Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಭಾರತದ ಪ್ರಸಿದ್ಧ 7 ದುರ್ಗಾಮಾತೆಯ ದೇಗುಲಗಳು
ನವರಾತ್ರಿಯ ಒಂದೊಂದು ದಿನವೂ ಬಹಳ ವಿಶೇಷವಾಗಿದ್ದು 9 ದಿನಗಳ ಕಾಲ ಆದಿ ಶಕ್ತಿಯ ದುರ್ಗಾ ದೇವಿಯನ್ನು ಒಂಬತ್ತು ವಿಧದಲ್ಲಿ ಪೂಜಿಸಲಾಗುವುದು. ಈ ನವರಾತ್ರಿಯಲ್ಲಿ ಮಾತೆ ದುರ್ಗೆಯ ಒಂಬತ್ತು ರೂಪಗಳ ಪೂಜೆಯನ್ನು ನೆರವೇರಿಸಲಾಗುತ್ತದೆ. ದೇವಿ ಮಾತಾ ದುರ್ಗೆಯ ಈ ಒಂಬತ್ತು ರೂಪಗಳೆಂದರೆ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ.
ದುರ್ಗಾದೇವಿಯನ್ನು ಜಗತ್ತನ್ನು ಕಾಪಾಡುವ ಶಕ್ತಿ ದೇವತೆಯೆಂದುಪೂಜಿಸಲಾಗುವುದು. ದುರ್ಗಾಮಾತೆಯೂ ಭೂಮಿಗೆ ಕಂಟಕನಾಗಿದ್ದ ಮಹಿಷಾಸುರನನ್ನು ಕೊಂದು ಜಗತ್ತಿನ ಕಷ್ಟಗಳನ್ನು ಹೋಗಲಾಡಿಸಿದ ದೇವತೆ ಎಂಬ ಪೌರಾಣಿಕ ಕಥೆಯಿದೆ. ಈ ಕಥೆಯ ಆಧಾರದ ಮೇಲೆ ದುರ್ಗಾ ಮಾತೆಯನ್ನು ಪೂಜಿಸಿದರೆ ದುಷ್ಟ ಶಕ್ತಿಗಳನ್ನು ನಾಶಮಾಡಿ ನೆಮ್ಮದಿಯ ಬದುಕನ್ನು ನೀಡಲು ಸಹಾಯ ಮಾಡುತ್ತಾಳೆ ಎಂಬ ನಂಬಿಕೆಯಿಂದ ದುರ್ಗಾ ದೇವಿಯನ್ನು ಪೂಜಿಸಲಾಗುವುದು.
ಭಾರತದೆಲ್ಲಡೆ ದುರ್ಗಾಮಾತೆಯನ್ನು ಪೂಜಿಸಲಾಗುವುದು. ದುರ್ಗಾದೇವಿಯ ಅನೇಕ ದೇವಾಲಯಗಳು ಭಾರತದಲ್ಲಿದ್ದು ಅವುಗಳಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಪಡೆದಿರುವ ದೇಗುಲಗಳ ಬಗ್ಗೆ ಚಿತ್ರ ಮಾಹಿತಿ ನೀಡದ್ದೇವೆ ನೋಡಿ:

1. ವೈಷ್ಣೋದೇವಿ ದೇವಾಲಯ:
ಇದು ವಿಶ್ವ ಪ್ರಸಿದ್ಧವಾದ ದುರ್ಗಾ ಮಾತೆಯ ದೇವಾಲಯವಾಗಿದೆ. ಈ ದೇವಾಲಯವು ಜಮ್ಮು-ಕಾಶ್ಮೀರದಲ್ಲಿದೆ. ಈ ದೇವಾಲಯಕ್ಕೆ ಪ್ರತಿದಿನವೂ ಸಾವಿರಾರು ಭಕ್ತರೂ ಭೇಟಿ ನೀಡುತ್ತಾ ಇರುತ್ತಾರೆ.

2. ದುರ್ಗಾ ದೇವಾಲಯ:
ಈ ದೇವಾಲಯವು ಉತ್ತರ ಪ್ರದೇಶದ ವಾರಣಾಸಿಯಲ್ಲಿದೆ. ನವರಾತ್ರಿ ಸಮಯದಲ್ಲಿ ಸಾಕಷ್ಟು ಭಕ್ತರು ಈ ದೇವಾಲಯಕ್ಕೆ ಭೇಟಿಕೊಡುತ್ತಾರೆ.

3. ಕರ್ನಿ ಮಾತಾ:
ದುರ್ಗಾ ಮಾತೆಯ ಈ ದೇವಾಲಯವು ರಾಜಾಸ್ಥಾನದಲ್ಲಿದೆ. ಈ ದೇವಾಲಯವನ್ನು 600 ವರ್ಷಗಳ ಹಿಂದೆ ಸ್ಥಾಪಿಸಲಾಗಿದೆ. ಈ ದೇವಾಲಯದಲ್ಲಿ ಇಲಿಗಳನ್ನು ಪೂಜಿಸಲಾಗುವುದು.

4. ಕಾಮಖ್ಯ ದೇವಾಲಯ:
ಇದನ್ನು ಶಕ್ತಿ ಪೀಠ ದೇವಾಲಯ ಎಂದು ಕರೆಯಲಾಗುತ್ತದೆ. ಈ ದೇವಾಲಯವು ಗೌಹಾಟಿಯ ಅಸ್ಸಾಮಿನಲ್ಲಿದೆ. ದುರ್ಗಾಮಾತೆಯ ಭಕ್ತರು ಅವರ ಜೀವಿತಾವಧಿಯಲ್ಲಿ 3 ಭಾರಿಯಾದರೂ ಭೇಟಿ ಕೊಟ್ಟೇ ಕೊಡಬೇಕು ಎಂಬ ನಂಬಿಕೆ ಇದೆ.

5. ಚಾಮುಂಡಿ ದೇವಿ ದೇವಾಲಯ:
ಈ ದೇವಾಲಯವು ಹಿಮಾಚಲ ಪ್ರದೇಶದಲ್ಲಿದೆ. ಈ ದೇವಾಲಯದಲ್ಲಿ ದೇವಿಯ ಉಗ್ರ ಸ್ವರೂಪದ ಮೂರ್ತಿ ಇದೆ. ಈ ದೇವಾಲಯದಲ್ಲಿ ಶಿವನ ಎದೆ ಮೇಲೆ ಕಾಲಿಟ್ಟು ರೌದ್ರಾವತಾರದಿಂದ ನಿಂತ ಮೂರ್ತಿ ಇದೆ.

6. ಮಾನಸ ದೇವಿ ದೇವಾಲಯ:
ದುರ್ಗಾ ಮಾತೆಯ ಈ ಪ್ರಸಿದ್ಧ ದೇವಾಲಯವು ಹರಿದ್ವಾರದಲ್ಲಿದೆ. ಹರಿದ್ವಾರವನ್ನು ಧಾರ್ಮಿಕ ಹಾಗೂ ಪವಿತ್ರವಾದ ಸ್ಥಳವೆಂದು ಗುರುತಿಸಲಾಗಿದೆ.

7. ಚಾಮುಂಡೇಶ್ವರಿ ದೇವಾಲಯ:
ಈ ಚಾಮುಂಡೇಶ್ವರಿ ದೇವಾಲಯವು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿದೆ. ಈ ದೇವಾಲಯಕ್ಕೆ ಪ್ರತಿದಿನವೂ ಭಕ್ತರು ಭೇಟಿ ನೀಡುತ್ತಾ ಇರುತ್ತಾರೆ. ಮೈಸೂರು ದಸರಾ ಸಮಯದಲ್ಲಂತೂ ಈ ದೇವಾಲಯಕ್ಕೆ ವಿಶೇಷ ಕಳೆ ಬರುತ್ತದೆ.



Click it and Unblock the Notifications
