Just In
Don't Miss
- News
ಐಎಂಐ ಸತ್ಯ ಒಪ್ಪಿಕೊಳ್ಳುತ್ತಿಲ್ಲ; ಕೊರೋನಿಲ್ ಸಮರ್ಥಿಸಿಕೊಂಡ ಪತಂಜಲಿ
- Education
CSIR UGC NET June 2020 Results: ಅಭ್ಯರ್ಥಿಗಳು ಫಲಿತಾಂಶ ವೀಕ್ಷಿಸುವುದು ಹೇಗೆ?
- Automobiles
ದೆಹಲಿಯಲ್ಲಿ ಹೊಸ ಇವಿ ನೀತಿ ನಂತರ ಎಲೆಕ್ಟ್ರಿಕ್ ವಾಹನಗಳ ನೋಂದಣಿಯಲ್ಲಿ ಭಾರೀ ಏರಿಕೆ
- Finance
ನೀರವ್ ಮೋದಿಯವರನ್ನು ಹಸ್ತಾಂತರಿಸಲು ಬ್ರಿಟನ್ ನ್ಯಾಯಾಲಯ ಅನುಮೋದನೆ
- Sports
ಇಂಗ್ಲೆಂಡ್ vs ಭಾರತ: ದಾಖಲೆಗಳ ದಾಖಲೆ ಬರೆದ ಆರ್ ಅಶ್ವಿನ್
- Movies
ನಟ ಹೃತಿಕ್ ರೋಷನ್ಗೆ ಬರಲಿದೆ ಕ್ರೈಂ ಬ್ರ್ಯಾಂಚ್ನಿಂದ ನೊಟೀಸ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮನಸ್ಸಿನ ಶಾಂತ ಚಿತ್ತಕ್ಕೆ 'ಧ್ಯಾನ' ವರದಾನ...
ಯೋಗ ಮತ್ತು ಧ್ಯಾನಕ್ಕೆ ಒಂದಕ್ಕೊಂದು ಅವಿನಾಭಾವ ಸಂಬಂಧವಿದೆ. ಯೋಗದೊಂದಿಗೆ ಧ್ಯಾನ ಮಾಡಿದರೆ ನಮ್ಮ ಆರೋಗ್ಯದೊಂದಿಗೆ ಮನಸ್ಸು ಕೂಡ ಆರೋಗ್ಯವಾಗಿರುತ್ತದೆ. ದೇಹದೊಂದಿಗೆ ಮನಸ್ಸಿನ ಆರೋಗ್ಯ ಕೂಡ ಮುಖ್ಯ. ಇದಕ್ಕಾಗಿ ಧ್ಯಾನ ಮಾಡಬೇಕಾಗುತ್ತದೆ. ಧ್ಯಾನದಲ್ಲಿ ಹಲವಾರು ವಿಧಾನಗಳಿಂದ ಮಾಡಬಹುದು. ಯೋಗಿ ಧ್ಯಾನ, ಕಟು ಧ್ಯಾನ, ಸನ್ಯಾಸಿ ಧ್ಯಾನ ಹೀಗೆ ಹಲವಾರು ರೀತಿಯಿದೆ. ಆದರೆ ನಾವು ಇಲ್ಲಿ ಕೆಲವೊಂದು ಸರಳ ಧ್ಯಾನ ವಿಧಾನಗಳನ್ನು ತಿಳಿದುಕೊಳ್ಳುವ. ಧ್ಯಾನವನ್ನು ಕೈಗೊಳ್ಳುವಾಗ ಅನುಸರಿಸಬೇಕಾದ ಅಂಶಗಳು!
ಇಂದಿನ ವೇಗದ ಜೀವನದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಗುರಿ ಸಾಧಿಸುವ ತವಕ. ದಿನದಲ್ಲಿ 24 ಗಂಟೆಯಿದ್ದರೂ ಅದೂ ಸಾಕಾಗದು ಎನ್ನುವಂತಹ ಪರಿಸ್ಥಿತಿ. ಹೀಗಿರುವಾಗ ಧ್ಯಾನದ ಕಡೆ ಗಮನಕೊಡಲು ಸಮಯವೆಲ್ಲಿದೆ? ಧ್ಯಾನವು ನಿಮ್ಮ ಮನಸ್ಸನ್ನು ನಿಯಂತ್ರಣಕ್ಕೆ ತರುತ್ತದೆ ಎಂದಾದರೆ ಅದನ್ನು ಸರಳವಾಗಿ ಮಾಡುವುದು ಹೇಗೆ? ಸರಳ ಧ್ಯಾನದ ಬಗ್ಗೆ ಈ ಲೇಖನದಲ್ಲಿ ನೀವು ತಿಳಿದುಕೊಳ್ಳಿ. ಕಂಪ್ಯೂಟರ್ ಮೆಡಿಟೇಷನ್ ಮಾಡುವುದು ಹೇಗೆ?

ಪತಾಂಜಲಿ ಯೋಗ ಸೂತ್ರ
ಯೋಗಾಸ್ ಚಿತ್ತ ವೃತ್ತಿ ನಿರೋಧಹಃ' ಎಂದರೆ ಯೋಗವು ಮಾನಸಿಕ ಚಟುವಟಿಕೆಯ ಕ್ರಿಯೆಯಾಗಿದೆ. ಇದು ಪತಾಂಜಲಿ ಯೋಗದ ಮೊದಲ ಸಾಲುಗಳು.

ಮನಸ್ಸನ್ನು ತಾಳ್ಮೆಯಿಂದ ಇಡಲು ಮಾರ್ಗವಿದೆಯಾ?
ನಿಮಗೆ ಸಮಯ ಸಿಕ್ಕಿದಾಗ ಮನೆಯಲ್ಲಿ ಯಾವುದೇ ಗೌಜಿಗದ್ದಲವಿಲ್ಲದಂತಹ ಸ್ಥಳದಲ್ಲಿ ಕುಳಿತುಕೊಂಡು ಕಣ್ಣುಗಳನ್ನು ಮುಚ್ಚಿ ನಿಮ್ಮ ಉಸಿರಾಟದತ್ತ ಗಮನಹರಿಸಿ.

ಕೆಟ್ಟ ಆಲೋಚನೆಗಳು ಬಂದರೆ ಏನು ಮಾಡುವುದು?
ನೀವು ಯೋಚನೆಗಳ ವೀಕ್ಷಣೆ ಮಾತ್ರ ಮಾಡುತ್ತಿದ್ದೀರಿ ಎಂದು ಭಾವಿಸಿ. ನೀವು ಆ ಯೋಚನೆಗಳಿಗೆ ಸಾಕ್ಷಿಯಾದಾಗ ಅದು ನಿಮಗೆ ಅಡ್ಡಿ ಉಂಟು ಮಾಡುವುದಿಲ್ಲ ಮತ್ತು ಇದರಿಂದ ಮನಸ್ಸಿಗೆ ಶಾಂತಿ ಸಿಗುವುದು.

ಮನಸ್ಸು ಶಾಂತವಾಗಿದ್ದರೆ ನಿಮಗೇನು ಸಿಗುವುದು?
ಧ್ಯಾನದಿಂದ ಹಲವಾರು ರೀತಿಯ ಆರೋಗ್ಯ ಲಾಭಗಳಿವೆ. ಧ್ಯಾನ ಮಾಡಿದರೆ ಒತ್ತಡ, ಖಿನ್ನತೆ ಮತ್ತು ಉದ್ವೇಗದಿಂದ ದೂರವಿರಬಹುದು. ಆದರೆ ಇದು ಧ್ಯಾನದಿಂದ ಸಿಗುವ ಸರಳು ಲಾಭಗಳು. ಧ್ಯಾನವನ್ನು ಮುಂದುವರಿಸಿಕೊಂಡು ಹೋದರೆ ಅದರಿಂದ ಜೀವನದ ಬಗ್ಗೆ ಸ್ಪಷ್ಟತೆ ಸಿಗಲಿದೆ.

ಕಣ್ಣು ಮುಚ್ಚದೆ ಧ್ಯಾನ ಮಾಡಬಹುದೇ?
ಕುಳಿತುಕೊಂಡು ಉಸಿರಾಡುವುದಕ್ಕಿಂತ ಮನಸ್ಸಿನ ಧ್ಯಾನವು ತುಂಬಾ ಮುಖ್ಯವಾಗಿರುತ್ತದೆ. ನೀವು ಮಾಡುವ ಪ್ರತಿಯೊಂದು ದೈನಂದಿನ ಕಾರ್ಯಗಳನ್ನು ಮನಸ್ಸಿನಲ್ಲೇ ಮಾಡಿದರೆ ಆಗ ಅದರ ಅನುಭವ ತುಂಬಾ ಸುಂದರವಾಗಿರುತ್ತದೆ.

ಏಕಾಗ್ರತೆಗೆ ಸಹಕಾರಿ
ಬಹುತೇಕ ವ್ಯಕ್ತಿಗಳು ತಮಗೆ ಯಾವುದೇ ಒ೦ದು ವಿಷಯದ ಕುರಿತು ದೀರ್ಘಕಾಲದವರೆಗೆ ಏಕಾಗ್ರತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲವೆ೦ದು ಆಗಾಗ್ಗೆ ದೂರುತ್ತಿರುತ್ತಾರೆ. ಇ೦ತಹ ಜನರಿಗೆ ಖ೦ಡಿತವಾಗಿಯೂ ಕೂಡ ಧ್ಯಾನವೆ೦ದರೇನೆ೦ಬುದೇ ಗೊತ್ತಿಲ್ಲವೆ೦ದು ಇದರಿ೦ದ ತಿಳಿದುಬರುತ್ತದೆ. ಇ೦ತಹ ಜನರು ಧ್ಯಾನವನ್ನು ನಿಯಮಿತವಾಗಿ ಆಚರಿಸಿದಲ್ಲಿ, ಯಾವುದೇ ಒ೦ದು ವಿಚಾರದ ಕುರಿತೇ ಆಗಿರಲಿ, ಅವರಿಗೆ ಮನಸ್ಸನ್ನು ಕೇ೦ದ್ರೀಕರಿಸಲು ಕಷ್ಟವಾಗದು.