For Quick Alerts
ALLOW NOTIFICATIONS  
For Daily Alerts

ಪುರುಷರೇ ನಿಮ್ಮ ವಾರ್ಡ್ ರೋಬ್ ಹೀಗಿರಲಿ

By Deepak M
|

ನಿಮ್ಮ ಉಡುಗೆ ತೊಡುಗೆಯು ನಿಮ್ಮ ವ್ಯಕ್ತಿತ್ವದ ಪ್ರತಿನಿಧಿ. ಇಂದಿನ ಆಧುನಿಕ ಜಗತ್ತಿನಲ್ಲಿ ನೀವು ತೊಡುವ ಬಟ್ಟೆಯು ನಿಮ್ಮನ್ನು ಉತ್ತಮವಾಗಿ ಪ್ರತಿಬಿಂಬಿಸುತ್ತದೆ ಎಂಬುದು ಸುಳ್ಳಲ್ಲ. ಅದರಲ್ಲು ಸೌಂದರ್ಯವೆಂಬುದು ಕೇವಲ ಗಂಡಸರ ಸ್ವತ್ತಲ್ಲ. ಈಗ ಗಂಡಸರು ಈಗಿನ ಟ್ರೆಂಡ್ ಮತ್ತು ಫ್ಯಾಶನ್‍ಗಳನ್ನು ಅನುಸರಿಸುವುದು ಸಹಜವಾಗಿದೆ. ಪ್ರತಿಯೊಬ್ಬರು ಇಂದಿನ ಕಾಲಮಾನಕ್ಕೆ ತಕ್ಕಂತೆ ಉಡುಗೆ- ತೊಡುಗೆಯಲ್ಲಿ ಅಪ್ ಟು ಡೇಟ್ ಆಗಿರಬೇಕಾದ ಅನಿವಾರ್ಯತೆ ಇದೆ. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಈ ಫ್ಯಾಶನ್ ಯುಗದಲ್ಲಿ ಪ್ರತಿಯೊಬ್ಬ ಗಂಡಸರು ತಮ್ಮ ವಾರ್ಡ್ ರೋಬ್‍ನಲ್ಲಿ ಕೆಲವೊಂದನ್ನು ಕಡ್ಡಾಯವಾಗಿ ಇರಿಸಿಕೊಳ್ಳಬೇಕಾಗುತ್ತದೆ. ಯಾವಾಗಲು ಎಲ್ಲಾ ಕಡೆಗು ನೀವು ಒಂದೇ ರೀತಿಯ ಧಿರಿಸನ್ನು ತೊಡಲು ಸಾಧ್ಯವಿಲ್ಲ. ಒಂದೊಮ್ಮೆ ಅದನ್ನು ನೀವು ಒಪ್ಪಿದರು ನಿಮ್ಮ ಗರ್ಲ್ ಫ್ರೆಂಡ್‍ಗೆ ಇದು ಹಿಡಿಸುವುದಿಲ್ಲ ಎಂಬುದು ನೆನಪಿರಲಿ.

ಕೆಲವೊಂದು ಉಡುಗೆ ತೊಡುಗೆಗಳು ನಿಮ್ಮ ವೃತ್ತಿಗೆ ಮತ್ತು ನೀವು ಭಾಗವಹಿಸುವ ಪಾರ್ಟಿಗಳಿಗೆ ಅತ್ಯಾವಶ್ಯಕ. ಸ್ನೀಕರ್ಸ್ ಧರಿಸಿಕೊಂಡು ಹೋಗಿ ನಿಮ್ಮ ಬಾಸ್ ಮುಂದೆ ಪ್ರೆಸೆಂಟೇಶನ್ ನೀಡಲು ಸಾಧ್ಯವೇ ಅಥವಾ ಫಾರ್ಮಲ್ ವೈಟ್ ಶರ್ಟಿನಲ್ಲಿ ನೈಟ್ ಪಾರ್ಟಿಗೆ ಅಟೆಂಡ್ ಆಗಲು ಸಾಧ್ಯವೇ? ಹಾಗಾಗಿ ನಿಮ್ಮ ಜೀವನ ಶೈಲಿಗೆ ತಕ್ಕಂತಹ ಉಡುಗೆ ತೊಡುಗೆಗಳನ್ನು ನೀವು ಹೊಂದಿರಬೇಕಾದುದು ಅತ್ಯಗತ್ಯ. ಹಾಗೆಂದು ಪ್ರತಿ ಘಳಿಗೆಗು ನೀವು ಫ್ಯಾಶನ್ ಬೊಟಿಕ್‍ಗೆ ಹೋಗಿ ಎಂದು ನಾವು ಹೇಳುತ್ತಿಲ್ಲ. ಆದರೆ ಸಂದರ್ಭಕ್ಕೆ ತಕ್ಕಂತಹ ಉಡುಗೆ- ತೊಡುಗೆಯನ್ನು ಧರಿಸುವುದರಿಂದ ಇತರರಿಗೆ ನಿಮ್ಮ ಸ್ಪಷ್ಟ ನಿಲುವನ್ನು ಸಾರಬಹುದು.ಅದು ನಿಮ್ಮ ವ್ಯಕ್ತಿತ್ವದ ಜೊತೆಗೆ ನಿಮ್ಮ ಫ್ಯಾಶನ್ ಮತ್ತು ಮನೋಧರ್ಮವನ್ನು ಸಹ ಸಾರಿ ಹೇಳುತ್ತವೆ. ಶಾರುಖ್ ಖಾನ್, ಸೈಫ್ ಅಲಿ ಖಾನ್ ಮತ್ತು ಹೃತಿಕ್ ರೋಷನ್‍ರವರಂತಹ ಕೆಲವು ಸೆಲೆಬ್ರಿಟಿಗಳು ತಮ್ಮ ಔಟ್‍ಫಿಟ್‍ಗಳಿಂದ ಸಾರ್ವಜನಿಕ ವಲಯದಲ್ಲಿ ಹೆಸರುವಾಸಿಯಾಗಿದ್ದಾರೆ. ನೀವು ಸಹ ಸ್ವಲ್ಪ ಮುತುವರ್ಜಿಯನ್ನು ವಹಿಸಿದರೆ ಅವರಷ್ಟು ಇಲ್ಲವಾದರು ನಿಮ್ಮದೇ ಆದ ಒಂದು ಸ್ಟೈಲ್ ಸಂಪಾದಿಸಬಹುದು. ನಮಗೆ ಬೇಕಿರುವುದು ಅದೇ ಅಲ್ಲವೇ,ನಾವು ನಮ್ಮಂತಾಗುವುದು. ಮತ್ತೇಕೆ ತಡ ಕೆಲವೊಂದು ಉಪಯುಕ್ತ ಉಡುಗೆ ತೊಡುಗೆಗಳ ಪಟ್ಟಿ ನೀಡಿದ್ದೇವೆ ಓದಿ ತಿಳಿದುಕೊಳ್ಳಿ. ಅವುಗಳು ನಿಮ್ಮ ಬಳಿ ಇವೆಯೋ, ಅಥವಾ ಇಲ್ಲವೋ ಎಂದು ಖಾತ್ರಿಪಡಿಸಿಕೊಳ್ಳಿ.

1. ಖಾಕಿಗಳು ಮತ್ತು ಜೀನ್ಸ್

1. ಖಾಕಿಗಳು ಮತ್ತು ಜೀನ್ಸ್

ಒಂದು ವೇಳೆ ನೀವು ಕ್ಯಾಶುವಲ್ ಪ್ರಿಯರಾಗಿದ್ದಲ್ಲಿ, ಅಥವಾ ಸ್ನೇಹಿತರ ವಲಯದ ಪಾರ್ಟಿಗಳಲ್ಲಿ ಅಟೆಂಡ್ ಮಾಡುವವರಾಗಿದ್ದಲ್ಲಿ, ತಪ್ಪದೆ ನಿಮ್ಮ ಬಳಿ ಖಾಕಿಗಳು ಮತ್ತು ಜೀನ್ಸ್ ಗಳು ಇರುವಂತೆ ನೋಡಿಕೊಳ್ಳಿ. ಎಲ್ಲಾ ಸಂದರ್ಭಕ್ಕು ಇವುಗಳು ಬಹುತೇಕೆ ಫಿಟ್ ಆಗುತ್ತವೆ. ಯಾವುದಕ್ಕಿಲ್ಲದಿದ್ದರು ಸುಮ್ಮನೆ ಸುತ್ತಾಡಲು ಇವು ಖಂಡಿತ ಅಗತ್ಯ.

2. ಶೂಗಳು

2. ಶೂಗಳು

ನಿಮ್ಮ ಬಳಿ ಒಂದಕ್ಕಿಂತ ಹೆಚ್ಚಿನ ಜೊತೆ ಶೂಗಳು ಪಕ್ಕ ಇರಲಿ. ಅದರಲ್ಲು ಕಂದು ಮತ್ತು ಕಪ್ಪುಬಣ್ಣ್ದ ಫಾರ್ಮಲ್ ಶೂ ಇರಬೇಕಾದುದು ಖಡ್ಡಾಯ. ಅವು ಲೇಸ್ ಅಥವಾ ಸ್ಲಿಪ್-ಇನ್ ಆಗಿದ್ದರು ಸರಿ. ಜೊತೆಗೆ ಒಂದು ಜೊತೆ ಕ್ಯಾಶುಯಲ್ ಸ್ನೀಕರ್ಸ್ ಇರಲಿ, ಜೀನ್ಸ್ ಮತ್ತು ಖಾಕಿಗೆ ಮ್ಯಾಚ್ ಆಗುತ್ತದೆ.

3. ವೈಟ್ ಫಾರ್ಮಲ್ ಶರ್ಟ್

3. ವೈಟ್ ಫಾರ್ಮಲ್ ಶರ್ಟ್

ಬಿಳಿ ಯಾವಾಗಲು ರಾಜಕೀಯ ದರ್ಜೆಯದು ಎಂಬ ಭಾವನೆ ಬೇಡ. ಇವುಗಳು ಎಂತಹ ಫಾರ್ಮಲ್ ಪ್ಯಾಂಟ್‍ಗು ಮ್ಯಾಚ್ ಆಗುತ್ತವೆ. ಜೊತೆಗೆ ಕಪ್ಪು ಮತ್ತು ಬಿಳಿ ವರ್ಣದವರು ಎಂಬ ಭೇದ ಭಾವ ಇದಕ್ಕಿಲ್ಲ. ಯಾರಿಗೆ ಆಗಲಿ, ಎಂತಹ ಸಂದರ್ಭದಲ್ಲಾದರು ಸರಿ ಬಿಳಿ ಅಂಗಿ ವ್ಯಕ್ತಿತ್ವಕ್ಕೆ ಮೆರಗು ನೀಡುತ್ತದೆ.

4. ಬೆಲ್ಟ್ ಗಳು

4. ಬೆಲ್ಟ್ ಗಳು

ಇವುಗಳು ಎಷ್ಟು ಇದ್ದರು ನಡೆದೀತು. ಇವು ನಿಮ್ಮ ವೇಶ ಭೂಷಣಕ್ಕೆ ಒಂದು ಪರಿಪೂರ್ಣ ಲುಕ್ ನೀಡುವ ವಸ್ತುಗಳಾಗಿವೆ. ನಿಮ್ಮ ಬಳಿ ಇರುವ ಕ್ಯಾಶುವಲ್ ಮತ್ತು ಫಾರ್ಮಲ್ ಧಿರಿಸುಗಳಿಗೆ ಹೊಂದಿಕೊಳ್ಳುವಂತಹ ಮತ್ತು ನಿಮಗು ಒಳ್ಳೆಯ ಲುಕ್ ನೀಡುವಂತಹ ಬೆಲ್ಟುಗಳನ್ನು ಖರೀದಿಸಿ. ಎಲ್ಲಾ ಸಂದರ್ಭಕ್ಕೂ ಒಂದೇ ಬೆಲ್ಟ್ ಬೇಡ.

5. ಕ್ಯಾಶುವಲ್ ಶರ್ಟ್ಸ್

5. ಕ್ಯಾಶುವಲ್ ಶರ್ಟ್ಸ್

ಕೆಲವೊಂದು ಪಾರ್ಟಿಗಳಿಗೆ ಕ್ಯಾಶುವಲ್ ಧರಿಸುವುದೋ ಅಥವಾ ಫಾರ್ಮಲ್ ಧರಿಸುವುದೊ ಎಂಬ ಗೊಂದಲ ನಿಮ್ಮಲ್ಲಿ ಮೂಡಿರಬಹುದು. ಅದಕ್ಕಾಗಿ ಯಾವುದೇ ಸಂದರ್ಭಕ್ಕು ಹೊಂದುವಂತಹ ಕೆಲವು ಕ್ಯಾಶುವಲ್ ಶರ್ಟುಗಳು ನಿಮ್ಮ ಬಳಿ ಇರಲಿ. ಆದಷ್ಟು ಬಿಳಿ ಬಣ್ಣದ ಅಥವಾ ಬಣ್ಣ ಬಣ್ಣದ ಲೈನೆನ್ ಶರ್ಟುಗಳು ನಿಮಗೆ ಒಳ್ಳೆಯ ಲುಕ್ ನೀಡುತ್ತವೆ.

6. ವಾಚ್‍ಗಳು

6. ವಾಚ್‍ಗಳು

ನಿಮ್ಮ ವಾರ್ಡ್ ರೋಬ್ ಪರಿಪೂರ್ಣವಾಗಲು ನಿಮ್ಮ ಬಳಿ ಕನಿಷ್ಠ ಎರಡು ವಾಚ್ ಇರಲೇ ಬೇಕಾಗುತ್ತದೆ. ಒಂದು ಫಾರ್ಮಲ್‍ಗಾದರೆ ಮತ್ತೊಂದು ಕ್ಯಾಶುವಲ್ಸ್ ಗೆ ಇರಲಿ. ಕ್ಯಾಶುವಲ್ ವಾಚ್ ಸ್ಪೋರ್ಟಿ ಅಥವಾ ಟೆಕ್ನೋ ಯಾವುದೇ ಆಗಿರಲಿ ಒಟ್ಟಿನಲ್ಲಿ ನಿಮ್ಮಲ್ಲಿರುವ ಉಡುಗೆಗಳಿಗೆ ಒಪ್ಪುವಂತಿರಲಿ.

7. ಸೂಟ್ಸ್ ಮತ್ತು ಬ್ಲೇಜರುಗಳ್

7. ಸೂಟ್ಸ್ ಮತ್ತು ಬ್ಲೇಜರುಗಳ್

ಒಂದು ಡಾರ್ಕ್ ಬ್ಲೂ ಸೂಟ್ ನಿಮ್ಮ ವಾರ್ಡ್ ರೋಬ್ ಪಟ್ಟಿಯಲ್ಲಿದ್ದರೆ ಕೆಲಸ ಮತ್ತು ಇನ್ನಿತರ ಫಾರ್ಮಲ್ ಪಾರ್ಟಿಗಳಿಗೆ ಸರಿ ಹೋಗುತ್ತದೆ. ಇದರ ಜೊತೆಗೆ ನೈಟ್ ಪಾರ್ಟಿಗಳಿಗೆಂದು ಒಂದು ವೈಟ್ ಲೈನೆನ್ ಬ್ಲೇಜರ್ ಒಂದನ್ನು ಖರೀದಿಸಿ ಇಟ್ಟುಕೊಳ್ಳಿ.

8. ಟೈ.

8. ಟೈ.

ನೀವು ಬ್ಯುಸಿನೆಸ್ ಕ್ಲಾಸ್ ಆದರು ಸರಿ , ಎಕ್ಸಿಕ್ಯೂಟಿವ್ ಕ್ಲಾಸ್ ಆದರು ಸರಿ ನಿಮ್ಮ ಬಳಿ ಟೈಗಳ ಸಂಗ್ರಹವಿರಲೆಬೇಕು. ಟೈಗಳು ನಿಮ್ಮನ್ನು ಉತ್ತಮ ರೀತಿಯಲ್ಲಿ ಪ್ರತಿಬಿಂಬಿಸುತ್ತವೆ. ಅದಕ್ಕಾಗಿ ನಿಮಗೆ ಮತ್ತು ನಿಮ್ಮ ಬಳಿ ಇರುವ ಉಡುಗೆಗಳಿಗೆ ಒಪ್ಪುವಂತಹ ಟೈಗಳನ್ನು ಇಟ್ಟುಕೊಳ್ಳಿ.

9. ಕಾಶ್ಮೀರಿ ಸ್ವೆಟರ್

9. ಕಾಶ್ಮೀರಿ ಸ್ವೆಟರ್

ಚಳಿಗಾಲದ ಅವಧಿಯಲ್ಲಿ ನಿಮ್ಮನ್ನು ಬೆಚ್ಚಗಿಡುವ ಕಾಶ್ಮೀರಿ ಸ್ವೆಟರ್ ಇಲ್ಲವಾದರೆ ಹೇಗೆ? ಅದಕ್ಕಾಗಿ ನಿಮಗೆ ಮತ್ತು ನಿಮ್ಮ ವ್ಯಕ್ತಿತ್ವಕ್ಕೆ ಒಪ್ಪುವಂತಹ ಸ್ವೆಟರನ್ನು ಖರೀದಿಸಿ ಇಟ್ಟುಕೊಳ್ಳಿ. ಆದರೆ ತೀರಾ ಬಿಗಿಯಾಗಿರುವಂತಹವು ಮತ್ತು ಚಿಕ್ಕದಾಗಿರುವಂತಹವನ್ನು ಖರೀದಿಸಬೇಡಿ.

10. ಟೀ - ಶರ್ಟ್

10. ಟೀ - ಶರ್ಟ್

ಎಲ್ಲಾದರು ಹೊರಗೆ ಹೋಗಲು ಮತ್ತು ಪಾರ್ಟಿಗಳಿಗೆ ಹೋಗಲು ಟೀ ಶರ್ಟ್ ಇಲ್ಲದೆ ಆದೀತೆ. ಅದಕ್ಕಾಗಿ ನಿಮಗೊಪ್ಪುವಂತಹ ನಿಮ್ಮನ್ನು ಉತ್ತಮ ರೀತಿಯಲ್ಲಿ ಪ್ರತಿಬಿಂಬಿಸು ಟೀ ಶರ್ಟುಗಳು ನಿಮ್ಮ ಬಳಿ ಇರುವಂತೆ ನೋಡಿಕೊಳ್ಳಿ.

English summary

Wardrobe must haves for men

Published: Friday, November 22, 2013, 3:00 [IST] Ads by Google In today's fashionable world, what you wear is what defines you. Men can no longer afford to ignore the trends and fashions out in the world. One has to be up to date with latest trends and etiquette. There are certain wardrobe essentials every man must have to be able to match up to the fashionable world
X
Desktop Bottom Promotion