For Quick Alerts
ALLOW NOTIFICATIONS  
For Daily Alerts

ತುಂಬಾ ಹೊತ್ತು ದುಡಿದರೆ ನಿಮ್ಮಿಂದ ಕಂಪನಿಗೆ ನಷ್ಟ ಕಣ್ರೀ!

|

ತುಂಬಾ ಜನರನ್ನು ನೋಡಿದ್ದೇನೆ, ಅಷ್ಟೇ ಏಕೆ ಒಂದೊಂದು ಸಲ ನಾನೇ ಕಂಪನಿ ನನಗೆ ನೀಡಿದ ಕೆಲಸ ಅವಧಿಯನ್ನು ಮೀರಿ ಕೆಲಸ ಮಾಡುತ್ತೇನೆ. ಈ ರೀತಿ ಕೆಲಸ ಮಾಡಿದಾಗ ನಾನೊಬ್ಬ ಶ್ರಮಜೀವಿ ಅಂತ ಅನಿಸುವುದೇ ಇಲ್ಲ, ಅದೇ ನನ್ನ ಕೆಲಸವನ್ನು ಸಮಯದ ಒಳಗೆ ಮುಗಿಸಿದಾಗ ಮಾತ್ರ ಕೆಲಸ ಮಾಡಿದ ತೃಪ್ತಿಯಲ್ಲಿ ಇರುತ್ತೇನೆ! ನಿಮಗೂ ಈ ರೀತಿ ಅನಿಸುವುದೇ ಎಂದು ನನಗೆ ಗೊತ್ತಿಲ್ಲ.

ಆದರೆ ತುಂಬಾ ಹೊತ್ತು ಕೆಲಸ ಮಾಡುವುದು ಅಂದರೆ ನನಗೆ ಕಿರಿಕಿರಿ, ಇದು ನನ್ನ ಕೆಲಸದ ಸಾಮರ್ಥ್ಯವನ್ನು ಕುಗ್ಗಿಸುತ್ತದೆ ಅನ್ನುವುದೇ ನನ್ನ ಅಭಿಪ್ರಾಯ. ತುಂಬಾ ಲೇಟಾಗಿ ಕೆಲಸ ಮುಗಿಸಿದಾಗ ಲೇಟಾಗಿ ಮನೆ ತಲುಪುತ್ತೇವೆ, ತುಂಬಾ ಸುಸ್ತಾಗಿರುತ್ತೇವೆ, ಚೈತನ್ಯವೇ ಇರುವುದಿಲ್ಲ, ಮನೆಯವರ ಜೊತೆ ಮಾತನಾಡಬೇಕೆಂದು ಅನಿಸುವುದಿಲ್ಲ, ಫ್ರೆಂಡ್ಸ್ ಜೊತೆ ಚಾಟ್ ಮಾಡುವ ಅಂತ ಅನಿಸುವುದಿಲ್ಲ, ಅಷ್ಟೇ ಏಕೆ? ಒಂದೊಂದು ಸಾರಿ ಊಟ ಮಾಡಬೇಕೆಂದು ಕೂಡ ಅನಿಸದೆ ಒಮ್ಮೆ ಮಲಗಿದರೆ ಸಾಕೆಂದು ಅನಿಸಿ ಬಿಡುತ್ತದೆ, ಮಾರನೇಯ ದಿನ ಬೆಳಗ್ಗೆ ಎದ್ದಾಗ ಒಂದೋ ಲೇಟಾಗಿ ಎದ್ದೇಳುತ್ತೇವೆ, ಇಲ್ಲದಿದ್ದರೆ ಹಿಂದಿನ ದಿನ ಸುಸ್ತು ಹಾಗೇ ಇರುತ್ತದೆ, ಮೂಡ್ ಇಲ್ಲದೆ ಆಫೀಸ್ ಗೆ ಬಂದಾಗ ಚುರುಕಾಗಿ ಕೆಲಸ ಮುಗಿಸಲು ಸಾಧ್ಯವಾಗುವುದಿಲ್ಲ, ಪುನಃ ಲೇಟಾಗುವುದು.

ಈ ರೀತಿ ಆಗುತ್ತಿದ್ದರೆ ತುಂಬಾ ಮಾನಸಿಕ ಒತ್ತಡ ಅನುಭವಿಸುತ್ತೇವೆ. ಆದರೆ ನಿಗದಿತ ಸಮಯದೊಳಗೆ ಕೆಲಸ ಮುಗಿಸಿದರೆ ಈ ರೀತಿಯ ಸಮಸ್ಯೆ ಇರುವುದಿಲ್ಲ. ಅಪರೂಪಕ್ಕೆ ಕೆಲಸ ಮುಗಿಸುವಾಗ ಲೇಟಾದರೆ ಓಕೆ, ಆದರೆ ಪ್ರತೀದಿನ ಅಧಿಕ ಕೆಲಸ ಮಾಡುತ್ತಾ ಹೋದರೆ ಆ ಕೆಲಸದ ಮೇಲೆ ಬೇಸರ ಮೂಡುವುದು, ಇದರಿಂದಾಗಿ ನಮ್ಮ Productive Capacity ಅಂದರೆ ದುಡಿಯುವ ಸಾಮರ್ಥ್ಯ ಕಡಿಮೆಯಾಗುವುದು, ಇದರಿಂದ ನಮಗೂ ನಷ್ಟ, ನಮ್ಮಿಂದ ಕಂಪನಿಗೂ ನಷ್ಟ ಅನ್ನುವುದು ನನ್ನ ನಂಬಿಕೆ, ಇದನ್ನು ಒಪ್ಪುವುದು ಬಿಡುವುದು ನಿಮಗೆ ಬಿಟ್ಟದ್ದು.

ನಿಮ್ಮ ಕೆಲಸವನ್ನು ನಿಗದಿತ ಸಮಯದೊಳಗೆ ಮುಗಿಸಿ, ನಿಮ್ಮ ದುಡಿಯುವ ಸಾಮರ್ಥ್ಯವನ್ನು ಹೆಚ್ಚಿಸಿ, ಮಾನಸಿಕ ಒತ್ತಡವನ್ನು ಕಡಿಮೆ ಮಾಡಬೇಕೆ? ಹಾಗಾದರೆ ಈ ಟಿಪ್ಸ್ ನಿಮಗೆ ಸಹಾಯಮಾಡುವುದು.

1. ದಿನದ ಮುಖ್ಯ 3 ಕೆಲಸಗಳತ್ತ ಗಮನ ಹರಿಸಿ.

1. ದಿನದ ಮುಖ್ಯ 3 ಕೆಲಸಗಳತ್ತ ಗಮನ ಹರಿಸಿ.

ದಿನದಲ್ಲಿ ನೂರೆಂಟು ಕೆಲಸವಿದ್ದೇ ಇರುತ್ತದೆ. ಅವುಗಳಲ್ಲಿ ಮುಖ್ಯವಾಗಿ ಆ ದಿನ ಮುಗಿಸಲೇಬೇಕಾದ 3 ಕೆಲಸಗಳತ್ತ ಗಮನ ಹರಿಸಿ. ನಂತರವಷ್ಟೇ ಉಳಿದ ಕೆಲಸದತ್ತ ಗಮನ ಹರಿಸಿ. ಒಂದು ಕೆಲಸ ಮಾಡಿ ಅದನ್ನು ಅರ್ಧಕ್ಕೆ ನಿಲ್ಲಿಸಿ, ಮತ್ತೊಂದು ಕೆಲಸದತ್ತ ಗಮನ ಹರಿಸಬೇಡಿ.

2. ವ್ಯಾಯಾಮ ಮಾಡಲು ಸಮಯ ಇಲ್ಲದವರಿಗೆ ಒಂದು ಚಾಲೆಂಜ್

2. ವ್ಯಾಯಾಮ ಮಾಡಲು ಸಮಯ ಇಲ್ಲದವರಿಗೆ ಒಂದು ಚಾಲೆಂಜ್

ಹೆಚ್ಚಿನವರು "ಅಯ್ಯೋ ಕೆಲಸದ ಬ್ಯುಸಿ, ವ್ಯಾಯಾಮ ಮಾಡುವುದಕ್ಕೆ ಪುರುಸೊತ್ತೇ ಸಿಗುವುದಿಲ್ಲ" ಎಂದು ಹೇಳುತ್ತಾರೆ. ಅಂಥವರು ಒಂದು ಚಾಲೆಂಜ್ ಗೆ ರೆಡಿನಾ? ಕೇವಲ ಎರಡೇ ಎರಡು ದಿನ 30 ನಿಮಿಷ ಸಮಯವನ್ನು ವ್ಯಾಯಾಮ ಮಾಡಲು ವಿನಿಯೋಗಿಸಿ, ಆ ಎರಡು ದಿನಗಳಲ್ಲಿ ನೀವು ಕೆಲಸ ಮಾಡುವ ರೀತಿಯನ್ನು ಗಮನಿಸಿ. ಇತರ ದಿನಗಳಲ್ಲಿ ಮಾಡುವುದಕ್ಕಿಂತ ತುಂಬಾ ಚುರುಕಾಗಿ ಕೆಲಸ ಮಾಡದಿದ್ದರೆ ಮತ್ತೆ ಕೇಳಿ? ವ್ಯಾಯಾಮ ದೇಹವನ್ನು ಫಿಟ್ ಆಗಿಡುವುದು ಮಾತ್ರವಲ್ಲ, ನಿಮ್ಮಲ್ಲಿ ಲವಲವಿಕೆ ತುಂಬಿ, ಕೆಲಸ ಮಾಡಲು ಬೇಗನೆ ಮಾಡಿ ಮುಗಿಸಲು ಉತ್ಸಾಹ ತುಂಬುವುದು. ಈಗ ಹೇಳಿ, ಅರ್ಧ ಗಂಟೆ ವ್ಯಾಯಾಮಕ್ಕೆ ವಿನಿಯೋಗಿಸಲು ರೆಡಿನಾ?

 3. ಬೆಳಗ್ಗೆ ಬೇಗನೆ ಕೆಲಸ ಮಾಡಲು ತೊಡಗಿ

3. ಬೆಳಗ್ಗೆ ಬೇಗನೆ ಕೆಲಸ ಮಾಡಲು ತೊಡಗಿ

ಲೇಟಾಗಿ ಕೆಲಸ ಪ್ರಾರಂಭಿಸಿದರೆ ಕೆಲಸ ಮುಗಿಯುವಾಗಲೂ ಲೇಟಾಗುವುದು. ಆದ್ದರಿಂದ 8 ಗಂಟೆ ಹೊದ್ದು ಮಲಗುವ ಅಭ್ಯಾಸ ಬಿಟ್ಟು ಸ್ವಲ್ಪ ಬೇಗ ಎದ್ದರೆ ಕೆಲಸವನ್ನು ಬೇಗನೆ ಮುಗಿಸಬಹುದು, ಟೆನ್ಷನ್ ಇರುವುದಿಲ್ಲ. ಲೇಟಾಗಿ ಬಂದರೆ ಬಸ್ ಸಿಗಲಿಲ್ಲ, ಟ್ರಾಫಿಕ್ ಜಾಮ್ ಹೀಗೆ ನೂರೆಂಟು ಸಮಸ್ಯೆ, ಕೆಲಸ ಪ್ರಾರಂಭಿಸುವ ಮೊದಲೇ ಸುಸ್ತಾಗಿ ಬಿಡುತ್ತೇವೆ.

4. ಸಾಮಾಜಿಕ ತಾಣವನ್ನು ಮಿತಿಯಲ್ಲಿ ಬಳಸಿ

4. ಸಾಮಾಜಿಕ ತಾಣವನ್ನು ಮಿತಿಯಲ್ಲಿ ಬಳಸಿ

ಆಗಾಗ ಫೇಸ್ ಬುಕ್ ನೋಡಬೇಕೆನಿಸುತ್ತದೆ, ಟ್ವಿಟರ್, ಫೇಸ್ ಬುಕ್ ನೋಡುತ್ತಾ ಕೂತರೆ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ. ಆದ್ದರಿಂದ ಮೊದಲು ಮಾಡಬೇಕಾದ ಕೆಲಸ ಮುಗಿಸಿ, ನಂತರ ಅದರತ್ತ ಗಮನ ಹರಿಸುವುದು ಒಳ್ಳೆಯದು.

5. ಟೈಮ್ ಲಿಮಿಟ್ ಸೆಟ್ ಮಾಡಿ

5. ಟೈಮ್ ಲಿಮಿಟ್ ಸೆಟ್ ಮಾಡಿ

ಪರೀಕ್ಷೆ ಪೇಪರ್ ಕೈಗೆ ಸಿಕ್ಕಿದಾಗ ಪ್ರತಿಯೊಂದು ಪ್ರಶ್ನೆಗೆ ಉತ್ತರಿಸಲು ಎಷ್ಟು ಸಮಯ ಬೇಕೆಂದು ನಾವು ಲೆಕ್ಕಚಾರ ಹಾಕಿದ್ದರೆ ಮಾತ್ರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಇಲ್ಲದಿದ್ದರೆ ಕಡಿಮೆ ಅಂಕದ ಪ್ರಶ್ನೆಗೆ ಹೆಚ್ಚು ಸಮಯ ತೆಗೆದುಕೊಂಡು, ಅಧಿಕ ಅಂಕದ ಪ್ರಶ್ನೆಗೆ ಉತ್ತರಿಸಲು ಸಮಯ ಸಿಗದೆ ಬಿಟ್ಟು ಬರಬೇಕಾಗುತ್ತದೆ. ಅದೇ ಥಿಯರಿ ಇಲ್ಲಿಯೂ ಅಪ್ಲೈ ಆಗುತ್ತದೆ. ಯಾವ-ಯಾವ ಕೆಲಸಕ್ಕೆ ಎಷ್ಟೆಷ್ಟು ಸಮಯ ಬೇಕೆಂದು ನಿಗದಿ ಪಡಿಸಿದರೆ ಕೆಲಸ ಬೇಗನೆ ಮುಗಿಯುವುದು. Don't work hard, work smart.

6. 80/20 ರೂಲ್ ಬಳಸಿ

6. 80/20 ರೂಲ್ ಬಳಸಿ

ಕೆಲವೊಮ್ಮೆ ಕಷ್ಟಪಟ್ಟು ಕೆಲಸ ಮಾಡುವ ಬದಲು ಬುದ್ಧಿವಂತಿಕೆಯಿಂದ ಮಾಡಿದರೆ ಉತ್ತಮ ಫಲಿತಾಂಶ ಬರುತ್ತದೆ. ಉದಾಹರಣೆಗೆ ಯಾವುದೋ ಒಂದು ಐಡಿಯಾ ಬೇಕೆಂದು ಇಟ್ಟುಕೊಳ್ಳಿ. ಅದಕೋಸ್ಕರ ತುಂಬಾ ತಲೆ ಕೆಡಿಸಿಕೊಂಡು ಕೂರುವ ಬದಲು ಟೀ ಕುಡಿಯುವ ಸಮಯದಲ್ಲಿ ಸುಮ್ಮನೆ ಈ ವಿಷಯ ಎತ್ತಿ. 10 ಜನ 10 ಐಡಿಯಾ ಕೊಡುತ್ತಾರೆ, ಅದರಲ್ಲಿ 4-5 ಆದರೂ ಉತ್ತಮವಾಗಿರುತ್ತದೆ. ಆದರೆ ನೆನಪಿಟ್ಟುಕೊಳ್ಳಿ ನಿಮ್ಮ ಫ್ರೆಂಡ್ಸ್ ಗೆ ನೀವು ಟೀ ಕುಡಿಯುವ ಜಾಗದಲ್ಲೂ ಕೆಲಸದ ವಿಷಯ ಹೇಳಿ ತಲೆ ತಿನ್ನುತ್ತಿದ್ದಾನೆ/ಳೆ ಅಂತ ಅನಿಸಬಾರದು, ಬಹಳ ನಾಜೂಕಿನಿಂದ ವರ್ತಿಸಿ, ಆಲ್ ದಿ ಬೆಸ್ಟ್.

7. ಎಲ್ಲಾ ಕೆಲಸಗಳಿಗೆ ಜೊತೆಗೆ ಕೈಹಾಕಬೇಡಿ

7. ಎಲ್ಲಾ ಕೆಲಸಗಳಿಗೆ ಜೊತೆಗೆ ಕೈಹಾಕಬೇಡಿ

ಹೀಗೆ ಮಾಡಿದರೆ ನಿಮಗೆ ಯಾವ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ, ನೆನಪಿರಲಿ.

8. ಮಾಹಿತಿಯ ಹಸಿವು ಇರಲಿ

8. ಮಾಹಿತಿಯ ಹಸಿವು ಇರಲಿ

ಹೊಸ ವಿಷಯದ ಬಗ್ಗೆ ತಿಳಿಯುವ ಹಸಿವಿರಬೇಕು. ನಮ್ಮ ಜ್ಞಾನಾರ್ಜನೆ ಹೆಚ್ಚಿದಷ್ಟು ನಮ್ಮ ಕಾರ್ಯಕ್ಷಮತೆ ಹೆಚ್ಚುವುದು.

English summary

Stop Working Long Hours

The key to being more productive to do less and focus on what really matters. It’s also about finding a better balance between your work and personal life. Here are some of my favorite tips to help you get started:
X
Desktop Bottom Promotion