For Quick Alerts
ALLOW NOTIFICATIONS  
For Daily Alerts

ವಿಶ್ವ ಆತ್ಮಹತ್ಯಾ ವಿರೋಧಿ ದಿನ 2019: ಆತ್ಮಹತ್ಯೆ ಯೋಚನೆಯನ್ನು ತಡೆಯಬಹುದೇ?

|

'ಸೆಪ್ಟೆಂಬರ್ 10 2019 ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ'ವೆಂದು ಆಚರಿಸಲಾಗುವುದು. ಆತ್ಮಹತ್ಯೆ ಮಾಡುವುದು ಪಾಪ, ಮೂರ್ಖತನ ಎನ್ನುವ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುವುದು. ಆತ್ಮಹತ್ಯೆ ಮಾಡುವ ಪ್ರಯತ್ನವನ್ನು ತಡೆಗಟ್ಟಲು ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಮನುಷ್ಯ ಮಾನಸಿಕ ಆಘಾತಕ್ಕೆ ಒಳಗಾದಾಗ ಈ ರೀತಿಯ ತಪ್ಪು ನಿರ್ಧಾರಕ್ಕೆ ಬರುತ್ತಾನೆ/ಳೆ. ಆದ್ದರಿಂದ ಮೊದಲು ಆತ್ಮಹತ್ಯೆ ಮಾಡದಂತೆ ಮನುಷ್ಯ ಮನಸ್ಸನ್ನು ಗಟ್ಟಿ ಮಾಡಬೇಕು ಎಂಬ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ(WHO) ಕೂಡ ಕಾರ್ಯ ನಿರತವಾಗಿದೆ.

ಕೆಲವರು ಸಾವು ಒಂದೇ ನಮ್ಮ ಸಮಸ್ಯೆಗೆ ಪರಿಹಾರ ಎಂದು ಮೂರ್ಖರಂತೆ ಯೋಚಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಕೆಲವರು ಆತ್ಮಹತ್ಯೆಗೆ ಪ್ರಯತ್ನಿಸಿ, ಅದನ್ನು ನೋಡಿ ಅವರನ್ನು ಬದುಕಿಸಿರುತ್ತಾರೆ. ಅವರ ಸ್ಥಿತಿಯಂತೂ ಮತ್ತಷ್ಟು ಶೋಚನೀಯ. ಬೆಂಕಿ ಮೈಗೆ ಹಚ್ಚಿಕೊಂಡು ಸಾಯಲು ಪ್ರಯತ್ನಿಸಿ, ಸಾಯದೆ ಬದುಕಿಳಿದರೆ ಮುಂದಿನ ಬದುಕು ಪೂರ್ತಿ ಸುಟ್ಟ ಕಲೆಗಳು, ನೋವು ಇವುಗಳಿಂದ ಬದುಕು ಯಾತನಮಯವಾಗುವುದು. ಆತ್ಮಹತ್ಯೆ ಬಗ್ಗೆ ಯೋಚಿಸುವ ವ್ಯಕ್ತಿಗಳ ಮನಸ್ಸು ತುಂಬಾ ವಿಚಿತ್ರವಾಗಿರುತ್ತದೆ. ಚಿಕ್ಕ- ಪುಟ್ಟ ವಿಷಯಕ್ಕೆ ಆತ್ಮಹತ್ಯೆ ಒಂದೇ ಪರಿಹಾರ ಎಂದು ಯೋಚಿಸುವ ವ್ಯಕ್ತಿಗಳು ತಮ್ಮ ಬದುಕನ್ನು ಆತ್ಮಹತ್ಯೆ ಮಾಡಿಯೇ ಕೊನೆಗೊಳಿಸುತ್ತಾರೆ.

ಆದ್ದರಿಂದ ಚಿಕ್ಕ ಸಮಸ್ಯೆಗೂ "ನಾನು ಸಾಯಬೇಕು" ಎಂದು ಯೋಚಿಸುವವರು ಆ ಮನಸ್ಥಿತಿಯಿಂದ ಹೊರಬರಬೇಕು, ಇಲ್ಲದಿದ್ದರೆ ಅಪಾಯ. ಆತ್ಮಹತ್ಯೆ ಎನ್ನುವುದು ದುಡುಕಿನ ನಿರ್ಧಾರವಾಗಿರುತ್ತದೆ. ಸಾಯಬೇಕು ಎಂಬ ಯೋಚನೆ ಬಂದಾಗ ಒಂದು ಕ್ಷಣ ಬೇರೆ ಕಡೆ ನಮ್ಮ ಮನಸ್ಸನ್ನು ಹೊರಳಿಸಿದರೆ ಖಂಡಿತ ಸಾಯಬೇಕೆನಿಸುವುದಿಲ್ಲ. ಆತ್ಮಹತ್ಯೆಗೆ ಪ್ರಯತ್ನಿಸಿದ ವ್ಯಕ್ತಿಗಳಲ್ಲಿ ನೂರಕ್ಕೆ 90 ಜನ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾತನಾಡುವ ಪರಿಸ್ಥಿತಿಯಲ್ಲಿದ್ದರೆ "ತಪ್ಪು ಮಾಡಿ ಬಿಟ್ಟೆ, ನನ್ನನ್ನು ಬದುಕಿಸಿ" ಎಂದು ಹೇಳಿ ಆಪ್ತರ ನೋವನ್ನು ಮತ್ತಷ್ಟು ಹೆಚ್ಚು ಮಾಡುತ್ತಾರೆ. ಆತ್ಮಹತ್ಯೆಗೆ ಪ್ರಯತ್ನಿಸಿದ ವ್ಯಕ್ತಿ ಒಂದು ವೇಳೆ ಬದುಕಿಳಿದರೆ ಅವರನ್ನು ಮಾತನಾಡಿಸಿ, ನನ್ನ ನಿರ್ಧಾರ ತಪ್ಪಾಗಿತ್ತು ಎಂದು ಒಪ್ಪಿಕೊಳ್ಳುತ್ತಾರೆ.

ಈ ಜಗತ್ತಿಗೆ ನಾವು ನಮ್ಮ ಸ್ವನಿರ್ಧಾರದಿಂದ ಬಂದಿಲ್ಲ, ಮತ್ತೆ ಹೋಗುವಾಗ ಏಕೆ ನಾವು ನಿರ್ಧಾರ ತೆಗೆದುಕೊಳ್ಳಬೇಕು? ಯಾವುದೋ ಒಂದು ಕೆಟ್ಟ ಗಳಿಕೆಯಲ್ಲಿ ಜೀವನದಲ್ಲಿ ಜಿಗುಪ್ಸೆ ಬಂದು ಸಾಯಬೇಕು ಎಂದು ಅನಿಸಿದಾಗ ಬೇರೆ ಕಡೆ ಮನಸ್ಸನ್ನು ಹರಿಸಿದರೆ ಖಂಡಿತ ಸಾಯುವ ಯೋಚನೆ ದೂರವಾಗುವುದು. ಕೆಲವೊಂದು ಸಂದರ್ಭಗಳಲ್ಲಿ ನಮ್ಮ ಆಪ್ತರು ತುಂಬಾ ಖಿನ್ನತೆಯಲ್ಲಿದ್ದು, ಸಾವಿನ ಮಾತುಗಳನ್ನು ಆಡುತ್ತಿದ್ದರೆ ಅವರನ್ನು ಕಣ್ಣಿನಲ್ಲಿ ಎಣ್ಣೆ ಬಿಟ್ಟು ಕಾಯುವ ಪ್ರಯತ್ನ ಮಾಡಬೇಡಿ, ಹಾಗೇ ಮಾಡಿದರೆ ಅವರಲ್ಲಿ ಸಾಯಬೇಕು ಎಂಬ ಯೋಚನೆ ಮತ್ತಷ್ಟು ಬಲವಾಗುವುದು!

ಇಲ್ಲಿ ನಾವು ಸಾಯುವ ಯೋಚನೆಯಿಂದ ದೂರ ಬರಲು ಏನು ಮಾಡಬೇಕು? ನಮ್ಮ ಆಪ್ತರು ಖಿನ್ನತೆಯಲ್ಲಿ ಇದ್ದಾಗ ಅವರು ಕೆಟ್ಟ ನಿರ್ಧಾರ ತೆಗೆದುಕೊಳ್ಳದಿರಲು ಏನು ಮಾಡಬೇಕು ಎಂಬ ಟಿಪ್ಸ್ ನೀಡಿದ್ದೇವೆ ನೋಡಿ:

ನೋವಿನ ಬಗ್ಗೆ ಯೋಚಿಸಬಾರದು

ನೋವಿನ ಬಗ್ಗೆ ಯೋಚಿಸಬಾರದು

ಯಾವ ಕಾರಣ ಸಾಯುವಂತೆ ಪ್ರೇರಪಿಸುತ್ತದೆಯೋ ಅದರ ಬಗ್ಗೆ ಯೋಚಿಸುವುದನ್ನು ನಿಲ್ಲಿಸಬೇಕು. ನಮಗೆ ನೋವು ತರುವ ವಿಷಯದ ಬಗ್ಗೆ ಯೋಚಿಸುತ್ತಿದ್ದಂತೆ ನೋವು ಮತ್ತಷ್ಟು ಹೆಚ್ಚಾಗುವುದು. ಒಬ್ಬರೇ ಇರಬೇಡಿ. ಫ್ರೆಂಡ್ಸ್ ಜೊತೆ ಅಡ್ಡಾಡಲು ಹೋಗುವುದು ಅಥವಾ ಅವರ ಜೊತೆ ನಿಮ್ಮ ಸಮಸ್ಯೆ ಹೇಳಿಕೊಳ್ಳುವುದು, ಯಾರ ಬಳಿ ನಿಮ್ಮ ಸಮಸ್ಯೆ ಹೇಳಿಕೊಳ್ಳುವುದು ಇಷ್ಟವಿಲ್ಲದಿದ್ದರೆ ನಿಮ್ಮ ಮೆಚ್ಚಿನ ಹವ್ಯಾಸದತ್ತ ಸ್ವಲ್ಪ ಹೊತ್ತು ಗಮನ ಕೊಡಿ, ಆಗ ಕೆಟ್ಟ ಯೋಚನೆ ಮನಸ್ಸಿನಿಂದ ಹೋಗುವುದು.

ಆಹಾರಕ್ರಮ

ಆಹಾರಕ್ರಮ

ಖಿನ್ನತೆಯನ್ನು ಹೋಗಲಾಡಿಸುವ ಆಹಾರಗಳನ್ನು ತಿನ್ನಬೇಕು. ಡಾರ್ಕ್ ಚಾಕಲೇಟ್, ಚಾಕಲೇಟ್ ಇವುಗಳು ಖಿನ್ನತೆಯನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ.

ಒಂದು ಪೆಗ್ ವೈನ್

ಒಂದು ಪೆಗ್ ವೈನ್

ತುಂಬಾ ಬೇಜಾರಾದಾಗ ವೋಡ್ಕಾ, ರಮ್ ಅಂತ ತೆಗೆದುಕೊಳ್ಳಬೇಡಿ, ಅದರ ಬದಲು ಒಂದು ಪೆಗ್ ವೈನ್ ಕುಡಿಯಿರಿ. ಇದು ಮೂಡ್ ಬದಲಾಯಿಸುವುದರಿಂದ ಆತ್ಮಹತ್ಯೆಯ ಯೋಚನೆ ಮನಸ್ಸಿನಿಂದ ದೂರ ಸರಿಯುವುದು.

 ಸಂಗೀತ ಕೇಳುವುದು

ಸಂಗೀತ ಕೇಳುವುದು

ಮನಸ್ಸಿನ ಗಾಯವನ್ನು ಒಣಗಿಸುವಲ್ಲಿ ಸಂಗೀತ ತುಂಬಾ ಪರಿಣಾಮಕಾರಿ. ತುಂಬಾ ಬೇಜಾರಾದಾಗ ಮನಸ್ಸಿನ ನೋವನ್ನು ಹೆಚ್ಚಿಸುವ ಸಂಗೀತ ಕೇಳಬೇಡಿ. ಉದಾಹರಣೆಗೆ ಭಗ್ನ ಪ್ರೇಮಿಗಳು ಭಗ್ನ ಪ್ರೇಮದ ನೋವನ್ನು ವ್ಯಕ್ತ ಪಡಿಸುವ ಸಂಗೀತ ಕೇಳಿದರೆ ನೋವು ಮತ್ತಷ್ಟು ಹೆಚ್ಚಾಗುವುದು. ಆದ್ದರಿಂದ ಜೋಶ್ ನಲ್ಲಿರುವ ಸಂಗೀತ ಕೇಳಬೇಕು.

ಯಾರ ಜೊತೆಯಾದಾರೂ ಮನಸ್ಸು ಬಿಚ್ಚಿ ಮಾತನಾಡುವುದು

ಯಾರ ಜೊತೆಯಾದಾರೂ ಮನಸ್ಸು ಬಿಚ್ಚಿ ಮಾತನಾಡುವುದು

ಮನಸ್ಸಿಗೆ ತುಂಬಾ ನೋವಾದಾಗ ಆಪ್ತರ ಜೊತೆ ಮನಸ್ಸು ಬಿಚ್ಚಿ ಮಾತನಾಡಿ, ಮನಸ್ಸಿನ ಭಾರ ಕಮ್ಮಿಯಾಗುವುದು.

 ಇನ್ನು ಸಾಯುತ್ತೇನೆ ಎಂದು ಹೇಳುವವರ ಜೊತೆ ಹೀಗೆ ವರ್ತಿಸಿ

ಇನ್ನು ಸಾಯುತ್ತೇನೆ ಎಂದು ಹೇಳುವವರ ಜೊತೆ ಹೀಗೆ ವರ್ತಿಸಿ

"ನಾನು ಸಾಯಬೇಕು, ನಾನು ಯಾರಿಗೂ ಬೇಡ" ಎಂದು ಹೇಳಿ ವ್ಯಥೆ ಪಡುವವರ ಮನಸ್ಸಿನಲ್ಲಿ ನಾನು ನಿನ್ನ ಜೊತೆಗೆ ಇರುವೆ ಎಂಬ ಭರವಸೆ ನೋಡಿ, ನಿನ್ನ ಈ ಸ್ಥಿತಿಗೆ ಯಾರು ಕಾರಣ, ಅವರ ಎದುರು ನೀನು ಉತ್ತಮವಾಗಿ ಬಾಳಿ ತೋರಿಸು ಎಂಬ ಕಿಚ್ಚನ್ನು ತುಂಬಿ.

 ಇನ್ನು ಸಾಯುತ್ತೇನೆ ಎಂದು ಹೇಳುವವರ ಜೊತೆ ಹೀಗೆ ವರ್ತಿಸಿ

ಇನ್ನು ಸಾಯುತ್ತೇನೆ ಎಂದು ಹೇಳುವವರ ಜೊತೆ ಹೀಗೆ ವರ್ತಿಸಿ

ಇಷ್ಟೆಲ್ಲಾ ಹೇಳಿಯೂ ಸಾಯುತ್ತೇನೆ ಎಂದು ಹೇಳಿದರೆ ಅವರ ಹತ್ತಿರ "ಸಾಯುವುದಾದರೆ ಸಾಯಿ, ನಿನಗೆ ನಮ್ಮ ಮೇಲೆ ಸ್ವಲ್ಪವಾದರೂ ಪ್ರೀತಿಯಿದ್ದರೆ ಈ ಮಾತು ಹೇಳುತ್ತಿರಲಿಲ್ಲ" ಈ ರೀತಿಯ ಯಾವುದಾದರೂ ಸೆಂಟಿ ಮೆಂಟ್ ಡೈಲಾಗ್ ಹೇಳಿದರೆ ಅವರ ಯೋಚನೆಯೂ ಬದಲಾಗುವುದು.

"ಸಾವೇ ಸಮಸ್ಯೆಗೆ ಪರಿಹಾರ ಎಂದು ಯೋಚಿಸುವ ಮೂರ್ಖರು ನಾವಲ್ಲ" ಎಂದು ದೃಢವಾಗಿ ಹೇಳೋಣ.

English summary

Tips To Prevent Suicide

September 10th is considered as the World Suicide Prevention Day. Also known as World Anti-Suicide Day, it is the day when we spread awareness to prevent suicide throughout the world.
X
Desktop Bottom Promotion