For Quick Alerts
ALLOW NOTIFICATIONS  
For Daily Alerts

ನಿಮ್ಮ ಶ್ವಾಸಕೋಶದ ಸ್ವಾಸ್ಥ್ಯ ಕಾಪಾಡಲು ಇಲ್ಲಿದೆ ನೋಡಿ ಮ್ಯಾಜಿಕ್ ಟೀ

|

ಭಾರತದ ಅನೇಕ ನಗರಗಳಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ನೋಡುತ್ತಿದ್ದರೆ ಭವಿಷ್ಯದ ದಿನಗಳಲ್ಲಿ ಮಾಸ್ಕ್‌ ಹಾಕಿ ಓಡಾಡುವ ದಿನಗಳು ದೂರವಿಲ್ಲ ಬಿಡಿ, ಈಗಾಗಲೇ ದೆಹಲಿಯಲ್ಲಿ ಮಾಸ್ಕ್‌ ಇಲ್ಲದೆ ಉಸಿರಾಡಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ.

ಪಟಾಕಿ ಸಿಡಿತ, ವಾಹನ ಹಾಗೂ ಕಾರ್ಖಾನೆಗಳಿಂದ ಬರುತ್ತಿರುವ ಹೊಗೆ ಪರಿಸರವನ್ನು ಕಲುಷಿತಗೊಳಿಸುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತಿದೆ. ಉಸಿರಾಟದ ತೊಂದರೆ ಇರುವವರ ಸ್ಥಿತಿ ಶೋಚನೀಯವಾದರೆ, ಇತರರ ಆರೋಗ್ಯ ಕೂಡ ಹದಗೆಡುತ್ತಿದೆ.

Magic lung tea

ಚಳಿಗಾಲವಾಗಿರುವುದರಿಂದ ಶೀತ, ಕೆಮ್ಮು, ಅಲರ್ಜಿ ಸಮಸ್ಯೆ ಕುಡ ಹೆಚ್ಚಾಗಿಯೆ ಕಂಡು ಬರುತ್ತಿದೆ. ಇಲ್ಲಿ ಗಂಟಲಿನ ಆರೋಗ್ಯ ಕಾಪಾಡಲು ಲೈಫ್‌ಸ್ಟೈಲ್‌ ಕೋಚ್‌ ಆಗಿರುವ ಲುಕೆ ಕೌಂಟಿನೊ ತುಂಬಾ ಪರಿಣಾಮಕಾರಿಯಾದ ಮ್ಯಾಜಿಕ್ ಲಂಗ್‌ ಟೀ ರೆಸಿಪಿ ಶೇರ್ ಮಾಡಿದ್ದಾರೆ.

ಈ ಟೀ ಮಾಡಿ ಕುಡಿಯುವುದರಿಂದ ಶ್ವಾಸಕೋಶದ ಅಲರ್ಜಿ, ಉಸಿರಾಟದ ತಂದರೆಯನ್ನು ತಡೆಗಟ್ಟಬಹುದು ನೋಡಿ.

ಬೇಕಾಗುವ ಸಾಮಗ್ರಿ

1 ಇಂಚಿನಷ್ಟು ದೊಡ್ಡದಿರುವ ಶುಂಠಿ/ಒಂದು ಚಮಚ ಒಣ ಶುಂಠಿ
1 ಚಕ್ಕೆ
ಅರ್ಧ ಚಮಚ ತುಳಸಿ ಎಲೆ ತಾಜಾ/ಒಣಗಿದ್ದು
1 ಚಮಚ ದೊಡ್ಡ ಪತ್ರೆ ಒಣಗಿದ್ದು (ತಾಜಾ ಕೂಡ ಬಳಸಬಹುದು)
3 ಕಾಳು ಮೆಣಸು
2 ಏಲಕ್ಕಿ
1/4 ಚಮಚ ಸೋಂಪು
ಚಿಟಿಕೆಯಷ್ಟು ಅಜ್ವೈನ್
1/4 ಚಮಚ ಜೀರಿಗೆ
(1-2 ಬೆಳ್ಳುಳ್ಳಿ ಎಸಳು ಹಾಗೂ ಲವಂಗ ಬೇಕಿದ್ದರೆ ಸೇರಿಸಬಹುದು)

ಮಾಡುವ ವಿಧಾನ
ಮೇಲೆ ಹೇಳಿರುವ ಸಾಮಗ್ರಿಯನ್ನು ಒಂದು ಪಾತ್ರೆಗೆ ಹಾಕಿ, ಎರಡು ಲೋಟ ನೀರು ಹಾಕಿ 10 ನಿಮಿಷ ಕುದಿಸಿ, ನಂತರ ಸೋಸಿ ಅದಕ್ಕೆ ಬೆಲ್ಲ ಅಥವಾ ಜೇನು ಸೇರಿಸಿ ಬಿಸಿ ಬಿಸಿಯಾಗಿ ಕುಡಿಯಿರಿ.
ಈ ಮ್ಯಾಜಿಕ್ ಲಂಗ್‌ ಟೀ ಕುಡಿಯಲು ತುಂಬಾ ಹಿತವೆನಿಸುವುದು ಹಾಗೂ ಗಂಟಲು ಕೆರೆತ ಕಡಿಮೆಯಾಗಿ ಕೆಮ್ಮು ಕಡಿಮೆಯಾಗುವುದು. ರಾತ್ರಿ ಹೊತ್ತು ಉಸಿರಾಟದ ತೊಂದರೆಯೂ ಕಾಡದೆ ಚೆನ್ನಾಗಿ ನಿದ್ದೆ ಮಾಡಬಹುದು.

Read more about: tea health ಟೀ ಆರೋಗ್ಯ
English summary

Magic Lung Tea For A Healthy Lung

The air in most cities looks polluted. Air pollution increasing the health problem, people are facing respiratory issues. Here are tea recipe, If you drink this tea you can increase your lung health.
X
Desktop Bottom Promotion