For Quick Alerts
ALLOW NOTIFICATIONS  
For Daily Alerts

ಮಕ್ಕಳ ದಿನಾಚರಣೆ ವಿಶೇಷ ಸಾಂಪ್ರದಾಯಿಕ ಬಾಲ್ಯದ ಆಟಗಳ ಮೆಲುಕು

|

ಬಾಲ್ಯವೆಂದರೆ ಸುಂದರ ಸೊಗಸಾದ ಅನುಭವ. ಅದರಲ್ಲೂ ಬಾಲ್ಯದಲ್ಲಿ ನಾವು ಆಡುವ ಆಟಗಳು ಎಂದಿಗೂ ನವೀನವಾಗಿರುತ್ತವೆ. ಕಷ್ಟಗಳ ಸರಮಾಲೆಯಿಲ್ಲದ ಜೀವನದ ಒಂದು ಸುಂದರ ಭಾಗ ಬಾಲ್ಯ. ನಮ್ಮ ಬಾಲ್ಯದಲ್ಲಿ ಓದಿಗಿಂತ ಆಟಕ್ಕೇ ಹೆಚ್ಚು ಪ್ರಾಧಾನ್ಯತೆ. ಬಾಲ್ಯದಲ್ಲಿ ಹೆಚ್ಚು ಚಾಲ್ತಿಯಲ್ಲಿದ್ದ ಆಟಗಳೆಂದರೆ ಮನೆಯಾಟ, ಕುಂಟೆಬಿಲ್ಲೆ, ಲಗೋರಿ, ಹುಲಿದನ, ಕೆರೆದಡ, ಕೇರಂ ಇತ್ಯಾದಿ. ಈ ಆಟಗಳನ್ನು ಆಡುವಾಗ ನಮಗೆ ನಿದ್ದೆ ಊಟ ಏನೂ ಬೇಡವಾಗಿತ್ತು. ಇಡೀ ದಿನ ಕ್ರೀಡಾಂಗಣದಲ್ಲಿ ಇಲ್ಲವೇ ರಸ್ತೆಯಲ್ಲೇ ಆಡುವುದು ನಮಗೆ ಸ್ವರ್ಗವಾಗಿತ್ತು.

ಹಾಗಿದ್ದರೆ ಬನ್ನಿ, ಮಕ್ಕಳ ದಿನಾಚರಣೆ ವಿಶೇಷ ಹಿಂದಿನ ಕಾಲದ ಸಾಂಪ್ರದಾಯಿಕ ಆಟಗಳ ಬಗ್ಗೆ ಮೆಲುಕು ಹಾಕುತ್ತಾ, ಇಂದಿನ ಮಕ್ಕಳು ತಮ್ಮ ಆಟಗಳ ಪಟ್ಟಿಯಲ್ಲಿ ಅಳವಡಿಸಿಕೊಳ್ಳಬಹುದಾದ ಆಟಗಳು ಯಾವವು ಎಂದು ತಿಳಿಯೋಣ.

ಇಂದಿಗೂ ಹಳ್ಳಿಗಳಲ್ಲಿ ಮಕ್ಕಳು ರಸ್ತೆಯಲ್ಲಿ ಆಟವಾಡುವ ನೋಟ ಬಾಲ್ಯದ ದಿನವನ್ನು ನಮಗೆ ನೆನಪು ಮಾಡುತ್ತದೆ. ಇಂದಿಗೂ ಕೆಲವೊಂದು ಆಟಗಳು ತೆರೆಮರೆಗೆ ಸರಿದಿದ್ದು ಅವುಗಳನ್ನು ನಿಮಗೆ ಹಾಗೂ ಇಂದಿನ ಮಕ್ಕಳಿಗೆ ಪರಿಚಯ ಮಾಡುವ ಕೆಲಸವನ್ನು ಬೋಲ್ಡ್ ಸ್ಕೈ ಇಂದು ಮಾಡುತ್ತಿದೆ. ಭಾರತದಲ್ಲಿ ಇನ್ನೂ ಕೆಲವು ಸೀಮಿತ ಪ್ರದೇಶಗಳಲ್ಲಿ ಮಾತ್ರ ಕಾಣಸಿಗುವ ಕೆಲವೊಂದು ಆಟಗಳ ಪಟ್ಟಿಯನ್ನು ನಾವಿಲ್ಲಿ ನಿಮಗಾಗಿ ನೀಡುತ್ತಿದ್ದೇವೆ. ಅವುಗಳನ್ನು ಆನಂದಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಉಗುರುಗಳ ಕುರಿತಾದ ಆಸಕ್ತಿಕರ ಅಂಶಗಳು

1.ಕೇರಂ:

1.ಕೇರಂ:

ಭಾರತದಲ್ಲಿ ಜನಪ್ರಿಯವಾಗಿರುವ ಬಾಲ್ಯದ ಸಾಂಪ್ರದಾಯಿಕ ಆಟ ಕೇರಂ ಆಗಿದೆ. ಮಕ್ಕಳಲ್ಲದೆ ದೊಡ್ಡವರೂ ಸಹ ಈ ಆಟವನ್ನು ಆಡಿ ಸಂತೋಷಗೊಳ್ಳಬಹುದು.

2.ಗಿಲ್ಲಿ ದಾಂಡು:

2.ಗಿಲ್ಲಿ ದಾಂಡು:

ಬ್ಯಾಟ್ ಬಾಲ್ ಇಲ್ಲದೆ ಕೋಲನ್ನು ಬಳಸಿ ಆಡುವ ಆಟ ಗಿಲ್ಲಿದಾಂಡಾಗಿದೆ. ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಚಾಲ್ತಿಯಲ್ಲಿರುವ ಗಿಲ್ಲಿದಾಂಡು ಹುಡುಗರು ಆಡುವ ಆಟವಾಗಿದೆ.

3.ಕಣ್ಣಾ ಮುಚ್ಚಾಲೆ

3.ಕಣ್ಣಾ ಮುಚ್ಚಾಲೆ

ಕಣ್ಣಾ ಮುಚ್ಚಾಲೆ ಭಾರತದಲ್ಲಿರುವ ಇನ್ನೊಂದು ಪ್ರಸಿದ್ಧ ರಸ್ತೆ ಆಟವಾಗಿದೆ. ಮಕ್ಕಳು ಹೆಚ್ಚು ಈ ಆಟವನ್ನು ಇಷ್ಟಪಡುತ್ತಾರೆ.

4.ಹಾಪ್ ಸ್ಕಾಚ್

4.ಹಾಪ್ ಸ್ಕಾಚ್

ಹೆಚ್ಚು ಆಸಕ್ತಿಕರವಾಗಿರುವ ಜನಪ್ರಿಯ ಬಾಲ್ಯದ ಆಟ ಹಾಪ್ ಸ್ಕಾಚ್ ಆಗಿದೆ. ಇತರ ಎಲ್ಲಾ ಆಟಗಳಿಗಿಂತ ಹೆಚ್ಚು ಆಕರ್ಷಕವಾಗಿರುವ ಆಟ ಇದಾಗಿದೆ.

5.ಜಂಪ್ ರೋಪ್

5.ಜಂಪ್ ರೋಪ್

ಇದೊಂದು ಹೆಚ್ಚು ಜನಪ್ರಿಯವಾಗಿರುವ ಬಾಲ್ಯದ ಆಟವಾಗಿದ್ದು ಮಕ್ಕಳೆಲ್ಲರೂ ಹೆಚ್ಚು ಇಷ್ಟಪಡುತ್ತಾರೆ.

6.ಕಬಡ್ಡಿ

6.ಕಬಡ್ಡಿ

ರಸ್ತೆ ಆಟವಾಗಿರುವ ಕಬಡ್ಡಿ ಪ್ರಾಚೀನ ಸಾಂಪ್ರದಾಯಿಕ ಆಟವಾಗಿದ್ದು 4,000 ವರ್ಷಗಳ ಹಿಂದೆಯೇ ಇದನ್ನು ಆಡಲಾಗಿತ್ತು. ಇದನ್ನು ಆಡುವ ಆಟಗಾರ ಶಕ್ತಿಶಾಲಿ ಹಾಗೂ ಸುದೃಢವಾಗಿರಬೇಕು.

7.ಗಾಳಿಪಟ ಹಾರಿಸುವುದು

7.ಗಾಳಿಪಟ ಹಾರಿಸುವುದು

ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸುವ ಸಂಪ್ರದಾಯ ಭಾರತದ ಹಲವೆಡೆ ಇನ್ನೂ ಚಾಲ್ತಿಯಲ್ಲಿದೆ. ಭಾರತದ ಹಳ್ಳಿಗಾಡಿನ ಮಕ್ಕಳು ಗಾಳಿಪಟ ಹಾರಿಸುವುದರಲ್ಲಿ ನಿಷ್ಣಾತರು. ಮತಭೇಧಗಳನ್ನು ಮರೆತು ಸಂಭ್ರಮದಿಂದ ಆಡುವ ಆಟ ಗಾಳಿಪಟ ಹಾರಿಸುವುದಾಗಿದೆ.

8.ಗೋಲಿಯಾಟ

8.ಗೋಲಿಯಾಟ

ಕಂಚಾ ಎಂಬ ಹೆಸರಿನಿಂದ ಪ್ರಸಿದ್ಧಗೊಂಡಿರುವ ಗೋಲಿಯಾಟ ಗಂಡು ಮಕ್ಕಳಿಗೆ ಅತ್ಯಂತ ಪ್ರಿಯವಾದುದು. ರಸ್ತೆಯಲ್ಲಿ ಆಡುವ ಆಟ ಇದಾಗಿದ್ದು ಮಕ್ಕಳ ಪ್ರೀತಿಯ ಮೆಚ್ಚಿನ ಆಟವಾಗಿದೆ.

9.ಲಗೋರಿ (ಏಳು ಕಲ್ಲುಗಳಾಟ)

9.ಲಗೋರಿ (ಏಳು ಕಲ್ಲುಗಳಾಟ)

ಹುಡುಗಿಯರ ಅಚ್ಚುಮೆಚ್ಚಿನ ಆಟ ಲಗೋರಿಯಾಗಿದ್ದು ಭಾರತದಲ್ಲಿ ಜನಪ್ರಿಯವಾಗಿರುವ ರಸ್ತೆ ಆಟವಾಗಿದೆ. ಹುಡುಗರೂ ಈ ಆಟವನ್ನೂ ಆಡುತ್ತಾರೆ ಆದರೆ ಈ ಆಟ ಹೆಚ್ಚು ಪ್ರಿಯಕರ ಹುಡುಗಿಯರಿಗೆ ಮಾತ್ರವಾಗಿದೆ.

10.ಕೋ ಕೋ

10.ಕೋ ಕೋ

ಹೆಚ್ಚು ಚಾಲ್ತಿಯಲ್ಲಿರುವ ಭಾರತದ ಸಾಂಪ್ರದಾಯಿಕ ಆಡ ಕೋ ಕೋವಾಗಿದೆ. ಇದು ಆರೋಗ್ಯಕರ ಆಟವಾಗಿದ್ದು ದೈಹಿಕವಾಗಿ ನಮ್ಮನ್ನು ಬಲಪಡಿಸುತ್ತದೆ.

English summary

Childhood Traditional Street Games In India

No matter what, childhood traditional street games will always be arched in our heads. In was in those days, you would see tons of kids on the road, playing till dusk in sand with marbles and sticks in hand.
X
Desktop Bottom Promotion