For Quick Alerts
ALLOW NOTIFICATIONS  
For Daily Alerts

ಶಿವನ ಪೂಜೆಗೆ 'ತುಳಸಿ'ಯನ್ನು ಬಳಸುವುದಿಲ್ಲ ಏಕೆ ಗೊತ್ತಾ?

|

ತುಳಸಿ ಎನ್ನುವ ಶಬ್ದ ಕಿವಿಗೆ ಬೀಳುತ್ತಿದ್ದಂತೆ ಅದೊಂದು ಪವಿತ್ರವಾದ ಸಸ್ಯ ಎನ್ನುವುದು ಸೂಚಿಸುತ್ತದೆ. ಆರೋಗ್ಯ ಮತ್ತು ಧಾರ್ಮಿಕ ಚಿಂತನೆಗಳೊಂದಿಗೆ ತಳುಕು ಹಾಕಿಕೊಂಡಿರುವ ಸಸ್ಯ ಎಂದು ಪರಿಗಣಿಸಲಾಗಿದೆ. ಈ ಪವಿತ್ರ ಗಿಡವಾದ ತುಳಸಿಯನ್ನು ದೇವತೆ ಹಾಗೂ ದೈವ ಶಕ್ತಿಯನ್ನು ಹೊಂದಿರುವ ಸಸ್ಯ.

ಇದನ್ನು ಪುರಾತನ ಕಾಲದಿಂದಲೂ ಅನೇಕ ಧಾರ್ಮಿಕ ಕಥೆ ಪುರಾಣಗಳೊಂದಿಗೆ ಬೆಸೆದುಕೊಂಡು ಬಂದಿದೆ. ಅನೇಕ ದೇವಾನು ದೇವತೆಗೆ ತುಳಸಿ ಎಂದರೆ ಅತ್ಯಂತ ಪ್ರಿಯವಾದ ಗಿಡ. ಧಾರ್ಮಿಕ ಪೂಜಾ ವಿಧಾನದಲ್ಲಿ ಶುದ್ಧೀಕರಣ, ದೈವ ಶಕ್ತಿಯ ಆಹ್ವಾನ ಹಾಗೂ ಪವಿತ್ರತೆಯ ಸಂಕೇತವಾಗಿ ಬಳಸಲಾಗುತ್ತದೆ.

Tulsi Leaves

ವೈದ್ಯಕೀಯ ಚಿಂತನೆಯ ಪ್ರಕಾರ ತುಳಸಿಯು ಅತ್ಯಂತ ಔಷಧೀಯ ಗುಣವನ್ನು ಹೊಂದಿದೆ. ಇದರಿಂದ ತಯಾರಿಸಲಾದ ಔಷಧಗಳು ಮನುಕುಲಕ್ಕೊಂದು ದಿವ್ಯ ಸಂಜೀವಿನಿ. ಬಹುಬೇಗ ಆರೋಗ್ಯ ಸಮಸ್ಯೆಯನ್ನು ಸಹ ಬಗೆಹರಿಸುವ ಶಕ್ತಿಯನ್ನು ಈ ಸಸ್ಯ ಪಡೆದುಕೊಂಡಿದೆ. ಹಾಗಾಗಿಯೇ ಆಯುರ್ವೇದ ಹಾಗೂ ಮನೆ ಮದ್ದು ವೈದ್ಯಕೀಯ ಪದ್ಧತಿಯಲ್ಲಿ ತುಳಸಿಯನ್ನು ಅತ್ಯಂತ ಪ್ರಮುಖ ವಸ್ತುವನ್ನಾಗಿ ಬಳಸುತ್ತಾರೆ. ಇದರಿಂದ ತಯಾರಿಸಿದ ಔಷಧಿಗಳು ಆರೋಗ್ಯದ ಮೇಲೆ ಯಾವುದೇ ಅಡ್ಡಪರಿಣಾಮ ಉಂಟುಮಾಡದು ಎಂದು ಹೇಳಲಾಗುವುದು. ನಿತ್ಯವೂ ಈ ಗಿಡದ ಬಳಿ ಕುಳಿತುಕೊಂಡರೆ ಅದರಿಂದ ಬಿಡುಗಡೆಯಾಗುವ ಆಮ್ಲಜನಕವು ಉತ್ತಮ ಆರೋಗ್ಯವನ್ನು ಕಲ್ಪಿಸಿಕೊಡುವುದು ಎಂದು ಹೇಳಲಾಗುವುದು.

ತುಳಸಿಯನ್ನು ಪೂಜೆಯಲ್ಲಿ ಬಳಸುವುದಾದರೂ ಶಿವನ ಪೂಜೆಯಲ್ಲಿ ಬಳಸುವುದಿಲ್ಲ, ಏಕೆ ಎಂದು ಇಲ್ಲಿ ಹೇಳಲಾಗಿದೆ ನೋಡಿ:

ಶ್ರೇಯಸ್ಸಿನ ಸಂಕೇತ ತುಳಸಿ

ಶ್ರೇಯಸ್ಸಿನ ಸಂಕೇತ ತುಳಸಿ

ಒಂದು ಮನೆಯ ಬೆಳಗು ಅಥವಾ ಶ್ರೇಯಸ್ಸಿನ ಸಂಕೇತ ತುಳಸಿ ಗಿಡ. ಮನೆ ಮುಂದೆ ಇಡಲಾಗುವ ತುಳಸಿಯು ಆ ಮನೆಯ ಸಮೃದ್ಧಿಯನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ಆ ಗಿಡದಿಂದ ಮನೆ ಮಂದಿಯ ಆರೋಗ್ಯ ಸುಧಾರಣೆಯಾಗುವುದು. ನಿತ್ಯವೂ ತುಳಸಿ ಗಿಡಕ್ಕೆ ನೀರು ಎರೆಯುವುದು, ಪೂಜೆ ಮಾಡುವುದು, ತುಳಸಿ ದಳವನ್ನು ಬಳಸಿ ದೇವರ ಪೂಜೆ ಮಾಡುವುದು ಹಿಂದೂ ಧರ್ಮದಲ್ಲಿ ಕಡ್ಡಾಯವಾಗಿ ಅನುಸರಿಸಬೇಕಾದ ವಿಧ-ವಿಧಾನ. ತುಳಸಿ ಗಿಡ ಚಿಕ್ಕದಾಗಿ ಬೆಳೆಯುವ ಪುದೆ ಜಾತಿಯ ಸಸ್ಯ ಎಂದು ಹೇಳಲಾಗುತ್ತದೆ. ಆದರೆ ಈ ಗಿಡಲದಲ್ಲಿ ಹಲವಾರು ದೇವತೆಗಳು ವಾಸವಾಗಿರುತ್ತಾರೆ. ಹಾಗಾಗಿಯೇ ತುಳಸಿ ಗಿಡವನ್ನು ಮನೆಯಲ್ಲಿ ಇಡುವಾಗ ಹಾಗೂ ಅದರ ಪೂಜಾ ವಿಧಿಯನ್ನು ಅನುಸರಿಸುವಾಗ ಸೂಕ್ತ ನಿಯಮವನ್ನು ಅನುಸರಿಸಬೇಕಾಗುತ್ತದೆ.

ಧನಾತ್ಮಕ ಶಕ್ತಿಯನ್ನು ನೀಡುವ ಗಿಡ

ಧನಾತ್ಮಕ ಶಕ್ತಿಯನ್ನು ನೀಡುವ ಗಿಡ

ತುಳಸಿ ಗಿಡವನ್ನು ದೇವ ಮೂಲೆಯಲ್ಲಿ ಇಡಬೇಕು. ಅಗ್ನಿ ಮೂಲೆಯಲ್ಲಿ ಇಡಬಾರದು ಎನ್ನುವ ನಿಯಮವಿದೆ. ಅತ್ಯಂತ ಧನಾತ್ಮಕ ಶಕ್ತಿಯನ್ನು ನೀಡುವ ಈ ಗಿಡವನ್ನು ವಿಷ್ಣು, ಕೃಷ್ಣ ಸೇರಿದಂತೆ ಹಲವಾರು ದೇವತೆಗಳ ಪೂಜೆಗೆ ಬಳಸಲಾಗುತ್ತದೆ. ಆದರೆ ಶಿವನ ಪೂಜೆಗೆ ಮಾತ್ರ ತುಳಸಿಯನ್ನು ನಿಷೇಧಿಸಲಾಗಿದೆ ಎನ್ನಲಾಗುವುದು. ಶೀವನ ಪ್ರಿಯವಾದ ಎಲೆ ಬಿಲ್ವ ಪತ್ರೆ. ಶಿವನ ಪೂಜೆಗೆ ತುಳಸಿಯನ್ನು ಬಳಸುವುದಿಲ್ಲ. ಶಿವನಿಗೂ ಇದು ಇಷ್ಟವಿಲ್ಲದ ಸಂಗತಿ ಎನ್ನಲಾಗುವುದು. ಇದೊಂದು ರೋಚಕ ಅಥವಾ ಕುತೂಹಲಕಾರಿ ಸಂಗತಿ ಎನಿಸಬಹುದು. ಆದರೆ ಇದು ನಿಜ. ಶಿವನ ಪೂಜೆಗೆ ಏಕೆ ತುಳಸಿಯನ್ನು ಬಳಸುವುದಿಲ್ಲ ಎನ್ನುವುದರ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಉದ್ದೇಶವಿದ್ದರೆ ಈ ಮೂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ.

Most Read: ಶಿವ ಪೂಜೆ ಮಾಡುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ

ಸೃಷ್ಟಿಯ ಲಯ ಕರ್ತ

ಸೃಷ್ಟಿಯ ಲಯ ಕರ್ತ

ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವನು ಸೃಷ್ಟಿಯ ಲಯ ಕರ್ತ ಎಂದು ಹೇಳಲಾಗುವುದು. ಅತ್ಯಂತ ಶಕ್ತಿಶಾಲಿ ಹಾಘೂ ಸೃಷ್ಟಿಯ ಸಮತೋಲನ ಕಾಪಾಡು ದೇವ ಶಿವ. ಭಕ್ತಿ-ಭಾವದಿಂದ ಕೈಗೊಳ್ಳಲಾಗುವ ಪೂಜೆಯಿಂದ ಶಿವನನ್ನು ತೃಪ್ತಗೊಳಿಸಬಹುದು. ಶಿವನ ಪ್ರೀತಿಗೆ ಪಾತ್ರರಾದ ಭಕ್ತರ ಕಷ್ಟ-ನಷ್ಟ, ನೋವುಗಳನ್ನು ನಿವಾರಿಸುತ್ತಾನೆ. ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧ ಜೀವನವನ್ನು ಆಶೀರ್ವದಿಸುತ್ತಾನೆ ಎನ್ನಲಾಗುವುದು.

ಶಿವನ ಪೂಜೆಗೆ ತುಳಸಿಯನ್ನು ಬಳಸುವುದಿಲ್ಲ

ಶಿವನ ಪೂಜೆಗೆ ತುಳಸಿಯನ್ನು ಬಳಸುವುದಿಲ್ಲ

ಶಕ್ತಿಶಾಲಿಯಾದ ಶಿವನ ಪೂಜೆಗೆ ತುಳಸಿ ಎಲೆಯನ್ನು ಬಳಸುವುದಿಲ್ಲ. ಶಿವನ ವ್ರತ ವಿಧಾನ, ಪೂಜಾ ಆಚರಣೆ, ಉತ್ಸವ ಸೇರಿದಂತೆ ಎಂತಹದ್ದೇ ಪುಣ್ಯ ಕೆಲಸಗಳಲ್ಲೂ ತುಳಸಿಯನ್ನು ಬಳಸುವುದಿಲ್ಲ. ಇದಕ್ಕೆ ಕಾರಣವೇನು ಎನ್ನುವುದನ್ನು ಶಿವ ಪುರಾಣದಲ್ಲಿ ಕೆಲವು ಉಲ್ಲೇಖಗಳಿವೆ ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಶಿವನ ಪೂಜೆಗೆ ತುಳಸಿಯನ್ನು ಬಳಸುವುದಿಲ್ಲ ಎಂದು ಹೇಳಲಾಗುವುದು.

ಪುರಾಣದ ಕಥೆ

ಪುರಾಣದ ಕಥೆ

ಶಿವ ಪುರಾಣದಲ್ಲಿ ಉಲ್ಲೇಖಿಸಿರುವ ಕೆಲವು ಕಥೆಯ ಪ್ರಕಾರ ದಂಬ ಎನ್ನುವ ಅಸುರನಿದ್ದನು. ಅವನಿಗೆ ಮಕ್ಕಳು ಇರಲಿಲ್ಲ. ಈ ಸಂಗತಿಯು ಅವನಿಗೆ ಸಾಕಷ್ಟು ಬೇಸರವನ್ನು ತಂದೊಡ್ಡಿತ್ತು. ನಂತರ ಮಗುವನ್ನು ಪಡೆದುಕೊಳ್ಳಬೇಕು ಎನ್ನುವ ಆಸೆಯಿಂದ ವಿಷ್ಣು ದೇವರ ಕುರಿತು ತಪಸ್ಸನ್ನು ಕೈಗೊಂಡನು. ಹಲವಾರು ವರ್ಷಗಳ ಕಾಲ ಶ್ರದ್ಧಾ ಬಕ್ತಿಯಿಂದ ನಡೆಸಿದ ತಸ್ಸಿಗೆ ಮೆಚ್ಚಿದ ವಿಷ್ಣು ದೇವರು ದಂಬ ಅಸುರನ ಮುಂದೆ ಪ್ರತ್ಯಕ್ಷನಾದನು. ಆಗ ವಿಷ್ಣು ದೇವರಲ್ಲಿ ತನಗೊಂದು ಪ್ರಬಲ ಹಾಗೂ ಅಜೇಯ ಮಗುವನ್ನು ಕರುಣಿಸಬೇಕು ಎಂದು ಕೇಳಿಕೊಂಡನು. ದಂಬನ ಭಕ್ತಿಗೆ ಮೆಚ್ಚಿದ ವಿಷ್ಣು ದೇವ ಆಶೀರ್ವಾದ ಮಾಡಿದನು. ಬಳಿಕ ದಂಬ ಅಸುರನು ಗಂಡು ಮಗುವನ್ನು ಪಡೆದನು. ಅವನಿಗೆ ಶಂಖ್‍ಚುದ್ ಎಂದು ಹೆಸರಿಸಿದನು. ಕೆಲವು ಗ್ರಂಥಗಳ ಪ್ರಕಾರ ಶಂಖ್‍ಚುದ್ ಎಂದರೆ ಜಲಂಧರ್ ಎಂದು ಉಲ್ಲೇಖಿಸಲಾಗಿದೆ.

Most Read: ಶಿವ ಮತ್ತು ಶನಿ ದೇವರ ಸಂಬಂಧ ಮನುಷ್ಯ ಜೀವನದ ಆಧಾರ ಸ್ತಂಭಗಳು

ಶಂಖಚುದ್ ಆಸೆ

ಶಂಖಚುದ್ ಆಸೆ

ಪ್ರಭಲನು ಹಾಗೂ ಅಜೇಯನಾದ ಶಂಖಚುದ್ ಮೂರು ಲೋಕದಲ್ಲೂ ವಿಜಯಶಾಲಿಯಾಗಿ ಮೆರೆಯಬೇಕು ಎಂದು ಬಯಸಿದನು. ಈ ಹಿನ್ನೆಲೆಯಲ್ಲಿಯೇ ಬ್ರಹ್ಮ ದೇವನ ಕುರಿತು ತಪಸ್ಸನ್ನು ಮಾಡಿದನು. ತನ್ನ ತಪಸ್ಸಿನಿಂದ ಬ್ರಹ್ಮದೇವರನ್ನು ಮೆಚ್ಚಿಸಿದನು. ನಂತರ ಬ್ರಹ್ಮ ದೇವರಲ್ಲಿ ಯಾವ ದೇವರನ್ನಾದರೂ ತಾನು ಸೋಲಿಸಬಹುದು ಎನ್ನುವ ವರವನ್ನು ಪಡೆದುಕೊಂಡನು. ಬ್ರಹ್ಮ ದೇವನು ಶ್ರೀಕೃಷ್ಣ ಕವಾಚ್‍ನೊಂದಿಗೆ ಆಶೀರ್ವಾದ ನೀಡಿದನು. ಜೊತೆಗೆ ಧರ್ಮಧ್ವಜನ ಮಗಳಾದ ತುಳಸಿಯನ್ನು ವಿವಾಹವಾಗುವಂತೆ ಆಶೀರ್ವಾದ ಮಾಡಿದನು. ತುಳಸಿಯು ಅತ್ಯಂತ ಪವಿತ್ರತೆಯನ್ನು ಪಡೆದುಕೊಮಡಿದೆ ಎನ್ನುವುದನ್ನು ತಿಳಿಸಿದನು. ತುಳಸಿಯನ್ನು ಕೆಲವು ಪಠ್ಯ ಹಾಗೂ ಪುರಾಣದ ಕಥೆಯಲ್ಲಿ ವೃಂದಾ ಎಂದು ಉಲ್ಲೇಖಿಸಲಾಗಿದೆ.

ಮೂರು ಲೋಕವನ್ನು ವಶಪಡಿಸಿಕೊಂಡನು

ಮೂರು ಲೋಕವನ್ನು ವಶಪಡಿಸಿಕೊಂಡನು

ಶಂಖಚುದ್ ತನ್ನ ಪ್ರಬಲತೆ ಹಾಗೂ ತಪಸ್ಸಿನಿಂದ ಪಡೆದ ಆಶೀರ್ವಾದ ಹಿನ್ನೆಲೆಯಲ್ಲಿಯೇ ಮೂರು ಲೋಕವನ್ನು ವಶಪಡಿಸಿಕೊಂಡನು. ನಂತರ ಅಲ್ಲಿರುವ ಜನರು, ಸಂತರು ಹಾಗೂ ದೇವತೆಗಳ ಮೇಲೆ ಸಾಕಷ್ಟು ಹಿಂಸಾಚಾರ ಹಾಗೂ ದುಷ್ಕøತ್ಯಗಳನ್ನು ಮಾಡಲು ಪ್ರಾರಂಭಿಸಿದನು. ಶಂಖಚುದ್‍ನ ಹಿಂಸೆ ಹಾಗೂ ದುರ್ನಡತೆಯನ್ನು ಸಹಿಸಲಾಗದ ಜನರು ದುಃಖದಿಂದ ಶಿವ ಮತ್ತು ವಿಷ್ಣು ದೇವರಲ್ಲಿ ರಕ್ಷಣೆ ನೀಡುವಂತೆ ಪ್ರಾರ್ಥನೆ ಮಾಡಿಕೊಂಡರು. ನಂತರ ವಿಷ್ಣು ದೇವರು ಜನರ ಕಲ್ಯಾಣ ಹಾಗೂ ಕಾಪಾಡುವ ಉದ್ದೇಶಕ್ಕಾಗಿ ಒಂದು ಸನ್ಯಾಸಿಯ ರೂಪವನ್ನು ತಾಳಿದನು. ನಂತರ ಶಂಖಚುದ್‍ನ ಬಳಿ ಶ್ರೀ ಕೃಷ್ಣ ಕವಚ ನೀಡುವಂತೆ ಕೇಳಿಕೊಂಡನು. ಶಂಖಚುದ್ ನ ಬಳಿ ಕೃಷ್ಣ ಕವಚವನ್ನು ಸ್ವೀಕರಿಸಿದ ಬಳಿಕ ಅದರಿಂದ ಒಂದು ರೀತಿಯ ದುಷ್ಟ ಶಕ್ತಿಯು ಆವರಿಸಿಕೊಂಡಿತು. ನಂತರ ವಿಷ್ಣು ದೇವರು ಶಂಖಚುದ್‍ನ ರೂಪವನ್ನು ಪಡೆದುಕೊಂಡನು. ನಂತರ ಪವಿತ್ರತೆಯನ್ನು ಪಡೆದುಕೊಂಡ ತುಳಸಿಗೆ ಅನುಚಿತ ರೀತಿಯ ವರ್ತನೆ ತೋರಿದನು.

Most Read: ದೇವಾದಿದೇವ 'ಶಿವ' ಒಳ್ಳೆಯವರಿಗೆ ಒಳ್ಳೆಯವ, ಕೆಟ್ಟವರಿಗೆ ಕೆಟ್ಟವ!

ಶಂಖಚುದ್ ಮತ್ತು ಶಿವನ ನಡುವೆ ಯುದ್ಧ

ಶಂಖಚುದ್ ಮತ್ತು ಶಿವನ ನಡುವೆ ಯುದ್ಧ

ನಂತರ ಶಂಖಚುದ್ ಮತ್ತು ಶಿವನ ನಡುವೆ ಯುದ್ಧ ನಡೆಯಿತು. ಶಿವನು ತನ್ನ ದಿವ್ಯವಾದ ದೈವ ಶಕ್ತಿಯಿಂದ ಶಂಖಚುದ್ ಅನ್ನು ಸೋಲಿಸಿದನು. ಜೊತೆಗೆ ಅವನನ್ನು ಭಸ್ಮವನ್ನಾಗಿ ಮಾಡಿದನು. ದೋಷವಿಲ್ಲದ ತುಳಸಿಗೆ ಯಾವುದೇ ಅನ್ಯಾಯವಾಗಬಾರದು ಎಂದು ಭಾವಿಸಿದನು. ಈ ಹಿಂದೆ ನಡೆದ ಘಟನೆಗಳಲ್ಲಿ ತುಳಸಿಯ ದೋಷವೇನು ಇಲ್ಲ ಎನ್ನುವುದನ್ನು ಅರಿತಿದ್ದರು. ಹಾಗಾಗಿಯೇ ತುಳಸಿಗೆ ದೈವಿಕ ಶಕ್ತಿಯನ್ನು ಕರುಣಿಸಿದನು. ಜೊತೆಗೆ ತುಳಸಿಯು ವಿಷ್ಣು ದೇವರಿಗೆ ಪ್ರಿಯವಾದವಳಾಗಿ ಇರಬೇಕು ಎಂದು ಆಶೀರ್ವಾದ ನೀಡಿದನು. ಈ ಹಿನ್ನೆಲೆಯಲ್ಲಿಯೇ ತುಳಸಿಯು ವಿಷ್ಣುವಿಗೆ ಪ್ರಿಯವಾದವಳಾಗಿ ಉಳಿದಳು. ಜೊತೆಗೆ ದೈವಿಕ ಶಕ್ತಿಯನ್ನು ಪಡೆದು, ದೇವ ಲೋಕದಲ್ಲಿ ಸ್ಥಾನವನ್ನು ಪಡೆದುಕೊಂಡಿತು. ನಂತರ ಅತ್ಯಂತ ಪವಿತ್ರವಾದವಳು ತುಳಸಿ ಎಂದು ಪರಿಗಣಿಸಲಾಯಿತು. ಜೊತೆಗೆ ಮನುಕುಲದವರೂ ಸಹ ತುಳಸಿಯನ್ನು ಆರಾಧಿಸಲು ಪ್ರಾರಂಭಿಸಿದರು. ಹಾಗಾಗಿಯೇ ತುಳಸಿಯನ್ನು ವಿಷ್ಣುವಿನ ಆರಾಧನೆಗೆ ಹಾಗೂ ವಿಷ್ಣು ಅವತರಿಸಿ ಬಂದ ವಿವಿಧ ರೂಪಗಳ ಆರಾಧನೆಗೂ ತುಳಸಿಯನ್ನು ಬಳಸುತ್ತಾರೆ. ಹೊರತು ಶಿವನ ಪೂಜೆಗೆ ಬಳಸುವುದಿಲ್ಲ.

ಶಿವನಿಗೆ ತುಳಸಿ ಸಲ್ಲದು

ಶಿವನಿಗೆ ತುಳಸಿ ಸಲ್ಲದು

ತುಳಸಿಯ ಪತಿಯನ್ನು ಸೋಲಿಸಿದವನು ಮತ್ತು ಕೊಂದವನು ಶಿವನು. ಹಾಗಾಗಿ ಶಿವನ ಆರಾಧನೆ ಹಾಗೂ ವ್ರತ ಆಚರಣೆಯಲ್ಲಿ ತುಳಸಿಯನ್ನು ಬಳಸಿದರೆ ಅದು ಅರ್ಥಹೀನವಾಗುವುದು. ವಿಷ್ಣುವಿಗೆ ಪ್ರಿಯವಾದ ತುಳಸಿಯನ್ನು ಶಿವನಿಗೆ ನೀಡಬಾರದು. ಹಾಗಾಗಿಯೇ ಶಿವನ ಪೂಜೆಗೆ ಅಥವಾ ಶಿವನಿಗೆ ಸಂಬಂಧಿಸಿದ ಯಾವುದೇ ಧಾರ್ಮಿಕ ಆಚರಣೆಯಲ್ಲಿ ತುಳಸಿಯನ್ನು ಶಿವನಿಗೆ ಅರ್ಪಿಸುವುದಿಲ್ಲ.

English summary

Why Tulsi Leaves are not Using to Shiva Pooja

Hindu God Shiva is never worshipped with Tulsi leaves. It is also not offered during pujas, rituals and festivals associated Shiva. The reason for this is mentioned in the Shiva Purana.Legend has it that an Asura named Dambh did not have any children. So he did intense Tapas for several years and pleased Vishnu. When Vishnu appeared before him, he asked for a powerful and invincible son. Vishnu blessed him with a son. Later a son was born to Dambh and he was named Shankhchud. Some scriptures refer to Shankhchud as Jalandhar
X
Desktop Bottom Promotion