮ ಹಿಂದಿನ ಜೀವನದಲ್ಲಿ , ನೀವು ಎಲ್ಲಾ ದಾಖಲೆಗಳನ್ನು ಮುರಿದುಹಾಕಿದ ಕಲಾವಿದರಾಗಿರಬಹುದು ಎಂದು ತೋರುತ್ತಿದೆ.

 ಮೀನ ರಾಶಿ: ಫೆಬ್ರವರಿ 19-ಮಾರ್ಚ್ 20

ಮೀನ ರಾಶಿ: ಫೆಬ್ರವರಿ 19-ಮಾರ್ಚ್ 20

ನಿಮ್ಮ ಹಿಂದಿನ ಜೀವನದಲ್ಲಿ, ನೀವು ಕುಂಭ ರಾಶಿಯಿಂದ ಆಳಲ್ಪಟ್ಟಿದ್ದೀರಿ. ನಿಮಗೆ ಬಲವಾದ ಒಳ ಜ್ನಾನವಿದೆ ಮತ್ತು ಇದು ನಿಮ್ಮನ್ನು ಭವಿಷ್ಯವನ್ನು ನೋಡಲು ಸಾಧ್ಯವಿರುವ ವ್ಯಕ್ತಿಯಾಗಿ ಮಾಡುದು.

ಹಿಂದಿನ ಜನನದಲ್ಲಿ ನೀವು, ಭವಿಷ್ಯದಲ್ಲಿ ಏನು ಸಂಭವಿಸಬಹುದೆಂದು ಭವಿಷ್ಯ ನುಡಿದಿದ್ದ ನಾಸ್ಟ್ರಾಡಾಮಸ್ ಆಗಿದ್ದಿರಿ ಎಂದು ತೋರುತ್ತದೆ.

ನಿಮ್ಮ ಹಿಂದಿನ ಜನ್ಮದಲ್ಲಿ ನೀವು ಏನಾಗಿದ್ದಿರಿ ? ಕೆಳಗಿನ ಕಾಮೆಂಟ್ ವಿಭಾಗದಲ್ಲಿ ನಮಗೆ ತಿಳಿಸಿ.

Read more about: zodiac signs predictions
English summary

What Were You In Your Past Life According To Your Zodiac Sign | ನಿಮ್ಮ ರಾಶಿಚಕ್ರದ ಪ್ರಕಾರ ಕಳೆದ ಜನ್ಮದಲ್ಲಿ ನೀವು ಏನಾಗಿದ್ದಿರಿ?

According to astrology, each zodiac sign's characteristics is related to the type of personality they had in previous life. These characteristics reveal about the person you were born as in your previous birth. For example, if you are a Leo and your characteristics are being a bold and stubborn individual, then it reveals about your past as being a leader.
Story first published: Friday, April 20, 2018, 12:25 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more