For Quick Alerts
ALLOW NOTIFICATIONS  
For Daily Alerts

ವೃಷಭ ರಾಶಿಯವರಿಗೆ ಮೇ 2018 ಹೀಗಿರಲಿದೆ

|

ವೃಷಭರಾಶಿಯವರು ಪ್ರಾಪಂಚಿಕ ಭೋಗಗಳಿಗೆ ಇಷ್ಟಪಡುವ ವ್ಯಕ್ತಿಗಳ ರೂಪದಲ್ಲಿ ಹೆಚ್ಚು ಪರಿಚಿತರಾಗಿದ್ದಾರೆ. ಇವರು ಸಾಮಾನ್ಯವಾಗಿ ತೀರಾ ಸರಳ ವ್ಯಕ್ತಿಗಳೂ, ಶ್ರಮಜೀವಿಗಳೂ ಆಗಿರುತ್ತಾರೆ. ಇವರು ತಮ್ಮದೇ ಲೆಕ್ಕಾಚಾರದ ಪ್ರಕಾರ ಕಾರ್ಯನಿರ್ವಹಿಸುವವರು ಹಾಗೂ ಇತರರಿಂದ ಸೂಚನೆಗಳನ್ನು ಪಡೆಯಲಿಚ್ಛಿಸದವರೂ ಆಗಿದ್ದಾರೆ.

ಮೇ 2018ರಲ್ಲಿ ವೃಷಭ ರಾಶಿಯವರ ವ್ಯಕ್ತಿಗಳ ಜೀವನ ಹೇಗಿರಲಿದೆ ಎಂಬುದನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದ್ದು ಅದೃಷ್ಟ ಸಂಖ್ಯೆ, ಬಣ್ಣ, ಹಣಕಾಸು ಮತ್ತಿತರ ವಿವರಗಳನ್ನೂ ನೀಡಲಾಗಿದೆ.

ಈ ರಾಶಿಯ ವ್ಯಕ್ತಿಗಳು ಇನ್ನೊಬ್ಬರ ಒಡೆತನದ ಅಡಿಯಲ್ಲಿ ಕೆಲಸ ಮಾಡಲು ಇಚ್ಛಿಸುವುದಿಲ್ಲ. ಒಂದು ವೇಳೆ ನೀವು ವೃಷಭರಾಶಿಯವರಾಗಿದ್ದರೆ ನಿಮ್ಮ ರಾಶಿಯಲ್ಲಿ ಭೂಮಿ ಮತ್ತು ಶುಕ್ರ ಗ್ರಹಗಳು ಪ್ರಮುಖ ಪಾತ್ರವಹಿಸುತ್ತವೆ. ನೀವು ಸರಳಜೀವಿಗಳು ಹಾಗೂ ನೀವು ತೀರಾ ಅತಿರೇಕ ಎನಿಸುವ ಕನಸುಗಳನ್ನೂ ಕಟ್ಟುವುದಿಲ್ಲ.

ವೃಷಭ ರಾಶಿಯವರಿಗೆ ಮೇ 2018 ಹೀಗಿರಲಿದೆ

ಓರ್ವ ವ್ಯಕ್ತಿಯಾಗಿ ನೀವು ಒಂದು ನಿರ್ದಿಷ್ಟ ಗುರಿಯನ್ನು ಹೊಂದಿರುವವರಾಗಿದ್ದೀರಿ ಹಾಗೂ ಪ್ರಬಲ ಮನೋಬಲವನ್ನೂ ಹೊಂದಿದ್ದೀರಿ. ಈ ರಾಶಿಯ ವ್ಯಕ್ತಿಗಳ ಲಕ್ಷಣಗಳಲ್ಲಿ ಇವು ಪ್ರಮುಖವಾಗಿವೆ. ಆದರೆ ಈ ವ್ಯಕ್ತಿಗಳಿಗೆ ಅಹಂಭಾವ, ಆಸೆಬುರುಕತನ, ಹಠಮಾರಿತನ ಹಾಗೂ ತಡವಾಗಿಸುವ ಗುಣಗಳೂ ಅಂಟಿಕೊಂಡಿರುತ್ತವೆ.

ಹಾಗಾಗಿ ಕೆಲವೊಮ್ಮೆ ಸೋಮಾರಿತನ, ಆಸೆಬುರುಕತನ, ಅನುಮಾನ ಪ್ರವೃತ್ತಿ, ಇತರರೊಂದಿಗೆ ಹೊಂದಿಕೊಳ್ಳದಿರುವುದು ಮೊದಲಾದ ಗುಣಗಳಿಂದ ಕೆಲವು ಅಮೂಲ್ಯ ಅವಕಾಶಗಳು ಕೈತಪ್ಪಿಹೋಗಬಹುದು. ಆದ್ದರಿಂದ ಈ ತಿಂಗಳಲ್ಲಿ ಯಾವ ರೀತಿಯಲ್ಲಿ ಮುಂದುವರೆಯಬೇಕೆಂಬುದನ್ನು ಗಮನಿಸಿ ಆ ಪ್ರಕಾರ ನಡೆದುಕೊಂಡರೆ ಹೆಚ್ಚಿನ ಪ್ರಯೋಜನವಾಗಲಿದೆ.

ಈ ತಿಂಗಳಲ್ಲಿ ವೃಷಭರಾಶಿಯವರ ಜೀವನದಲ್ಲಿ ಏನೇನು ಬದಲಾವಣೆಗಳಾಗಲಿವೆ, ವೃತ್ತಿ, ಪ್ರಣಯ, ಹಣಕಾಸು ಮೊದಲಾದ ವಿಷಯಗಳ ಬಗ್ಗೆ ನಮ್ಮ ಜ್ಯೋತಿಷ್ಯಾಶ್ತ್ರಜ್ಞರು ವಿವರಿಸಿದ ಮಾಹಿತಿಗಳನ್ನು ಇಂದಿನ ಲೇಖನದಲ್ಲಿ ನೀಡಲಾಗಿದೆ

ಆರೋಗ್ಯ ಭಾಗ್ಯ:

ಈ ತಿಂಗಳಲ್ಲಿ ನೀವು ಸಾಮಾನ್ಯವಾಗಿ ಯೋಚಿಸುವುದಕ್ಕಿಂತಲೂ ಭಿನ್ನವಾಗಿ ಯೋಚಿಸಬೇಕು. ನಿಮ್ಮ ಆರೋಗ್ಯದ ಕೆಲವು ತೊಂದರೆಗಳಿಗೆ ನೀವು ಇದುವರೆಗೆ ಅನುಸರಿಸುತ್ತಾ ಬಂದಿರುವ ಚಿಕಿತ್ಸೆಗಳು ಸಾಮಾನ್ಯವಾಗಿ ಪರಿಹಾರ ಒದಗಿಸಲಾರವು.

ಈ ಸಮಯದಲ್ಲಿ ನಿಮ್ಮ ಹಣಕಾಸಿನ ವ್ಯವಸ್ಥೆಗಳೂ ಹೆಚ್ಚಿನ ಪ್ರತಿಫಲ ನೀಡದೇ ಇರುವ ಕಾರಣ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ವಿಶೇಷವಾಗಿ ಸ್ಥೂಲಕಾಯ ಮತ್ತು ತ್ವಚೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

ಏಕೆಂದರೆ ಈ ತಿಂಗಳಲ್ಲಿ ಇವೆರಡೂ ವಿಷಯಗಳಲ್ಲಿ ನಿಮ್ಮ ಆರೋಗ್ಯ ಹೆಚ್ಚಾಗಿ ಸೋಂಕಿನ ಬಾಧೆಗೊಳಗಾಗಲಿದೆ. ಈ ತಿಂಗಳಲ್ಲಿ ನಿಮ್ಮ ಹಣಕಾಸು ಮತ್ತು ಆಸ್ತಿಗಳನ್ನು ನಿರ್ವಹಿಸುತ್ತಿರುವಾಗಲೇ ಕೆಲವು ಸ್ವಯಂ ಪ್ರೇರಿತರಾಗಿ ಕೆಲವು ನೆಮ್ಮದಿ ನೀಡುವ ಕಾರ್ಯಗಳನ್ನು ಕೈಗೊಳ್ಳಬೇಕಾಗಬಹುದು.

ವೃಷಭ ರಾಶಿಯವರಿಗೆ ಮೇ 2018 ಹೀಗಿರಲಿದೆ

ನಿಮ್ಮ ವೃತ್ತಿಜೀವನದ ಬಗ್ಗೆ:

ಈ ತಿಂಗಳಲ್ಲಿ ನಿಮ್ಮ ವೃತ್ತಿಜೀವನದಲ್ಲಿ ಹೆಚ್ಚಿನ ಏಳ್ಗೆ ಪಡೆಯುವ ಸಾಧ್ಯತೆ ತೀರಾ ಕಡಿಮೆ. ಈ ತಿಂಗಳಲ್ಲಿ ನಿಮ್ಮ ಹೊಣೆಗಾರಿಕೆ ಕಡಿಮೆ ಇದ್ದರೂ ನಿಮ್ಮ ಗುರಿಗಳನ್ನು ಸಾಧಿಸುವ ಸಾಧ್ಯತೆಯೂ ಕಡಿಮೆಯೇ ಇರುತ್ತದೆ. ಹಾಗಾಗಿ ನೀವು ಸಂತುಷ್ಟಿಯನ್ನೂ ಪಡೆಯಲಾರಿರಿ.

ಈ ತಿಂಗಳಲ್ಲಿ ನೀವು ಸಾಕಷ್ಟು ಪ್ರಯಾಣಿಸಬೇಕಾಗಿ ಬರಬಹುದು ಆದರೆ ಈ ಪ್ರಯಾಣಗಳಿಂದಲೂ ಹೆಚ್ಚಿನ ಫಲ ದೊರಕದು. ಆದರೆ ಉತ್ತರಾಭಿಮುಖ ಪ್ರಯಾಣದಿಂದ ಕೊಂಚ ಲಾಭವಾಗಲಿದೆ. ಅಲ್ಲದೇ ನಿಮ್ಮ ಮುಂದಿರುವ ಕೆಲಸಗಳಲ್ಲಿ ಕೊಂಚ ಅಪಾಯ ಎದುರಾಗುವ ಸಾಧ್ಯತೆಯೂ ಇದ್ದು ಈ ಬಗ್ಗೆ ನೀವು ಎಚ್ಚರಿಕೆ ವಹಿಸಬೇಕಾಗುತ್ತದೆ.

ಈ ತಿಂಗಳಲ್ಲಿ ನಿಮ್ಮ ಹಣಕಾಸಿನ ಬಗ್ಗೆ:

ಈ ತಿಂಗಳಲ್ಲಿ ನಿಮ್ಮ ಹಣಕಾಸಿನ ಪರಿಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆಯೇನೂ ಇರುವುದಿಲ್ಲ. ಈ ತಿಂಗಳಲ್ಲಿ ನೀವು ಇತರ ಸಮಯಕ್ಕಿಂತಲೂ ಹೆಚ್ಚೇ ಕಷ್ಟಪಡುತ್ತೀರಿ ಹಾಗೂ ಲಾಭ ಪಡೆಯಲು ಶ್ರಮಿಸುತ್ತೀರಿ. ಜೊತೆಯಲ್ಲಿ ಹೆಚ್ಚಿನ ಸಮಯ ಪ್ರಯಾಣದಲ್ಲಿಯೂ ಕಳೆಯುತ್ತೀರಿ. ಅಲ್ಲದೇ ಒಂದು ವೇಳೆ ಹೊಸ ಯೋಜನೆಗಳಿಗಾಗಿ ಹಣವನ್ನು ಹೂಡುವ ಬಗ್ಗೆ ಕೆಲವು ಕ್ರಮಗಳನ್ನೂ ಕೈಗೊಳ್ಳುವುದಾದರೆ ಈ ತಿಂಗಳು ಇದಕ್ಕೆ ಸರ್ವಥಾ ಸೂಕ್ತಕಾಲವಲ್ಲ! ನಿಮ್ಮ ಹೂಡಿಕೆಗಳನ್ನು ಮುಂದೂಡುವುದು ಅನಿವಾರ್ಯ! ಪರಿಸ್ಥಿತಿ ತಿಳಿಯಾಗುವವರೆಗೂ ಆದಷ್ಟೂ ಸರಳ ಜೀವನವನ್ನು ನಡೆಸುವುದೇ ಸೂಕ್ತ.

ನಿಮ್ಮ ಪ್ರೀತಿಯ ಬಗ್ಗೆ:

ನಿಮ್ಮ ಕುಟುಂಬದ ಪರಿಸರ ಶಾಂತಿಯುತವಾಗಿರುವಂತೆ ಕಂಡುಬರುತ್ತದೆ. ಒಂಟಿ ಜೀವಿಗಳಿಗೆ ಈ ತಿಂಗಳ ಹದಿನಾರನೇ ತಾರೀಖಿನ ಬಳಿಕ ಉತ್ತಮ ಅವಕಾಶಗಳು ದೊರಕುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಒಟ್ಟಾರೆಯಾಗಿ ಈ ರಾಶಿಯ ವ್ಯಕ್ತಿಗಳ ಜೀವನ ಈ ತಿಂಗಳಲ್ಲಿ ಶಾಂತಿಯುತವಾಗಿರುತ್ತದೆ. ದಂಪತಿಗಳ ಬಗ್ಗೆ ಹೇಳುವುದಾದರೆ ಮೇ 1 ರಿಂದ 5ರವರೆಗೆ ತಮ್ಮ ಸಂಗಾತಿಗಳಿಂದ ಅನಿರೀಕ್ಷಿತ ಉಡುಗೊರೆಯನ್ನು ಪಡೆಯುವ ಸಾಧ್ಯತೆ ಇರುತ್ತದೆ.

ಅದೃಷ್ಟ ದಿನಾಂಕಗಳು ಮತ್ತು ಬಣ್ಣಗಳು:

ಅದೃಷ್ಟ ಸಂಖ್ಯೆಗಳು: 5, 35, 50, 57, ಮತ್ತು 82.

ಅದೃಷ್ಟ ದಿನಾಂಕಗಳು: 7, 8, 16, 17, 18, 25 ಮತ್ತು 26.

ಅದೃಷ್ಟ ತರುವ ಬಣ್ಣಗಳು: ಸೇಬಿನ ಹಸಿರು ಮತ್ತು ಕುಂಕುಮ ಕೆಂಪು.

Read more about: zodiac sign
English summary

ವೃಷಭ ರಾಶಿಯವರಿಗೆ ಮೇ 2018 ಹೀಗಿರಲಿದೆ:

Taureans hate to be bossed over. If you belong to this sign, then you know that your zodiac is ruled by the element Earth and planet Venus. You are down to earth by nature and you do not have big fancy dreams. As a person, you are determined and also seem to have strong willpower, which are the positive aspects of your zodiac. As a person, you have a big ego and come across as being greedy, lethargic and stubborn. Here, our astro-experts reveal about what you need to expect this month in terms of love, finance, career and even learn about the lucky numbers and colours for the month.
Story first published: Tuesday, May 1, 2018, 10:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more