Just In
Don't Miss
- Sports
ಅಂಪೈರ್ ವಿರುದ್ಧ ಅಸಮಾಧಾನ, ಮ್ಯಾಚ್ ರೆಫರೀಗೆ ದೂರಿತ್ತ ಇಂಗ್ಲೆಂಡ್
- Automobiles
ಹೊಸ ಸಫಾರಿ ಕಾರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- News
ವಿಡಿಯೋ ವೈರಲ್; ಗೋವಾದಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ
- Movies
ಜೈಲಿನಿಂದ ಹೊರಬಂದ ಬಳಿಕ ಹೊಸ ಸಿನಿಮಾ ಕೈಗೆತ್ತಿಕೊಂಡ ರಾಗಿಣಿ
- Education
BMRCL Recruitment 2021: ಚೀಫ್ ಇಂಜಿನಿಯರ್, ಮ್ಯಾನೇಜರ್ ಮತ್ತು ಡಿಜಿಎಂ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಎಲ್ಪಿಜಿ ಸಿಲಿಂಡರ್ಗಳ ಬೆಲೆ ಮತ್ತೆ ಹೆಚ್ಚಳ: ತಿಂಗಳಲ್ಲಿ 3ನೇ ಬಾರಿ!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಮುದ್ರದಲ್ಲಿ 36 ಕಿ.ಮೀ ಈಜಿ ದಾಖಲೆ ಬರೆದ ಆಟಿಸಂ ಬಾಲಕಿಯ ಸಾಧನೆಗೆ ಇಡೀ ದೇಶವೇ ಹೇಳುತ್ತಿದೆ ಸಲಾಂ
ಜಿಯಾ ರೈ ಈ ಹೆಸರು ಇದೀಗ ದೇಶೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. 12 ವರ್ಷದ ಬಾಲಕಿ ಸಾಧನೆಯನ್ನು ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದು ತನಗೆ ಎದುರಾದ ತಡೆಗಳನ್ನು ಬೇಧಿಸಿ ಮುನ್ನುಗ್ಗಿದ್ದಾಳೆ ಈ ವಿಶೇಷ ಬಾಲಕಿ.
ಹೌದು ಜಿಯಾ ರೈ ಇತರ ಮಕ್ಕಳಂತೆ ಸಾಮಾನ್ಯ ಮಗುವಲ್ಲ, ವಿಶೇಷ ಚೇತನ ಮಗುವಾಗಿದೆ. ಜಿಯಾ ರೈಗೆ ಆಟಿಸಂ ಸಮಸ್ಯೆ ಇದೆ. ಆದರೆ ಅವಳ ಸಾಧನೆಗೆ ಮಾತ್ರ ಸಲಾಂ ಅನ್ನಲೇ ಬೇಕು.

ಸಮುದ್ರದಲ್ಲಿ 36 ಕಿ. ಮೀ ಈಜಿದ ಜಿಯಾ
ಮುಂಬಯಿಯ ಬಾಂದ್ರಾ ವರ್ಲಿ ಸಮುದ್ರದಿಂದ ಗೇಟ್‌ವೇ ಇಂಡಿಯಾವನ್ನುಈಜುತ್ತಾ 36 ಕಿ. ಮೀ ದೂರವನ್ನು 8 ಗಂಟೆ 40 ನಿಮಿಷದಲ್ಲಿ ತಲುಪಿದ್ದಾಳೆ. ಈ ಮೂಲಕ '36 ಕಿ. ಮೀರವರೆಗೆ ಈ ಈಜಿದ ಆಟಿಸಂ ಇರುವ ಅತ್ಯಂತಕ ಕಿರಿಯ ವಯಸ್ಸಿನ ಬಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ ' ಎಂದು PRO ಡಿಫೆನ್ಸ್ ಮುಂಬಯಿ ಟ್ವೀಟ್ ಮಾಡಿದೆ.
ಫೆಬ್ರವರಿ 17ರಂದು ರೆಕಾರ್ಡ್ ಬರೆದ ಜಿಯಾ
ಫೆಬ್ರವರಿ 17 ಮುಂಜಾನ 5:50ಕ್ಕೆ ವರ್ಲಿ ಸಮುದ್ರಕ್ಕೆ ಧುಮಿಕ್ಕಿದ ಜಿಯಾ ಮಧ್ಯಾಹ್ನ 12:30ಕ್ಕೆ ಗೇಟ್ ವೇ ಆಫ್ ಇಂಡಿಯಾ ತಲುಪಿದರು. ಸ್ವಿಮ್ಮಿಂಗ್ ಅಸೋಷಿಯೇಷನ್ ಆಫ್ ಮಹಾರಾಷ್ಟ್ರ ಇವರ ಮಾರ್ಗದರ್ಶನದಲ್ಲಿ ಈ ಈಜು ಕಾರ್ಯಕ್ರಮ ಆಯೋಜಿಸಲಾಗಿತ್ತು.

ಆಟಿಸಂ ಬಗ್ಗೆ ಅರಿವು ಮೂಡಿಸುವ ಪ್ರಯತ್ನದಲ್ಲಿ ಜಿಯಾ
ಜಿಯಾ ತಂದೆ ಮದನ್ ರೈ ಒಬ್ಬ ನಾವಿಕ. ಜಿಯಾಗೆ ಚಿಕಿತ್ಸೆಗೆ ಭಾಗವಾಗಿ ಈಜುವುದನ್ನು ಕಲಿಸಲಾಗಿತ್ತು. ಇದೀಗ ಈಜಿನಲ್ಲಿ ಸಾಧನೆ ಮಾಡುವುದರ ಮೂಲಕ ಆಟಿಸಂ ಎಂದರೆ ಆ ಮಕ್ಕಳು ಏನೂ ಮಾಡಲು ಸಾಧ್ಯವಿಲ್ಲ ಎಂದು ಭಾವಿಸುವುದು ತಪ್ಪು, ಅವರಲ್ಲಿಯೂ ವಿಶೇಷ ಕಲೆ ಅಥವಾ ಕೌಶಲ್ಯ ಇರುತ್ತದೆ ಎಂಬ ಅರಿವು ಮೂಡಿಸುವ ಪ್ರಯತ್ನ ಜಿಯಾ ಮಾಡಿದ್ದಾರೆ.
ಯಾವುದೂ ಅಸಾಧ್ಯವಲ್ಲ
ಆಟಿಸಂ ಮಕ್ಕಳಾದರೆ ಅವರಿಂದ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ ಎಂದೇ ಭಾವಿಸುವವರಿಗೆ ನಿಮ್ಮ ಆಲೋಚನೆ ತಪ್ಪು ನಮ್ಮಿಂದಲೂ ಸಾಧನೆ ಸಾಧ್ಯ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ ಜಿಯಾ.
ಪ್ರಯತ್ನವೊಂದಿದ್ದರೆ ನಮ್ಮ ಜೀವನದಲ್ಲಿ ಎಂಥದ್ದೇ ಸವಾಲುಗಳಿರಲಿ, ಏನೇ ನ್ಯೂನತೆಗಳಿರಲಿ ಎಲ್ಲವನ್ನೂ ಮೆಟ್ಟಿ ನಿಲ್ಲಬಹುದು ಎನ್ನುವುದಕ್ಕೆ ಉದಾಹರಣೆ ಹಾಗೂ ಸ್ಪೂರ್ತಿ ಜಿಯಾ ರೈ.

ಜಿಯಾ ತಂದೆಯ ಮನಮುಟ್ಟುವ ಮಾತು
ಈ ಸಮಾಜ ನಮ್ಮ ಮಗುವನ್ನು ಹುಚ್ಚಿಯೆಂದು ಕರೆಯಿತು, ಆದರೆ ಅಂಥವರಿಗೆ ನಾನು ಹೇಳ ಬಯಸುವುದು ಏನೆಂದರೆ ಆಟಿಸಂ ಎಂಬುವುದು ಹುಚ್ಚು ಅಲ್ಲ, ಅದು ವಿಶೇಷ ಲಕ್ಷಣ. ಅಂಥ ಮಕ್ಕಳನ್ನು ನೋಡಿದಾಗ ನಾವು ಅವರ ನಡುವಳಿಕೆಯನ್ನು ದೂಷಿಸುತ್ತೇವೆ, ಆದರೆ ಆಟಿಸಂ ಎನ್ನುವುದು ನಕಾರಾತ್ಮಕವಾದ ವಿಷಯವಲ್ಲ. ಆದರೆ ತಾಳ್ಮೆ ಹಾಗೂ ಪ್ರಯತ್ನದಿಂದಲೂ ಅವರಿಂದಲೂ ಸಾಧ್ಯ'.

ಸಾಮಾಜಿಕ ತಾಣದಲ್ಲಿ ಮೆಚ್ಚುಗೆಯ ಮಹಾಪೂರ
"Amazing achievement", "Proud of you", "Proud daughter of India", "What an inspiration", "That's the spirit" and "Salute her grit and bravery" ಈ ರೀತಿಯ ಕಮೆಂಟ್‌ಗಳ ಮೂಲಕ ನೆಟ್ಟಿಗರು ಆಕೆಯ ಸಾಧನೆಯನ್ನು ಹೊಗಳುತ್ತಿದ್ದಾರೆ. ಆಟಿಸಂ ಮಕ್ಕಳು ಇರುವ ಪೋಷಕರಿಗೆ ಭರವಸೆಯ ಕಿರಣವಾಗಿದ್ದಾಳೆ ಜಿಯಾ ರೈ.