For Quick Alerts
ALLOW NOTIFICATIONS  
For Daily Alerts

ವಿಶ್ವದಲ್ಲಿರುವ ಅತ್ಯದ್ಭುತ 8 ದೇವಾಲಯಗಳು

|

ಈ ವಿಶ್ವದಲ್ಲಿ ಅನೇಕ ಜಾತಿ, ಧರ್ಮಗಳಿವೆ. ಪ್ರತಿ ಧರ್ಮಕ್ಕೂ ತಮ್ಮದೇ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯವನ್ನು ಪ್ರತ್ಯೇಕವಾದ ವಿನ್ಯಾಸದಿಂದ ಕಟ್ಟಲಾಗಿರುತ್ತದೆ. ದೇವಾಲಯವು ಆಸ್ತಿಕನನ್ನು ಸೆಳೆಯುವ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಕೆಲವೊಂದು ದೇವಾಲಯವೂ ತನ್ನ ಆಕರ್ಷಕವಾದ ವಿನ್ಯಾಸದಿಂದ ದೇಶ ವಿದೇಶಗಳಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ಇಲ್ಲಿ ನಾವು ಕೆಲವೊಂದು ದೇವಾಲಯಗಳ ಬಗ್ಗೆ ಚಿತ್ರ ಮಾಹಿತಿಗಳನ್ನು ನೀಡಿದ್ದೇವೆ. ಈ ದೇವಾಲಯಗಳ ವಿಶೇಷವೆಂದರೆ ಇವುಗಳು ವಿಶ್ವದಲ್ಲಿಯೇ ಅತ್ಯದ್ಭುತ ವಿನ್ಯಾಸವನ್ನು ಹೊಂದಿರುವ ದೇವಾಲಯಗಳಾಗಿವೆ.

1. ವ್ಹಾಟ್ ಪರಾ ಕ್ಯೂ, ಬ್ಯಾಂಕಾಕ್

1. ವ್ಹಾಟ್ ಪರಾ ಕ್ಯೂ, ಬ್ಯಾಂಕಾಕ್

ಇದು ಪಚ್ಚೆಹರಳಿನ ಬುದ್ಧನ ದೇವಾಲವಾಗಿದೆ. ಈ ದೇವಾಲಯವನ್ನು 1785ರಲ್ಲಿ ಕಟ್ಟಲಾಯಿತು. ಇದನ್ನು ರಾಜ ಬುದ್ಧ ವಾದ್ಫಾ ಚುಲಾಕೆ ತನ್ನ ರಾಜಧಾನಿಯನ್ನು ತೋನ್ಭುರಿಯಿಂದ ಬ್ಯಾಂಕಾಕ್ ಗೆ ಬದಲಾಯಿಸಿದಾಗ ಕಟ್ಟಲಾಯಿತು. ಈ ದೇವಾಲಯದಲ್ಲಿ ಬುದ್ಧ ಧ್ಯಾನ ಮಾಡುವ ಭಂಗಿಯ ಶಿಲೆಯಿದೆ. ಈ ಶಿಲೆಯ ಬಳಿಗೆ ಹೋಗಲು ರಾಜನಿಗೆ ಮಾತ್ರ ಅನುಮತಿಯಿತ್ತು.

2. ಸ್ಡೆಡಾಗಾನ್ ಪವಿತ್ರ ಭವನ, ಮಯನ್ಮಾರ್

2. ಸ್ಡೆಡಾಗಾನ್ ಪವಿತ್ರ ಭವನ, ಮಯನ್ಮಾರ್

ಈ ಬೌದ್ಧ ದೇವಾಲಯವೂ ಬರ್ಮದಲ್ಲಿದ್ದು ವಿಶ್ವದಲ್ಲಿರುವಪವಿತ್ರ ಭವನಗಳಲ್ಲಿಯೇ ಅತ್ಯಂತ ಪುರಾತನವದ ದೇವಾಲವಾಗಿದೆ. ಈ ದೇವಾಲಯವನ್ನು ಚಿನ್ನ ಬಳಸಿ ಕಟ್ಟಲಾಗಿದ್ದು ಹಗಲು ಮತ್ತು ರಾತ್ರಿಯಲ್ಲಿ ತುಂಬಾ ಪ್ರಕಾಶಮಾನವಾಗಿ ಹೊಳೆಯುತ್ತಿರುತ್ತದೆ.

3. ಟ್ಯಾಕ್ಸಾಂಗ್ ಮಠ, ಭೂತಾನ್

3. ಟ್ಯಾಕ್ಸಾಂಗ್ ಮಠ, ಭೂತಾನ್

ಈ ದೇವಾಲಯವು ಪಾರೋ ಕಣಿವೆಯ ಮೇಲ್ಭಾಗದಲ್ಲಿದೆ. ಇದು ಧ್ಯಾನ ಮಾಡುವಂತಹ ಸ್ಥಳವಾಗಿದೆ. ಈ ದೇವಾಲಯವನ್ನು 1692 ರಲ್ಲಿ ಕಟ್ಟಲಾಯಿತು. ಗುರು ರಿನ್ಪೋಚೆ (ಇವರನ್ನು ಎರಡನೇ ಬುದ್ಧ ಎಂದು ಭಾವಿಸಲಾಗಿದೆ)ಟಿಬೆಟ್ ನಿಂದ ಹಿಮಾಲಯಕ್ಕೆ ಬಂದು ಧ್ಯಾನ ಮಾಡಲು ಈ ಸ್ಥಳವನ್ನು ಆಯ್ದು ಕೊಂಡರು .

 4. ಗೋಲ್ಡನ್ ಟೆಂಪಲ್, ಭಾರತ

4. ಗೋಲ್ಡನ್ ಟೆಂಪಲ್, ಭಾರತ

ಭಾರತದಲ್ಲಿರುವ ಈ ದೇವಾಲಯವು ಕೂಡ ವಿಶ್ವ ಪ್ರಸಿದ್ಧವಾದ ದೇವಾಲಯವಾಗಿದೆ. ಹೊಳಪಿನಿಂದ ಕೂಡಿರುವ ಈ ದೇವಾಲಯದ ಸುತ್ತಲೂ ಬಿಳಿ ಬಣ್ಣದ ಕಟ್ಟಡಗಳಿವೆ ಹಾಗೂ ಪವಿತ್ರವಾದ ಕೆರೆ ಕೂಡ ಇಲ್ಲಿದೆ.

5. ಪ್ರಂಬಾನಾನ್, ಇಂಡೋನೇಷಿಯಾ

5. ಪ್ರಂಬಾನಾನ್, ಇಂಡೋನೇಷಿಯಾ

ಇದು ಹಿಂದೂ ದೇವಾಲಯವಾಗಿದ್ದು ಇಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ , ವಿಷ್ಣು, ಮಹೇಶ್ವರನನ್ನು ಪೂಜಿಸಲಾಗುವುದು. ಇದು ಇಂಡೋನೇಷಿಯಾದ ಅತ್ಯಂತ ದೊಡ್ಡ ಹಿಂದೂ ದೇವಾಲಯವಾಗಿದ್ದು ಇದರ ಸುತ್ತಲೂ ಚಿಕ್ಕ-ಚಿಕ್ಕ ದೇವಾಲಯಗಳಿವೆ.

6. ವ್ಹಾಟ್ ರೋಂಗ್ ಕ್ಹುನ್, ಥಾಯ್ಲೆಂಡ್

6. ವ್ಹಾಟ್ ರೋಂಗ್ ಕ್ಹುನ್, ಥಾಯ್ಲೆಂಡ್

ಇದು ಬುದ್ಧನ ದೇವಾಲಯವಾಗಿದ್ದು ನೋಡಲು ಅತ್ಯಾಕರ್ಷಕವಾಗಿದೆ. ಬಿಳಿ ಬಣ್ಣದ ಈ ದೇವಾಲಯದಲ್ಲಿ ಅದ್ಭುತ ಕೆತ್ತನೆಗಳನ್ನು ಹಾಗೂ ಕನ್ನಡಿಯಂತಹ ಮೊಸೈಕ್ ನೆಲವನ್ನು ಕಾಣಬಹುದು. ಇದನ್ನು ಇತ್ತೀಚಿಗೆ ಕಟ್ಟಲಾಗಿದ್ದು ಇದರ ನಿರ್ಮಾಣ ಕಾರ್ಯ ಇನ್ನೂ ಪ್ರಗತಿ ಹಂತದಲ್ಲಿದೆ.

7. ಬೋರೋಬುದ್ಧಾರ್, ಇಂಡೋನೇಷಿಯಾ

7. ಬೋರೋಬುದ್ಧಾರ್, ಇಂಡೋನೇಷಿಯಾ

ಇದನ್ನು ಬಾರಾಬುದ್ಧಾರ್ ದೇವಾಲಯ ಎಂದು ಕೂಡ ಕರೆಯಲಾಗುತ್ತದೆ. ಇದನ್ನು 2,672 ಹಲಗೆಗಳು ಮತ್ತು 504 ಬುದ್ಧನ ವಿಗ್ರಹಗಳಿಂದ ವಿನ್ಯಾಸಗೊಳಿಸಲಾಗಿದೆ. ಪ್ರಮುಖ ಗುಮ್ಮಟದಲ್ಲಿ 72 ದೊಡ್ಡ ಗಾತ್ರದ ಬುದ್ಧನ ವಿಗ್ರಹಗಳಿವೆ.

8. ಶ್ರೀ ರಂಗನಾಥ ದೇವಾಲಯ, ಭಾರತ

8. ಶ್ರೀ ರಂಗನಾಥ ದೇವಾಲಯ, ಭಾರತ

ಇಡೀ ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ಹಿಂದೂ ದೇವಾಲಯ ಇದಾಗಿದೆ. ಈ ವಿಷ್ಣು ದೇವಾಲಯವು ಗೋಪುರಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿರುವ ಅತ್ಯಂತ ಎತ್ತರದ ಗೋಪುರ 200 ಅಡಿ ಎತ್ತರವನ್ನು ಹೊಂದಿದೆ.

English summary

8 Most Amazing Temples In The World | Amaqzing Thins In The World | ವಿಶ್ವದಲ್ಲಿರುವ ಅತ್ಯದ್ಭುತ ವಿನ್ಯಾಸದ 8 ದೇವಾಲಯಗಳಿವೆ | ವಿಶ್ವದಲ್ಲಿರುವ ಅತ್ಯದ್ಭುತ ವಿಷಯಗಳು

Many travelers visit beautiful temples in Eastern countries to pay homage to the Gods and also capture the architectural designs of the temples.
X
Desktop Bottom Promotion