ಕನಸಿನ ಕೆಲಸ ಸಿಗಲು ಜ್ಯೋತಿಷ್ಯದ ಈ ಸಲಹೆಗಳನ್ನು ಪಾಲಿಸಿ

By Sushma Charhra
Subscribe to Boldsky

ನಿಮ್ಮ ಸದ್ಯದ ಕೆಲಸದಿಂದಾಗಿ ನೀವು ಖುಷಿಯಾಗಿಲ್ಲವಾ? ಕಡಿಮೆ ಹಣ ಸಂಪಾದನೆಯಾಗುತ್ತಿರುವುದಕ್ಕೆ ನಿಮಗೆ ಬೇಸರವಿದೆಯಾ? ಒಳ್ಳೆ ಉದ್ಯೋಗ ಸಿಗುತ್ತಿಲ್ಲ ಎಂದು ಭಯವಾಗುತ್ತಿದೆಯಾ? ಹಾಗಾದ್ರೆ ನಾವಿಲ್ಲಿ ನಿಮಗೆ ಕೆಲವು ಜ್ಯೋತಿಷ್ಯದ ಸಲಹೆಗಳನ್ನು ನೀಡುತ್ತೇವೆ., ಆ ಮೂಲಕ ನೀವು ನಿಮ್ಮ ಕನಸಿನ ಉದ್ಯೋಗವನ್ನು ಪಡೆಯಲು ಸಾಧ್ಯವಾಗಬಹುದು.

ಈ ಲೇಖನವು ಯಾರಿಗೆ ಜ್ಯೋತಿಷ್ಯದ ಮೇಲೆ ಅತಿಯಾದ ನಂಬಿಕೆ ಇದಿಯೋ ಅವರಿಗೆ ಹೇಳಿ ಮಾಡಿಸುವಂತಿದೆ. ನೀವು ಮಾಡಬೇಕಾಗಿರುವುದು ಇಷ್ಟೇ, ನಿಮ್ಮ ಅದೃಷ್ಟವನ್ನು ಬಲಿಷ್ಟಗೊಳಿಸಿಕೊಳ್ಳುವುದು ಮತ್ತು ಆ ಮೂಲಕ ಉತ್ತಮ ಉದ್ಯೋಗವನ್ನು ಸಂಪಾದಿಸಿಕೊಳ್ಳುವುದು.

ಕೆಲವು ಸರಳವಾದ ಮತ್ತು ಉತ್ತಮವಾದ ಜ್ಯೋತಿಷ್ಯದ ಸಲಹೆಗಳು ನಿಮ್ಮ ಕರಿಯರ್ ನ್ನು ಉತ್ತುಂಗಕ್ಕೆ ಏರಿಸಿಕೊಳ್ಳಲು ಸಹಾಯ ಮಾಡಲಿದೆ. ನಿಮ್ಮ ಉದ್ಯೋಗದ ವಿಚಾರವಾಗಿ ನಮ್ಮ ಜ್ಯೋತಿಷ್ಯ ತಜ್ಞರು ತಿಳಿಸಿರುವ ಕೆಲವು ಮಾಹಿತಿಗಳ ವಿವರ ಇಲ್ಲಿದೆ ನೋಡಿ..

ನಿಮ್ಮ ಅಂಗೈಗಳನ್ನು ನೋಡಿಕೊಳ್ಳಿ

ನಿಮ್ಮ ಅಂಗೈಗಳನ್ನು ನೋಡಿಕೊಳ್ಳಿ

ಇದು ತುಂಬಾ ಸುಲಭವಾದ ವಿಚಾರವಾಗಿದ್ದು ಎಲ್ಲರೂ ಮಾಡಬಹುದು.ಬೆಳಿಗ್ಗೆ ಹಾಸಿಗೆಯಿಂದ ಏಳುತ್ತಿದ್ದಂತೆ ಮೊದಲು ನಿಮ್ಮ ಕಣ್ಣುಗಳು ನಿಮ್ಮ ಎರಡೂ ಅಂಗೈಗಳನ್ನು ನೋಡಬೇಕು.ಜ್ಯೋತಿಷ್ಯದ ನಂಬಿಕೆಯ ಪ್ರಕಾರ ನಿಮ್ಮ ಅಂಗೈಯಲ್ಲಿ ಲಕ್ಷ್ಮೀ ದೇವಿಯು ನೆಲೆಸಿರುತ್ತಾಳೆ.

 ಆದಷ್ಟು ಭಯ ಪಡುವುದನ್ನು ಕಡಿಮೆ ಮಾಡಿ

ಆದಷ್ಟು ಭಯ ಪಡುವುದನ್ನು ಕಡಿಮೆ ಮಾಡಿ

ಹೆದರುವುದು ಮತ್ತು ಬೆಚ್ಚಿಬೀಳುವುದು ನಿಮ್ಮ ದೊಡ್ಡ ಶತ್ರುಗಳಾಗಿವೆ. ಅದು ನಿಮ್ಮ ಸಂತೋಷ ಮತ್ತು ನಿಮ್ಮ ಕೆಲಸವನ್ನು ಹಾಳು ಮಾಡುತ್ತದೆ. ಯಾವಾಗ ನಿಮ್ಮ ತಲೆಯಲ್ಲಿ ಅತೀ ಹೆಚ್ಚುಧನಾತ್ಮಕ ಶಕ್ತಿಗಳು ಚಲಿಸುತ್ತವೋ, ಆಗ ನೀವು ಹೆಚ್ಚು ಗೆಲವು ಕಾಣಲು ಸಾಧ್ಯವಾಗುತ್ತೆ. ಹಾಗಾಗಿ ನೀವು ಯಾವಾಗಲೂ ಒಳ್ಳೆಯದಾಗುವುದ ಬಗ್ಗೆ ಆಲೋಚಿಸಬೇಕು ಮತ್ತು ಧನಾತ್ಮಕ ಆಲೋಚನೆಗಳನ್ನು ಮಾಡಬೇಕು. ಸೋಲು, ನಿಧಾನವಾಗಿ ಆಗುವ ವಿಚಾರಗಳು, ಚಾಲೆಂಜ್ ಅನ್ನಿಸುವುದ ಬಗ್ಗೆ ನಿಮಗೆ ಧೈರ್ಯವಿರಬೇಕೇ ವಿನಃ ಭಯವಿರಬಾರದು.

ಕಪ್ಪು ಎಳ್ಳನ್ನು ದಾನ ಮಾಡಿ.

ಕಪ್ಪು ಎಳ್ಳನ್ನು ದಾನ ಮಾಡಿ.

ಶನಿಯ ಪ್ರಭಾವದಿಂದ ತಪ್ಪಿಸಿಕೊಳ್ಳಲು,ನೀವು ಕಪ್ಪು ಎಳ್ಳನ್ನು ದಾನ ಮಾಡುವುದು ಬಹಳ ಒಳ್ಳೆಯದು. ಹೀಗೆ ಮಾಡುವುದರಿಂದ ನಿಮಗೆ ಯಾವ ದುಷ್ಠ ಶಕ್ತಿಯು ಸರ್ಕಾರಿ ನೌಕರಿ ಸಿಗದಂತೆ ಮಾಡುತ್ತಿದೆಯೋ ಆ ದುಷ್ಟಶಕ್ತಿಯು ನಿಮ್ಮಿಂದ ದೂರವಾಗುತ್ತೆ. ಆದರೆ ನೆನಪಿರಲಿ ಕೇವಲ ಹೀಗೆ ಮಾಡುವುದರಿಂದ ಮಾತ್ರವೇ ಸಾಧ್ಯವಿಲ್ಲ ಬದಲಾಗಿ ನಿಮ್ಮ ಸ್ವ ಪ್ರಯತ್ನವೂ ಬಹಳ ಮುಖ್ಯ. ಪರೀಕ್ಷೆಗೆ ಸ್ವಲ್ಪವೂ ಓದದೆ ದೇವರ ಪೂಜೆ ಮಾಡಿ ದೇವರೆ ಕಾಪಾಡಪ್ಪ ಅಂದರೆ ಯಾವ ದೇವರೂ ನಿಮ್ಮನ್ನು ಪಾಸು ಮಾಡಲಾರ.

ಶನಿವಾರದ ದಿನ ಚುರುಕಾಗಿರಿ

ಶನಿವಾರದ ದಿನ ಚುರುಕಾಗಿರಿ

ಶನಿವಾರವು ಶನಿಯ ವಾರವೆಂದು ಪ್ರಸಿದ್ಧಿ. ಶನಿವಾರದ ದಿನ ಉಪವಾಸ ಮಾಡುವುದರಿಂದ ಬಹಳ ಒಳಿತಾಗಲಿದೆ. ಜ್ಯೋತಿಷ್ಯವು ಹೇಳುವ ಪ್ರಕಾರ ಶನಿವಾರ ಉಪವಾಸ ಮಾಡುವುದರಿಂದಾಗಿ ನಿಮ್ಮ ಶಕ್ತಿಯು ಅಧಿಕವಾಗುತ್ತೆ ಮತ್ತು ನಿಮ್ಮ ಗುರಿಯೆಡೆಗೆ ನಿಮ್ಮ ಗಮನ ಹೆಚ್ಚು ಕೇಂದ್ರೀಕರಿಸಲು ನೆರವಾಗುತ್ತೆ.

ನೀಲ ಮತ್ತು ಕಡುನೀಲಿ ಬಣ್ಣದ ಹರಳುಗಳನ್ನು ಧರಿಸಿ

ನೀಲ ಮತ್ತು ಕಡುನೀಲಿ ಬಣ್ಣದ ಹರಳುಗಳನ್ನು ಧರಿಸಿ

ಶನಿ ಗ್ರಹಕ್ಕೆ ನೀಲ ಮತ್ತು ಕಡುನೀಲಿ ಬಣ್ಣದ ಹರಳುಗಳು ಬಹಳ ಉತ್ತಮವಾದದ್ದು. ಈ ಹರಳಿನ ಧಾರಣೆಯಿಂದ ನೀವು ನಿಮ್ಮ ಕೆಲಸದಲ್ಲಿನ ಗಮನವನ್ನು ಹೆಚ್ಚು ಕೇಂದ್ರೀಕರಿಸಲು ಮತ್ತು ನಿಯತ್ತನ್ನು ಹೆಚ್ಚು ದಾಖಲಿಸಲು ಸಾಧ್ಯವಾಗುತ್ತೆ. ಇದು ನಿಮ್ಮ ಜೀವನವನ್ನು ಉತ್ತಮವಾಗಿರಿಸಲು ಸಹಾಯ ಮಾಡುತ್ತೆ.

ಭವಿಷ್ಯವನ್ನು ಉತ್ತಮಗೊಳಿಸಲು ಇರುವ ಮಂತ್ರಗಳನ್ನು ಪಠಿಸಿ

ಭವಿಷ್ಯವನ್ನು ಉತ್ತಮಗೊಳಿಸಲು ಇರುವ ಮಂತ್ರಗಳನ್ನು ಪಠಿಸಿ

ನಿಮ್ಮ ಕನಸಿನ ಉದ್ಯೋಗ ನಿಮಗೆ ಸಿಗಬೇಕು ಎಂದರೆ, ನೀವು ದೇವರಿಗೆ ನಿಮ್ಮ ಬೇಡಿಕೆಯನ್ನು ಅರ್ಥ ಮಾಡಿಸಬೇಕಲ್ಲವೇ..ಹಾಗಾಗಿ, ನೀವು ಅತ್ಯಂತ ಶಕ್ತಿಯುತವಾಗಿರುವ ಕೆಲವು ಮಂತ್ರಗಳನ್ನು ಫಠಿಸಬಹುದು. ಇದು ನಿಮ್ಮ ಉತ್ತಮ ಕರಿಯರ್ ರೂಪಿಸಿಕೊಳ್ಳಲು ಸಹಾಯ ಮಾಡುತ್ತೆ. ಗಾಯತ್ರೀ ಮಂತ್ರ ಮತ್ತು ಮಹಾ ಮೃತ್ಯುಂಜಯ ಸ್ತೋತ್ರಗಳನ್ನು ಪಠಿಸುವುದು ಒಳಿತು. ಉತ್ತಮ ಫಲಿತಾಂಶಕ್ಕಾಗಿ ಪ್ರತಿದಿನ 31 ಬಾರಿ ಪ್ರತಿ ಮಂತ್ರವನ್ನು ಪಠಿಸುವುದು ಒಳ್ಳೆಯದು. ಇದರಿಂದಾಗಿ ತಾಯಿ ಗಾಯತ್ರಿದೇವಿ ಮತ್ತು ಪರಶಿವನ ಕೃಪೆಗೆ ನೀವು ಪಾತ್ರರಾಗಬಹುದು.

For Quick Alerts
ALLOW NOTIFICATIONS
For Daily Alerts

    English summary

    follow-these-astrological-tips-to-get-a-dream-job

    follow-these-astrological-tips-to-get-a-dream-job
    Story first published: Wednesday, May 16, 2018, 16:00 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more